ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಶ್ರೀವತ್ಸ ಜೋಶಿ

columnist

info4@vishwavani.news

ದಕ್ಷಿಣಕನ್ನಡ (ಈಗಿನ ಉಡುಪಿ) ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಊರಿನವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದು ದಿಲ್ಲಿ, ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಉದ್ಯೋಗದ ನಂತರ ಈಗ ಇಪ್ಪತ್ತು ವರ್ಷಗಳಿಂದ ಅಮೆರಿಕದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ರಾಜಧಾನಿ ವಾಷಿಂಗ್ಟನ್‌ನಲ್ಲಿ ಐಬಿ‌ಎಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ವರ್ಜಿನಿಯಾ ಸಂಸ್ಥಾನದ ರೆಸ್ಟನ್ ನಗರದಲ್ಲಿ ಪತ್ನಿ ಸಹನಾ ಮತ್ತು ಪುತ್ರ ಸೃಜನ್‌ನೊಂದಿಗೆ ವಾಸಿಸುತ್ತಿದ್ದಾರೆ. ಕನ್ನಡ ನಾಡು-ನುಡಿ-ಭಾಷೆ-ಸಂಸ್ಕೃತಿಯ ಕುರಿತು ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆಯೂ ಆಸಕ್ತಿ ಹೊಂದಿರುವ ಶ್ರೀವತ್ಸ ಜೋಶಿ, ೨೦೦೨ರಲ್ಲಿ ಆರಂಭಿಸಿ ಈಗಲೂ ಕನ್ನಡ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ. ಅವರ ‘ವಿಚಿತ್ರಾನ್ನ’, ‘ಪರಾಗಸ್ಪರ್ಶ’, ಮತ್ತು ‘ತಿಳಿರುತೋರಣ’ ಅಂಕಣಬರಹಗಳು ಪುಸ್ತಕಗಳ ರೂಪದಲ್ಲಿಯೂ ಪ್ರಕಟವಾಗಿವೆ. 2016ರಿಂದ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ‘ತಿಳಿರುತೋರಣ’ ಅಂಕಣದ ಪ್ರತಿಯೊಂದು ಲೇಖನವನ್ನು ಧ್ವನಿಮುದ್ರಣ ಮಾಡಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ವಿತರಿಸುವುದರಿಂದ ಈ ಅಂಕಣ ಬಹುರೂಪಗಳಲ್ಲಿ ಜನಪ್ರಿಯವಾಗಿದೆ. ಶ್ರೀವತ್ಸ ಜೋಶಿಯವರ ಇದುವರೆಗಿನ ಒಟ್ಟು 17 ಪುಸ್ತಕಗಳ ಪೈಕಿ ಐದು, ವಾಷಿಂಗ್ಟನ್‌ನಲ್ಲಿರುವ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ‘ಲೈಬ್ರರಿ ಆಫ್ ಕಾಂಗ್ರೆಸ್’ ಪುಸ್ತಕಭಂಡಾರದಲ್ಲಿವೆ. ವಾಷಿಂಗ್ಟನ್ ಡಿ.ಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘ, ಮತ್ತು ಅಮೆರಿಕದ ಇತರ ಕನ್ನಡ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಶ್ರೀವತ್ಸ ಜೋಶಿ, ಕಡಲಾಚೆ ಕನ್ನಡ ಭಾಷೆ-ಸಂಸ್ಕೃತಿ ಪಸರಿಸುವುದರಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಜಗದಗಲ ಓದುಗಮಿತ್ರರನ್ನು ಹೊಂದಿದ್ದಾರೆ. ಇವರು ಕಳೆದ ೩೦೦ ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವಚ್ಛ ಭಾಷೆ ಅಭಿಯಾನ ಸರಣಿ ಕಲಿಕೆಯು ತುಂಬ ಜನಪ್ರಿಯವಾಗಿದೆ.

Articles
Srivathsa Joshi Column: ಅಳಿಲಿನ ಬಾಲ ಅಳೆದ ಸೂರ್ಯನೂ, ಚಿತ್ರ ಬರೆದ ಪ್ರಣಮ್ಯಳೂ

ಅಳಿಲಿನ ಬಾಲ ಅಳೆದ ಸೂರ್ಯನೂ, ಚಿತ್ರ ಬರೆದ ಪ್ರಣಮ್ಯಳೂ

ಕೆಲ ದಿನಗಳ ಹಿಂದೆ ಶಿವಮೊಗ್ಗದಿಂದ ಪ್ರಣಮ್ಯ ನನಗೊಂದು ವಾಟ್ಸ್ಯಾಪ್ ಸಂದೇಶದಲ್ಲಿ ಒಂದು ಪಿಡಿಎಫ್ ಕಳುಹಿಸಿದಳು. ಅದು, ಭರ್ತಿ ನಾಲ್ಕು ಪುಟಗಳಷ್ಟು ಅವಳದೇ ಕೈಬರಹದಲ್ಲಿ ಇಂಗ್ಲಿಷ್‌‌ ನಲ್ಲಿ ಬರೆದ ಪತ್ರ. ಚಂದದ ಕರ್ಸಿವ್ ಹ್ಯಾಂಡ್ ರೈಟಿಂಗ್. ಪ್ರಣಮ್ಯಳಿಗೆ ಈಗ ಪಿಯುಸಿ ಪರೀಕ್ಷೆಗಳ ಫಲಿತಾಂಶ, ಸಿಇಟಿ ಮತ್ತಿತರ ಪ್ರವೇಶಪರೀಕ್ಷೆಗಳ ಫಲಿತಾಂಶ ಎಲ್ಲ ಮುಗಿದು ಎಂಜಿನಿಯರಿಂಗ್ ಕಾಲೇಜುಗಳ ಆಯ್ಕೆ ಪ್ರಕ್ರಿಯೆಯೂ ಆಗಿ ಕೊಂಚ ಬಿಡುವು ಸಿಕ್ಕಿರುವುದರಿಂದ ಅಷ್ಟೊಂದು ಸುದೀರ್ಘ ಪತ್ರ.

