ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಶ್ರೀವತ್ಸ ಜೋಶಿ

columnist

[email protected]

ದಕ್ಷಿಣಕನ್ನಡ (ಈಗಿನ ಉಡುಪಿ) ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಊರಿನವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದು ದಿಲ್ಲಿ, ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಉದ್ಯೋಗದ ನಂತರ ಈಗ ಇಪ್ಪತ್ತು ವರ್ಷಗಳಿಂದ ಅಮೆರಿಕದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ರಾಜಧಾನಿ ವಾಷಿಂಗ್ಟನ್‌ನಲ್ಲಿ ಐಬಿ‌ಎಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ವರ್ಜಿನಿಯಾ ಸಂಸ್ಥಾನದ ರೆಸ್ಟನ್ ನಗರದಲ್ಲಿ ಪತ್ನಿ ಸಹನಾ ಮತ್ತು ಪುತ್ರ ಸೃಜನ್‌ನೊಂದಿಗೆ ವಾಸಿಸುತ್ತಿದ್ದಾರೆ. ಕನ್ನಡ ನಾಡು-ನುಡಿ-ಭಾಷೆ-ಸಂಸ್ಕೃತಿಯ ಕುರಿತು ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆಯೂ ಆಸಕ್ತಿ ಹೊಂದಿರುವ ಶ್ರೀವತ್ಸ ಜೋಶಿ, ೨೦೦೨ರಲ್ಲಿ ಆರಂಭಿಸಿ ಈಗಲೂ ಕನ್ನಡ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ. ಅವರ ‘ವಿಚಿತ್ರಾನ್ನ’, ‘ಪರಾಗಸ್ಪರ್ಶ’, ಮತ್ತು ‘ತಿಳಿರುತೋರಣ’ ಅಂಕಣಬರಹಗಳು ಪುಸ್ತಕಗಳ ರೂಪದಲ್ಲಿಯೂ ಪ್ರಕಟವಾಗಿವೆ. 2016ರಿಂದ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ‘ತಿಳಿರುತೋರಣ’ ಅಂಕಣದ ಪ್ರತಿಯೊಂದು ಲೇಖನವನ್ನು ಧ್ವನಿಮುದ್ರಣ ಮಾಡಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ವಿತರಿಸುವುದರಿಂದ ಈ ಅಂಕಣ ಬಹುರೂಪಗಳಲ್ಲಿ ಜನಪ್ರಿಯವಾಗಿದೆ. ಶ್ರೀವತ್ಸ ಜೋಶಿಯವರ ಇದುವರೆಗಿನ ಒಟ್ಟು 17 ಪುಸ್ತಕಗಳ ಪೈಕಿ ಐದು, ವಾಷಿಂಗ್ಟನ್‌ನಲ್ಲಿರುವ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ‘ಲೈಬ್ರರಿ ಆಫ್ ಕಾಂಗ್ರೆಸ್’ ಪುಸ್ತಕಭಂಡಾರದಲ್ಲಿವೆ. ವಾಷಿಂಗ್ಟನ್ ಡಿ.ಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘ, ಮತ್ತು ಅಮೆರಿಕದ ಇತರ ಕನ್ನಡ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಶ್ರೀವತ್ಸ ಜೋಶಿ, ಕಡಲಾಚೆ ಕನ್ನಡ ಭಾಷೆ-ಸಂಸ್ಕೃತಿ ಪಸರಿಸುವುದರಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಜಗದಗಲ ಓದುಗಮಿತ್ರರನ್ನು ಹೊಂದಿದ್ದಾರೆ. ಇವರು ಕಳೆದ ೩೦೦ ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವಚ್ಛ ಭಾಷೆ ಅಭಿಯಾನ ಸರಣಿ ಕಲಿಕೆಯು ತುಂಬ ಜನಪ್ರಿಯವಾಗಿದೆ.

Articles
Srivathsa Joshi Column: ದೇವರಾತರೆಂಬ ಪುರಾಣಪುರುಷರಿಂದ ಬಂತಂತೆ ಆ ಹೆಸರು !

ದೇವರಾತರೆಂಬ ಪುರಾಣಪುರುಷರಿಂದ ಬಂತಂತೆ ಆ ಹೆಸರು !

ಕೆಲ ವರ್ಷಗಳ ಹಿಂದೆ ನಾನೊಮ್ಮೆ ಮಂಗಳೂರು ಆಕಾಶವಾಣಿ ನಿಲಯಕ್ಕೆ ಹೋಗಿದ್ದಾಗ ಅಲ್ಲಿ ಮುಖತಃ ಭೇಟಿಯಾಗಿದ್ದೆ. ಅವರು ಮಂಗಳೂರು ಆಕಾಶವಾ ಣಿಯಲ್ಲಿ ಕಾರ್ಯಕ್ರಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಅವರ ನಿರ್ಮಾಣದ ಕೆಲವು ರೇಡಿಯೊ ರೂಪಕಗಳನ್ನೂ ಯುಟ್ಯೂಬ್ ಮೂಲಕ ಕೇಳಿದ್ದೇನೆ. ‘ಹೆಡಿಗೆ ಕೂಸನ ಆಧ್ಯಾತ್ಮಿಕ ಜೀವನ’, ‘ಅತಂತ್ರನೊಬ್ಬನ ಆತ್ಮಚರಿತ್ರ’ ಮುಂತಾದುವು ಯಾರನ್ನೇ ಆದರೂ ಗಾಢವಾಗಿ ತಟ್ಟುವಂಥವು.

