Roopa Gururaj Column: ಭಾಗವತದ ಮಹತ್ವ ಸಾರಿದ ಶುಕಮುನಿ
ಗಿಳಿ ಮರಿ ಶಿವನು ಹೇಳುತ್ತಿದ್ದ ಅಮರ ಕತೆಯನ್ನು ಕೇಳುತ್ತಿತ್ತು. ಮಾತೆ ಪಾರ್ವತಿ ಮಲಗಿದ್ದನ್ನು ನೋಡಿತು. ಒಂದು ವೇಳೆ ತಾಯಿ ಪಾರ್ವತಿ ಹ್ಞೂಗುಟ್ಟದಿದ್ದರೆ ಪರಮೇಶ್ವರನು ಕಥೆ ಹೇಳುವುದನ್ನು ನಿಲ್ಲಿಸಿ ಬಿಡುತ್ತಾನೆ ಎಂದುಕೊಂಡು ಪಾರ್ವತಿಯಂತೆ ಗಿಳಿಯೂ ಸಹ ಶಿವನು ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ ಮಧ್ಯಮಧ್ಯ ಹ್ಞೂ ಗುಟ್ಟುತ್ತಿತ್ತು. ಶಿವನು ಅಮರಕತೆಯನ್ನು ಪೂರ್ತಿ ಮುಗಿಸಿದನು.

-

ಒಂದೊಳ್ಳೆ ಮಾತು
rgururaj628@gmail.com
ಒಮ್ಮೆ ಪರಮೇಶ್ವರನು ಪಾರ್ವತಿಗೆ ಅಮರ ಕತೆಯನ್ನು ಹೇಳುತ್ತೇನೆಂದು ಅಮರನಾಥ ಗುಹೆಗೆ ಕರೆದುಕೊಂಡ ಬಂದನು. ಈ ಕಥೆಯನ್ನು ಶ್ರದ್ಧೆಯಿಂದ ಕೇಳಿದರೆ ಪ್ರತಿಯೊಬ್ಬರೂ ಅಮರ ರಾಗುತ್ತಾರೆ. ಆದ್ದರಿಂದ ನಾನು ಕಣ್ಣು ಮುಚ್ಚಿ ಮೈ ಮರೆತು ಕಥೆಯನ್ನು ಹೇಳಲು ತೊಡಗುವೆ. ನೀನು ಬರೀ ಹ್ಞೂ ಗುಟ್ಟುತ್ತಿದ್ದರೆ ಸಾಕು.
ನೀನು ಕೇಳುತ್ತಿರುವೆ ಎಂಬುದರ ಮೇಲೆ ನಾನು ಕಥೆಯನ್ನು ಆರಂಭಿಸುತ್ತೇನೆ ಎಂದು ಕಥೆ ಹೇಳಲು ಆರಂಭ ಮಾಡುವ ಮೊದಲು ತನ್ನ ಡಮರುಗವನ್ನು ಎಡೆಯೂ ಶಬ್ದ ಆವರಿಸುವಂತೆ ಜೋರಾಗಿ ಬಾರಿಸಿದನು. ಇದರಿಂದ ಕಾಡಿನಲ್ಲಿದ್ದ ಪಶು ಪಕ್ಷಿ ಖಗ ಮೃಗಗಳೆಲ್ಲ ದೂರ ದೂರ ಹೋದವು. ಕಾರಣ ಇಂಥ ದಿವ್ಯ ಭವ್ಯವಾದ ಅಮರ ಕಥೆಯನ್ನು ಕೇಳುವ ಸೌಭಾಗ್ಯ ಕೆಲವರಿಗೆ ಮಾತ್ರ ಇರುತ್ತದೆ ಎಂಬುದು.
ಶಿವನು ಧ್ಯಾನ ಸ್ಥಿತಿಯಲ್ಲಿರುವಂತೆ ಕಣ್ಣು ಮುಚ್ಚಿ ಅಮರ ಕಥೆಯನ್ನು ಹೇಳಲು ಆರಂಭಿಸಿದನು. ಪಾರ್ವತಿಯೂ ಭಕ್ತಿಯಿಂದ ಕೇಳುತ್ತಿದ್ದಳು. ಮಧ್ಯ ಮಧ್ಯ ಹ್ಞೂ, ಹ್ಞೂ ಎಂದು ಹೂ ಗುಟ್ಟುತ್ತಿದ್ದಳು. ಆದರೆ ಸ್ವಲ್ಪ ಹೊತ್ತಿನಲ್ಲಿ ಅವಳಿಗೆ ತೂಕಡಿಕೆ ಬಂದು ನಿದ್ರೆ ಬಂದಿತು. ಅವಳು ಹ್ಞೂ ಗುಟ್ಟುವುದನ್ನು ನಿಲ್ಲಿಸಿದಳು ಆದರೆ ಒಂದು ಮರದ ಪೊಟರೆಯಲ್ಲಿ ಇನ್ನೂ ಕಣ್ಣು ಬಿಡದ ಗಿಳಿ ಮರಿ ಶಿವನು ಹೇಳುತ್ತಿದ್ದ ಅಮರ ಕತೆಯನ್ನು ಕೇಳುತ್ತಿತ್ತು. ಮಾತೆ ಪಾರ್ವತಿ ಮಲಗಿದ್ದನ್ನು ನೋಡಿತು. ಒಂದು ವೇಳೆ ತಾಯಿ ಪಾರ್ವತಿ ಹ್ಞೂಗುಟ್ಟದಿದ್ದರೆ ಪರಮೇಶ್ವರನು ಕಥೆ ಹೇಳುವುದನ್ನು ನಿಲ್ಲಿಸಿ ಬಿಡುತ್ತಾನೆ ಎಂದುಕೊಂಡು ಪಾರ್ವತಿಯಂತೆ ಗಿಳಿಯೂ ಸಹ ಶಿವನು ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ ಮಧ್ಯಮಧ್ಯ ಹ್ಞೂ ಗುಟ್ಟುತ್ತಿತ್ತು. ಶಿವನು ಅಮರಕತೆಯನ್ನು ಪೂರ್ತಿ ಮುಗಿಸಿದನು.
