ನೋಟಿಸ್ ಗದ್ದಲಕ್ಕೆ ತೆರೆ, ಯುಪಿಐ ನಿರಾಕರಿಸದಿರಿ ಪ್ಲೀಸ್ !
‘ಯುಪಿಐ ಬೇಡ, ಕ್ಯಾಶ್ ಕೊಡ್ರಪ್ಪಾ’ ಎಂದು ವ್ಯಾಪಾರಿಗಳು ಹೊಸ ರಗಳೆಯನ್ನು ಸೃಷ್ಟಿಸಿದರೆ ಏನಾಗಲಿದೆ? ಕ್ರಮೇಣ ಅವರ ಬಿಸಿನೆಸ್ಗೇ ಹೊಡೆತ ಬೀಳುವುದು ಪಕ್ಕಾ. ಏಕೆಂದರೆ ಗ್ರಾಹಕರಿಗೆ ಬೇರೆ ಆಯ್ಕೆಗಳು ಸಾಕಷ್ಟಿವೆ. ನಾವೀಗ ನಗದುರಹಿತ ಆರ್ಥಿಕ ವ್ಯವಸ್ಥೆಯತ್ತ ಭರದಿಂದ ಸಾಗುತ್ತಿದ್ದೇವೆ. ಇಲ್ಲಿ ನಗದನ್ನು ಹೆಚ್ಚು ದಿನ ಕದ್ದುಮುಚ್ಚಿ ಬಳಸುವುದು ಕಷ್ಟಕರವಾಗಲಿದೆ.