Srivathsa Joshi Column: ಚೆಂಡಿನ ಮೈತುಂಬ ಕೂದಲಿದ್ದರೆ ಬಾಚುವುದು ಸಾಧ್ಯವೇ ?

ಚೆಂಡಿನ ಮೈತುಂಬ ಕೂದಲಿದ್ದರೆ ಬಾಚುವುದು ಸಾಧ್ಯವೇ ?

ಡಾ.ಮೆಹತಾ ಆಂಗ್ಲರ ರೀತಿನೀತಿಗಳ ಬಗ್ಗೆ ನನಗೆ ತಿಳಿವಳಿಕೆಯ ಪಾಠ ಹೇಳಿದರು. ಯಾರ ವಸ್ತುಗಳನ್ನೂ ಮುಟ್ಟಬಾರದು, ಭಾರತದಲ್ಲಿ ಕೇಳುವಂತೆ ಮೊದಲ ಪರಿಚಯದಲ್ಲೇ ಪ್ರಶ್ನೆಗಳನ್ನು ಕೇಳಬಾರದು, ಗಟ್ಟಿಯಾಗಿ ಮಾತನಾಡಬಾರದು ಎಂದೆಲ್ಲ ತಿಳಿ ಹೇಳಿದರು..." ಹದಿನೆಂಟರ ವಯಸ್ಸಿನಲ್ಲಿ ಬ್ಯಾರಿಸ್ಟರ್ ಪದವಿ ಓದಿಗೆಂದು ಪೋರ್‌ಬಂದರ್‌ನಿಂದ ಲಂಡನ್‌ಗೆ ತೆರಳಿದ್ದ ದಿನಗಳ ಬಗ್ಗೆ ಗಾಂಧೀಜಿ ಬರೆದಿರುವುದರಲ್ಲಿ ಈ ಭಾಗ ಬರುತ್ತದೆ.

250 Years for USA: ಮಿಸ್ಸಿಸ್ಸಿಪ್ಪಿ‌ ಮಹಾನದಿಯ ಮನದ ಮಾತು

250 Years for USA: ಮಿಸ್ಸಿಸ್ಸಿಪ್ಪಿ‌ ಮಹಾನದಿಯ ಮನದ ಮಾತು

ಋಷಿಮೂಲ ನದೀಮೂಲಗಳನ್ನೆಲ್ಲ ಹುಡುಕಬಾರದು ಎಂದು ನಿಮ್ಮ ದೇಶದಲ್ಲಿ ಹೇಳ್ತಾರಂತೆ ಅಲ್ವಾ? ಈ ದೇಶದಲ್ಲಿ ಹಾಗೇನಿಲ್ಲ ಬಿಡಿ. ನನ್ನ ಮೂಲ ಯಾವುದು ಎಂದು ಬೇಕಿದ್ದರೆ ನಾನೇ ಹೇಳುತ್ತೇನೆ. ಅಮೆರಿಕದಲ್ಲಿ ಉತ್ತರಭಾಗದಲ್ಲಿ, ಕೆನಡಾ ದೇಶಕ್ಕೆ ತಾಗಿಕೊಂಡು ಇರುವ, ಸಾವಿರ ಸರೋವರಗಳ ನಾಡು ಎಂದು ಖ್ಯಾತವಾದ ಮಿನ್ನೆಸೋಟ ರಾಜ್ಯದಲ್ಲಿ, ಇಟಾಸ್ಕಾ ಎಂಬ ಸರೋವರ ನನ್ನ ತವರುಮನೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಹರಿದು ಹತ್ತು ರಾಜ್ಯಗಳ ಗುಂಟ ಸಾಗಿ (ರಾಜ್ಯಗಳ ಮೂಲಕ ಎನ್ನಬಹು ದಾಗಿತ್ತು,

Srivathsa Joshi Column: ಷಷ್ಠೀ ವಿಭಕ್ತಿಯು ಸೃಷ್ಟಿಸುವ ಸ್ವಾರಸ್ಯಗಳ ವೃಷ್ಠಿ

ಷಷ್ಠೀ ವಿಭಕ್ತಿಯು ಸೃಷ್ಟಿಸುವ ಸ್ವಾರಸ್ಯಗಳ ವೃಷ್ಠಿ

ಶತಾವಧಾನಿ ಡಾ.ಆರ್.ಗಣೇಶರು ಬೆಂಗಳೂರಿನಲ್ಲಿ ‘ತುಂಬು ಗನ್ನಡ ಶತಾವಧಾನ’ ನಡೆಸಿದ್ದಾಗ, ನಾವೆಲ್ಲ ಅನಿವಾಸಿಗಳು ಅದನ್ನು ಅಂತರ್ಜಾಲದಲ್ಲಿ ನೇರಪ್ರಸಾರ ನೋಡಿದ್ದಾಗ, ಕೊನೆಯಲ್ಲಿ ಚಂದ್ರ ಶೇಖರ ಕೆದಿಲಾಯರು ಕಂಚಿನ ಕಂಠದಲ್ಲಿ ಈ ಪದ್ಯವನ್ನು ಹಾಡಿದ್ದರು. ಇದರಲ್ಲಿರುವ ಒಂದೊಂದು ಸಂಬಂಧವನ್ನೂ ಬಿಡಿಸಿಯೇ ಹಾಡಿದ್ದರು.

