ಜ.3ರಿಂದ ಸಾಗರ ಸುತ್ತ ಸಹೃದಯರಿಗೊಂದು ಸಹೃದಯೋತ್ಸವ
ಇತಿಹಾಸ ಸಮ್ಮೇಳನದ ಮೂಲಕ ತೆರೆದುಕೊಂಡ ಸಹೃದಯ ಬಳಗ ಕಳೆದ 25 ವರ್ಷ ಗಳಿಂದ ಸಾಗರೋ ತ್ಸವದ ಹೆಸರಿನಲ್ಲಿ ಒಂದಿಲ್ಲೊಂದು ಜನಾಕರ್ಷಕ ಕರ್ಯಕ್ರಮ ನೀಡುತ್ತ ಬಂದಿದೆ. ಆರಂಭದ 7 ವರ್ಷ ಇತಿಹಾಸ ವೇದಿಕೆಯೊಂದಿಗೆ ಇತಿಹಾಸ ಸುತ್ತುವರಿದ ಸಮ್ಮೇಳನ ಆಯೋಜಿಸಿ ಕೆಳದಿ ಸೇರಿದಂತೆ ಮಲೆ ನಾಡ ಭಾಗದ ರಾಜಮನೆತನದ ಇತಿಹಾಸದ ಪರಿಚಯ ಅದನ್ನು ತಿಳಿಯುವ ಅಗತ್ಯವನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯ ಮಾಡಿತ್ತು.
-
ರಮೇಶ್ ಹೆಗಡೆ ಗುಂಡೂಮನೆ
ಸಾಗರ ಸುತ್ತ ಸಹೃದಯರ ಬಳಗದಿಂದ ಸಾಧಕರಿಗೆ ಸನ್ಮಾನ
ಸಾಮಾಜಿಕ ಪಿಡುಗುಗಳ ವಿರುದ್ದ ಜನಜಾಗೃತಿ ಕಾರ್ಯಾಗಾರ
ಸಾಗರ: ಕಳೆದ 25 ವರ್ಷಗಳಿಂದ ವರ್ಷಕ್ಕೊಮ್ಮೆ ನಗಿಸಿ, ಜತೆಗೆ ಇತಿಹಾಸ, ವಿಜ್ಞಾನ ತಿಳಿಸಿ, ಸಾಧಕರನ್ನು ಸನ್ಮಾನಿಸಿ, ಎಳೆಯರನ್ನು ಪ್ರೋತ್ಸಾಹಿಸಿ ಸಹೃದಯರಿಗೆ ಖುಷಿ ಖುಷಿ ಎನಿಸಿ ತಾನೂ ಬೆಳೆದು ಬರುತ್ತಿರುವ ಸಂಸ್ಥೆ ಸಾಗರ ಸುತ್ತ ಸಹೃದಯರ ಬಳಗ. ಪ್ರತಿ ವರ್ಷ ಜನವರಿಯಲ್ಲಿ ಕಾರ್ಯ ಕ್ರಮ ಮಾಡುವ ಈ ಸಂಸ್ಥೆ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಾಮಾಜಿಕ ಕಾಳಜಿಯ ಕಾರ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡು, ಸಾಮಾಜಿಕ ಪಿಡುಗುಗಳ ವಿರುದ್ದ ಜನಜಾಗೃತಿ ಕಾರ್ಯಾಗಾರ ಏರ್ಪಡಿಸಿ ಅರಿವು ಮೂಡಿಸುತ್ತ ಬಂದಿರುವುದು ಅದರ ಹೆಗ್ಗಳಿಕೆ.
ಲೇಖಕರಾಗಿರುವ ಸಂಸ್ಥೆಯ ಅಧ್ಯಕ್ಷ ಜಿ.ನಾಗೇಶ್ ರಚಿಸಿ ನಿರ್ದೇಶಿಸಿರುವ ರೈತ ಆತ್ಮಹತ್ಯೆ, ಬಹಿ ಷ್ಕಾರ, ಕುಡಿತದ ಕೆಡಕು, ಕೈ ಕೆಸರಾದರೆ ಬಾಯಿ ಮೊಸರು, ಮುಂತಾದ ನಾಟಕಗಳು ಸಕಾಲಿಕವಾದ ತಿಳಿವು ನೀಡಿ ಗ್ರಾಮೀಣ ಜನರ ಅರಿವು ಹೆಚ್ಚಿಸುವಲ್ಲಿಯೂ ಪಾತ್ರ ವಹಿಸಿದೆ.
