ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ರಾಖಿ ಭಾಯ್:‌ ದುಷ್ಟ ರಕ್ಷಕ, ಸಿಸ್ಟರ್‌ ರಕ್ಷಕ !

ಕನ್ನಡದಲ್ಲಿ ಅನಂತ್‌ನಾಗ್, ಅಂಬರೀಶ್ ಅವರಂಥ ಹಿರಿಯರ ನಂತರ ಈಗಿನ ಸಿನಿಮಾ ಹೀರೋ ಗಳು ರಾಜಕೀಯದ ವರಸೆ ಶುರುಮಾಡಿದ್ದಾರೆ. ಉಪೇಂದ್ರ ಅವರಂಥ ಕೆಲವರು ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳುವ ಪ್ರಯತ್ನಕ್ಕೆ ಈಗಲೇ ಮುನ್ನುಡಿ ಬರೆಯುತ್ತಿದ್ದಾರೆ. ಇನ್ನು ಚೇತನ್ ಅವರಂಥ ನಟ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ.

Hari Paraak Column: ರಾಖಿ ಭಾಯ್:‌ ದುಷ್ಟ ರಕ್ಷಕ, ಸಿಸ್ಟರ್‌ ರಕ್ಷಕ !

ಹರಿ ಪರಾಕ್‌ ಹರಿ ಪರಾಕ್‌ Aug 10, 2025 8:21 AM

ತುಂಟರಗಾಳಿ

ಸಿನಿಗನ್ನಡ

ಸಿನಿಮಾ ರಂಗ ಮತ್ತು ರಾಜಕೀಯ ರಂಗ ಮೊದಲಿನಿಂದಲೂ ದೂರ ದೂರ ಇರುವಂಥವೇನಲ್ಲ. ಸಿನಿಮಾ ರಂಗದಲ್ಲಿ ಹೆಸರು ಮಾಡಿ, ತಮ್ಮ ಕಾಲ ಮುಗಿಯುತ್ತಾ ಬಂದಂತೆ, ತಮ್ಮ ಡಿಮ್ಯಾಂಡ್ ಕಮ್ಮಿ ಆಗುತ್ತಾ ಬಂದಂತೆ ಹಲವರು ಮೆಲ್ಲಗೆ ರಾಜಕೀಯ ಮಾತಾಡೋಕೆ ಶುರು ಮಾಡೋದು ಸಹಜ. ಆದರೆ ಇತ್ತೀಚೆಗೆ ಈಗಿನ್ನೂ ಅಂಬೆಗಾಲಿಡುತ್ತಿರುವ ನಟ-ನಟಿಯರೂ ರಾಜಕೀಯದ ಬಗ್ಗೆ ಮಾತಾಡೋಕೆ ಶುರು ಮಾಡ್ತಾ ಇರೋದು ಹೊಸ ಟ್ರೆಂಡು.

ಕನ್ನಡದಲ್ಲಿ ಅನಂತ್‌ನಾಗ್, ಅಂಬರೀಶ್ ಅವರಂಥ ಹಿರಿಯರ ನಂತರ ಈಗಿನ ಸಿನಿಮಾ ಹೀರೋ ಗಳು ರಾಜಕೀಯದ ವರಸೆ ಶುರುಮಾಡಿದ್ದಾರೆ. ಉಪೇಂದ್ರ ಅವರಂಥ ಕೆಲವರು ರಾಜಕೀಯದಲ್ಲಿ ಭವಿಷ್ಯಕಂಡುಕೊಳ್ಳುವ ಪ್ರಯತ್ನಕ್ಕೆ ಈಗಲೇ ಮುನ್ನುಡಿ ಬರೆಯುತ್ತಿದ್ದಾರೆ. ಇನ್ನು ಚೇತನ್ ಅವರಂಥ ನಟ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ.

ಆದರೆ ಇವರ ಹೊರತಾಗಿ ಒಂದೆರಡು ಸಿನಿಮಾ ಮಾಡಿದ ನಟ-ನಟಿಯರೂ ಈಗ ರಾಜಕೀಯ ಪ್ರಿಯರಾಗಿದ್ದಾರೆ. ರಿಶಭ್ ಶೆಟ್ಟಿಯಂಥವರು ರಾಜಕೀಯವಾಗಿ ಸಕ್ರಿಯರಾಗಿಲ್ಲವಾದರೂ ಮುಂದೊಂದು ದಿನ ಕೆಲಸಕ್ಕೆ ಬರುತ್ತೆ ಎಂಬ ದಾರಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಇದೇ ಹಾದಿಯಲ್ಲಿ, ಕೆಲಸಕ್ಕೆ ಬಾರದ ನಾಲ್ಕು ಸಿನಿಮಾ ಮಾಡಿರುವಂಥವರೂ ಕೆಲಸಕ್ಕೆ ಬಾರದ ಮಾತಾಡುತ್ತಿರೋದು ಮಾತ್ರ ಎಡೆ ಚರ್ಚೆಗೆ ಕಾರಣವಾಗುತ್ತಿದೆ.