Srivathsa Joshi Column: ಶತಾಯುಷಿ ಅಮೆರಿಕನ್ನಡಿಗ ಬುಕ್ಕಾಂಬುಧಿ ಕೃಷ್ಣಮೂರ್ತಿ

ಶತಾಯುಷಿ ಅಮೆರಿಕನ್ನಡಿಗ ಬುಕ್ಕಾಂಬುಧಿ ಕೃಷ್ಣಮೂರ್ತಿ

ನೂರು ಪೂರೈಸಿದ ಉತ್ಸಾಹಿ ನವತರುಣ. ಬರ್ತ್‌ಡೇ ಬಾಯ್ ಎಂದು ಬೇಕಿದ್ದರೂ ಹೇಳಬಹುದು. ಇದು ಯಾವ ರೀತಿಯಲ್ಲೂ ಆಲಂಕಾರಿಕ ಉತ್ಪ್ರೇಕ್ಷೆಯ ಮಾತಲ್ಲ. ನೂರಕ್ಕೆ ನೂರು ನಿಜವಾದದ್ದೇ. ಕೃಷ್ಣ ಮೂರ್ತಿ ಈಗಲೂ ಲವಲವಿಕೆಯಿಂದ ಓಡಾಡುತ್ತಾರೆ, ಇನ್ನೊಬ್ಬರ ಅಥವಾ ಗಾಲಿಕುರ್ಚಿ ಊರುಗೋಲು ಇತ್ಯಾದಿಯ ಸಹಾಯವಿಲ್ಲದೆ. ಅವರ ಶ್ರವಣಶಕ್ತಿ, ದೃಷ್ಟಿ, ಭೌತಿಕ-ಬೌದ್ಧಿಕ ಸಮತೋಲನ, ಸಂವೇದನ ಎಲ್ಲವೂ ಠಾಕುಠೀಕು ಪರ್ಫೆಕ್ಟ್.

Srivathsa Joshi Column: ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ ಮೆಕ್ಸಿಕನ್‌ ಅಲೆ

ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ ಮೆಕ್ಸಿಕನ್‌ ಅಲೆ

ಕಣ್ಣು-ಕಿವಿಗಳಂತೆ ಮೂಗಿಗೂ ಅಲೆಗಳು ಬಂದು ಅಪ್ಪಳಿಸಬಹುದು “ಸೇವಂತಿಯೆ ಸೇವಂತಿಯೇ ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ..." ಪರಿಮಳದ ರೀತಿಯಲ್ಲಿ. ಅಷ್ಟೇಕೆ, ಅಗೋಚರವೂ ಅತೀಂದ್ರಿ ಯವೂ ಆಗಬಲ್ಲವು ಕಷ್ಟಕಾರ್ಪಣ್ಯದ ನೋವಿನ ಅಲೆಗಳು, ಅಥವಾ ಮಧುರವಾಗಿ ಮರುಕಳಿಸುವ ನೆನಪಿನ ಅಲೆಗಳು.

Srivathsa Joshi Colum: ಡಬ್ಲ್ಯೂ ದಿಂದ ಜಿ ಯೆಡೆಗೆ ಸರಿಯುವೆವು ಸರ್‌ ಜೀ !

ಡಬ್ಲ್ಯೂ ದಿಂದ ಜಿ ಯೆಡೆಗೆ ಸರಿಯುವೆವು ಸರ್‌ ಜೀ !

ಸಾಧಕನು ತನ್ನದೇ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾರ್ಥನೆಯಂತೆ ಪಠಿಸುವ ಇಂತಹವನ್ನು ‘ಅಭ್ಯಾ ರೋಹ’ ಮಂತ್ರಗಳು ಎನ್ನಲಾಗುತ್ತದೆ. ಯಾವುದೇ ನಿರ್ದಿಷ್ಟ ದೇವತೆಯನ್ನು ಹೆಸರಿಸದೆ, ಇಡೀ ಬ್ರಹ್ಮಾಂಡದ ಸಾರ್ವತ್ರಿಕ ಚೈತನ್ಯ ಅಥವಾ ಜ್ಞಾನವನ್ನು ಪ್ರಾರ್ಥಿಸುವುದರಿಂದ ಜಗತ್ತಿನಾದ್ಯಂತ ಮಾನ್ಯತೆ, ಪ್ರಸ್ತುತತೆ ಮತ್ತು ಅದರಿಂದಾಗಿ ಜನಮನ್ನಣೆ ಇವುಗಳಿಗರುತ್ತದೆ.