ಇದನ್ನೂ ಓದಿ: Roopa Gururaj Column: ನಂಬಿದವರ ಹೃದಯದೊಳಗೆ ನೆಲೆಸುವ ಶ್ರೀಕೃಷ್ಣ
ಅವನಿಗೆ ಪರಮಾನಂದವಾಗಿತ್ತು. ಆ ಹೊತ್ತಿಗೆ ಪಾರ್ವತಿಗೆ ಎಚ್ಚರವಾಯಿತು. ಸ್ವಾಮಿ ಕಥೆ ಮುಂದು ವರಿಸಿ ಕೇಳುತ್ತೇನೆ ಎಂದಳು. ಆಗ ಪರಮೇಶ್ವರ ಹೇಳಿದ ಆಗಲೇ ಕತೆ ಮುಗಿಯಿತು ನೀನು ಕೇಳಲಿ ಲ್ಲವೇ? ಇಷ್ಟು ಸಮಯವೂ ನಿದ್ರಿಸುತ್ತಿದ್ದೆಯಾ? ಎಂದು ಕೇಳಿದ.
ಪಾರ್ವತಿಯು ಹೌದು ಎಂದಳು. ಆಗ ಶಿವನು ಹಾಗಾದರೆ ನೀನು ಮಲಗಿದ ಮೇಲೆ ನಾನು ಹೇಳು ತ್ತಿದ್ದ ಕಥೆಗೆ ಹ್ಞೂ ಗುಟ್ಟುತ್ತಿದ್ದವರು ಯಾರು? ಎಂದು ತಿರುಗಿ ನೋಡಿದಾಗ ಮರದ ಪೊಟರೆಯಿಂದ ಪುಟ್ಟ ಗಿಳಿಮರಿ ತಲೆ ಹೊರಗೆ ಹಾಕಿತು. ಈ ಗಿಳಿ ತನ್ನ ಅಮರಕತೆಯನ್ನು ಕೇಳಿದೆ ಎಂದು ಕೋಪ ದಿಂದ ಸಂಹಾರ ಮಾಡಲು ಶಿವ ತನ್ನ ತ್ರಿಶೂಲವನ್ನು ಎತ್ತಿ ಹತ್ತಿರಕ್ಕೆ ಹೋಗುವಷ್ಟರಲ್ಲಿ ಅದು ತಪ್ಪಿಸಿಕೊಂಡು ಹಾರಿಹೋಯಿತು.
ಶಿವನು ಅದರ ಬೆನ್ನಟ್ಟಿ ಹೋದನು. ಆಗ ಬದರಿನಾಥದಲ್ಲಿ ವ್ಯಾಸ ಮಹರ್ಷಿಗಳ ಪತ್ನಿ ತನ್ನ ತಿಂಗಳ ಋತು ಚಕ್ರವನ್ನು ಮುಗಿಸಿ ಸ್ನಾನ ಮಾಡಿ ಕೂದಲು ಒಣಗಿಸಲು ಆಶ್ರಮದ ಹೊರಗಡೆ ಬಿಸಿಲಿಗೆ ತಲೆ ಕೂದಲನ್ನು ಹರವಿ ನಿಂತಿದ್ದರು. ಅವಳಿಗೆ ಆಕಳಿಕೆ ಬಂದು ಆಕಳಿಸಲು ಜೋರಾಗಿ ಬಾಯಿ ತೆರೆದಳು.