Srivathsa Joshi Column: ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ...

ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ...

ಸಂತರು ಭಗವಂತನ ಲೀಲೆಗಳನ್ನು ಬಣ್ಣಿಸುವುದೇ ಹಾಗೆ. ನಮಗದು ಉತ್ಪ್ರೇಕ್ಷೆಯಾಗಿ ತೋರ ಬಹುದು, ಆದರೆ ಅವರು ಅನುಭವ ಮತ್ತು ಅನುಭಾವಗಳಿಗೆ ದಕ್ಕಿದ್ದನ್ನೇ ಹೇಳಿರುತ್ತಾರೆ. ಕೃಷ್ಣನ ವೇಣುಗಾನವು ಸಕಲ ಚರಾಚರ ಜೀವಜಗತ್ತಿನ ಮೇಲೆ ಅಂಥದೊಂದು ಪರಿಣಾಮ ಬೀರಿದ್ದಿರಬಹುದು. ಅದು ನಮ್ಮ ಅನುಭವಕ್ಕೆ ದಕ್ಕಲಿಲ್ಲ ಅಂದಮಾತ್ರಕ್ಕೇ ಅಲ್ಲಿ ಹಾಗೆ ಆಗಿರಲಿಕ್ಕೇ ಸಾಧ್ಯ ವಿಲ್ಲ ಎಂದುಕೊಳ್ಳುವುದು ತಪ್ಪಾಗುತ್ತದೆ.

Srivathsa Joshi Column: ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ

ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ

ನಾನೋದಿದ ಇಂಗ್ಲಿಷ್ ಲೇಖನದಲ್ಲಿ ಆತ್ತಿಚ್ಚೂಡಿಯಿಂದ ಆಯ್ದ ನಾಲ್ಕಾರು ನೀತಿವಾಕ್ಯಗಳ ಇಂಗ್ಲಿಷ್ ಅನುವಾದ ಮತ್ತು ಪುರಾಣ ಕಥೆಗಳ ಉದಾಹರಣೆಗಳೊಂದಿಗೆ ವ್ಯಾಖ್ಯಾನವೂ ಇತ್ತು. ಆತ್ತಿಚ್ಚೂಡಿಯಲ್ಲಿ ಒಟ್ಟು 109 ನೀತಿವಾಕ್ಯಗಳಿವೆ, ಒಂದೊಂದೂ ಸಾರ್ವ ಕಾಲಿಕ ಮೌಲ್ಯವುಳ್ಳ ಆಣಿಮುತ್ತುಗಳೇ ಆಗಿವೆ ಎಂಬ ವಿವರಣೆಯೂ ಅದರಲ್ಲಿತ್ತು. ಆಮೇಲೆ ಅಂತರ್ಜಾಲದಲ್ಲಿ ಆತ್ತಿಚ್ಚೂಡಿ ಬಗ್ಗೆ ಹುಡುಕಿದಾಗ ಎಲ್ಲ 109 ನೀತಿವಾಕ್ಯಗಳ ತಮಿಳು ಮೂಲ ರೂಪ ಮತ್ತು ಅವುಗಳ ಇಂಗ್ಲಿಷ್ ಅನುವಾದವೂ ಸಿಕ್ಕಿತು

Srivathsa Joshi Column: ಹಂಚಿಕೆಯ ಪಂಚ-ತಂತ್ರದಲಿ ಪಾಲಿಗೆ ಬಂದಿದ್ದೇ ಪಂಚಾಮೃತ !

ಹಂಚಿಕೆಯ ಪಂಚ-ತಂತ್ರದಲಿ ಪಾಲಿಗೆ ಬಂದಿದ್ದೇ ಪಂಚಾಮೃತ !

ಮಹಾಭಾರತದ ದ್ರೌಪದಿ ವಿವಾಹ ಪ್ರಸಂಗವು ಪಾಲುದಾರಿಕೆ ಅಥವಾ ಹಂಚಿಕೊಳ್ಳುವುದರ ಬಗ್ಗೆ ಒಂದಿಷ್ಟು ಹರಟೆ ರೀತಿಯ ಚಿಂತನೆಗೆ ಒಳ್ಳೆಯ ಪೀಠಿಕೆಯಾಗುತ್ತದೆ. ಹಂಚುವಿಕೆಯನ್ನು ನಾವೇ ಮಾಡುವುದಾದರೆ ನಮ್ಮ ಮನಸ್ಸಿನೊಳಗೆ ಏನಿರುತ್ತದೆ, ಬೇರೆಯವರು ಮಾಡಿ ನಮಗೂ ಪಾಲು ಸಿಗುವುದಾದರೆ ನಮ್ಮ ಮನಸ್ಸು ಹೇಗೆ ವರ್ತಿಸುತ್ತದೆ ಎಂಬ ಸೂಕ್ಷ್ಮಗಳ ಬಗೆಗೆ ಇದೊಂದು ಅವಲೋಕನ. ಬೇಕಿದ್ದರೆ ಹಂಚಿಕೆಯ hunch ಎನ್ನಿ.

Srivathsa Joshi Column: ಹೆಣ್ಣಿನ ಕಣ್ಣೀಗಷ್ಟೇ ಅಲ್ಲ ಕವಿಯ ಕಣ್ಣಿಗೂ ಕಾಡಿಗೆ ಚಂದ !

ಹೆಣ್ಣಿನ ಕಣ್ಣೀಗಷ್ಟೇ ಅಲ್ಲ ಕವಿಯ ಕಣ್ಣಿಗೂ ಕಾಡಿಗೆ ಚಂದ !