Srivathsa Joshi Column: ಮಂದಾಕ್ರಾಂತಂ ವನಿತೆಯರಿಗೇ ಮೀಸಲಾದಂಥ ತಂತ್ರಂ...

ಮಂದಾಕ್ರಾಂತಂ ವನಿತೆಯರಿಗೇ ಮೀಸಲಾದಂಥ ತಂತ್ರಂ...

ಬಹುಶಃ ವನಿತೆಯರು ಹುಸಿ ಮುನಿಸು ತೋರುತ್ತ ಮುಖ ಗಂಟಿಕ್ಕಿಕೊಳ್ಳುವುದು ಬೇಡವೆಂದು ಇರಬಹುದು. ಇನ್ನೂ ಮೂರು ಸಾಲುಗಳನ್ನು ಸೇರಿಸಿರುತ್ತಿದ್ದರೆ ಬಹಳವೇ ಸ್ವಾರಸ್ಯಕರ ವಾಗಿರುತ್ತಿತ್ತು, ಮಜಾ ಬರುತ್ತಿತ್ತು. ಏನು ವಿಷಯ? ಏನಿದು ಮಂದಾಕ್ರಾಂತ? ಮೇಲಿನ ಒಂದು ಸಾಲಿನ ಮಟ್ಟಿಗಷ್ಟೇ ಹೇಳುವುದಾದರೆ ‘ಮಂದವಾದ ಆಕ್ರಾಂತವೇ ಮಂದಾಕ್ರಾಂತ.’

Srivathsa Joshi Column: ಮಥಿಸಿದಷ್ಟೂ ಮನದಟ್ಟಾಗುವ ಮೂವತ್ತಮೂರರ ಮಹಾತ್ಮೆ !

ಮಥಿಸಿದಷ್ಟೂ ಮನದಟ್ಟಾಗುವ ಮೂವತ್ತಮೂರರ ಮಹಾತ್ಮೆ !

ಕಾಂಸ್ಯಪಾತ್ರೇ ಅಂದರೆ ಕಂಚಿನ ಪಾತ್ರೆಯಲ್ಲಿ. ಸುವರ್ಣ ಗುಡಸಂ ಯುಕ್ತಾನ್ ಅಂದರೆ ಬೆಲ್ಲ ಮತ್ತು ಬಂಗಾರದ ಜತೆಗೆ. ಆದರೇನು ಮಾಡುವುದು ಈಗ ಮನೆಯಲ್ಲಿದ್ದ ಬಂಗಾರ ವನ್ನಷ್ಟೇ ದಾನ ಮಾಡಬಹುದೇ ಹೊರತು ಹೊಸದಾಗಿ ಕೊಳ್ಳಬೇಡಿರೆಂದು ಪ್ರಧಾನಸೇವಕ ಮೋದಿ ಯವರು ಕೇಳಿಕೊಂಡಿದ್ದಾರೆ. ಚಿಂತೆಯೇನಿಲ್ಲ, ಬೇರೆ ಕೆಲ ಶ್ಲೋಕಗಳಲ್ಲಿ ಬಂಗಾರದ ಪ್ರಸ್ತಾವ ವಿಲ್ಲ, ಘೃತಸಂಯುತಾನ್ ಅಂದರೆ ತುಪ್ಪದೊಡನೆ ಎಂದು ಹೇಳಲಾಗಿದೆ.

Srivathsa Joshi Column: ಕರಜಗಿಯವರನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳಿದ ಕ್ಷಣ

ಕರಜಗಿಯವರನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳಿದ ಕ್ಷಣ

ಪ್ರಜಾವಾಣಿಯಲ್ಲಿ ಪ್ರತಿದಿನ ಪ್ರಕಟವಾಗುವ ‘ಕರುಣಾಳು ಬಾ ಬೆಳಕೆ’ ಲೇಖನ ಮಾಲೆಯಿಂದ ಅವರು ಲಕ್ಷಾಂತರ ಜನರ ಬಾಳಿಗೆ ಅಕ್ಷರಶಃ ಬೆಳಕು ತೋರಿದವರು; ಧನಾತ್ಮಕ ಚಿಂತನೆ, ಕಾರ್ಯಕ್ಷಮತೆ, ಮಾನವೀಯ ಮೌಲ್ಯಗಳು, ಮತ್ತು ಒಟ್ಟಾರೆಯಾಗಿ ವ್ಯಕ್ತಿತ್ವ ವಿಕಸನದ ಸಂಜೀವಿನಿಯನ್ನು ಅರಗಿಸಿ ಕೊಳ್ಳಬಲ್ಲ ಗುಟುಕುಗಳಾಗಿ ಜನರಿಗೆ ಒದಗಿಸಿದವರು.