ಇದನ್ನೂ ಓದಿ: Hari Paraak Column: ಪ್ರಜ್ವಲ್‌ ರೇಪಣ್ಣ; ಆಸನದ ಗೌಡ್ರು

ಯಾರಿಗೂ ಹೆಸರೇ ಗೊತ್ತಿಲ್ಲದ ಸಿನಿಮಾದಿಂದ ನಾಯಕಿ ಎನಿಸಿಕೊಂಡ ಕೆಲ ಸೋ-ಕಾಲ್ಡ್‌ ನಟಿಯರು ಎಲ್ಲ ಪ್ರಯತ್ನಗಳ ನಡುವೆಯೂ ಚಿತ್ರರಂಗದಲ್ಲಿ ನಟಿ ಅಂತ ಗುರುತಿಸಿಕೊಳ್ಳೋ ಕಾಗಿಲ್ಲ ಅಂತಲೋ ಏನೋ ಈಗ, ವಯಸ್ಸಾದ ಮೇಲೆ ರಾಜಕೀಯ ಪಕ್ಷಗಳನ್ನು ಒಲಿಸಿಕೊಂಡು ರಾಜಕೀಯ ಪ್ರವೇಶಿಸುವ ಆಸೆ ಇಟ್ಟುಕೊಂಡವರಂತೆ ವರ್ತಿಸುತ್ತಿದ್ದಾರೆ.

ಬಾಲಿವುಡ್‌ನಲ್ಲಿ ಸ್ಮೃತಿ ಇರಾನಿ, ಕಂಗನಾ ರಣಾವತ್ ಅವರೆಲ್ಲ ಮಾತಾಡುವಾಗ ನಾನೂ ಮಾತಾ ಡಿದ್ರೆ ಅವರಂತೆ ಆಗಬಹುದು ಅಂತ ಕನಸು ಕಾಣೋದ್ರಲ್ಲಿ ತಪ್ಪಿಲ್ಲ ಬಿಡಿ. ಆದರೆ ಕೇವಲ ತಮ್ಮ ಸ್ವಾರ್ಥಸಾಧನೆಗಾಗಿ, ದೇಶದ ಹಿರಿಯ ನಾಯಕರ ಬಗ್ಗೆ, ಮಹಾತ್ಮರ ಬಗ್ಗೆ ಹಗುರವಾಗಿ ಮಾತಾಡುವ ಮೂಲಕ ಕೆಲವು ಸಿನಿಮಾ ನಾಯಕಿಯರು ತಮ್ಮ ಆತುರ ಮತ್ತು ಅಜ್ಞಾನವನ್ನ ತೋರಿಸಿಕೊಳ್ಳು ತ್ತಿರೋದು ನಗೆಪಾಟಲಿಗೆ ಈಡಾಗಿರೋದಂತೂ ನಿಜ.

ಲೂಸ್‌ ಟಾಕ್-ರಾಖಿ ಕಟ್ಟಿಸಿಕೊಂಡು ಯುವಕ

ಏನ್ ರಾಕಿ ಭಾಯ, ಕೈ ತುಂಬಾ ರಾಖಿ ಕಟ್ಕೊಂಡು ‘ರಾಖಿ ಭಾಯ್’ ಆಗ್ಬಿಟ್ಟಿದ್ದೀರಾ?

- ಏನ್ ಮಾಡೋದು, ರಕ್ಷಾಬಂಧನದ ದಿನ ಕೈಯಲ್ಲಿ ರಾಖಿ ಇಲ್ಲದೆ ‘ಕ್ಲೀನ್ ಹ್ಯಾಂಡ್’ ಅನ್ನಿಸಿಕೊಳ್ಳೋ ಯೋಗ ನಮಗಿಲ್ಲ.

ಸರಿ, ಬ್ರೋ ಅನ್ನೋ ಸ್ನೇಹಿತರಿಗೂ, ರಾಖಿ ಕಟ್ಟೋ ಸೋದರಿಯರಿಗೂ ಏನ್ ವ್ಯತ್ಯಾಸ?

