ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ವಿಕ್ರಮ ಬೇತಾಳ: ಮಂದಾರವತಿ ಮತ್ತು ಮೂವರು ಪ್ರೇಮಿಗಳ ಕತೆ

ಮೂರನೆಯವನು ಸನ್ಯಾಸಿಯಂತೆ ದೇಶಾಟನೆಗೆ ಹೊರಟು, ಪಯಣದ ಹಾದಿಯಲ್ಲಿ ಗುರುಮುಖೇನ ಮೃತದೇಹಗಳಿಗೆ ಜೀವ ತುಂಬುವ ಅಪೂರ್ವ ‘ಸಂಜೀವಿನಿ ವಿದ್ಯೆ’ಯನ್ನು ಸಿದ್ಧಿಸಿಕೊಂಡು ಮರಳಿ ಬಂದನು. ಮೂರನೆಯವನು ಸ್ಮಶಾನಕ್ಕೆ ಬಂದು, ಬೂದಿಯ ರಕ್ಷಣೆ ಮಾಡುತ್ತಿದ್ದ ಸ್ನೇಹಿತನಿಂದ ನಮ್ಮ ವಿಳಾಸ ಭಸ್ಮವನ್ನು ಪಡೆದು, ಚಿತೆಗೆ ಹಾರಿದವನ ದೇಹದ ಮೇಲೂ ಮಂತ್ರಜಲ ಚಿಮುಕಿಸಿದನು.

ವಿಕ್ರಮ ಬೇತಾಳ: ಮಂದಾರವತಿ ಮತ್ತು ಮೂವರು ಪ್ರೇಮಿಗಳ ಕತೆ

-

ಒಂದೊಳ್ಳೆ ಮಾತು

ಕಥಾಸರಿತ್ಸಾಗರದ ಬೇತಾಳ ಪಂಚವಿಂಶತಿಯ ಎರಡನೆಯ ಕಥೆಯು ತ್ಯಾಗ ಮತ್ತು ಸಂಬಂಧಗಳ ನೈಜ ಧರ್ಮಸೂಕ್ಷ್ಮ ವನ್ನು ಅರಿಯಲು ಒಂದು ಅಪರೂಪದ ಕನ್ನಡಿ ಹಿಡಿಯುತ್ತದೆ. ಯಮುನಾ ತೀರದ ಬ್ರಹ್ಮಸ್ಥಳ ಎಂಬ ಅಗ್ರಹಾರದಲ್ಲಿ ಅಗ್ನಿಸ್ವಾಮಿ ಎಂಬ ವಿದ್ವಾಂಸನ ಮಗಳಾದ ಮಂದಾರ ವತಿಯು ಅಪ್ರತಿಮ ಲಾವಣ್ಯವತಿಯಾಗಿದ್ದಳು. ಆಕೆಯ ಗುಣ-ರೂಪಗಳಿಗೆ ಮಾರು ಹೋದ ಮೂವರು ಸಮಾನ ರೂಪ-ವಿದ್ಯಾವಂತ ಯುವಕರು ಆಕೆಯ ಕೈಹಿಡಿಯಲು ಮುಂದಾದರು.

ತಂದೆಗೆ ಯಾರಿಗೆ ಕನ್ಯೆ ನೀಡಬೇಕೆಂಬ ಗೊಂದಲವಿರುವಾಗಲೇ, ದುರಾದೃಷ್ಟವಶಾತ್ ಆ ಯುವತಿ ತೀವ್ರ ಜ್ವರದಿಂದ ಅಕಾಲಿಕ ಮರಣವನ್ನಪ್ಪಿದಳು. ಆಕೆಯ ಅಂತ್ಯಸಂಸ್ಕಾರದ ವೇಳೆ ಮೂವರೂ ಪ್ರೇಮಿಗಳ ಪ್ರತಿಕ್ರಿಯೆ ಬೇರೆ ಬೇರೆಯಾಗಿತ್ತು. ಮೊದಲನೆಯವನು ವಿರಹದ ತೀವ್ರತೆಗೆ ಆಕೆಯ ಚಿತೆಗೇ ಹಾರಿ ತನ್ನ ಪ್ರಾಣವನ್ನೇ ಅರ್ಪಿಸಿದನು. ಎರಡನೆಯವನು ಆಕೆಯ ಚಿತಾಭಸ್ಮವನ್ನು ಗಂಟುಕಟ್ಟಿ, ಸ್ಮಶಾನದ ಕುಟೀರ ನೀವೂ ಬರೆಯಬಹುದು ನಿರ್ಮಿಸಿಕೊಂಡು ಬೂದಿಯ ರಕ್ಷಣೆ ಮಾಡುತ್ತಾ ತಪಸ್ವಿಯಂತೆ ಬದುಕತೊಡಗಿದನು.