ಮಾತ್ರವಲ್ಲ ಜೈಲು ಖೈದಿಗಳ ಮನಪರಿವರ್ತನೆಗೂ ನಾಟಕ ಪ್ರದರ್ಶಿಸಿದಿದೆ ಇಂತಹ ಸಂಸ್ಥೆಯ ರಜತ ಮಹೋತ್ಸವ ಈ ಬಾರಿ ಜನವರಿ 3 ಮತ್ತು 4 ರಂದು ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: Dr. Karaveeraprabhu Kyalakonda Column: ಭಾವೈಕ್ಯತೆಯ ಬನಶಂಕರಿ ಯಾತ್ರೆ
ಹಿನ್ನೆಲೆ: ಇತಿಹಾಸ ಸಮ್ಮೇಳನದ ಮೂಲಕ ತೆರೆದುಕೊಂಡ ಸಹೃದಯ ಬಳಗ ಕಳೆದ 25 ವರ್ಷ ಗಳಿಂದ ಸಾಗರೋತ್ಸವದ ಹೆಸರಿನಲ್ಲಿ ಒಂದಿಲ್ಲೊಂದು ಜನಾಕರ್ಷಕ ಕರ್ಯಕ್ರಮ ನೀಡುತ್ತ ಬಂದಿದೆ. ಆರಂಭದ 7 ವರ್ಷ ಇತಿಹಾಸ ವೇದಿಕೆಯೊಂದಿಗೆ ಇತಿಹಾಸ ಸುತ್ತುವರಿದ ಸಮ್ಮೇಳನ ಆಯೋಜಿಸಿ ಕೆಳದಿ ಸೇರಿದಂತೆ ಮಲೆನಾಡ ಭಾಗದ ರಾಜಮನೆತನದ ಇತಿಹಾಸದ ಪರಿಚಯ ಅದನ್ನು ತಿಳಿಯುವ ಅಗತ್ಯವನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯ ಮಾಡಿತ್ತು.
ನಂತರ ಒಂದು ಹೆಜ್ಜೆ ಮುಂದೆ ಹೋಗಿ ಖಾದ್ಯ ಮೇಳಗಳ ಮೂಲಕ ಮಲೆನಾಡ ಖಾದ್ಯದ ಮಹತ್ವ ರುಚಿಶುಚಿಯ ಪರಿಚಯ ನೀಡಿತ್ತು. ನಂತರದ ವರ್ಷಗಳಿಂದ ವರ್ಷಕ್ಕೊಮ್ಮೆಯಾದರೂ ನಕ್ಕು ಹಗುರಾಗಿ ಎಂಬ ಆಶಯ ಹೊತ್ತು ಸಾಗರ ಸುತ್ತದ ಸಹೃದಯರಿಗೊಂದು ಸಹೃದಯೋತ್ಸವದ ನಗೆಹಬ್ಬ ಆಚರಿಸುತ್ತಿರುವುದು ವಿಶೇಷವಾಗಿ ನಡೆದು ಬಂತು.
ಅಲ್ಲದೆ ವಿವಿಧ ಕ್ಷೇತ್ರದಲ್ಲಿ ತಮ್ಮ ಶ್ರಮದ ಸಾಧನೆಯ ಮೂಲಕ ದೇಶಕ್ಕೆ ಕೊಡುಗೆ ನೀಡುತ್ತಿರು ವವರನ್ನು ಗುರುತಿಸಿ ಸಾಧಕ ಗೌರವ ನೀಡುವ ಕಾರ್ಯ ವನ್ನೂ ಕೂಡ ಸಹೃದಯ ಬಳಗ ಮಾಡುತ್ತ ಬಂದಿದೆ. ಈಗಾಗಲೆ 500ಕ್ಕೂ ಹೆಚ್ಚು ಬೇರೆಬೇರೆ ಸಾಧಕರನ್ನು ಈ ಅವಧಿಯಲ್ಲಿ ಗೌರವಿಸಿದೆ.
ಕೃಷಿ, ಪಶು ಸಂಗೋಪನೆ, ಪರಿಸರ ಕಾಳಜಿ, ಮಾಹಿತಿ ತಂತ್ರಜ್ಞಾನ, ಉದ್ಯಮ, ರಾಜಕೀಯ, ಸಹಕಾರಿ, ಸಾಂಸ್ಕೃತಿಕ, ಇತಿಹಾಸ, ಸಾಹಿತ್ಯ, ಜಾನಪದ ಮತ್ತು ಯಕ್ಷಗಾನ, ಕ್ರೀಡಾಕ್ಷೇತ್ರ ಅಲ್ಲದೆ ಬಾಲ ಪ್ರತಿಭೆ ಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ವೇದಿಕೆಯ ಹಿರಿಮೆ.
ನಗಲು ಬನ್ನಿ... ಇದು ಉಚಿತ: ಆಧುನಿಕ ಧಾವಂತದ ಬದುಕಿನ ಒತ್ತಡಗಳಲ್ಲಿ ನಗುವುದಕ್ಕೂ ಸಮಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮನರಂಜನೆಗೆ ಹೋಗಬೇಕಾದರೂ ಕಾಸು ಕೊಟ್ಟು ಹೋಗಬೇಕು ಇದನ್ನು ಮನಗಂಡ ಬಳಗ ವರ್ಷಕ್ಕೊಮೆ-- ನಕ್ಕು ಹಗುರಾಗುವುದಕ್ಕೆ ಅವಕಾಶ ಕಲ್ಪಿಸುವ ಕಾರ್ಯ ಕ್ರಮ ಆಯೋಜಿಸುತ್ತಿದೆ. ಇದು ಉಚಿತ. ಈ ಬಾರಿ ರಜತ ಸಂಭ್ರಮದ ಅಂಗವಾಗಿ ಎರಡು ದಿನ ನಗೆ ಹಬ್ಬ ಏರ್ಪಡಿಸಲಾಗಿದೆ.
