Adarsh Shetty Column: ಭರವಸೆ ಮೂಡಿಸಿದ ತೀರ್ಪುಗಳು
ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವುಗಳ ಪೈಕಿ ಕೊಲೆ ಪಾತಕ ಕೃತ್ಯ, ಆಸ್ತಿ ಕಲಹ, ದಾಂಪತ್ಯ ಕಲಹ ಹೀಗೆ ಜಟಿಲಗೊಂಡ ನಾನಾ ಪ್ರಕರಣಗಳು ಕೋರ್ಟ್ ಕಟಕಟೆಯಲ್ಲಿ ಇನ್ನೂ ಕೊಳೆಯುತ್ತಿವೆ. ಇನ್ನು ನಮ್ಮ ದೇಶದಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇನ್ನೂ ವಿಲೇವಾರಿಯಾಗದೇ ಬಾಕಿ ಉಳಿದಿವೆ.
-
ಪ್ರಸ್ತುತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವುಗಳ ಪೈಕಿ ಕೊಲೆ ಪಾತಕ ಕೃತ್ಯ, ಆಸ್ತಿ ಕಲಹ, ದಾಂಪತ್ಯ ಕಲಹ ಹೀಗೆ ಜಟಿಲಗೊಂಡ ನಾನಾ ಪ್ರಕರಣಗಳು ಕೋರ್ಟ್ ಕಟಕಟೆಯಲ್ಲಿ ಇನ್ನೂ ಕೊಳೆಯುತ್ತಿವೆ. ಇನ್ನು ನಮ್ಮ ದೇಶದಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇನ್ನೂ ವಿಲೇವಾರಿಯಾಗದೇ ಬಾಕಿ ಉಳಿದಿವೆ.
ಹಲವಾರು ವರ್ಷಗಳಿಂದ ವಿಚಾರಣೆಯ ಮುಂದೆ ಸಾಗುತ್ತಿವೆ. ಒಂದು ಆಸ್ತಿ ಜಮೀನಿಗೆ ಸಂಬಂಧಿ ಸಿದ ವಿಚಾರಣೆ ಒಂದು ತಲೆಮಾರು ನ್ಯಾಯಾಲಯವನ್ನು ಅಲೆದು ಅಲೆದು ಸಾಕಾಗಿ ಕೊನೆಗೆ ಅವರ ಮಕ್ಕಳು ಪ್ರಸ್ತುತ ಹೋರಾಟ ನಡೆಸುತ್ತಿರುವ ವಿದ್ಯಮಾನಗಳಿವೆ.
ಇನ್ನು ಸಮಾಜವನ್ನೇ ಬೆಚ್ಚಿ ಬೀಳಿಸುವ, ನಾಗರಿಕ ಸಮಾಜವೇ ತಲೆತಗ್ಗಿಸುವ, ಅಪರಾಧ ಪ್ರಕರಣ ಗಳಲ್ಲಿ ಸಮಾಜಕ್ಕೆ ತಪ್ಪು ಸಂದೇಶ ಸಾರುವ, ಅಮಾನವೀಯ ಕೃತ್ಯಗಳಿಗೆ ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆಯಂತಹ ಶಿಕ್ಷೆಗಳು ಅಪರಾಧಿಗಳಿಗೆ ಉರುಳಾದ ನಿದರ್ಶನಗಳಿವೆ. ಇನ್ನು ಕೆಲವೊಂದು ಪ್ರಕರಣಗಳ ತೀರ್ಪುಗಳು ಕೂಡ ಸಮಾಜಕ್ಕೆ ಸಂಶಯಾಸ್ಪದ ರೀತಿಯಲ್ಲಿ ಹೊರಬರುವ ವಿದ್ಯಮಾನ ಗಳಿವೆ.
ಇದನ್ನೂ ಓದಿ: MLA Vinay Kulkarni: ಜೈಲುಪಾಲಾದ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಮುಂದಿರುವ ಆಯ್ಕೆಗಳೇನು?
ಇನ್ನು ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳು ಮೇಲ್ಮನವಿ ಸಲ್ಲಿಸಿ ಬಚಾವ್ ಆದ, ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾದ, ರಾಷ್ಟ್ರಪತಿಗಳ ಕ್ಷಮಾದಾನದಿಂದ ಮರುಜೀವ ಪಡೆದ ಕೈದಿಗಳನ್ನು ಕೂಡ ಕಾಣಬಹುದು. ಇನ್ನು ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಶಿಕ್ಷೆ ಅನುಭವಿಸಿ ಮನಪರಿವರ್ತನೆಗೊಂಡು ಸಮಾಜದಲ್ಲಿ ಸಭ್ಯ ಜೀವನ ನಡೆಸುವವರನ್ನು ಕೂಡ ಕಾಣಬಹು ದಾಗಿದೆ.
ತಮಿಳುನಾಡಿನ ತುತ್ತುಕುಡಿಯ ಸಾತಾಂಕುಳಂ ಎಂಬ ಪ್ರದೇಶ. ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ವ್ಯಾಪಾರ ನಡೆಸುತ್ತಿzರೆಂಬ ಆರೋಪದಲ್ಲಿ ಪಿ.ಜಯರಾಜ್ ಹಾಗೂ ಮಗ ಬೆನಿಕ್ಸ್ ಎಂಬವರನ್ನು ಸಾತಾಂಕುಳಂ ಠಾಣಾ ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆಯುತ್ತಾರೆ.
ರಾತ್ರಿಯಿಡೀ ಅಮಾನುಷವಾಗಿ ಮನಬಂದಂತೆ ಥಳಿಸಿದ ಪೊಲೀಸರ ದೈಹಿಕ ಹಯಿಂದಾಗಿ ಗಂಭೀರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಂದೆ ಮಗ ಸಾವಿಗೀಡಾದರು.