- ಏನಿಲ್ಲ. ಸ್ನೇಹಿತರನ್ನ ‘ಸಿಸ್ಯಾ’ ಅಂತ ಕರೀತಿವಿ. ಸೋದರಿಯರನ್ನ ‘ಸಿಸ್’ ಅಂತ ಕರೀತಿವಿ

ನಿಮ್ಮ ಹಳೇ ಹುಡುಗಿ ಏನೂ ರಾಖಿ ಕಟ್ಟೋಕೆ ಬಂದಿಲ್ವಾ?

- ಅಯ್ಯೋ, ಅವಳನ್ನ ಲವ್ ಮಾಡಿ ಆಗ ಆಟೋ ಓಡಿಸೋ ಲೆವೆಲ್‌ಗೆ ಬಂದು, ‘ರಿಕ್ಷಾ ಬಂಧನ’ದಲ್ಲಿದ್ದೀನಿ. ‘ರಕ್ಷಾಬಂಧನ’ದ ದಿನ ಅವಳನ್ನ ಯಾಕ್ರೀ ನೆನಪಿಸ್ತೀರಿ?

ಹೋಗ್ಲಿ ಬಿಡಿ, ಅಂದಹಾಗೆ, ಅಕ್ಕ ತಂಗಿಯರು ಕಟ್ಟಿದ ಈ ರಾಖಿ ಎಷ್ಟು ದಿನ ನಿಮ್ಮ ಕೈಯಲ್ಲಿರುತ್ತೆ?

- ಅವರೇನೋ ಪ್ರೀತಿಯಿಂದ ಕಟ್ಟಿರ್ತಾರೆ. ಅದನ್ನ ಉಳಿಸಿಕೊಳ್ಳೋದೂ, ಬಿಡೋದೂ ನಮ್ಮ ಕೈಯಲ್ಲಿರುತ್ತೆ.

ಸರಿಯಾಗಿ ಹೇಳಿದ್ರಿ, ಹೋಗ್ಲಿ ಈ ರಾಖಿ ಕಟ್ಟಿದ ಮೇಲೆ ಎಲ್ಲ ಅಣ್ತಮ್ಮಗಳೂ ಸೋದರಿಯರ ಪಾಲಿಗೆ ರಕ್ಷಕ ಆಗ್ತಾರಾ?

- ಈ ಪ್ರಶ್ನೆನಾ ದುಷ್ಟ ರಕ್ಷಕ, ಸಿಸ್ಟರ್ ರಕ್ಷಕ, ‘ರಕ್ಷಕ್ ಬುಲೆಟ್’ ಅವರನ್ನೇ ಕೇಳ್ಬೇಕು

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಕಾಲೇಜಲ್ಲಿ ಓದುವಾಗ ಒಂದು ದಿನ ಲೈಬ್ರೆರಿಗೆ ಅಂತ ಹೋದ. ಅಲ್ಲಿ ತುಂಬಾ ಜನ ಇದ್ರು. ಎಲ್ಲರೂ ಕಾಮ್ ಆಗಿ ಕೂತು ಓದ್ತಾ ಇದ್ರು. ಖೇಮು ಕೂತ್ಕೊಳ್ಳೋಕೆ ಜಾಗ ಹುಡುಕ್ತಾ ಇದ್ದ. ಆದ್ರೆ ಎಲ್ಲೂ ಜಾಗ ಇರಲಿಲ್ಲ. ತುಂಬಾ ಹುಡುಕಿದ ಮೇಲೆ ಅಲ್ಲಿ ಒಂದು ಕಡೆ ಒಂದು ಸುಂದರವಾದ ಹುಡುಗಿ ಕೂತಿದ್ದು ಕಾಣಿಸಿತು. ಅವಳ ಪಕ್ಕದಲ್ಲಿ ಒಂದು ಜಾಗ ಖಾಲಿ ಇತ್ತು. ಆದರೆ ಖೇಮು ಸ್ವಲ್ಪ ನಾಚಿಕೆ ಸ್ವಭಾವದ ಹುಡುಗ. ಅವನಿಗೆ ಹುಡುಗಿಯ ಪಕ್ಕದಲ್ಲಿ ಹೋಗಿ ಕೂರೋದು ಮುಜುಗರ ಅನ್ನಿಸಿತು. ಆದರೆ ಬೇರೆ ದಾರಿ ಇರಲಿಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿ ನಂತರ ಧೈರ್ಯ ಮಾಡಿ ಆಕೆಯ ಬಳಿ ಹೋದ. “ಎಕ್ಸ್ ಕ್ಯೂಸ್ ಮೀ" ಅಂತ ಆಕೆಯನ್ನು ಮಾತನಾಡಿಸಿ, ಮೆಲುದನಿ ಯಲ್ಲಿ, “ಲೈಬ್ರರಿಯಲ್ಲಿ ಬೇರೆ ಎಲ್ಲೂ ಜಾಗ ಇಲ್ಲ. ಇಫ್ ಯೂ ಡೋಂಟ್ ಮೈಂಡ್, ನಾನು ನಿಮ್ಮ ಪಕ್ಕದಲ್ಲಿ ಕೂತ್ಕೋ ಬಹುದಾ?" ಅಂತ ಕೇಳಿದ. ‌