Srivathsa Joshi Column: ಗಂಗಾಲಹರಿ ಸ್ತೋತ್ರವೂ ಜಗನ್ನಾಥ ಪಂಡಿತನ ಕಥೆಯೂ

ಗಂಗಾಲಹರಿ ಸ್ತೋತ್ರವೂ ಜಗನ್ನಾಥ ಪಂಡಿತನ ಕಥೆಯೂ

ತ್ಯಾಗರಾಜರು ಪಂಚರತ್ನ ಕೃತಿಗಳನ್ನು ರಚಿಸಿದ್ದು ತಮ್ಮ ಬಾಳಿನ ಕಷ್ಟದ ದಿನಗಳಲ್ಲೇ ಅಂತೆ. ಕನಕ- ಪುರಂದರರು, ಸರ್ವಜ್ಞ-ಅಲ್ಲಮರು, ಕೊನೆಗೆ “ನೀ ಹೀಂಗ ನೋಡಬೇಡ ನನ್ನ..." ಎಂದು ಬೆಂದ ಬೇಂದ್ರೆಯವರೂ ಅಷ್ಟೇ, “ಬಂಗಾರವಿಲ್ಲದ ಬೆರಳು..." ಎಂದ ನರಸಿಂಹ ಸ್ವಾಮಿಗಳಾ ದರೂ ಅಷ್ಟೇ.

Srivathsa Joshi Column: ಚರಣಶೃಂಗರಹಿತ ಸ್ತೋತ್ರವೂ ಪತಂಜಲಿಯ ಕಥೆಯೂ !

ಚರಣಶೃಂಗರಹಿತ ಸ್ತೋತ್ರವೂ ಪತಂಜಲಿಯ ಕಥೆಯೂ !

ಸಾಂಪ್ರದಾಯಿಕ ರಂಗಪ್ರವೇಶದಂತೆಯೇ, ಆದರೆ ಲೈವ್ ಸಂಗೀತ ತಂಡ ಇರಲಿಲ್ಲ, ಧ್ವನಿಮುದ್ರಿತ ಆಡಿಯೊಟ್ರ್ಯಾಕ್ಸ್ ಅಷ್ಟೇ ವ್ಯತ್ಯಾಸ. ಗುರು-ಶಿಷ್ಯೆ ಇಬ್ಬರೂ ಮೈಸೂರು ಮೂಲದ ಕನ್ನಡಿತಿಯರು ಅಂದ ಮೇಲೆ ಒಂದು ಮಟ್ಟದ ವಿಶೇಷ ಸಾಂಸ್ಕೃತಿಕ ಸೌರಭ ಅಲ್ಲಿ ಮೇಳೈಸಿತ್ತೆಂದು ನೀವು ಸುಲಭವಾಗಿ ಊಹಿಸಬಹುದು.

Srivathsa Joshi Column: ಮಾವು ಹಣ್ಣುಗಳ ರಾಜನಾದರೆ ಅಮಟೆ ದಾಸೀಪುತ್ರನೇ ?

Srivathsa Joshi Column: ಮಾವು ಹಣ್ಣುಗಳ ರಾಜನಾದರೆ ಅಮಟೆ ದಾಸೀಪುತ್ರನೇ ?

ಅಷ್ಟೂ ರುಚಿಕರ! ಕಾಯಿರಸದ ಹೊರತಾಗಿ ಆಮ್ಟೆಕಾಯಿಯ ಉಪ್ಪಿನಕಾಯಿ ಹಾಕುತ್ತಾರೆ. ತಂಬುಳಿ ಸಹ ಮಾಡುತ್ತಾರೆ. ಬೇಸಿಗೆಯಲ್ಲಿ ಕೊಯ್ದು ಭರಣಿಯಲ್ಲಿ ಉಪ್ಪುನೀರಿನಲ್ಲಿ ಶೇಖರಿ ಸಿಟ್ಟು ಮಳೆಗಾಲದಲ್ಲಿ ಅಡುಗೆಗೆ ಉಪಯೋಗಿಸುವುದೂ ಇದೆ. ತುಳು ಭಾಷೆಯಲ್ಲಿ ಇದಕ್ಕೆ ‘ಅಂಬಡೆ’ ಎಂದು ಹೆಸರು.

Srivathsa Joshi Column: ಸು+ಅಸ್ತಿ+ಕ ಒಳ್ಳೆಯದಾಗಿ ಇರುವುದರ ಪ್ರತೀಕವೇ ಸ್ವಸ್ತಿಕ

ಸು+ಅಸ್ತಿ+ಕ ಒಳ್ಳೆಯದಾಗಿ ಇರುವುದರ ಪ್ರತೀಕವೇ ಸ್ವಸ್ತಿಕ

19ನೇಯ ಶತಮಾನದ ಹೊತ್ತಿಗಂತೂ ನಾಣ್ಯ, ಇಸ್ಪೀಟ್‌ ಎಲೆ ಮುಂತಾದವುಗಳಿಂದ ಹಿಡಿದು ಭವ್ಯವಾದ ವಾಸ್ತುಶಿಲ್ಪಗಳ ಗೋಡೆ ಕಂಬ ಕಮಾನು ಬಾಗಿಲುಗಳ ಮೇಲೆಲ್ಲ ಅದರದ್ದೇ ವಿನ್ಯಾಸ. ಅಷ್ಟೊಂದು ಅಗಾಧ ಪ್ರಮಾಣದಲ್ಲಿ ವಿಶ್ವಮಾನ್ಯತೆ ಗಳಿಸಿದ್ದ ಚಿಹ್ನೆಯದು. ಯಾವಾಗ ಅದನ್ನು ಅಡಾಲ್ಫ್ ಹಿಟ್ಲರ್ ತನ್ನ ಸರ್ವಾಧಿಕಾರ ಸಾರ್ವಭೌಮತ್ವದ ಸಂಕೇತವಾಗಿಸಿದನೋ, ಅವನ ನಾತ್ಸಿ ಸೈನಿಕರು ಮಾಡಿದ ನರಮೇಧದ ಕಹಿನೆನಪುಗಳಿಗೆ ಯಾವಾಗ ಅದು ಮೂರ್ತರೂಪವಾಯಿತೋ, ಆವಾಗಿಂದ ತಟ್ಟಿಕೊಂಡಿ ತು ಅದಕ್ಕೆ ಕಳಂಕ.