ಪೊಲೀಸರ ದೌರ್ಜನ್ಯಕ್ಕೆ ಠಾಣೆಯ ಮೇಜು, ಗೋಡೆ, ಪೀಠೋಪಕರಣ, ಲಾಠಿ ಎಲ್ಲದರಲ್ಲೂ ರಕ್ತ ಅಂಟಿಕೊಂಡಿರುವ ಸಂದರ್ಭದಲ್ಲಿ ಇದೇ ಸಂತ್ರಸ್ತರ ಕೈಯಲ್ಲಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ಠಾಣೆಯಲ್ಲಿದ್ದ ಸಿಸಿ ಟಿವಿ ಸಾಕ್ಷ್ಯಗಳನ್ನು ಅಳಿಸಿ ಸಾಕ್ಷ್ಯನಾಶಕ್ಕೆ ಪ್ರಯತ್ನಗಳು ನಡೆದಿದ್ದವು. ಈ ಘಟನೆ ಕೇವಲ ತಮಿಳುನಾಡು ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಮದ್ರಾಸ್ ಹೈಕೋರ್ಟ್‌ಗೆ ತಲುಪಿ ಸಿಬಿಐ ಅಂಗಳಕ್ಕೆ ಬಂದು ಸಿಬಿಐ ತನಿಖೆಯಲ್ಲಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿದಂತೆ 9 ಪೊಲೀಸರನ್ನು ಬಂಧಿಸಲಾಗಿ ಓರ್ವ ಕಾನ್ಸ್ಟೇಬಲ್‌ನನ್ನು ಪ್ರಕರಣದಲ್ಲಿ ಕೈ ಬಿಡಲಾಗಿತ್ತು. ಘಟನೆಯ ಸಂದರ್ಭ ಕಣ್ಣಾರೆ ಸಾಕ್ಷಿಯಾಗಿದ್ದ ಅದೇ ಠಾಣೆಯ ಕಾನ್ಸ್ಟೇಬಲ್ ರೇವತಿ ಎಂಬ ಹೆಣ್ಣು ಮಗಳು ಯಾವುದೇ ಬೆದರಿಕೆ, ಆಸೆ, ಆಮೀಷಗಳಿಗೆ ಬಗ್ಗದೆ ತನ್ನ ಸಹೋದ್ಯೋಗಿಗಳ ಕ್ರೌರ್ಯವನ್ನು ಬಿಚ್ಚಿಟ್ಟು, ಕರ್ತವ್ಯ ಪ್ರಜ್ಞೆ ಮೆರೆದಿರುವ ಕಾರಣಕ್ಕೆ ಎಲ್ಲ ತಪ್ಪಿತಸ್ಥರಿಗೆ ಮಧುರೈನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಇನ್ನು ಕೆಲ ವರ್ಷಗಳ ಹಿಂದೆ ಬಿಜೆಪಿ ಮುಖಂಡ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ರಾಜ್ಯವ್ಯಾಪಿ ಸದ್ದು ಮಾಡಿತ್ತು. ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಶಾಸಕ, ಅಂದಿನ ಸಚಿವರಾಗಿದ್ದ ವಿನಯ್ ಕುಲಕರ್ಣಿ ಹೆಸರು ಬಲವಾಗಿ ಕೇಳಿ ಬಂದಿತ್ತು. ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸ್ ಇಲಾಖೆ, ಸಾಕ್ಷ್ಯ ನಾಶಪಡಿಸಿ, ಸಂಚು ರೂಪಿಸಿದ, ಸಾಕ್ಷಿಗಳಿಗೆ ಬೆದರಿಕೆ ಒಡ್ಡಿದ, ಪ್ರಕರಣದಲ್ಲಿ ಸಂಪೂರ್ಣ ಹಸ್ತಕ್ಷೇಪ ನಡೆಸಿದ ಹೀಗೆ ನಾನಾ ಆರೋಪಗಳು ಶಾಸಕ ವಿನಯ್ ಕುಲಕರ್ಣಿ ಹೆಗಲ ಮೇಲಿತ್ತು.
ಈ ಪ್ರಕರಣವು ಕೂಡ ಸಿಬಿಐ ಹೆಗಲೇರಿ, ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಭೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖಾಽಕಾರಿ ಠಾಣಾ ಸಬ್ ಇನ್ಸ್ಪೆಕ್ಟರ್, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಸುಮಾರು 16 ಮಂದಿಯನ್ನು ದೋಷಿ ಎಂದು ಪರಿಗಣಿಸಿ ಜೀವಾವಽ ಶಿಕ್ಷೆಯ ತೀರ್ಪು ಪ್ರಕಟಿಸಿದೆ.
ಇನ್ನು ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರನಟ ದರ್ಶನ್ ಪ್ರಕರಣ, ಬಳ್ಳಾರಿ ಗಣಿಧನಿ ಗಾಲಿ ಜನಾರ್ಧನ ರೆಡ್ಡಿ ಪ್ರಕರಣ ಇವೆಲ್ಲವೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾಗರಿಕ ಸಮಾಜಕ್ಕೆ ಭರವಸೆ ಮೂಡಿ ಸುವ ತೀರ್ಪುಗಳೆಂದರೂ ತಪ್ಪಾಗಲಾರದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ.
ಕಾನೂನಿಗೆ ಎಲ್ಲರೂ ತಲೆ ಬಾಗಬೇಕೆಂಬ ಸ್ಪಷ್ಟ ಸಂದೇಶಗಳನ್ನು ಹಲವಾರು ಪ್ರಕರಣದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಸಾರಿ ಹೇಳಿದೆ.