Vishweshwar Bhat Column: ವಿಶ್ವದ ಅತ್ಯಂತ ಪುರಾತನ ಹೋಟೆಲ್
ಆತ ಜಪಾನಿನ ಅತ್ಯಂತ ಪ್ರಭಾವಿ ಮಿಲಿಟರಿ ನಾಯಕರುಗಳಾದ ಟಾಕೆಡಾ ಶೋಗುನ್‌ಗಳಿಗೆ ಸೇವೆ ಸಲ್ಲಿಸುತ್ತಿದ್ದ. ಆತ ಈ ಪ್ರದೇಶದ ಬಿಸಿನೀರಿನ ಬುಗ್ಗೆ (ಹಾಟ್ ಸ್ಪ್ರಿಂಗ್) ಗಳನ್ನು ಕಂಡು, ಯೋಧರ ವಿಶ್ರಾಂತಿ ಮತ್ತು ಪುನಶ್ಚೇತನಕ್ಕಾಗಿ ಈ ಹೋಟೆಲ್ ಅನ್ನು ಸ್ಥಾಪಿಸಿದ. ‘ನಿಶಿಯಾಮಾ ಓನ್ಸೆನ್ ಕೆಯು ನ್ಕನ್ ಹೋಟೆಲ್’ ತನ್ನ ಸ್ಥಾಪನೆಯಿಂದ ಇಂದಿನವರೆಗೆ, ಸುಮಾರು 52 ತಲೆಮಾರುಗಳ ಕಾಲ ಒಂದೇ ಕುಟುಂಬದವರಿಂದ ನಿರ್ವಹಿಸಲ್ಪಡುತ್ತಿರುವುದು ವಿಶೇಷ


ಸಂಪಾದಕರ ಸದ್ಯಶೋಧನೆ
ಜಪಾನಿಗೆ ಹೋದರೆ ‘ನಿಶಿಯಾಮಾ ಓನ್ಸೆನ್ ಕೆಯುನ್ಕನ್’ ಎಂಬ ಹೆಸರಿನ ಹೋಟೆಲಿಗೆ ಹೋಗಿ ಬನ್ನಿ ಎಂದು ಸ್ನೇಹಿತರೊಬ್ಬರು ಹೇಳಿದ್ದರು. ಆದರೆ ಅಲ್ಲಿಗೆ ಹೋಗಲು ನನಗೆ ಸಾಧ್ಯವಾಗಲಿಲ್ಲ. ಕಾರಣ ಆ ಹೋಟೆಲ್ ಇರುವ ನಗರಕ್ಕೆ ಹೋಗುವುದು ನನ್ನ ಪ್ರವಾಸದಲ್ಲಿ ಸೇರಿರಲಿಲ್ಲ. “ಜಪಾನಿ ನಲ್ಲಿ ಹಲವು ವರ್ಷಗಳಿಂದ ಇದ್ದವರೂ ಆ ಹೋಟೆಲಿಗೆ ಹೋಗುವುದು ಅಪರೂಪ. ಹೀಗಾಗಿ ನೀವು ಅಲ್ಲಿಗೆ ಹೋದರೆ, ಖಂಡಿತವಾಗಿಯೂ ಖುಷಿಪಡುತ್ತೀರಿ" ಎಂದು ಅವರು ಹೇಳಿದ್ದರು. ನನಗೆ ಅಲ್ಲಿಗೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರವಾಯಿತು. ನಂತರ ಅವರೇ ಆ ಹೋಟೆಲಿನ ವೈಶಿಷ್ಟ್ಯದ ಬಗ್ಗೆ ಹೇಳಿದ್ದನ್ನು ಕೇಳಿ ನಾನು ಕೆಲವು ಟಿಪ್ಪಣಿ ಮಾಡಿಕೊಂಡಿದ್ದೆ. ಅದು ಹೀಗಿದೆ: ಜಪಾನಿನ ಯಮಾನಾಶಿ ಪ್ರಿಫ್ರೆಕ್ಚರ್‌ನ ಹಯಾಕಾವಾ ಪಟ್ಟಣದಲ್ಲಿ ‘ವಿಶ್ವದ ಅತ್ಯಂತ ಹಳೆಯ ಹೋಟೆಲ್’ ಇದೆ. ಈ ಹೋಟೆಲ್ ಕ್ರಿಸ್ತಶಕ 705ರಲ್ಲಿ ಸ್ಥಾಪನೆಯಾಗಿ, 1300 ವರ್ಷಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಗಿನ್ನೆಸ್ ವಿಶ್ವದಾಖಲೆಯಲ್ಲಿ ‘ವಿಶ್ವದ ಅತ್ಯಂತ ಹಳೆಯ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್’ ಎಂಬ ಮಾನ್ಯತೆಯನ್ನು ಪಡೆದಿದೆ. ಈ ಹೋಟೆಲ್‌ನ ಸ್ಥಾಪನೆಯು ಫುಜಿವಾರಾ ಮಹಿತೋ ಎಂಬ ಸಮುರಾಯಿ ಯೋಧ ನಿಂದ ಆಯಿತು.
