ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ಇರಾನ್-ಇಸ್ರೇಲ್‌ʼನ ನಾವು ಏನಂತ ಬಯ್ತಿದ್ದೀವಿ?: ʼಗ್ಯಾಸ್‌ʼ ಹೋಲ್ಸ್‌

ಆಸ್ತಿಯೂ ಅಲ್ಲ. ಅದು ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದ ಸತ್ಯ ಘಟನೆ. ಹಾಗಾಗಿ ಅದನ್ನು ತಗೊಂಡು ಯಾರು ಬೇಕಾದರೂ ಸಿನಿಮಾ ಮಾಡಬಹುದು. ಆದರೆ ಆ ಕಥೆ ನನ್ನದು ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ. ಆ ವ್ಯಕ್ತಿಯನ್ನು ಸಂಪರ್ಕ ಮಾಡಿ ನಿನ್ನ ಕಥೆಯನ್ನು ಸಿನಿಮಾ ಮಾಡುತ್ತೇವೆ ಅಂತ ಹೇಳಿ ಅವನಿಗೆ ದುಡ್ಡು ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದರೆ ಮಾತ್ರ ಯಾರಾದರೂ ಆ ಕಥೆ ನನ್ನದು ಅಂತ ಹೇಳಿಕೊಳ್ಳಬಹುದು.

ಇರಾನ್-ಇಸ್ರೇಲ್‌ʼನ ನಾವು ಏನಂತ ಬಯ್ತಿದ್ದೀವಿ?: ʼಗ್ಯಾಸ್‌ʼ ಹೋಲ್ಸ್‌

-

ಹರಿ ಪರಾಕ್‌
ಹರಿ ಪರಾಕ್‌ Mar 29, 2026 9:42 AM

ತುಂಟರಗಾಳಿ

ಸಿನಿಗನ್ನಡ

ಅಂತೂ ಇಂತೂ ‘ಲವ್ ಮಾಕ್ಟೇಲ್ ೩’ ಕಥೆಗೆ ಸಂಬಂಧಪಟ್ಟಂತೆ ಡಾರ್ಲಿಂಗ್ ಕೃಷ್ಣ ಮತ್ತು ರಾಘವೇಂದ್ರ ನಾಯಕ್- ಗುರು ದೇಶಪಾಂಡೆ ಅವರ ಜಗಳ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಇಬ್ಬರೂ ಕ್ಷಮೆ ಕೇಳಿಕೊಂಡಿದ್ದಾರೆ. ಇಬ್ಬರೂ ಒಂದೇ ಘಟನೆಯಿಂದ ಸ್ಪೂರ್ತಿ ಪಡೆದಿದ್ದಾರೆ ಅಷ್ಟೇ ಅಂತ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಹೇಳಿಕೆ ನೀಡಿ ಪ್ರಕರಣಕ್ಕೆ ಮುಕ್ತಾಯ ಹಾಡಿದ್ದಾರೆ.

ಆದರೂ ಈ ಪ್ರಕರಣವನ್ನು ಅವಲೋಕಿಸಿದರೆ ಸುಖಾಸುಮ್ಮನೆ ಡಾರ್ಲಿಂಗ್ ಕೃಷ್ಣ ಅವರ ಸುಖವನ್ನು ಹಾಳು ಮಾಡೋಕೆ ರಾಘವೇಂದ್ರ ನಾಯಕ್ ಪ್ರಯತ್ನಪಟ್ಟಿದ್ದಾರಾ ಅನ್ನಿಸಿದರೆ ತಪ್ಪೇನಿಲ್ಲ. ಯಾಕಂದ್ರೆ ಇದೇ ರಾಘವೇಂದ್ರ ನಾಯಕ್ ಅನ್ನುವ ಬರಹಗಾರ ಹೇಳುವಂತೆ ಕೃಷ್ಣ ಅವರು ಸೀನ್ ಕದ್ದಿಲ್ಲ, ಚಿತ್ರಕಥೆ ಕದ್ದಿಲ್ಲ, ಸಂಭಾಷಣೆ ಕದ್ದಿಲ್ಲ.