ಶ್ಲೋಕದಲ್ಲಿ ಬಳಕೆಯಾದ ಸಂಸ್ಕೃತ ಪದಗಳಲ್ಲಿ ವಿಶೇಷವಾದ ಕೆಲವನ್ನು ಒಮ್ಮೆ ಗಮನಿಸೋಣ: ಸಂಸ್ಕೃತದಲ್ಲಿ ಸಿತ ಅಂದರೆ ಬಿಳಿಯ ಬಣ್ಣ. ಅಸಿತ ಅಂದರೆ ಕಪ್ಪು ಬಣ್ಣ. ಅಸಿತಗಿರಿ ಅಂದರೆ ಕಪ್ಪು ಬಣ್ಣದ ಪರ್ವತ, ಕಾಡಿಗೆಯಿಂದಾದ ನೀಲಾಂಜನಪರ್ವತ. ಕಜ್ಜಲ ಅಂದರೆ ಕಾಡಿಗೆ ಅಥವಾ ಮಸಿ. ಸಿಂಧು ಅಂದರೆ ಸಮುದ್ರ. ಸುರತರು ಅಂದರೆ ಕಲ್ಪವೃಕ್ಷ ಅರ್ಥಾತ್ ತೆಂಗಿನಮರ.

Srivathsa Joshi Column: ರ‍್ಹಿನೊಟಿಲೆಕ್ಸೊಮೆನಿಯಾ ಅಂದರೆ ಮೂಗು ಅಗೆಯುವ ಚಟ

ರ‍್ಹಿನೊಟಿಲೆಕ್ಸೊಮೆನಿಯಾ ಅಂದರೆ ಮೂಗು ಅಗೆಯುವ ಚಟ

ಅಸಹ್ಯ ಎನಿಸುವ ವಿಷಯವಿದು ಹೇಗಪ್ಪಾ ಓದುವುದು ಎಂದುಕೊಳ್ಳುವವರು ದಯವಿಟ್ಟು ಮುಂದೆ ಓದಬೇಡಿ. ಒತ್ತಾಯವಿಲ್ಲ. ಆದರೆ ಇಂಥ ವಿಷಯಗಳ ಬಗ್ಗೆ ಬರೆದಾಗ ಪ್ರತಿಕ್ರಿಯೆಗಳು ಹೇಗಿರುತ್ತವೆಂದು ಒಂದು ಅನುಭವದ ಮಾತು ಹೇಳುತ್ತೇನೆ: ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಪರಾಗಸ್ಪರ್ಶ’ ಅಂಕಣದಲ್ಲಿ ಒಮ್ಮೆ ಇದೇ ವಿಷಯದ ಬಗ್ಗೆ ಬರೆದಿದ್ದೆ.

Srivathsa Joshi Column: ಚಿತ್ರಕಾವ್ಯವೆಂಬ ಭಾಷಾ ಚಮತ್ಕಾರ ಇಂಗ್ಲಿಷ್‌ ನಲ್ಲೂ ಇದೆ !

ಚಿತ್ರಕಾವ್ಯವೆಂಬ ಭಾಷಾ ಚಮತ್ಕಾರ ಇಂಗ್ಲಿಷ್‌ ನಲ್ಲೂ ಇದೆ !

ಬೌದ್ಧಿಕ ಚಮತ್ಕಾರ, ಶಾಬ್ದಿಕ ಕ್ರೀಡೆ, ವಿದ್ವತ್ ವಿನೋದ ಇದರ ಮುಖ್ಯ ಉದ್ದೇಶಗಳು. ಸಂಸ್ಕೃತ ದಲ್ಲಂತೂ ಊಹಿಸಲಸದಳ ಸಾಧ್ಯತೆಗಳು ಚಿತ್ರಕಾವ್ಯದಲ್ಲಿ ಅರಳಿದ್ದಿವೆ. ವರ್ಣಚಿತ್ರ (ಸ್ವರ-ವ್ಯಂಜನ ಗಳಿಗೆ ಸಂಬಂಧಿಸಿದ), ಗತಿಚಿತ್ರ (ಅಕ್ಷರಗಳ ನಡೆ), ಭಾಷಾ ಚಿತ್ರ (ಎರಡು ಅಥವಾ ಹೆಚ್ಚು ಭಾಷೆಗಳ ಸಂಕರ), ಗರ್ಭ ಚಿತ್ರ (ಒಂದರೊಳಗೊಂದು ಹುದುಗಿದ), ಗೂಢ ಚಿತ್ರ (ಸಮಸ್ಯಾಪೂರಣ, ಒಗಟು, ಮುಂಡಿಗೆ ಇತ್ಯಾದಿ), ಮತ್ತು ಬಂಧ ಚಿತ್ರ (ಪದ್ಯದ ಮೂಲಕ ಆಕಾರ ರಚನೆ) ಎಂದು ಚಿತ್ರಕಾವ್ಯದ ಉಪಪ್ರಭೇದಗಳಿವೆ.

Srivathsa Joshi Column: ಸೀಕರ್ಣೆ ಸಾವಿತ್ರಿಯೂ ಸೀಕರಣೆಯ ಸಾರ್ವತ್ರಿಕತೆಯೂ...

ಸೀಕರ್ಣೆ ಸಾವಿತ್ರಿಯೂ ಸೀಕರಣೆಯ ಸಾರ್ವತ್ರಿಕತೆಯೂ...