Srivathsa Joshi Column: ಐದು ವ್ಯಂಜನಗಳ ಸಂಯಕ್ತಾಕ್ಷರವೂ ಪಂಚಾಮೃತವೇ !

ಐದು ವ್ಯಂಜನಗಳ ಸಂಯಕ್ತಾಕ್ಷರವೂ ಪಂಚಾಮೃತವೇ !

ಒಂದು ಉದ್ಧರಣೆಯಷ್ಟು ಜೇನು, ಎರಡು ಉದ್ಧರಣೆಗಳಷ್ಟು ತುಪ್ಪ, ನಾಲ್ಕು ಉದ್ಧರಣೆಗಳಷ್ಟು ಸಕ್ಕರೆ, ಎಂಟು ಉದ್ಧರಣೆಗಳಷ್ಟು ಮೊಸರು, ಮತ್ತು ಹದಿನಾರು ಉದ್ಧರಣೆಗಳಷ್ಟು ಹಾಲು. ಇದು ಕ್ರಮಬದ್ಧ ಪ್ರಮಾಣ. ಉದ್ಧರಣೆಯ ಮಾನವನ್ನು ನಾನಿಲ್ಲಿ ಆಯ್ದುಕೊಂಡದ್ದು ಪೂಜಾಪರಿಸರದ ಪವಿತ್ರ ಭಾವನೆ ಮನದಲ್ಲಿ ಬರಲಿ ಅಂತಷ್ಟೇ.

Srivathsa Joshi Column: ಪ್ರತಿ ಕಚ್ಚುವಿಕೆಯಲ್ಲಿ ಆನಂದ: ಹಿಟ್ಟಲ್ಲ, ಸೂಪರ್‌ ಹಿಟ್‌ !

ಪ್ರತಿ ಕಚ್ಚುವಿಕೆಯಲ್ಲಿ ಆನಂದ: ಹಿಟ್ಟಲ್ಲ, ಸೂಪರ್‌ ಹಿಟ್‌ !

ಬೇರೆ ಬೇರೆ ಸಂದರ್ಭಗಳಿಗೆ ತಕ್ಕಂತೆ ಅದನ್ನು ಅರ್ಥಗರ್ಭಿತ ಮಾಡಲಿಕ್ಕೆ ಆಗುತ್ತದೆ. ಉದಾ ಹರಣೆಗೆ- ಸೊಳ್ಳೆಗಳು ಹಾಗೆ ಹೇಳಿದ್ದಿರಬಹುದು! ಯಾವುದೇ ಮಸ್ಕಿಟೊ ರಿಪೆಲ್ಲೆಂಟ್ʼಗಳಿಗೂ ಜಗ್ಗದೆ ಮನುಷ್ಯರ ಮೇಲೆ ಸತತ ದಾಳಿ ನಡೆಸಿ ಬಿಸಿಬಿಸಿ ರಕ್ತ ಚಪ್ಪರಿಸುವ ಸೊಳ್ಳೆಗಳಿಗೆ ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ’ ಸಿಗದಿರುತ್ತದೆಯೇ? ಎಲ್ಲೋ ಒಂದೆರಡಷ್ಟೇ ನಿಮ್ಮ ಕೈಯೇಟಿಗೆ ಅಪ್ಪಚ್ಚಿಯಾಗಿ ಜೀವ ಕಳೆದುಕೊಂಡಾವೆಯೇ ಹೊರತು ಮಿಕ್ಕವುಗಳಿಗೆ ರಕ್ತಸಂತರ್ಪಣೆಯ ಆನಂದವೋ ಆನಂದ.

