ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kusum: ಕೃಷಿ ಪಂಪ್‌ʼಸೆಟ್‌ಗೆ ಬೆಳಕಾದ ʼಕುಸುಮ್ʼ

ಚುನಾವಣೆಗೂ ಮೊದಲು ಕಾಂಗ್ರೆಸ್ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ನೀಡುವ ಘೋಷಣೆಯನ್ನು ಮಾಡಿತ್ತು. ಈ ಘೋಷಣೆ ಪೂರೈಸಲು ಹಾಗೂ ಅಗತ್ಯವಿರುವಷ್ಟು ವಿದ್ಯುತ್ ಒದಗಿಸಲು ಕುಸುಮ್-ಸಿ ಯೋಜನೆ ಸಹಕಾರಿಯಾಗಿದ್ದು, ಬೆಸ್ಕಾಂ ವ್ಯಾಪ್ತಿ ಒಂದರಲ್ಲಿಯೇ 2.70 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳಿಗೆ ಹಗಲಿನ ಸಮಯದಲ್ಲಿ ನಿರಂತರ 7 ಗಂಟೆ ವಿದ್ಯುತ್ ನೀಡಲು ಸಾಧ್ಯವಾಗಿದೆ.

Kusum: ಕೃಷಿ ಪಂಪ್‌ʼಸೆಟ್‌ಗೆ ಬೆಳಕಾದ ʼಕುಸುಮ್ʼ

-

Ashok Nayak
Ashok Nayak Feb 9, 2026 11:36 AM

ಅಪರ್ಣಾ ಎ.ಎಸ್ ಬೆಂಗಳೂರು

ಬೆಸ್ಕಾಂ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್‌ನಿಂದ ಪಂಪ್‌ಸೆಟ್ ಕಾರ್ಯನಿರ್ವಹಣೆ

2.70 ಲಕ್ಷ ಕೃಷಿ ಪಂಪ್‌ಸೆಟ್ ಬಳಕೆ

ಕೃಷಿ ಪಂಪ್‌ಸೆಟ್‌ಗಳಿಗೆ ಮುಂಜಾನೆ ಅವಧಿಯಲ್ಲಿ ನಿರಂತರ ವಿದ್ಯುತ್ ನೀಡಬೇಕೆಂಬ ರಾಜ್ಯದ ರೈತರ ಬಹುದಿನದ ಬೇಡಿಕೆ, ಕುಸುಮ್ ಸಿ ಯೋಜನೆಯಿಂದ ಸಾಕಾರವಾಗುತ್ತಿದೆ.

ಚುನಾವಣೆಗೂ ಮೊದಲು ಕಾಂಗ್ರೆಸ್ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ನೀಡುವ ಘೋಷಣೆಯನ್ನು ಮಾಡಿತ್ತು. ಈ ಘೋಷಣೆ ಪೂರೈಸಲು ಹಾಗೂ ಅಗತ್ಯವಿರುವಷ್ಟು ವಿದ್ಯುತ್ ಒದಗಿಸಲು ಕುಸುಮ್-ಸಿ ಯೋಜನೆ ಸಹಕಾರಿಯಾಗಿದ್ದು, ಬೆಸ್ಕಾಂ ವ್ಯಾಪ್ತಿ ಒಂದರಲ್ಲಿಯೇ 2.70 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳಿಗೆ ಹಗಲಿನ ಸಮಯದಲ್ಲಿ ನಿರಂತರ 7 ಗಂಟೆ ವಿದ್ಯುತ್ ನೀಡಲು ಸಾಧ್ಯವಾಗಿದೆ.

ಕಾಂಗ್ರೆಸ್ ಪಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಬೆಳಗಿನ ಅವಧಿಯಲ್ಲಿಯೇ ನಿರಂತರ ಏಳು ಗಂಟೆ ವಿದ್ಯುತ್ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಇದಕ್ಕೆ ಭಾರಿ ಪ್ರಮಾಣದ ವಿದ್ಯುತ್ ಅಗತ್ಯವಿತ್ತು. ಈ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಕುಸುಮ್ ಸಿ ಯೋಜನೆಯ ಸೌರ ವಿದ್ಯುತ್ ಅಳವಡಿಕೆ ಕಾಮಗಾರಿ ಸಹಕಾರಿಯಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ 157 ಕುಸುಮ್ ಸಿ ಯೋಜನೆಗಳಿಂದ ಒಟ್ಟು 1159.05 ಮೆ.ವ್ಯಾ. ಸೌರ ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