“ದೇವರ‍್ಮನೆಗೆ ಬಂದು ಸಹಸ್ರನಾಮ ಆದ ಕುಂಕುಮಾನ ಹಣೆಗೂ ತಾಳಿಗೂ ಇಟ್ಕೊಂಡು ಪ್ರಸಾದದ ಕಡೆ ಕಣ್ಗುಡ್ಡೆಗಳ್ನ ತಿರುಗಿಸ್ತೇನೆ! ಕೋಸುಂಬ್ರಿ ಆಗಬಾರ‍್ದೆ! ಕಡ್ಬು ಆಗಬಾರ‍್ದೆ! ಪಾನ್ಕ ಆಗಬಾರದೆ! ಪುಳಿಯೋ ಗರೆ ಆಗಬಾರದೆ! ನನ್ನ ಕಷ್ಟಕಾಲ ನೋಡಿ... ಈ ನೈವೇದ್ಯಗಳೆಲ್ಲಾ ಬಿಟ್ಟು ಸೀಕರ್ಣೆ... ಪಂಚಾಮೃತ ಸೀಕರ್ಣೆ ಮಾಡಿಟ್ಟಿದ್ದಾಳೆ ನನ್ಮಾಂಗಲ್ಯಕ್ಕೆ ಮಾರಿ ಹಾಗೆ ಬಂದ ನಮ್ಮತ್ತೆ!

Srivathsa Joshi Column: ಮುಸ್ಸೊಲಿನಿಯ ಮೊದಲ ಮಡದಿ ಮತ್ತು ಮಗನ ಮರುಕಗಾಥೆ

ಮುಸ್ಸೊಲಿನಿಯ ಮೊದಲ ಮಡದಿ ಮತ್ತು ಮಗನ ಮರುಕಗಾಥೆ

ಒಂದೆರಡು ಬಾರಿ ಸಿಟ್ಟಿನಿಂದ ಸಹಪಾಠಿಗಳನ್ನು ಇರಿದ ಘಟನೆಗಳೂ ನಡೆದಿದ್ದವು. ಒಟ್ಟಾರೆಯಾಗಿ ಇತ್ತ ಅಷ್ಟೇನೂ ಜನಬಲವೂ ಇಲ್ಲದ, ಅತ್ತ ಧನಬಲವೂ ಇಲ್ಲದ, ಆದರೆ ಕಂಗಳಲ್ಲಿ ಸಾಕಷ್ಟು ಕನಸುಗಳಿದ್ದ ವ್ಯಕ್ತಿತ್ವ ಆತನದು. ಆ ಸಮಯದಲ್ಲಿ ಮುಸ್ಸೊಲಿನಿಗೆ ಒಬ್ಬಳು ಪ್ರೇಯಸಿಯಿದ್ದಳು. ಇಡಾ ಡೆಲ್ಸರ್ ಎಂದು ಆಕೆಯ ಹೆಸರು.

Srivathsa Joshi Column: ಕಬ್ಬಿಗರ ರಚನೆ ಕಬ್ಬಿಣದ ಕಡಲೆಯಾಗದೆ ಕಬ್ಬಿನ ರಸವಾದಾಗ...

ಕಬ್ಬಿಗರ ರಚನೆ ಕಬ್ಬಿಣದ ಕಡಲೆಯಾಗದೆ ಕಬ್ಬಿನ ರಸವಾದಾಗ...

ಕೆಲವು ಚಿತ್ರಗೀತೆಗಳಲ್ಲೂ, ‘ಜಲ್ಲೆಕಬ್ಬು ವಲ್ಲಿ ವಸ್ತ್ರ ನಲ್ಲ ನಿನಗೆ ಪಟ್ಟು ಸೀರೆ ಬೊಟ್ಟು ರವಿಕೆ ನಲ್ಲ ನನಗೆ’ಯಂಥ ಜನಪದ ಗೀತೆಗಳಲ್ಲೂ ಕಬ್ಬು ಕಂಗೊಳಿಸಿರುವುದು ನಿಮಗೆ ನೆನಪಾಗಬಹುದು. ಆದರೆ ನಾನಿಲ್ಲಿ ಬೇರೆ ಕಾವ್ಯಪ್ರಕಾರಗಳನ್ನೂ ಅವಲೋಕಿಸುವವನಿದ್ದೇನೆ. ವಚನಸಾಹಿತ್ಯಕ್ಕೆ ಕಾಲಿಟ್ಟರೆ ನಮಗಲ್ಲಿ ‘ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣ ವಿರ್ದಲ್ಲಿ...’ ಎಂದು ಅಲ್ಲಮಪ್ರಭುಗಳ ಒಂದು ವಚನ ಸಿಗುತ್ತದೆ

Srivathsa Joshi Column: ಮದರ್ಸ್‌ ಡೇ ಆರಂಭಿಸಿದವಳೇ ಅದನ್ನು ನಿಲ್ಲಿಸಲಿಕ್ಕೂ ಹೋರಾಡಿದ್ದಳು !

ಮದರ್ಸ್‌ ಡೇ ಆರಂಭಿಸಿದವಳೇ ಅದನ್ನು ನಿಲ್ಲಿಸಲಿಕ್ಕೂ ಹೋರಾಡಿದ್ದಳು !