Srivathsa Joshi Column: ಎಲೆಯಡಕೆಯ ಸುಸಂಸ್ಕೃತಿಯ ಸಸ್ಯಶಾಸ್ತ್ರೀಯ ಸಂಯೋಗ

ಎಲೆಯಡಕೆಯ ಸುಸಂಸ್ಕೃತಿಯ ಸಸ್ಯಶಾಸ್ತ್ರೀಯ ಸಂಯೋಗ

‘ತಾಂಬೂಲರಾಗ’ ಎಂದು ಅದರ ಹೆಸರು. ಗ್ರಂಥದ ಸಂಪಾದಕರು ನಮ್ಮೂರಿನವರು, ನನ್ನೊಬ್ಬ ಹಿರಿಯ ಹಿತೈಷಿ. ತಾಂಬೂಲ, ಅದಕ್ಕಿಂತಲೂ ಹೆಚ್ಚಾಗಿ ಈ ರೀತಿಯ ಸ್ವಾರಸ್ಯಕರ ಮಾಹಿತಿ, ನನಗೂ ಇಷ್ಟವೇ ಎಂದು ಅವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಇರಬೇಕು- ದೂರದೇಶದಲ್ಲಿರುವ ನನಗೆ ಪುಸ್ತಕ ದ್ದೊಂದು ಪ್ರಿವಿಲೆಜ್ಡ್ ಪ್ರಿವ್ಯೂ ಒದಗಿಸಿದ್ದಾರೆ! ಅಂಥ ಪ್ರೀತಿಯ ತಾಂಬೂಲವನ್ನು ನಾನೊಬ್ಬನೇ ಜಗಿಯುವುದು (ಸವಿಯುವುದು) ತರವಲ್ಲ ಎಂದು ಜಗದಗಲ ದಾಟಿಸುತ್ತಿದ್ದೇನೆ, ಇಂದಿನ ತಿಳಿರುತೋರಣ ವನ್ನು ತಾಂಬೂಲರಾಗದ್ದೇ ಕೆಲ ತಾನ-ತಂತುಗಳಿಂದ ಸಿಂಗರಿಸುವ ಮೂಲಕ.

Srivathsa Joshi Column: ಬರಿ, ಬರಿಯುತ್ತ ಬರಿ...ಕೋಸಂಬರಿ ರೀತಿಯೂ ಬರಿ !

ಬರಿ, ಬರಿಯುತ್ತ ಬರಿ...ಕೋಸಂಬರಿ ರೀತಿಯೂ ಬರಿ !

ಕತೆ-ಕವಿತೆ-ಪ್ರಬಂಧ- ನಾಟಕ ಬರಿಯುವವರಿಗೇ ಹೆಚ್ಚಾಗಿ Gifted writer ಹಣೆಪಟ್ಟಿ ಬಂದಿರು ತ್ತದೆ. ಯಾಕೆ? ಬೇರೆಯವರು ಬರಿಯುವವರಿಲ್ಲವೇ? ಅವರೆಲ್ಲ ಚೆನ್ನಾಗಿ ಬರಿಯುವುದಿಲ್ಲವೇ? ಹಾಗೆ ನೋಡಿದರೆ, ಬರಿವವ್ರು ಬೇರೆಬೇರೆ ಕ್ಷೇತ್ರಗಳವರು, ಬೇರೆ ಬೇರೆ ಅಭಿರುಚಿಗಳವರು, ಸಾಧನೆಯ ಗುರಿಯಿಟ್ಟುಕೊಂಡವರು ತುಂಬ ಮಂದಿ ನಮಗೆ ಸಿಗುತ್ತಾರೆ.

Srivathsa Joshi Column: ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿ ನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಅಸಹ್ಯ ಅನೂಹ್ಯ ಸನ್ನಿವೇಶ!

Srivathsa Joshi Column: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇನ್ನೂ ಇಪ್ಪತ್ತೆಂಟು ಹೆಸರು ಬೇಕೆ?

ಸ್ತ್ರೀ ಎಂದರೆ ಅಷ್ಟೇ ಸಾಕೆ? ಇನ್ನೂ ಇಪ್ಪತ್ತೆಂಟು ಹೆಸರು ಬೇಕೆ?

ಅಷ್ಟಾಧ್ಯಾಯೀ ಮತ್ತು ಅಮರಕೋಶ- ಇವೆರಡೂ ಸಂಸ್ಕೃತ ಭಾಷೆ ಹಾಗೂ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆಯಲು ಬಯಸುವವರಿಗೆ ಅತ್ಯಂತ ಉಪಯುಕ್ತ ಗ್ರಂಥಗಳು. ಹಿಂದೆಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಅಧಿಕೃತ ಶಿಕ್ಷಣ ಆರಂಭವಾಗುವ ಮೊದಲೇ ಇವೆರಡನ್ನು ಕಂಠಪಾಠ ಮಾಡಿಸುವುದು ಸಾಮಾನ್ಯ ಪದ್ಧತಿಯಾಗಿತ್ತಂತೆ.

Srivathsa Joshi Column: ಒಡಲ ಜಾಗಟೆಯ ಮಾಡಿ ಬಿಡದೆ ಢಣಢಣರೆಂದು ಬಡಿದು...

ಒಡಲ ಜಾಗಟೆಯ ಮಾಡಿ ಬಿಡದೆ ಢಣಢಣರೆಂದು ಬಡಿದು...