ಕುಸುಮ್ ಯೋಜನೆಯಲ್ಲಿ ಕೃಷಿ ಪಂಪ್‌ಸೆಟ್‌ಗಳ ಸೋಲರೈಸೇಷನ್ ಕಾರ್ಯವು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಬೇಸಿಗೆಯಲ್ಲಿ 2,70,000ಕ್ಕೂ ಅಧಿಕ ಪಂಪ್‌ಸೆಟ್‌ಗಳು ಸೌರ ವಿದ್ಯುತ್‌ನಿಂದ ಕಾರ್ಯನಿರ್ವಹಣೆ ಮಾಡಲಿದೆ. ಗ್ರಾಮೀಣ ಭಾಗದಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈ ಸುವ ಫೀಡರ್ ವ್ಯಾಪ್ತಿಯಲ್ಲಿ ಸರಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಸೋಲಾರ್ ಪ್ಯಾನಲ್‌ ಗಳ ಅಳವಡಿಸಿ, ವಿದ್ಯುತ್ ಉತ್ಪಾದಿಸಿ ಸಮೀಪದ ಫೀಡರ್ʼಗಳಿಗೆ ಸಂಪರ್ಕ ಒದಗಿಸಲಾಗು ವುದು. ಆ ಬಳಿಕ ಅಲ್ಲಿಂದ ಸುತ್ತಮುತ್ತಲಿನ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್‌ನ ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಾರ್ಚ್ 31 ಗಡುವು: ಕುಸುಮ-ಸಿ ಯೋಜನೆ ಅನುಷ್ಠಾಗೊಳಿಸುವ ಗುತ್ತಿಗೆದಾರರಿಗೆ ಕಾಮಗಾರಿ ಮುಗಿಸಲು ಮಾರ್ಚ್ 31ರ ಗಡುವು ನೀಡಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಈ ಎಲ್ಲಾ ಯೋಜನೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸುಮಾರು 2,70,000ಕ್ಕೂ ಅಧಿಕ ಪಂಪ್ ಸೆಟ್‌ಗಳಿಗೆ ಹಗಲು ವೇಳೆ 7 ಗಂಟೆ ನಿರಂತರ ವಿದ್ಯುತ್ ಲಭ್ಯವಾಗಲಿದೆ.

ಬೆಂಗಳೂರು ಗ್ರಾಮಾಂತರ ಪ್ರದೇಶದ ಹೊಸ ಕೋಟೆಯ ಸೂಲಿಬೆಲೆ ವೋಲ್ವೊ ಕುಂದಾಣ ಉಪ ಕೇಂದ್ರಗಳ ವ್ಯಾಪ್ತಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ದೇವನಹಳ್ಳಿಯ ವಿವಿಧ ಉಪಕೇಂದ್ರ ಗಳ ವ್ಯಾಪ್ತಿಯ ಕೆರೆ ಅಂಗಳಗಳಲ್ಲಿಯೂ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಒಂದು ಮೆ.ವ್ಯಾಗೆ 4 ಎಕರೆ ಅಗತ್ಯ

ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಸುಮಾರು ನಾಲ್ಕು ಎಕರೆ ಜಾಗ ಬೇಕಾಗುತ್ತಿದ್ದು, ಈ ಜಾಗವನ್ನು 25 ವರ್ಷಕ್ಕೆ ಗುತ್ತಿಗೆ ಪಡೆಯಬಹುದಾಗಿದೆ. ಒಂದು ಎಕರೆಗೆ ವರ್ಷಕ್ಕೆ 25 ಸಾವಿರ ರು. ಬಾಡಿಗೆ ನಿಗದಿಪಡಿಸಲಾಗಿದ್ದು, ಈ ದರವನ್ನು ನೀಡಿ ಖಾಸಗಿಯವರು ರೈತರಿಂದ ಜಮೀನು ಪಡೆಯ ಬಹುದಾಗಿದೆ. ಒಂದು ವೇಳೆ ಸರಕಾರಿ ಜಾಗ ಇದ್ದರೆ, ಇನ್ನೂ ನೀಡಲಾಗುತ್ತದೆ. ಸರಕಾರಿ ಭೂಮಿ ಲಭ್ಯವಿಲ್ಲದ ಸ್ಥಳಗಳಲ್ಲಿ ರೈತರೇ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ವಾರ್ಷಿಕ ಆದಾಯ ಆಗಳಿಸಬಹುದಾಗಿದೆ.

ಕುಸುಮ್ ಸಿ ಯೋಜನೆಯಡಿ ಪ್ರತಿ ಎಕರೆ ಭೂಮಿಗೆ 25 ಸಾವಿರ ರು. ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪಕೇಂದ್ರ ಇರುವ ಗ್ರಾಮದ ಸರಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿ ಯಾಗಿದ್ದರೆ, ನವೀಕರಿಸಬಹುದಾದ ಇಂಧನ ಸೇವಾ ಕಂಪನಿಯ ಡೆವಲಪರ್‌ಗಳು ಗುತ್ತಿಗೆಗೆ ತೆಗೆದು ಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ 25000 ರು. ಪರಿಹಾರ ನೀಡುತ್ತಾರೆ.

*

ಬಂದ ಬಳಿಕ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್ ಪೂರೈಸುವ ಭರವಸೆ ನೀಡಿದ್ದೆವು. ಇದನ್ನು ಕಾರ್ಯರೂಪಕ್ಕೆ ತರಲು ಕುಸುಮ- ಸಿ ಯೋಜನೆ ಸಹಕಾರಿಯಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯೋಜನೆ ಅನುಷ್ಠಾನ ಆರಂಭ ವಾಗಿದ್ದು, ಇದರಿಂದ ರೈತರಿಗೆ ಹಗಲು ವೇಳೆ ಗುಣಮಟ್ಟದ ವಿದ್ಯುತ್ ಲಭ್ಯವಾಗುವು ದರೊಂದಿಗೆ ಲೋಡ್ ಹೆಚ್ಚಳ, ವಿತರಣೆ ಅಥವಾ ಸರಬರಾಜಿನಲ್ಲಿ ವ್ಯತ್ಯಯವಾಗಿ ಎದುರಾಗುವ ಸಮಸ್ಯೆಗಳು ತಪ್ಪುತ್ತವೆ.

-ಕೆ.ಜೆ.ಜಾರ್ಜ್, ಇಂಧನ ಸಚಿವ