ಉಭಯ ಪಕ್ಷಗಳಲ್ಲಿದ್ದ ಕರುಣಾಮಯಿ ತಾಯಂದಿರನ್ನು ಒಟ್ಟುಗೂಡಿಸಿ ‘ಮದರ‍್ಸ್ ಫ್ರೆಂಡ್‌ಶಿಪ್ ಡೇ’ ಎಂಬ ಸಂಪ್ರದಾಯವನ್ನು ಆರಂಭಿಸಿ ದವಳು. 1905ರಲ್ಲಿ ಆನ್ ಜಾರ್ವಿಸ್ ನಿಧನಳಾದಾಗ ಮಗಳು ಅನ್ನಾ ಜಾರ್ವಿಸ್ ಒಂದೊಮ್ಮೆ ತೀವ್ರವಾಗಿ ಧೃತಿಗೆಟ್ಟರೂ ಅಮ್ಮನ ಆದರ್ಶಗಳನ್ನು ತಾನು ಮುಂದು ವರಿಸಬೇಕು ಎಂದು ಪಣ ತೊಟ್ಟಳು. ಅಮ್ಮನಿಗೆ ಶ್ರದ್ಧಾಂಜಲಿ ರೂಪದಲ್ಲಿ ಬಂದಿದ್ದ ಪತ್ರಗಳನ್ನು, ಅದರಲ್ಲಿ ಸಜ್ಜನರೆಲ್ಲರೂ ಅಮ್ಮನ ಬಗ್ಗೆ ಬರೆದಿದ್ದನ್ನು ಎರಡೆರಡು ಸಲ ಓದಿದಳು

Srivathsa Joshi Column: ಅಳಿಲೇ ಅಳಿಲೇ ಚಂದವಿರುವ ನಿನಗೊಂದು ಫೋಟೋ ತೆಗೆಯಲೇ ?

ಅಳಿಲೇ ಅಳಿಲೇ ಚಂದವಿರುವ ನಿನಗೊಂದು ಫೋಟೋ ತೆಗೆಯಲೇ ?

ಮೊದಲನೆ ಯದಾಗಿ, ಬೇಗಡೆ ಎಂಬ ಪದ ಕರ್ನಾಟಕದ ಬೇರೆ ಭಾಗಗಳಲ್ಲಿ ಅಷ್ಟೊಂದು ಪ್ರಚಲಿತ ವಿದೆಯೋ, ಅಲ್ಲಿಯವರಿಗೆ ಪರಿಚಿತವಿದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲೆಲ್ಲ ಬಹುಶಃ ಬೇಗಡೆ ಎಂದರೆ ಶಾಸೀಯ ಸಂಗೀತದ ಒಂದು ರಾಗ, ಸೀನು-ಸುಬ್ಬು ಜೋಡಿಯು ಶೇಕ್ ಟ್ವಿಸ್ಟ್ ಕುಣಿಯುತ್ತ ಬೀಟಲ್ಸ್ ಹಾಡುವ ರಾಗ ಎಂದಷ್ಟೇ ಗೊತ್ತಿರುವುದಿರಬಹುದು

Srivathsa Joshi Column: ಆದಾಧಿಸುವೆ ಮದನಾರಿ ಹಾಡಿನ ತತ್ತಧೀಂ ತಕಿಟ ತಕತಧೀಂ ತಕಿಟ...

ಆದಾಧಿಸುವೆ ಮದನಾರಿ ಹಾಡಿನ ತತ್ತಧೀಂ ತಕಿಟ ತಕತಧೀಂ ತಕಿಟ...

ಹಾಡುಗಾರ, ವೀಣಾವಾದಕ, ಕೊಳಲು ವಾದಕ, ಮೃದಂಗವಾದಕ ಮತ್ತು ಘಟವಾದಕ- ಈ ಐದೂ ಪಾತ್ರಗಳಿಗೆ ಜೀವ ತುಂಬಿದರು. ಈಗಿನಂತೆ ತಂತ್ರಜ್ಞಾನ ಸಾಧ್ಯತೆಗಳಿಲ್ಲದಿದ್ದ ಆ ಕಾಲದಲ್ಲಿ ಐದು ಬೇರೆ ಬೇರೆ ಮುಖವಾಡ (ಫೇಸ್ ಮಾಸ್ಕ್)ಗಳನ್ನು ಧರಿಸಿ ನಟಿಸಿದ, ಮೂರು ಬೇರೆ ಬೇರೆ ಕ್ಯಾಮರಾಗಳಿಂದ ಸೆರೆ ಹಿಡಿದ, ಅದೂ ಮೊದಲೊಮ್ಮೆ ಏನೋ ಎಡವಟ್ಟಿನಿಂದಾಗಿ ಸರಿಯಾಗದಿದ್ದಾಗ ಡಾ.ರಾಜ್ ಅವರ ಉಮೇದಿನಿಂದಲೇ ಮತ್ತೊಮ್ಮೆ ಚಿತ್ರೀಕರಿಸಿದ ದೃಶ್ಯಕಾವ್ಯವದು- ಎಂದು ಹುಣಸೂರು ಕೃಷ್ಣಮೂರ್ತಿ ಯವರ ಸಹಾಯಕರಾಗಿ ದುಡಿದಿದ್ದ ಭಾರ್ಗವ ಒಮ್ಮೆ ಒಂದು ಸಂದರ್ಶನದಲ್ಲಿ ಹೇಳಿದ್ದರು.

Srivathsa Joshi Column: ಈಸ್ಟರ್‌ ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು !

ಈಸ್ಟರ್‌ ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು !

ಪಂಚಾಂಗ ಪುಸ್ತಕ ಅಚ್ಚಿನಮನೆಯಿಂದ ಮಾರುಕ ಟ್ಟೆಗೆ ಬರುವಾಗಲೇ ಅದರ ಎಡ ಮೂಲೆ ಯಲ್ಲೊಂದು ತೂತು ಪಂಚ್ ಮಾಡಿದ್ದಿರುತ್ತದೆ, ದಾರ ಪೋಣಿಸಿ ಗೋಡೆಯ ಮೊಳೆಗೆ ನೇತು ಹಾಕಲಿಕ್ಕೆ ಅನುಕೂಲ ಆಗಲೆಂದು. ಅಂದರೆ ಈ ದೇಶದಲ್ಲೂ ನಮ್ಮಲ್ಲಿಯಂತೆ ಪಂಚಾಂಗವನ್ನು ಗೋಡೆಗೆ ನೇತಾಡಿಸಿಡುವ ಕ್ರಮವೇ ಇರುವುದು!