ಜ.3ರಂದು ಮನು ಹಂದಾಡಿ ಅವರಿಂದ ನಗೆ ರಸಾಯನ, ಜ. 4ರಂದು ಮಿಮಿಕ್ರಿ ದಯಾನಂದ್, ಪ್ರಹ್ಲಾದ್ ಆಚಾರ್ಯ ಮತ್ತು ಉಮೇಶ್ ಗೌಡ ಅವರಿಂದ ನಗೆಹಬ್ಬ ಇರುತ್ತದೆ.
ಈ ಬಾರಿಯ ಪ್ರಶಸ್ತಿ ಪುರಸ್ಕೃತರು ಸಹೃದಯ ಸಾಹಿತಿ ಡಾ.ಬಿ.ಎಲ್.ನಾಗರಾಜ್ ಮಂಗಳೂರು, ರಾಜಕಾರಣಿ ಗೋಪಾಲಕೃಷ್ಣ ಬೇಳೂರು,ವೇಣುಗೋಪಾಲ್ ಗುರೂಜಿ ಶಿವಮೊಗ್ಗ, ವೈದ್ಯ ಡಾ. ಬಿ.ಎಲ್.ಸುರೇಶ್ ಬೆಂಗಳೂರು, ಕೃಷಿಕ ಡಾ.ಮಂಜುನಾಥ್ ಜಿ.ಎಂ.ದಾವಣಗೆರೆ, ಇತಿಹಾಸ ತಜ್ಞ ಡಾ. ಅಮರೇಶ್ ರಾಯಚೂರು, ಜಾನಪದ ಕಾವಿದೆ ಪುಷ್ಪ ಬಿ.ಕೆ.ಚಿಕ್ಕಮಗಳೂರು, ಸಹಕಾರಿ ಪ್ರಸನ್ನ ಕುಮಾರ್‌ಶಿವಮೊಗ್ಗ, ನೃತ್ಯ ಗುರು ವಿದ್ವಾನ್ ಗೋಪಾಲ್ ಎಂ.. ಹಾಗೂ ಅಬಸೆ ದಿನೇಶ್ ಕುಮಾರ್ ಜೋಷಿ, ಮೇಘನಾ ಮೈಸೂರು, ಟಿ.ಡಿ.ಮೇಘರಾಜ್, ಟಿ.ವಿ.ಪಾಂಡುರಂಗ, ಆ. ಶ್ರೀನಿವಾಸ್, ಸುನಂದ, ವೀರಭದ್ರಪ್ಪ ಜಂಬಿಗೆ, ಎಲ್.ಚಂದ್ರಪ್ಪ, ಪುರುಷೋತ್ತಮ, ಮಾಲತೇಶಪ್ಪ, ಕೆ.ವಿ.ಜಯರಾಮ್, ಶಶಿಕಲಾ, ಮಂಜಪ್ಪ. ಇದಲ್ಲದೆ 100 ವರ್ಷದ ಗುಡಿಗಾರರ ಸಹಕಾರ ಸಂಘ, 70 ವರ್ಷದ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿ, 50 ವರ್ಷದ ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘ, 25 ವರ್ಷದ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಘ ಮತ್ತು ಅಂಭ್ರಿಣಿ ಸೌಹಾರ್ದ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘಕ್ಕೆ ಪ್ರಶಸ್ತಿ ನೀಡಲಾಗು ತ್ತಿರುವುದು ಸಂಸ್ಥೆಯ ಉತ್ತಮ ಕಾರ್ಯಕ್ಕೆ ಉದಾಹರಣೆ.
ನಗುವುದಕ್ಕೆ ಸಮಯವಿಲ್ಲದ ಸ್ಥಿತಿ ನಿರ್ಮಾಣ
ಆಧುನಿಕ ಧಾವಂತದ ಬದುಕಿನ ಒತ್ತಡಗಳಲ್ಲಿ ನಗುವುದಕ್ಕೂ ಸಮಯವಿಲ್ಲದ ಸ್ಥಿತಿ ನಿರ್ಮಾಣ ವಾಗಿದೆ. ಇನ್ನು ಮನರಂಜನೆಗೆ ಹೋಗಬೇಕಾದರೂ ಕಾಸುಕೊಟ್ಟು ಹೋಗಬೇಕು ಇದನ್ನು ಮನಗಂಡ ಬಳಗ ವರ್ಷಕ್ಕೊಮ್ಮೆ ನಕ್ಕು ಹಗುರಾಗುವುದಕ್ಕೆ ಅವಕಾಶ ಕಲ್ಪಿಸುವ ಕಾರ್ಯಕ್ರಮ ಆಯೋಜಿಸುತ್ತಿದೆ.