ಉಳ್ಳವರಿಗೆ ಮೇಲ್ ರಸ್ತೆ, ಇಲ್ಲದವರಿಗೆ ದುರವಸ್ಥೆ !
ಸಾರ್ವಜನಿಕರ ನೆಲವನ್ನು ಬಳಸಿದ, ಸರಕಾರದ ದುಡ್ಡಿನಲ್ಲಿ ನಿರ್ಮಾಣಗೊಂಡ ರಸ್ತೆಗಳು ಸಾರ್ವಜನಿಕ ರಸ್ತೆಗಳೇ ಹೊರತು ಇವು ಖಾಸಗಿ ರಸ್ತೆಗಳಾಗಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ರಸ್ತೆಗಳನ್ನು ಕೆಲವರಿ ಗಷ್ಟೇ ಮೀಸಲಿಡುವ ‘ಸೇವಾತಾರತಮ್ಯ ನೀತಿ’ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸಮಾನ ಆದ್ಯತೆ ನೀಡುತ್ತಿವೆ. ಹೀಗಾಗಿ ಹೊಸದಾಗಿ ಕಟ್ಟಿದೆಲ್ಲವೂ ಉಳ್ಳವರಿಗೆ ಸೀಮಿತವಾಗುತ್ತಿವೆ.