Srivathsa Joshi Column: ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ಅಗಸ್ತ್ಯ ಮಹರ್ಷಿ ಗಣಪತಿಯನ್ನು ಆರಾ‌ಧಿಸುತ್ತಿದ್ದರು. ಆದ್ದರಿಂದಲೇ ಮುತ್ತುಸ್ವಾಮಿ ದೀಕ್ಷಿತರು ಗಣಪತಿ ಯನ್ನು ‘ಕುಂಭಸಂಭವ ಮುನಿಯಿಂದ ಪೂಜಿಸಲ್ಪಟ್ಟವನು’ ಎಂದು ಸ್ತುತಿಸಿದ್ದಾರೆ. ಅಗಸ್ತ್ಯರ ಗಣೇಶಭಕ್ತಿ ಎಷ್ಟಿತ್ತೆಂದರೆ ರಾಮಾಯಣದಲ್ಲಿ ವನವಾಸ ಕಾಲದಲ್ಲಿ ಶ್ರೀರಾಮ-ಲಕ್ಷ್ಮಣರು ಒಂದೆರಡು ದಿನ ಅಗಸ್ತ್ಯರ ಆಶ್ರಮದಲ್ಲಿ ತಂಗಿದ್ದಾಗ ರಾಮನಿಗೂ ಗಣೇಶಾರಾಧನೆಯ ಮಹತ್ತವನ್ನು ಅಗಸ್ತ್ಯರು ತಿಳಿಸಿದ್ದರು. ಅದೇ ರೀತಿ ‘ಆದಿತ್ಯಹೃದಯಮ್’ ಸ್ತೋತ್ರವನ್ನೂ ಅಗಸ್ತ್ಯರೇ ರಚಿಸಿ ಶ್ರೀರಾಮನಿಗೆ ಬೋಧನೆ ಮಾಡಿದರು.

Srivathsa Joshi Column: ಏಳನೇ ತರಗತಿ ಬೀಳ್ಕೊಡುಗೆಯ ಗ್ರೂಪ್‌ ಫೋಟೊ ತಂದ ಹಿಗ್ಗು

ಏಳನೇ ತರಗತಿ ಬೀಳ್ಕೊಡುಗೆಯ ಗ್ರೂಪ್‌ ಫೋಟೊ ತಂದ ಹಿಗ್ಗು

ಗುರುಕುಲ ಎಂಬ ಇದರ ಹೆಸರೇ ವಿಶಿಷ್ಟ, ಅನನ್ಯ. ಏಕೆಂದರೆ ಪುರಾಣಗಳಲ್ಲಿ ಮತ್ತು ಚಂದ ಮಾಮ ಕಥೆಗಳಲ್ಲಷ್ಟೇ ಗುರುಕುಲಗಳು ಇರುತ್ತಿದ್ದದ್ದು. ಈಗಿನ ಕಾಲದ ಶಿಕ್ಷಣ ಪದ್ಧತಿಯನ್ನ ನುಸರಿಸುವ, ಕನ್ನಡಮಾಧ್ಯಮದ ಸಾಮಾನ್ಯ ಅನುದಾನಿತ ಶಾಲೆಯೊಂದರ ಹೆಸರೇ ಗುರುಕುಲ ಎಂದು ಇರುವುದು- ನನಗೆ ತಿಳಿದ ಮಟ್ಟಿಗಂತೂ- ಅಪರೂಪ. ಅಂಥದೊಂದು ಅಗ್ಗಳಿಕೆ ನಮ್ಮ ಶಾಲೆಯದು.

Srivathsa Joshi Column: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...

ವಸಂತೆ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...

ವಾಚಕರ ಮನೋವ್ಯಾಪಾರಕ್ಕೂ ಹೆಚ್ಚಿನ ಪ್ರಚೋದನೆ ಸಿಗುತ್ತದೆ. ಆದರೆ ಕಥೆ, ಪಾತ್ರ, ರಸ ಮೊದಲಾದ ವುಗಳಲ್ಲಿ ಔಚಿತ್ಯದೃಷ್ಟಿಯನ್ನು ಮೀರಿ, ಅವುಗಳನ್ನು ಮರೆಮಾಚಿಸುವ ಮಟ್ಟಿಗೆ ವರ್ಣನೆಗಳ ಹಾವಳಿ ಯೇ ಹೆಚ್ಚಾಗಿ, ಅಂಥ ಮಹಾಕಾವ್ಯಗಳಲ್ಲಿ ಕವಿ ಅಷ್ಟಾದಶ ವರ್ಣನೆಗಳ ಕೋಟಲೆಗೆ ಒಳಗಾಗಿ ಕೃತಕ ವೆನಿಸುವ ಕಾವ್ಯಮಾರ್ಗವನ್ನು ಹಿಡಿದಿರುವುದು ಗೊತ್ತಾಗಿಬಿಡುತ್ತದೆ" ಎಂಬುದು ವಿದ್ವಾಂಸರ ಅಭಿಪ್ರಾಯ.

Srivathsa Joshi Column: ಚಿತ್ರಾನ್ನ ಅಂದರೆ ವರ್ಣರಂಜಿತ ಅನ್ನ; ಛತ್ರದ ಅನ್ನ ಅಂತಲ್ಲ !

ಚಿತ್ರಾನ್ನ ಅಂದರೆ ವರ್ಣರಂಜಿತ ಅನ್ನ; ಛತ್ರದ ಅನ್ನ ಅಂತಲ್ಲ !