ಇದನ್ನೂ ಓದಿ: Roopa Gururaj Column: ಕಥಾ ಸರಿತ್ಸಾಗರ: ವಿಕ್ರಮಾದಿತ್ಯ ಬೇತಾಳನ ಕಥೆ- 1

ಮೂರನೆಯವನು ಸನ್ಯಾಸಿಯಂತೆ ದೇಶಾಟನೆಗೆ ಹೊರಟು, ಪಯಣದ ಹಾದಿಯಲ್ಲಿ ಗುರುಮುಖೇನ ಮೃತದೇಹಗಳಿಗೆ ಜೀವ ತುಂಬುವ ಅಪೂರ್ವ ‘ಸಂಜೀವಿನಿ ವಿದ್ಯೆ’ಯನ್ನು ಸಿದ್ಧಿಸಿಕೊಂಡು ಮರಳಿ ಬಂದನು. ಮೂರನೆಯವನು ಸ್ಮಶಾನಕ್ಕೆ ಬಂದು, ಬೂದಿಯ ರಕ್ಷಣೆ ಮಾಡುತ್ತಿದ್ದ ಸ್ನೇಹಿತನಿಂದ ನಮ್ಮ ವಿಳಾಸ ಭಸ್ಮವನ್ನು ಪಡೆದು, ಚಿತೆಗೆ ಹಾರಿದವನ ದೇಹದ ಮೇಲೂ ಮಂತ್ರಜಲ ಚಿಮುಕಿಸಿ ದನು. ಆ ಸಂಜೀವಿನಿ ಮಂತ್ರದ ಮಹಿಮೆಯಿಂದ ಚಿತೆಗೆ ಹಾರಿದ ಯುವಕ ಹಾಗೂ ಆ ಯುವತಿ ಇಬ್ಬರೂ ಮರುಜನ್ಮ ಪಡೆದು ಮೊದಲಿನಂತೆ ಜೀವಂತವಾಗಿ ಎದ್ದು ನಿಂತರು!

ಮೂವರೂ ಪ್ರೇಮಿಗಳು ಮತ್ತೆ ಆಕೆಯ ಎದುರು ನಿಂತು, ನನ್ನ ತ್ಯಾಗದಿಂದಲೇ ನಿನಗೆ ಪುನರ್ಜನ್ಮ, ನೀನು ನನಗೇ ಸೇರಬೇಕು ಎಂದು ಪಟ್ಟುಹಿಡಿದರು. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಧರ್ಮಸಂಕಟದ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆಕೆಯ ಪುನರುತ್ಥಾನದಲ್ಲಿ ಮೂವರ ಶ್ರಮವೂ ಇದೆ. ಇವರಲ್ಲಿ ಆ ಯುವತಿಯನ್ನು ಧರ್ಮಬದ್ಧವಾಗಿ ಪತ್ನಿಯಾಗಿ ಸ್ವೀಕರಿಸಲು ನಿಜವಾದ ಅರ್ಹತೆ ಯಾರಿಗೆ ಸೇರುತ್ತದೆ? ವಿಕ್ರಮಾದಿತ್ಯನು ಆಳವಾದ ವಿವೇಕದಿಂದ ಹೀಗೆ ಉತ್ತರಿಸುತ್ತಾನೆ: ಸಂಜೀವಿನಿ ವಿದ್ಯೆಯಿಂದ ಜೀವ ಕೊಟ್ಟವನು ಆಕೆಗೆ ಎರಡನೆಯ ಜನ್ಮ ನೀಡಿದ ಕಾರಣ ಪಿತೃಸಮಾನನಾಗುತ್ತಾನೆ (ತಂದೆಯ ಸ್ಥಾನ).

ಆಕೆಯ ಚಿತಾಭಸ್ಮವನ್ನು ಕಾಪಾಡಿ, ಸಂಸ್ಕಾರ ಮಾಡಿ ಉಳಿಸಿಕೊಂಡವನು ತರ್ಪಣ ನೀಡಿದ ಮಗನಿಗೆ ಸಮಾನನಾಗುತ್ತಾನೆ (ಪುತ್ರ ಸ್ಥಾನ). ಆದರೆ, ಆಕೆಯ ಸಾವಿನ ದುಃ ಖವನ್ನು ತಾಳಲಾರದೆ ಜೊತೆಯ ಚಿತೆಗೆ ಹಾರಿ, ಆಕೆಯೊಂದಿಗೆ ಸಾವನ್ನು ಹಂಚಿಕೊಂಡು ಮತ್ತೆ ಮರುಜೀವ ಪಡೆದ ಮೊದಲನೆಯವನಷ್ಟೇ ಆಕೆಯ ನಿಜವಾದ ಪತಿಯಾಗಲು ಅರ್ಹ!