ಹಾಗಾದ್ರೆ ಕದ್ದಿರೋದು ಏನು ಅಂದ್ರೆ ಅದು ಕಥೆಯ ಒನ್‌ಲೈನ್. ಆದರೆ ಇಲ್ಲಿ ಉಲ್ಲೇಖಿಸಬೇಕಾದ ವಿಚಾರ ಅಂದ್ರೆ ಆ ಕಥೆ ಯಾರಪ್ಪನ ಆಸ್ತಿಯೂ ಅಲ್ಲ. ಅದು ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದ ಸತ್ಯಘಟನೆ.

ಹಾಗಾಗಿ ಅದನ್ನು ತಗೊಂಡು ಯಾರು ಬೇಕಾದರೂ ಸಿನಿಮಾ ಮಾಡಬಹುದು. ಆದರೆ ಆ ಕಥೆ ನನ್ನದು ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ. ಆ ವ್ಯಕ್ತಿಯನ್ನು ಸಂಪರ್ಕ ಮಾಡಿ ನಿನ್ನ ಕಥೆಯನ್ನು ಸಿನಿಮಾ ಮಾಡುತ್ತೇವೆ ಅಂತ ಹೇಳಿ ಅವನಿಗೆ ದುಡ್ಡು ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದರೆ ಮಾತ್ರ ಯಾರಾದರೂ ಆ ಕಥೆ ನನ್ನದು ಅಂತ ಹೇಳಿಕೊಳ್ಳಬಹುದು.

ಇದನ್ನೂ ಓದಿ: Hari Paraak Column: ಬೇಕೂ ಅಂತ ಈ ʼಆಡುʼ ಬರೆದಿಲ್ಲ

ಆದರೆ ಇಲ್ಲಿ ಹಾಗಾಗಿಲ್ಲ. ಹಾಗಾಗಿ ಕಥೆ ಯಾರದೂ ಅಲ್ಲ. ಇದೊಂದೇ ಪಾಯಿಂಟ್‌ನಿಂದ ಕೃಷ್ಣ ಅವರು ರಾಘವೇಂದ್ರ ನಾಯಕ್ ಅವರ ಬಾಯಿ ಮುಚ್ಚಿಸಬಹುದಾಗಿತ್ತು. ಈಗ ಅದೇ ಆಗಿದೆ. ಪ್ರಕರಣ ಸುಖಾಂತ್ಯ ಕಂಡಿದೆ. ಇದು ಹೊಸದಾಗಿ ಅಪಾಯಿಂಟ್ ಆದ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜನಯಮಾಲಾ ಅವರ ಸಾಧನೆ ಅಂದ್ರೆ ತಪ್ಪೇನಿಲ್ಲ ಬಿಡಿ.

ಲೂಸ್‌ ಟಾಕ್-‌ ಕಾಮನ್‌ ಮ್ಯಾನ್

ಏನ್ ಸರ್, ಯಾಕೋ ಮುಖ‌ ಒಂಥರಾ ಇದೆ, ಏನ್ ಸಮಾಚಾರ?

- ಅಯ್ಯೋ ಫುಲ್ ಗ್ಯಾಸ್ ಟ್ರಬಲ್ ಕಣ್ರೀ

ಅಸಿಡಿಟಿ ಸಮಸ್ಯೆ ಎಲ್ಲರಿಗೂ ಇದ್ದಿದ್ದೇ, ಬೇರೆ ಏನಾದ್ರು ಇದ್ರೆ ಹೇಳಿ

- ಅದಲ್ಲ ರೀ, ಯುದ್ಧದಿಂದಾಗಿ ಗ್ಯಾಸ್ ಸಿಗದೆ ಟ್ರಬಲ್ ಆಗಿದೆ ಅಂದಿದ್ದು.

ಓ, ಹಂಗೆ. ಸರಿ, ನಿಮ್ಮ ಪ್ರಕಾರ ಯುದ್ಧ ಯಾವಾಗ ನಿಲ್ಲಬಹುದು?

- ಅಯ್ಯೋ, ನಿಂತ್ರೆ ಸಾಕಾಗಿದೆ. ನಮಗೂ ಗ್ಯಾಸ್ ಸಿಲಿಂಡರ್ ಕ್ಯೂನಲ್ಲಿ ನಿಂತು ನಿಂತು ಸಾಕಾಗಿದೆ.