ಅನ್ನದ ಮಹತ್ತ್ವವನ್ನು ಸಾರುವ ಇನ್ನಷ್ಟು ಘನತರ ಸೂಕ್ತಿಗಳು ತೈತ್ತಿರೀಯ ಉಪನಿಷತ್ತಿನಲ್ಲಿವೆ. “ಅನ್ನಂ ಬ್ರಹ್ಮೇತಿ ವ್ಯಜಾನಾತ್" (ಅನ್ನವನ್ನು ಬ್ರಹ್ಮವೆಂದು ತಿಳಿಯಬೇಕು); “ಅನ್ನಂ ನ ನಿಂದ್ಯಾತ್, ತದ್‌ವ್ರತಂ" (ಅನ್ನವನ್ನು ಯಾವತ್ತೂ ನಿಂದಿಸಬಾರದು, ಅದೊಂದು ವ್ರತವೇ ಆಗಿರಬೇಕು); “ಅನ್ನಂ ನ ಪರಿಚಕ್ಷೀತ, ತದ್ ವ್ರತಂ (ಅನ್ನವನ್ನು ತ್ಯಜಿಸಬಾರದು, ಅದೂ ಒಂದು ವ್ರತ); “ಅನ್ನಂ ಬಹು ಕುರ್ವೀತ, ತದ್‌ವ್ರತಂ" (ಅನ್ನವನ್ನು ವೃದ್ಧಿಪಡಿಸಿಕೊಳ್ಳಬೇಕು, ಅನ್ನವೆಂದರೇನೇ ಒಂದು ವ್ರತ). ಇಲ್ಲಿ ಅನ್ನ ಎಂದರೆ ಅಕ್ಕಿ ಯಿಂದ ಬೇಯಿಸಿ ಮಾಡಿದ ಅನ್ನ ಎಂಬ ಸೀಮಿತ ಅರ್ಥವಲ್ಲ.

Srivathsa Joshi Column: ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?

ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?

ಅಂಥದೊಂದು ಲೋಲುಪತೆಯೇ ಬಾಲ್ಯದ ದಿನಗಳು ಮತ್ತೆ ಬರಬಾರದೇ ಎಂಬ ತಹತಹ. ಬಾಲ್ಯದ ದಿನಗಳು ಅದೆಷ್ಟು ಅತ್ಯಮೂಲ್ಯವಾಗಿದ್ದುವು, ಎಷ್ಟೊಂದು ಖುಷಿ ಇತ್ತು ಎಂದು ಸವಿ ನೆನಪುಗಳ ಸರಮಾಲೆ ಬಿಚ್ಚತೊಡಗಿದಂತೆ ಏನೋ ಒಂದು ಹಿತಾನುಭವ. ‘ಆ ಕಾಲವೊಂದಿ ತ್ತು ದಿವ್ಯ ತಾನಾಗಿತ್ತು’ ಎಂಬ ಮಧುರಾನುಭೂತಿ.

Srivathsa Joshi Column: ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ ?

ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ ?

ಎಲ್ಲಿಯವರೆಗೆಂದರೆ ನಮಗಿದೆಲ್ಲ ಒಂಥರ ಸಸಾರವೇ ಆಗಿಬಿಟ್ಟಿದೆ. ಆದರೆ 1964ರಲ್ಲಿ ಅದೊಂದು ಅದ್ಭುತ ವೆಂದೇ ಅನಿಸಿದ್ದಿರ ಬಹುದು. ಸೈನ್ಸ್ ಫಿಕ್ಷನ್ ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಮಾತ್ರ ಇರುವಂಥದ್ದು ಸಾಕಾರಗೊಂಡ ಅನುಭವ ವಾಗಿರಬಹುದು. ಆಶ್ಚರ್ಯವೆಂದರೆ ನಿಜಕ್ಕೂ ಒಬ್ಬ ವಿಜ್ಞಾನ ಲೇಖಕನು ದಶಕಗಳ ಹಿಂದೆ- ಅಂತರಿಕ್ಷಕ್ಕೆ ಉಪಗ್ರಹಗಳನ್ನು ಹಾರಿಸುವುದೆಲ್ಲ ದೂರದ ಕನಸಿನ ಮಾತಾಗಿದ್ದ ಕಾಲದಲ್ಲಿ- ಬರೆದಿದ್ದ ಕಲ್ಪನೆಯೇ ಸಾಕಾರಗೊಂಡಿದ್ದಾಗಿತ್ತು.

Srivathsa Joshi Column: ಒಂದಕ್ಷರದ ಪದಗಳಿಂದ ಭಾಷೆಗೆ ಸೊಬಗು ಮತ್ತು ಸೋಜಿಗ

ಒಂದಕ್ಷರದ ಪದಗಳಿಂದ ಭಾಷೆಗೆ ಸೊಬಗು ಮತ್ತು ಸೋಜಿಗ

ಇಂಥವನ್ನು ನೀವೇ ಎಷ್ಟು ಬೇಕಾದರೂ ಕಂಡುಕೊಳ್ಳಬಹುದು. ಮಾತ್ರವಲ್ಲ, Queue ರೀತಿ ಯದು ಐದಕ್ಷರಗಳಿದ್ದರೂ ಒಂದಕ್ಷರದಂತೆ ಉಚ್ಚರಿಸುತ್ತೇವೆ, Brother ಎಂಬ ಸಪ್ತಾಕ್ಷರಿ ಯನ್ನೂ ಈಗ ಬ್ರೋ ಅಂತ ಒಂದಕ್ಷರಕ್ಕಿಳಿಸಿದ್ದೇವೆ ಎಂದು ಕೂಡ ಆಶ್ಚರ್ಯ ಪಡಬ ಹುದು

Srivathsa Joshi Column: ಅ.ರಾ.ಮಿತ್ರ ಅಜೇಯ 90; ಈವತ್ತು ‘ಮಿತ್ರಾರ್ಜಿತ’ ತುಂಬ್ಹೊತ್ತು !

ಅ.ರಾ.ಮಿತ್ರ ಅಜೇಯ 90; ಈವತ್ತು ‘ಮಿತ್ರಾರ್ಜಿತ’ ತುಂಬ್ಹೊತ್ತು !

