ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ವಿಷ್ಣು ಸಹಸ್ರನಾಮದ ಮಹತ್ವ

. ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ, ‘ಇಡೀ ಜಗತ್ತಿನ ದೈವ ಯಾರು? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವು ದರಿಂದ ಸಮಸ್ತ ಪಾಪ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಶ್ರೀವಿಷ್ಣು ಸಹಸ್ರನಾಮವೆಂದು ಒಂದೇ ಉತ್ತರ ಹೇಳುತ್ತಾರೆ.

Roopa Gururaj Column: ವಿಷ್ಣು ಸಹಸ್ರನಾಮದ ಮಹತ್ವ

-

ಒಂದೊಳ್ಳೆ ಮಾತು

rgururaj628@gmail.com

ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗದಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.

ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರ ವಾಗುತ್ತದೆ. ಆದ್ದರಿಂದ ವಿಷ್ಣು ಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯ ತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ.

ಇದನ್ನೂ ಓದಿ: Roopa Gururaj Column: ಐತಿಹ್ಯದ ಹಿನ್ನೆಲೆಯ ಓಣಂ ಹಬ್ಬ

ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀವಿಷ್ಣು ಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳು ತ್ತಾನೆ, ‘ಇಡೀ ಜಗತ್ತಿನ ದೈವ ಯಾರು? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯ ಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಮಸ್ತ ಪಾಪ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಶ್ರೀವಿಷ್ಣು ಸಹಸ್ರನಾಮವೆಂದು ಒಂದೇ ಉತ್ತರ ಹೇಳುತ್ತಾರೆ.

ಭೀಷ್ಮಾಚಾರ್ಯರಿಗೆ ವಿಷ್ಣುಸಹಸ್ರನಾಮದ ಶಕ್ತಿ ಸ್ವಯಂವೇದ್ಯವಾಗಿತ್ತು. ಕಾರಣಾಂತರಗಳಿಂದ ತಿಳಿಯದೆ ತಮ್ಮ ಊರುಗೋಲಿನ ತಳದಲ್ಲಿ ಸಿಕ್ಕಿಕೊಂಡ ಓತಿಕ್ಯಾತ ಒಂದನ್ನು ಬೇಲಿಗೆ ಎಸೆದಿದ್ದ ಪರಿಣಾಮವಾಗಿ, ಅದರ ಶಾಪದಿಂದ ಅವರೂ ಶರಶಯ್ಯೆಯ ಮೇಲೆ ನರಳುವಂತಾಯಿತು.

ಅಂತಹ ಸಮಯದಲ್ಲೂ ಅವರು ಮೃತ್ಯುವನ್ನೂ ಸಹ ‘ವಿಷ್ಣು ಸಹಸ್ರನಾಮದ’ ಶಕ್ತಿಯಿಂದ ದೂರ ಇಟ್ಟಿದ್ದರು. ಅಷ್ಟೇ ಅಲ್ಲ, ಅವರ ಭಕ್ತಿಯ ಶಕ್ತಿಯಿಂದ ಶ್ರೀಕೃಷ್ಣ ಪರಮಾತ್ಮ ಅವರು ಮಲಗಿದ್ದ ಕಡೆಗೆ ಬಂದು ದರ್ಶನ, ಸ್ಪರ್ಶ ಭಾಗ್ಯನೀಡಿದ. ಭೀಷ್ಮಾಚಾರ್ಯರು ಹೇಳುತ್ತಾರೆ.