ಘಂಟಾಪಥ ಅಂದರೆ ರಾಜಮಾರ್ಗ; ಕೊರಳಿಗೆ ಘಂಟಾ ವಾದ್ಯವನ್ನು ಕಟ್ಟಿರುವ ಆನೆಗಳು ಸಂಚರಿಸುವ ಮಾರ್ಗ. ಘಂಟಾಪಾಟಲೀ ಅಂದರೆ ಘಂಟಾ ವಾದ್ಯದಂತಿರುವ ಒಂದು ಹೂವು. ಘಂಟಾಲೀ ಅಂದರೆ ಘಂಟಾ ವಾದ್ಯಗಳ ಸಾಲು. ಘಂಟಿಕಾ ಅಂದರೆ ಚಿಕ್ಕದಾದ ಘಂಟಾ ವಾದ್ಯ. ಘಂಟಾಪಾತ್ರೆ ಅಂದರೆ ಕೆಮಿಸ್ಟ್ರಿ ಲ್ಯಾಬೊರೇಟರಿಯಲ್ಲಿ ಬಳಕೆಯಾಗುವ ಪರಿಕರ.

Srivathsa Joshi Column: ಟ್ರಾಜಿಡಿ ಅಂದ್ರೆ ಅಜಗೀತೆ, ಲಾಸ್ಟ್‌ ಮೆಲೊಡಿ ಹಂಸಗೀತೆ

ಟ್ರಾಜಿಡಿ ಅಂದ್ರೆ ಅಜಗೀತೆ, ಲಾಸ್ಟ್‌ ಮೆಲೊಡಿ ಹಂಸಗೀತೆ

ಒಟ್ಟಾರೆಯಾಗಿ ದುರಂತಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ದಶಕಗಳ ಹಿಂದಿನ ಭೋಪಾಲ್ ವಿಷಾನಿಲ ದುರಂತ, ಚೆರ್ನೊಬಿಲ್ ಅಣುಸ್ಥಾವರ ದುರಂತ, ಬೆಂಗಳೂರಿನಲ್ಲಿ ವೀನಸ್ ಸರ್ಕಸ್ ದುರಂತ, ಗಂಗಾರಾಮ್ ಕಟ್ಟಡ ಕುಸಿತದ ದುರಂತ, ಅಮೆರಿಕದಲ್ಲಿ ವಿಶ್ವ ವಾಣಿಜ್ಯ ಕೇಂದ್ರ ಅವಳಿಗೋಪುರ ದುರಂತ, ಜಪಾನ್‌ನಲ್ಲಿ ಭೂಕಂಪ, ಇಂಡೊನೇಷ್ಯಾದಲ್ಲಿ ತ್ಸುನಾಮಿ ಹೀಗೆ ಭಾರಿ ದುರಂತಗಳಿಂದ ಹಿಡಿದು ‘ಮ್ಯಾನ್‌ಹೋಲ್ ದುರಂತ, ಮೂವರ ಸಾವು’, ‘ಗರ್ಭಿಣಿ ಫೋಟೊಶೂಟ್ ವೇಳೆ ದುರಂತ, ಮೊದಲ ಮಗು ಸಾವು’ ಎಂದು ಮುಂತಾಗಿ ದುರಂತಗಳ ಸುದ್ದಿಗಳು ಅಂತ್ಯವಿಲ್ಲದವಾಗುತ್ತವೆ.

Srivathsa Joshi Column: ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ... ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ ನರರೇನು ಭಾವಿಸುವರದರಂತೆ ಕಾಣುವನು ಎಂದಿದ್ದಾರೆ ನಿಜಗುಣ ಶಿವಯೋಗಿಗಳು. ಭಗವಂತನು ಭಕ್ತರ ಮನೋಭಾವ ಮತ್ತು ಭಕ್ತಿಯ ತೀವ್ರತೆಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಸಾಕ್ಷಾತ್ಕಾರವಾಗುತ್ತಾನೆ.

Srivathsa Joshi Column: ಗ್ವಾಕಮೂಲಿಯ ಮೂಲವಸ್ತುವಿನ ಹೆಸರಿನ ಮೂಲ

ಗ್ವಾಕಮೂಲಿಯ ಮೂಲವಸ್ತುವಿನ ಹೆಸರಿನ ಮೂಲ

ಆವಕಾಡೊ ಬಹುತೇಕ ಕೊಬ್ಬಿನ ಅಂಶ ಹೆಚ್ಚು ಇರುವ ಖಾದ್ಯವಾದರೂ ಅದು ದೇಹಕ್ಕೆ ಒಳ್ಳೆಯ ಕೊಬ್ಬು. “ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಭಗವಂತನ ಹಾಗೆ" ದೇಹದೊಳಗಿನ ಕೆಟ್ಟ ಕೊಲೆ ಸ್ಟ್ರಾಲ್ ಅನ್ನು ನಾಶಪಡಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುವಂತೆ ಮಾಡುತ್ತದೆ; ಪೊಟ್ಯಾಸಿಯಂ, ಪ್ರೋಟೀನ್, ಇ-ವಿಟಮಿನ್ ಮುಂತಾಗಿ ಪೋಷಕಾಂಶಗಳನ್ನು ಒದಗಿಸುತ್ತದೆ- ಎಂಬಿತ್ಯಾದಿ ಗುಣಗಾನ ವೂ ಇರುವುದರಿಂದ ಈಗಿನ ಹೆಲ್ತ್ ಕಾನ್ಷಿಯಸ್ ಪ್ರಜೆಗಳಿಗೆ ಆವಕಾಡೊ ಮೇಲೆ ಹೆಚ್ಚಿನ ಒಲವು.

Loading...