ಮಿತ್ರಾರ್ಜಿತ ಒಂದು ಅತ್ಯಮೂಲ್ಯ ಗ್ರಂಥ. ಇದರ ವಿವಿಧ ಭಾಗಗಳಲ್ಲಿ ಮಿತ್ರರ ಅಭಿಮಾನಿಗಳು, ಸಹೋದ್ಯೋಗಿಗಳು, ಕುಟುಂಬಸ್ಥರು, ನೆರೆಕೆರೆಯವರು, ಕನ್ನಡದ ಹಾಸ್ಯಪಟುಗಳು, ಅನಿವಾಸಿ ಕನ್ನಡಿಗರು, ಕವಿಗಳು ಪ್ರೀತಿಗೌರವದಿಂದ ಅರ್ಪಿಸಿದ ಅಕ್ಷರಗುಚ್ಛಗಳಿವೆ. ಶತಾವ ಧಾನಿ ಗಣೇಶ್ ಅವರು ತಮ್ಮ ‘ವಿದ್ವದ್ವಿನೋದಗಗನದ ಮಿತ್ರ’ ಲೇಖನದಲ್ಲಿ ಅ.ರಾ.ಮಿತ್ರ ಅವರ ವಾಗ್ಮಿತೆ, ವೈದುಷ್ಯ ಮತ್ತು ವಿನೋದ ಗಳನ್ನು ಗಂಗೆ-ಯಮುನೆ-ಸರಸ್ವತಿಯರಿಗೆ ಹೋಲಿಸಿರುವುದು ವಿಶೇಷ.

Srivathsa Joshi Column: ಲಿಂಕನ್:‌ ಅಮೆರಿಕಾಧ್ಯಕ್ಷರಲ್ಲೇ ಎತ್ತರದ ಆಳು, ಗೌರವದ ಬಾಳು

ಲಿಂಕನ್:‌ ಅಮೆರಿಕಾಧ್ಯಕ್ಷರಲ್ಲೇ ಎತ್ತರದ ಆಳು, ಗೌರವದ ಬಾಳು

ಐದನೆಯ ತರಗತಿಯಲ್ಲಿದ್ದಾಗ ಓದಿದ್ದ ಪಾಠ, ಕಲಿಸಿದ್ದ ಗುರುಗಳು, ಜತೆಯಲ್ಲಿದ್ದ ಸಹಪಾಠಿಗಳು, ಶಾಲಾ ದಿನಗಳು, ಆ ಕಾಲದಲ್ಲಿನ ನಮ್ಮ ದಿನಚರಿ... ಎಲ್ಲ ಒಮ್ಮೆ ಕಣ್ಮುಂದೆ ಬಂದುಹೋದುವು. “ಬಡ ಕುಟುಂಬವೊಂದರಲ್ಲಿ 1809ರ ಫೆಬ್ರವರಿ 12ರಂದು ಲಿಂಕನ್ ಜನನ. ಬಾಲ್ಯದಲ್ಲಿ ಸರಿಯಾದ ಶಿಕ್ಷಣ ದೊರಕಲಿಲ್ಲ

Srivathsa Joshi Column: ಚಕ್ಕಡಿಯ ಚಕ್ರಗಳು ಚೌಕಾಕಾರವಿದ್ದರೂ ಚಲಿಸಬಲ್ಲವು !

ಚಕ್ಕಡಿಯ ಚಕ್ರಗಳು ಚೌಕಾಕಾರವಿದ್ದರೂ ಚಲಿಸಬಲ್ಲವು !

ಚಕ್ರದ ಸರಳತೆ ಮತ್ತು ವಿಶೇಷತೆ ಇರುವುದೇ ಅದರ ಉರುಳುವ ಗುಣದಲ್ಲಿ. ವೃತ್ತಾಕಾರವಾದ್ದರಿಂದ ಚಲನೆಯುದ್ದಕ್ಕೂ ಅದರ ಕೇಂದ್ರಬಿಂದು ಹೊರಮೈಯಿಂದ ಒಂದೇ ದೂರದಲ್ಲಿರುತ್ತದೆ, ಅಂದರೆ ಚಕ್ರ ಉರುಳುವಾಗ ಅದರ ಮಧ್ಯಭಾಗ ನೆಲದಿಂದ ಒಂದೇ ಎತ್ತರದಲ್ಲಿರುತ್ತದೆ. ಎತ್ತರ ಸಮಾನವಾಗಿರುವ ನಾಲ್ಕು ಚಕ್ರಗಳನ್ನು ಒಂದು ಹಲಗೆಗೋ ಒಂದು ಪೆಟ್ಟಿಗೆಯಾಕೃತಿಗೋ ಜೋಡಿಸಿ ಮೊತ್ತ ಮೊದಲ ಬಂಡಿಯನ್ನು ತಯಾರಿಸಿರಬಹುದು ಆಗಿನ್ನೂ ಗುಹೆಗಳಲ್ಲಿ ವಾಸಿಸುತ್ತಿದ್ದ ಆದಿಮಾನ ವರು. ಹಾಗೆಯೇ ಆ ಬಂಡಿಯ ಅಲುಗಾಟ ಸಾಧ್ಯವಾದಷ್ಟೂ ಕಡಿಮೆ ಇರಬೇಕಾದರೆ ಅದು ಕ್ರಮಿಸುವ ದಾರಿ ಸಮತಟ್ಟಾ ಗಿರಬೇಕು ಎಂದು ಕಂಡುಕೊಳ್ಳಲು ಅವರಿಗೆ ಹೆಚ್ಚು ಸಮಯ ಬೇಕಾಗಿರಲಿಕ್ಕಿಲ್ಲ.

Loading...