ಏಕೆಂದರೆ ವಿವಾಹವೆಂಬುದು ಸಾವು-ಬದುಕಿನಲ್ಲಿ ಸಮಾನವಾಗಿ ಬೆರೆತುಹೋಗುವ ಸಮರ್ಪಣಾ ಭಾವ. ನಮ್ಮ ಬದುಕಿನಲ್ಲೂ ನಾವು ಸಂಬಂಧಗಳನ್ನು ಹಲವು ಬಾರಿ ಕೇವಲ ಉಪಕಾರ, ಸಹಾಯ ಅಥವಾ ಶ್ರಮದ ಲೆಕ್ಕಾಚಾರದಲ್ಲಿ ಅಳೆದುಬಿಡುತ್ತೇವೆ. ಯಾರೋ ಒಬ್ಬರು ನಮಗೆ ದೊಡ್ಡ ಅನುಕೂಲ ಮಾಡಿಕೊಟ್ಟಿರಬಹುದು ಅಥವಾ ಉಪಕಾರದ ಋಣದಲ್ಲಿ ನಮ್ಮನ್ನು ಕಟ್ಟಿಹಾಕಿರ ಬಹುದು. ಆದರೆ ಕೇವಲ ಉಪಕಾರ ಅಥವಾ ಬಾಹ್ಯ ಸಾಧನೆಗಳು ಆತ್ಮೀಯತೆಯ ಮಾಪನವಾಗಲು ಸಾಧ್ಯವಿಲ್ಲ.

ನಿಜವಾದ ಒಡನಾಟ ಮತ್ತು ಪ್ರೀತಿ ಇರುವುದು ಕಷ್ಟ-ಸುಖ, ಸಾವು-ನೋವುಗಳಲ್ಲಿ ಪರಸ್ಪರರ ಜೊತೆಗೆ ಸಂಪೂರ್ಣವಾಗಿ ಬೆರೆತು ನಿಲ್ಲುವ ಭಾವನಾತ್ಮಕ ಮನಸ್ಥಿತಿಯಲ್ಲಿ. ಬದುಕಿನ ಏಳು ಬೀಳು ಗಳಲ್ಲಿ ಜೊತೆಯಾಗಿ ನಿಲ್ಲುವ, ನಮ್ಮ ನೋವನ್ನು ತನ್ನದೇ ಎಂದು ಹಂಚಿಕೊಳ್ಳುವ ಸಮರ್ಪಣಾ ಮನಸ್ಥಿತಿಯೇ ಸಂಬಂಧಗಳ ಜೀವಸೆಲೆ. ಲೆಕ್ಕಾಚಾರದ ಉಪಕಾರಕ್ಕಿಂತ, ಹೃದಯದ ನಿಸ್ವಾರ್ಥ ಸಹಭಾಗಿತ್ವವೇ ಪ್ರತಿಯೊಂದು ಸಂಬಂಧಕ್ಕೂ ನಿಜವಾದ ಸಾರ್ಥಕತೆಯನ್ನು ತಂದು ಕೊಡುತ್ತದೆ. ಆದಷ್ಟು ಲೆಕ್ಕಾಚಾರಗಳಿಲ್ಲದ ಬದುಕನ್ನ ಆರಿಸಿಕೊಳ್ಳೋಣ.

ನಾವು ನಿಸ್ವಾರ್ಥವಾಗಿ ಮತ್ತೊಬ್ಬರನ್ನು ಪ್ರೀತಿಸಿ ಅವರ ಕಷ್ಟ ಸುಖಗಳಲ್ಲಿ ಜೊತೆ ಇದ್ದಾಗ, ಅಂಥದ್ದೇ ಪ್ರೀತಿ ಅನುಬಂಧ ನಮ್ಮ ಜೀವನದಲ್ಲಿ ನೂರು ಪಟ್ಟಾಗಿ ಸಿಗುತ್ತದೆ. ಅದನ್ನು ಗಳಿಸುವ ಉಳಿಸಿಕೊಳ್ಳುವ ಯೋಗ ಯೋಗ್ಯತೆ ನಮ್ಮದಾಗಬೇಕು.