‘ನ ವಾಸುದೇವ ಭಕ್ತಾನಾಮ್ ಅಶುಭಂ ವಿದ್ಯತೇಕ್ವಚಿತ್’ ಇದನ್ನು ಪಾರಾಯಣ ಮಾಡುವವರು, ಪರಿಹರಿಸಲಾಗದ ಪರಿಪರಿಯ ಕಷ್ಟಗಳಿಂದ ಬಿಡುಗಡೆ ಹೊಂದುತ್ತಾರೆ, ಅಷ್ಟೇ ಅಲ್ಲ ವಾಸುದೇವನ ಭಕ್ತರಿಗೆ ಅಶುಭವೆಂಬುದೇ ಇರುವುದಿಲ್ಲ. ಅವರಿಗೆ ಅಪಮೃತ್ಯು, ಮರಣ, ಮುಪ್ಪು ಹಾಗೂ ರೋಗ ಗಳ ಭಯವಿರುವುದಿಲ್ಲ ಎನ್ನುತ್ತಾರೆ.. ಇಷ್ಟೇ ಅಲ್ಲದೇ, ಪ್ರಾಮಾಣಿಕ ಭಕ್ತಿಶ್ರದ್ಧೆ ಯಿಂದ ಪಾರಾಯಣ ಮಾಡಿದ್ದೇ ಆದರೆ ಭಗವಂತ ಅಂತಹ ಸುಕೃತಿಗಳಿಗೆ ಸಾಕ್ಷಾತ್ ಮೋಕ್ಷವನ್ನೇ ಕರುಣಿಸುತ್ತಾನೆ ಎಂದು ಯುಧಿಷ್ಠರನಿಗೆ ವಿಷ್ಣು ಸಹಸ್ರನಾಮದ ಮಹತ್ವವನ್ನು ಭೀಷ್ಮಾಚಾರ್ಯರು ತಿಳಿಸಿ ಹೇಳುತ್ತಾರೆ.

ನಮ್ಮ ಸನಾತನ ಸಂಸ್ಕೃತಿ, ಧರ್ಮ ನಮ್ಮ ಜೀವನವನ್ನು, ಸತ್ ಸಂಸ್ಕಾರಗಳನ್ನು ಉತ್ತಮ ಗೊಳಿಸುವ ಇಂತಹ ಅನೇಕ ಧರ್ಮ ಗ್ರಂಥಗಳನ್ನು, ಆಚರಣೆಗಳನ್ನು ನಮಗೆ ಕಟ್ಟಿಕೊಟ್ಟಿದೆ. ಅವುಗಳ ಐತಿಹ್ಯವನ್ನು ಸರಿಯಾಗಿ ತಿಳಿದುಕೊಂಡು ನಾವು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮೊಳಗೆ ಜಾಗೃತವಾಗುವ ಆಂತರಿಕ ಶಕ್ತಿಯಿಂದ ಬದುಕಿನುದ್ದಕ್ಕೂ ನಾವು ಅದರ ಸತಲಗಳನ್ನು ಅನುಭವಿಸಬಹುದು, ಇಲ್ಲವೇ ಅವುಗಳ ಬಗ್ಗೆ ತಿಳಿಯದೆ, ಕೋಟ್ಯಾನಿಕೋಟಿ ಜನರಲ್ಲಿ ನಾವು ಒಬ್ಬರಂತೆ ಬದುಕಿ ಮರೆಯಾಗಬಹುದು.

ಭರತ ಭೂಮಿಯಲ್ಲಿ, ನಮ್ಮ ಜೀವನವನ್ನು ಅತ್ಯಂತ ಉತ್ಕೃಷ್ಟ ಸ್ಥಿತಿಗೆ ಕೊಂಡೊಯ್ಯಬಹುದಾದ ಇಂಥ ಧರ್ಮ ಸೂಕ್ಷ್ಮಗಳನ್ನು ತಿಳಿದು, ಆಚರಿಸಿ ನಾವು ಕೂಡ ಆ ಭಗವಂತನ ಕೃಪಾಕಟಾಕ್ಷಕ್ಕೆ ಒಂದು ಉತ್ತಮ ಸಂತೃಪ್ತ ಬದುಕನ್ನು ಕಟ್ಟಿಕೊಳ್ಳೋಣ. ಕೃಷ್ಣಾರ್ಪಣ ಮಸ್ತು.