ಅವಳು ಒಂದು ಕ್ಷಣ ಇವನ ಮುಖ ನೋಡಿ, ನಂತರ ಲೈಬ್ರರಿಯಲ್ಲಿರುವ ಎಲ್ಲರನ್ನೂ ಒಮ್ಮೆ ನೋಡಿ ಎದ್ದು ನಿಂತು ಎಲ್ಲರಿಗೂ ಕೇಳಿಸುವಂತೆ ಹೇಳಿದಳು- “ಎಷ್ಟು ಧೈರ್ಯ ನಿಂಗೆ, ನಿನ್ ಜತೆ ಒಂದ್ ನೈಟ್ ಮಲಗಬೇಕು ಅಂತ ಎಲ್ಲರ ಮುಂದೆ ಕೇಳ್ತೀಯಾ?". ಖೇಮುಗೆ ಶಾಕ್ ಆಯ್ತು, ಗಾಬರಿಯಾದ.

ಲೈಬ್ರರಿಯಲ್ಲಿದ್ದ ಎಲ್ಲರೂ ಇವನನ್ನೇ ಅಸಹ್ಯವಾಗಿ ನೋಡೋಕೆ ಶುರು ಮಾಡಿದ್ರು. ಖೇಮುಗೆ ನಾಚಿಕೆ ಆಗಿ, ಒಂದು ಬುಕ್ ಸ್ಟ್ಯಾಂಡ್ ಬಳಿ ಹೋಗಿ ಒಂದು ಪುಸ್ತಕ ತೆಗೆದು ಮುಖ ಮುಚ್ಚಿಕೊಂಡ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗಿ ಖೇಮು ಹತ್ರ ಬಂದು, “ಸಾರಿ, ನಾನೊಬ್ಬ ಸೈಕಾಲಜಿ ಸ್ಟೂಡೆಂಟ್. ಈ ಥರ ಸಂದರ್ಭದಲ್ಲಿ ಗಂಡಸರು ಹೇಗೆ ವರ್ತಿಸ್ತಾರೆ ಅಂತ ನೋಡಬೇಕಿತ್ತು. ಅದಕ್ಕೆ ಹಾಗೆ ಮಾಡಿದೆ" ಅಂದಳು. ಅದಕ್ಕೆ ಖೇಮು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ- “ಏನು? ಒಂದ್ ನೈಟಿಗೆ 10000 ರುಪಾಯಿನಾ? ನೀನೇನು ತ್ರಿಪುರ ಸುಂದರಿ ಅಂತ ತಿಳ್ಕೊಂಡಿ‌ ದ್ದೀಯಾ?". ಮತ್ತೆ ಅಲ್ಲಿದ್ದ ಎಲ್ಲರೂ ಇನ್ನಷ್ಟು ಆಶ್ಚರ್ಯದಿಂದ ಆ ಹುಡುಗಿಯನ್ನು ನೋಡಿದರು. ಹುಡುಗಿ ಗಾಬರಿಯಾಗಿ ನಿಂತಿದ್ದು ನೋಡಿ ಖೇಮು ಹೇಳಿದ, “ನಾನು ಲಾಸ್ಟ್ ಸ್ಟೂಡೆಂಟ್, ಒಬ್ಬರು ಹಾಕಿದ ಕೇಸನ್ನ ಅವರಿಗೆ ಉಲ್ಟಾ ತಿರುಗಿಸೋದು ಹೆಂಗೆ ಅಂತ ನನಗೆ ಗೊತ್ತು".