ಇದನ್ನೂ ಓದಿ: Vishweshwar Bhat Column: ಶಾಪವಾದ ದೀರ್ಘಾಯುಷ್ಯ
ಆತ ಜಪಾನಿನ ಅತ್ಯಂತ ಪ್ರಭಾವಿ ಮಿಲಿಟರಿ ನಾಯಕರುಗಳಾದ ಟಾಕೆಡಾ ಶೋಗುನ್‌ಗಳಿಗೆ ಸೇವೆ ಸಲ್ಲಿಸುತ್ತಿದ್ದ. ಆತ ಈ ಪ್ರದೇಶದ ಬಿಸಿನೀರಿನ ಬುಗ್ಗೆ (ಹಾಟ್ ಸ್ಪ್ರಿಂಗ್) ಗಳನ್ನು ಕಂಡು, ಯೋಧರ ವಿಶ್ರಾಂತಿ ಮತ್ತು ಪುನಶ್ಚೇತನಕ್ಕಾಗಿ ಈ ಹೋಟೆಲ್ ಅನ್ನು ಸ್ಥಾಪಿಸಿದ. ‘ನಿಶಿಯಾಮಾ ಓನ್ಸೆನ್ ಕೆಯುನ್ಕನ್ ಹೋಟೆಲ್’ ತನ್ನ ಸ್ಥಾಪನೆಯಿಂದ ಇಂದಿನವರೆಗೆ, ಸುಮಾರು 52 ತಲೆಮಾರುಗಳ ಕಾಲ ಒಂದೇ ಕುಟುಂಬದವರಿಂದ ನಿರ್ವಹಿಸಲ್ಪಡುತ್ತಿರುವುದು ವಿಶೇಷ.
ಇದನ್ನೂ ಓದಿ: Vishweshwar Bhat Column: ಶಾಪವಾದ ದೀರ್ಘಾಯುಷ್ಯ
ಈ ಹೋಟೆಲ್ ತನ್ನ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು, ಆಧುನಿಕ ಸೌಲಭ್ಯ ಗಳನ್ನು ಕೂಡ ಒದಗಿಸುತ್ತಿದೆ. ಇಲ್ಲಿ 37 ಅತಿಥಿ ಕೊಠಡಿಗಳಿದ್ದು, ಪ್ರತಿಯೊಂದು ಕೊಠಡಿಗೂ ಖಾಸಗಿ ಬಿಸಿನೀರು ಸ್ನಾನಗೃಹ (ಒನ್ಸೆನ್) ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೋಟೆಲ್‌ನ ವಿನ್ಯಾಸವು ಪಾರಂಪರಿಕ ಜಪಾನಿ ಶೈಲಿಯಲ್ಲಿ ನಿರ್ಮಿತವಾಗಿದ್ದು, ಟಾಟಾಮಿ ಚಾಪೆ, ಶೋಜಿ ಬಾಗಿಲುಗಳು ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸಲಾಗಿದೆ.
ಅತಿಥಿಗಳಿಗೆ ಶಾಂತಿಯುತ ಮತ್ತು ಆರಾಮದಾಯಕ ವಾತಾವರಣವನ್ನು ಒದಗಿಸಲು, ಹೋಟೆಲ್ ತನ್ನ ಸುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಂಡಿದೆ. ‘ನಿಶಿಯಾಮಾ ಓನ್ಸೆನ್ ಕೆಯು ನ್ಕನ್ ಹೋಟೆಲ್’ ಜಪಾನಿನ ಸಂಸ್ಕೃತಿ, ಪರಂಪರೆ ಮತ್ತು ಆತಿಥ್ಯದ ಪ್ರತಿಬಿಂಬ ಎಂದೇ ಪ್ರಸಿದ್ಧ. ಇದು ಆ ದೇಶದ ಪಾರಂಪರಿಕ ಹೋಟೆಲ್‌ಗಳ (ರಿಯೋಕಾನ್) ಶ್ರೇಷ್ಠ ಉದಾಹರಣೆ ಎಂಬುದರಲ್ಲಿ ಎರಡು ಮಾತಿಲ್ಲ.