ಹಾರಿ ಬರುತ್ತಿದ್ದ ಪುಟ್ಟ ಗಿಳಿ ಮರಿ ಅವಳ ಬಾಯಿಯೊಳಗೆ ಹೋಗಿ ಹೊಟ್ಟೆ ಸೇರಿತು. ಅಲ್ಲಿಗೆ ಬಂದ ಪರಮೇಶ್ವರ ಈಗ ತಾನೆ ಹಾರಿ ಬಂದ ಒಂದು ಪುಟ್ಟ ಗಿಳಿ ಮರಿ ನಿಮ್ಮ ಗರ್ಭವನ್ನು ಸೇರಿದೆ ಅದನ್ನು ಹೊರಗೆ ಕಳಿಸಿ ಎಂದನು. ಋಷಿ ಪತ್ನಿ ಯಾಕೆ ಕಳಿಸಬೇಕು ಎಂದಳು. ಶಿವನು ಈ ಗಿಳಿ ಮರಿಯು ನಾನು ಪಾರ್ವತಿಗೆ ಹೇಳುತ್ತಿದ್ದ ಅಮರಕತೆಯನ್ನು ಅಡಗಿಕೊಂಡು ಕದ್ದು ಕೇಳಿದೆ ಅದಕ್ಕಾಗಿ ಹೊರಗೆ ಕಳಿಸಿ ಎಂದನು. ಋಷಿ ಪತ್ನಿ “ಅದು ಅಮರಕತೆಯನ್ನು ಕೇಳಿದುದರಿಂದ ಅಮರವಾಗಿದೆ.
ನೀವು ಅದನ್ನು ಕೊಂದರೆ ಅಮರಕತೆಯ ಪಾವಿತ್ರ್ಯ ಹೊರಟು ಹೋಗುವುದಿಲ್ಲವೇ" ಎಂದು ಕೇಳಿದಾಗ ಪರಮೇಶ್ವರನು ಹೌದು ಎಂದು ತಲೆಯಾಡಿಸಿ ಹೊರಟು ಹೋದನು. ಈ ಗಿಳಿ ಮರಿಯು ತಾಯಿಯ ಗರ್ಭದಲ್ಲಿ ಸೇರಿ 12 ವರ್ಷಗಳ ಕಾಲವಾದರೂ ತಾಯಿಯ ಹೊಟ್ಟೆಯಿಂದ ಹೊರಗೆ ಬಂದಿರಲಿಲ್ಲ.
ಇದನ್ನು ಕಂಡ ವ್ಯಾಸ ಮಹರ್ಷಿಗಳು ಮಗು ಹೊರಗೆ ಬಾ ಎಂದು ಹೇಳಿದರು. ಆಗ ಗಿಳಿ ಮರಿಯು, ಇಲ್ಲ ನಾನು ಹೊರಗೆ ಬಂದರೆ ಭೂಲೋಕದ ಮಾಯೆಯಲ್ಲಿ ಸಿಲುಕಿಕೊಳ್ಳುವೆ ಎಂದಿತು. ವ್ಯಾಸರು ಹೇಳಿದರು, ಹಾಗೆಲ್ಲ ಗರ್ಭದೊಳಗೆ ಎಷ್ಟು ದಿನವಾದರೂ ಇರಲು ಸಾಧ್ಯವಿಲ್ಲ ಹೊರಗೆ ಬಾ ಎಂದರು. ಅವರ ಮಾತಿಗೆ ಕಟ್ಟುಬಿದ್ದು ಜನ್ಮ ತಳೆದ ಮಗುವಿನ ಮುಖ ಗಿಳಿಯ ಹಾಗೆ ಇದ್ದಿದ್ದರಿಂದ ಶುಕದೇವ ಎಂದು ಹೆಸರಿಟ್ಟರು.
ಇದೇ ಶುಕನು ಮೋಕ್ಷಕ್ಕಾಗಿ ಜಗತ್ತನ್ನು ತ್ಯಜಿಸಿ ಸನ್ಯಾಸಿಯಾದನು. ಮುಂದೆ ಪಾಂಡವರ ವಂಶದ ಪರೀಕ್ಷಿತ ಮಹಾರಾಜನಿಗೆ ಬಂದ ಶಾಪದಿಂದ ಮುಕ್ತಿಗೊಳಿಸಲು ಅದೇ ಶುಕಮನಿಗಳು ಬಂದು ಭಾಗವತ ಕಥೆಯನ್ನು ಹೇಳಿ ಅದರಿಂದ ಪರೀಕ್ಷಿತನಿಗೆ ಮುಕ್ತಿ ದೊರೆಯುವಂತೆ ಮಾಡಿದರು. ಆದ್ದರಿಂದ ಭೂಲೋಕದಲ್ಲಿ ಹುಟ್ಟುವ ಪ್ರತಿಯೊಬ್ಬರೂ ಒಂದಲ್ಲ ಒಂದು ಸಾರಿಯಾದರೂ ಭಾಗವತದ ಕತೆಯನ್ನು ಕೇಳಿದರೆ ಮಾಡಿರುವ ಪಾಪ ಕಾರ್ಯಗಳೆಲ್ಲವೂ ನಶಿಸಿ ಭಗವಂತನ ಸಾನಿಧ್ಯವನ್ನು ಸೇರುತ್ತಾರೆ ಎಂಬ ನಂಬಿಕೆ ಇದೆ.