ಸರಿ ಹೋಗ್ಲಿ ಬಿಡಿ, ನಿಮ್ಮ ಏರಿಯಾಗೆ ಹೊಸ ಹುಡುಗಿ ಬಂದಿದ್ದಾಳಂತೆ, ನೋಡಿದ್ರಾ?

- ಇನ್ನೂ ನೋಡಿಲ್ಲ, ನೋಡ್ತೀನಿ ಬಿಡಿ. ಎಲ್ ಹೋಗ್ತಾಳೆ. ಊರಿಗೆ ಬಂದವಳು ಗ್ಯಾಸಿಗೆ ಬರದೇ ಇರ್ತಾಳಾ?

ಸರಿ, ಈ ಥರ ಎಲ್ಲರಿಗೂ ತೊಂದರೆ ಕೊಟ್ಟು ಯುದ್ಧ ಮಾಡೋರನ್ನ ಏನಂತ ಬಯ್ತೀರಾ?

- ಗ್ಯಾಸ್ ಹೋಲ್ಸ್

(ಕಾಲ್ಪನಿಕ ಸಂದರ್ಶನ)

Lovemocktail,3 ok

ನೆಟ್ ಪಿಕ್ಸ್

ಬಾರ್‌ನಲ್ಲಿ ಖೇಮು ಫುಲ್ ಪರೇಶಾನ್ ಆಗಿ ಕೂತಿದ್ದ. ಅಲ್ಲಿಗೆ ಅವನ ಆತ್ಮೀಯ ಗೆಳೆಯ ಸೋಮು ಬಂದ. “ಯಾಕೋ ಖೇಮು, ಏನಾಯ್ತು?" ಅಂತ 5ನೇ ಪೆಗ್ ಏರಿಸುತ್ತಿದ್ದ ಖೇಮುವನ್ನು ಕೇಳಿದ. ಅದಕ್ಕೆ ಖೇಮು ತುಂಬಾ ಗಂಭೀರವಾಗಿ “ನಾನೊಂದು ಗಂಭೀರ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದೀನಿ" ಅಂದ.

“ಏನದು?" ಅಂತ ಸೋಮು ಕೇಳಿದ್ದಕ್ಕೆ ಖೇಮು ಹೇಳಿದ “ನನ್ನ 4 ವರ್ಷದ ಮಗ ಮರಿಖೇಮು ನಮ್ ಅಪಾರ್ಟ್‌ಮೆಂಟ್ʼನಲ್ಲಿರೋ 18 ವರ್ಷದ ಹುಡುಗಿಯೊಬ್ಬಳನ್ನ ಪ್ರೆಗ್ನೆಂಟ್ ಮಾಡ್ಬಿಟ್ಟಿದಾನೆ". ಸೋಮುಗೆ ಆಶ್ಚರ್ಯ, “ಕುಡಿದು ಟೈಟ್ ಆಗಿ ನಿಂಗೆ ಹುಚ್ಚು ಹಿಡಿದಿದೆ. 4 ವರ್ಷದ ಮಗ ಅಂತೀಯಾ, ಅದೆಂಗೆ ಸಾಧ್ಯ? ಇಂಪಾಸಿಬಲ" ಅಂದ. ಅದಕ್ಕೆ ಖೇಮು “ನಿಜ ಕಣೋ, ಹುಚ್ಚು ಹಿಡಿತೀರೋದಕ್ಕೆ ಟೈಟ್ ಆಗಿರೋದು, ಇಟ್ಸ್ ಪಾಸಿಬಲ’ ಅಂದ.