ಲೈನ್‌ ಮ್ಯಾನ್

ಐಪೋನ್ ಪ್ರಿಯರ ಪ್ರಕಾರ

- ‘ಎ’ ಫಾರ್ ಆಪಲ್ ಅಲ್ಲ, ‘ಐ’ ಫಾರ್ ಆಪಲ್

ಇನ್ನು ಮುಂದೆ ವಾಹನಗಳಿಗೆ ತಬಲಾ, ಪಿಟೀಲು, ಕೊಳಲು ಸೌಂಡ್ ಬರೋ ಹಾರ್ನ್

- ಇನ್ಮೇಲೆ ಎಲ್ರೂ ‘ಕಚೇರಿ’ಗೆ ಹೋಗೋವಾಗ್ಲೇ ‘ಕಛೇರಿ’ ನೋಡ್ಕಂಡ್ ಹೋಗಬಹುದು.

ಬಿಜೆಪಿ ನಾಯಕರು ಜ್ಯೋತಿಷ್ಯ ಕೇಳೋಕ್ ಹೋಗಲ್ಲ

- ಯಾಕಂದ್ರೆ ಜ್ಯೋತಿಷಿಗಳು ‘ಕೈ’ ನೋಡಿ ಭವಿಷ್ಯ ಹೇಳ್ತಾರೆ

ಗಾಂಧಿನಗರ talks ‘ಸರ್, ಏನ್ ಕೆಲ್ಸ ಮಾಡ್ತಿದ್ದೀರಾ ನೀವು?’

‘ನಾನೊಬ್ಬ ಡಿಟೆಕ್ಟಿವ್’ ‘ಮತ್ತೆ, ಗಾಂಧಿನಗರದಲ್ಲಿ ಏನ್ ಮಾಡ್ತಾ ಇದ್ದೀರಾ?’

‘ಸಿನಿಮಾ ಮಾಡೋಕೆ ಕಥೆ ಹುಡುಕ್ತಾ ಇದ್ದೀನಿ, ಅದಾದ್ಮೇಲೆ ಪ್ರೊಡ್ಯೂಸರ್ ಹುಡುಕ್ತೀನಿ’

ಕ್ರಿಕೆಟ್ ಟೀಮ್ ಸೆಲೆಕ್ಷನ್

- ‘ಅವ್ನ್ ಲಾಸ್ಟ್ ಮ್ಯಾಚ್ ಚೆನ್ನಾಗೇ ಆಡಿದ್ನಲ್ಲ, ಅವನನ್ನ ಯಾಕ್ ಬಿಟ್ರು?’

‘ಅವ್ನಿಗೆ ಪೈಲ್ಸ್ ಆಗಿದೆಯಂತೆ, ಅದಕ್ಕೇ ಕೂರ‍್ಸಿದಾರೆ’ ‌

‘ಪೈಲ್ಸ್ ಆದ್ರೆ ಕೂರ‍್ಸಂಗಿಲ್ಲ, ಆಡಿಸ್ಬೇಕು ತಾನೇ?’

ಪ್ರೀತಿ ಮಾಡೋರಿಗೂ ಎಂಜಿನಿಯರ್‌ಗಳಿಗೂ ಇರೋ ಹೋಲಿಕೆ

-ಇವರು ಯಾರನ್ನೋ ಪ್ರೀತಿ ಮಾಡಿ ಇನ್ಯಾರನ್ನೋ ಮದ್ವೆ ಆಗ್ತಾರೆ, ಅವ್ರು ಎಂಜಿನಿಯರಿಂಗ್ ಓದಿ ಇನ್ನೇನೋ ಕೆಲಸ ಮಾಡ್ತಾರೆ.

‘ಕ್ಲೀನ್ ಹ್ಯಾಂಡ್’ ‌ಪೊಲಿಟಿಷಿಯನ್ ಅಂದ್ರೆ ಯಾರು?

-ದೇಶದ ಆಸ್ತಿಯನ್ನೆ ಮಾರಿ ‘ಕೈ ತೊಳ್ಕೊಂಡವನು’

ಪ್ರಪಂಚದ ಅತಿ ದೊಡ್ಡ ಕುಡುಕ ಯಾರು?

- ಬಾರಿಗೂ ಕುಡ್ಕೊಂಡೇ ಹೋಗುವವನು

ಸೋಡಾ ಕುಡಿಯೋಕೆ ಕಂಪನಿ ಕೊಡೋ ಗೆಳೆಯ

- ಸೋಡಾ buddy

ಕೆಲವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ರಬ್ಬರ್ ಟ್ಯೂಬ್‌ನಲ್ಲಿ ಕುಳಿತು ಕುಡಿಯೋದು ಯಾಕೆ?

- ತೇಲುತ್ತಾ ತೇಲೋಕೆ