ಇಲ್ಲಿ ವಾಸ್ತವ್ಯ ಹೂಡುವ ಮೂಲಕ, ಅತಿಥಿಗಳು ಜಪಾನಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಖುzಗಿ ಅನುಭವಿಸಬಹುದು. ಆ ಹೋಟೆಲಿನಲ್ಲಿ ತಂಗಲೆಂದೇ ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹಲವು ದೇಶಗಳ ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳು, ಗಣ್ಯರು ಈ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದು ಅದರ ಅಗ್ಗಳಿಕೆ.
‘ವಿಶ್ವದ ಅತ್ಯಂತ ಪುರಾತನ’ ಎಂಬ ಭಾವನೆಯೇ ಎಂಥವರದರೂ ಪುಳಕ ಮೂಡಿಸುತ್ತದೆ. ಈ ಹೋಟೆಲ್‌ನ ನಿರಂತರ ಕಾರ್ಯನಿರ್ವಹಣೆ, ಅದರ ಕುಟುಂಬದ ಸಮರ್ಪಣೆ, ಜಪಾನಿನ ಆತಿಥ್ಯ ಮತ್ತು ಅನನ್ಯ ಪರಂಪರೆಯ ಪ್ರತೀಕವಾಗಿರುವ ಈ ಹೋಟೆಲ್, ಆ ದೇಶದ ಪ್ರಮುಖ ಹೆಗ್ಗುರು ತಾಗಿರುವುದು ಗಮನಾರ್ಹ. ಬೆಟ್ಟಗಳ ಮಧ್ಯೆ, ನದಿಯ ದಡದಲ್ಲಿ, ನಿಸರ್ಗದ ತುಂಬು ಮಡಿಲಿನಲ್ಲಿ ರುವ ಈ ಹೋಟೆಲ್ ನಲ್ಲಿ ಹಿಮಪಾತದ ಸಂದರ್ಭದಲ್ಲಿ ತಂಗುವುದು ಒಂದು ಅಪರೂಪದ ಅನುಭವ. ಕೆಲವು ಸಲ ಆ ಹೋಟೆಲಿನಲ್ಲಿ ಉಳಿಯಲು 7-8 ತಿಂಗಳು ಕಾಯಬೇಕಾಗುತ್ತದೆ.
ಹಾಗಂತ ಆ ಹೋಟೆಲಿನ ರೂಮ್ ಬಾಡಿಗೆ ತೀರಾ ದುಬಾರಿಯೇನಲ್ಲ. ಒಂದು ದಿನಕ್ಕೆ ಮೂವತ್ತು ಸಾವಿರದಿಂದ ಐವತ್ತು ಸಾವಿರದವರೆಗಿನ ರೂಮುಗಳು ಲಭ್ಯ. ಇದು ಪುರಾತನ, ಐತಿಹಾಸಿಕ ಎಂದ ಮಾತ್ರಕ್ಕೆ ಎಲ್ಲವೂ ಹಳೆಯದು ಎಂದು ಭಾವಿಸಬೇಕಿಲ್ಲ. ಈ ಹೋಟೆಲ್ ಕಾಲ ಕಾಲಕ್ಕೆ ಮೇಲ್ದರ್ಜೆಗೆ ಏರುತ್ತಾ ಆಧುನಿಕತೆಯ ಸ್ಪರ್ಶವನ್ನೂ ಪಡೆದುಕೊಂಡಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ವೈಫೈ, ಖಾಸಗಿ ಒನ್ಸೆನ್ ಬಾತ್‌ಗಳು, ಕ್ಲಾಸಿಕ್ ಡೈನಿಂಗ್ ಹಾಲ, ಬಿಜಿನೆಸ್ ಸೆಂಟರ್, ಹೈ-ಕ್ವಾಲಿಟಿ ಜಪಾನಿ ಊಟಗಳು ಎಲ್ಲವೂ ಲಭ್ಯ. ಅಲ್ಲಿ ಉಳಿಯುವುದೆಂದರೆ, ಕಾಲನ ಜತೆ ಪಯಣಿಸಿದಂತೆ ಎಂಬ ಮಾತು ಸುಳ್ಳಲ್ಲ.