“ಅದು ಸರಿ, ಅವನೇ ಆ ಹುಡುಗೀನ ಪ್ರೆಗ್ನೆಂಟ್ ಮಾಡಿರೋದು ಅನ್ನೋ ಬಗ್ಗೆ ಪೂಫ್ ಏನಿದೆ‌ ನಿನ್ನತ್ರ?" ಅಂತ ಕೇಳಿದ ಸೋಮು. ಅದಕ್ಕೆ ಖೇಮು ಹೇಳಿದ “ಪ್ರೂಫ್ ಇದೆ ಮಗಾ, ಬಡ್ಡಿಮಗ ಮರಿಖೇಮು, ನಾನು ಮನೆಯಲ್ಲಿ ಇಲ್ಲದೇ ಇದ್ದಾಗ ನನ್ನ ವಾರ್ಡ್‌ರೋಬ್‌ಲ್ಲಿದ್ದ ಎಲ್ಲಾ ಕಾಂಡೋಮ್‌'ಗಳಿಗೂ ಎಲ್ಲಂದ್ರ ಪಿನ್ ತಗೊಂಡು ಚುಚ್ ಬಿಟ್ಟಿದಾನೆ".

ಲೈನ್‌ ಮ್ಯಾನ್

ಬಾಕ್ಸಿಂಗ್ ರೆಫ್ರಿಯನ್ನ ಏನಂತ‌ ಕರೀಬಹುದು?

- ಪಂಚ್-ಆಯ್ತಿ ಸದಸ್ಯ

ವ್ಯತ್ಯಾಸ

- ಸಣ್ಣವರಿದ್ದಾಗ ಜೋಲಿ ರೈಡ್

- ದೊಡ್ಡವರಾದ ಮೇಲೆ ಜಾಲಿ

ರೈಡ್

ಹಂಪ್‌ಗಳೇ ಜಾಸ್ತಿ ಇದ್ದು ‘ಹಾಳು ಬಿದ್ದ’ ರಸ್ತೆ

- ಹಂಪಿ

ಜೇನುಹುಳ ಮನೆಯನ್ನ ಮೇಲಿಂದ ಕೆಳಗೆ ಕಟ್ಟುತ್ತೆ.

- ‘ಮನೆಯನ್ನ ಮೇಲಿಂದ ಕೆಳಗೆ ಕಟ್‌ಬೋದು ಪಕ್ಕಾ ವಾಸ್ತು ಪ್ರಕಾರ’ ಅಂದ ಯೋಗರಾಜ್ ಭಟ್ರ ಮಾತು ಸುಳ್ಳಲ್ಲ ಬಿಡಿ

ಟೀ ಅಂಗಡಿ ಮುಂದೆ ‘ಸಾಲುಗಟ್ಟಿ’ ನಿಂತು ಸ್ಟೋಕ್ ಮಾಡುವವರನ್ನು ಏನಂತಾರೆ?

- ‘ಚೈನ್’ ಸ್ಟೋಕರ್ಸ್

ವಿರುದ್ಧ ಪದವೂ ಸಮಾನಾರ್ಥಕ ಪದ ಆಗಬಹುದು ಎಂಬುದಕ್ಕೆ ಉದಾಹರಣೆ

- ಚೈನ್ ಸ್ಟೋಕರ್ಸ್‌ಗಳೆಲ್ಲ ‘ಬೇಚೈನ್’ ಸ್ಟೋಕಸ್

ಗಳಾಗಿರುತ್ತಾರೆ

ಕೈ ತೊಳಕೊಂಡು ಮುಟ್ಟಬೇಕು ಅನ್ನೋದಕ್ಕೆ ಒಂದು ಉದಾಹರಣೆ?

- ಸೋಪು!

ಹಬ್ಬ ಪದದ ಸ್ತ್ರೀ ಲಿಂಗ ಏನು?

- ಗಂಡ.

- ಅದೆಂಗೆ? ನಪುಂಸಕ ಪದಕ್ಕೆ ಸ್ತ್ರೀ ಲಿಂಗ ಇರುತ್ತಾ ಅಂತ ಬೈಬೇಡಿ.

- ಹಬ್ಬದ ಸೀ ಲಿಂಗ ಹಬ್ಬಿ- Hubby

ಶೇಕ್ ಶರ್ಮಾ ಅವರ ಇತ್ತೀಚಿನ ಫಾರ್ಮ್ ನೋಡಿದವರ ಮಾತು

- ಅಭಿ ‘ಶೇಖ್’ ಶರ್ಮಾ

ಇಂಡಿಯಾ ಬದಲು ‘ಅರಬ್’ ಕಂಟ್ರಿಗೆ ಆಡ್ಬೇಕು..