ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mobile Sanjeevini: ಜಾನುವಾರುಗಳಿಗೆ ಸಂಚಾರಿ ಸಂಜೀವಿನಿ

ಜಾನುವಾರುಗಳ ಕಾಲುಬಾಯಿ ರೋಗ, ವಾರ್ಷಿಕ ಲಸಿಕೆ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳು ಜಾನುವಾರುಗಳನ್ನು ಬಾಽಸುವುದು ಸಾಮಾನ್ಯವಾಗಿದ್ದು, ಅವುಗಳಿಗೆ ಕಾಲಕಾಲಕ್ಕೆ ನಿಗದಿತ ಕೇಂದ್ರ ದಲ್ಲಿ ಚಿಕಿತ್ಸೆ ನೀಡುತ್ತಿರುವುದರ ನಡುವೆಯೇ ರೈತನ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕೆಂಬ ರಾಜ್ಯ ಸರ್ಕಾರದ ಸಂಕಲ್ಪ ಯಶಸ್ವಿ ಕಂಡಿದೆ.

ಜಾನುವಾರುಗಳಿಗೆ ಸಂಚಾರಿ ಸಂಜೀವಿನಿ

-

Profile
Ashok Nayak May 8, 2026 12:48 PM

ಕೆ.ಜೆ.ಲೋಕೇಶ್ ಬಾಬು

ಜಾನುವಾರುಗಳ ಆರೈಕೆಗಾಗಿ ರೂಪಿಸಿದ ವಿಶೇಷ ಯೋಜನೆ ಮೈಸೂರಲ್ಲಿ ಯಶಸ್ವಿ

ಮೈಸೂರು: ರೈತಕುಲದ ಬೆನ್ನೆಲುಬಾದ ಜಾನುವಾರುಗಳ ಆರೈಕೆಗಾಗಿ ಪಶುಸಂಗೋಪನಾ ಇಲಾಖೆ ರೂಪಿಸಿದ ವಿಶೇಷ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ಕಂಡುಬಂದಿದೆ.

ಜಾನುವಾರುಗಳ ಕಾಲುಬಾಯಿ ರೋಗ, ವಾರ್ಷಿಕ ಲಸಿಕೆ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳು ಜಾನುವಾರುಗಳನ್ನು ಬಾಽಸುವುದು ಸಾಮಾನ್ಯವಾಗಿದ್ದು, ಅವುಗಳಿಗೆ ಕಾಲಕಾಲಕ್ಕೆ ನಿಗದಿತ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿರುವುದರ ನಡುವೆಯೇ ರೈತನ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕೆಂಬ ರಾಜ್ಯ ಸರ್ಕಾರದ ಸಂಕಲ್ಪ ಯಶಸ್ವಿ ಕಂಡಿದೆ. ಜಾನುವಾರುಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಅವುಗಳು ಇರುವಲ್ಲಿಯೇ ನೀಡುವ ಉದ್ದೇಶದಿಂದ ಜಾರಿಗೆ ತರಲಾದ ಸಂಚಾರಿ ಪಶುಚಿಕಿತ್ಸಾ ಘಟಕಕ್ಕೆ ಮೈಸೂರು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.

ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಈ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಕೇಂದ್ರ ಸರಕಾರದ ಶೇ.60 ಹಾಗೂ ರಾಜ್ಯ ಸರಕಾರದ ಶೇ 40ರಷ್ಟು ಅನುದಾನ ದಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು, ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸಂಚಾರಿ ಪಶುಚಿಕಿತ್ಸಾ ಘಟಕದ ಮೂಲಕ ಒಟ್ಟು 3000ಕ್ಕೂ ಹೆಚ್ಚು ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ: IPL 2026: ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳಿಗೇರಬಲ್ಲ 2 ತಂಡಗಳನ್ನು ಆರಿಸಿದ ವಸೀಮ್‌ ಜಾಫರ್‌!

ಸಂಚಾರಿ ಪಶುಚಿಕಿತ್ಸಾ ಘಟಕದ ಸೇವೆಯು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ದೊರೆಯಲಿದೆ. ಈ ಸೇವೆಗೆ ಸಾಕಷ್ಟು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸಮಯವನ್ನು ವಿಸ್ತರಿಸಬೇಕು ಹಾಗೂ ಹೆಚ್ಚುವರಿ ಸಂಚಾರಿ ಪಶುಚಿಕಿತ್ಸಾ ಘಟಕವನ್ನು ಮಂಜೂರು ಮಾಡಬೇಕು ಎಂಬ ಕೂಗು ರೈತರ ಕಡೆಯಿಂದ ಕೇಳಿಬರುತ್ತಿದೆ.

ಸಿಬ್ಬಂದಿ ಬದ್ಧತೆ: ಪಶುಸಂಗೋಪನಾ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಜಿಲ್ಲೆಯಲ್ಲಿ ಹಲವಾರು ಜಾನುವಾರುಗಳು ಹಲವಾರು ಕಾಯಿಲೆಗಳಿಂದ ಪಾರಾಗುತ್ತಿವೆ. ಜಾನುವಾರುಗಳಿಗೆ ಕಾಯಿಲೆ ಕಾಣಿಸಿಕೊಂಡರೆ ಅವುಗಳನ್ನು ಪಶುವೈದ್ಯ ಆಸ್ಪತ್ರೆಗೆ ಕರೆ ತರುವುದು ತುಂಬಾ ಕಷ್ಟದ ಕೆಲಸ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಸು, ಎತ್ತುಗಳನ್ನು ರೈತರು ಸಾಕುತ್ತಾರೆ. ಇವುಗಳಿಗೆ ಕಾಯಿಲೆ ಕಾಣಿಸಿಕೊಂಡರೆ ಗಾತ್ರದ ದೃಷ್ಟಿಯಿಂದ ಆಸ್ಪತ್ರೆಗೆ ಕರೆ ತರುವುದು ಕಷ್ಟದ ಕೆಲಸ ಮಾತ್ರವಲ್ಲದೆ ರೈತರಿಗೆ ಆರ್ಥಿಕ ಹೊರೆಯೂ ಉಂಟಾ ಗುತ್ತದೆ. ಆದರೆ, ಆರೋಗ್ಯ ಸೇವೆಯು ಜಾನುವಾರುಗಳು ಇರುವಲ್ಲಿಯೇ ಚಿಕಿತ್ಸೆ ದೊರೆಯುತ್ತಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.

Screenshot_10

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಸಂಚಾರಿ ಪಶು ಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ಪಿರಿಯಾಪಟ್ಟಣ ತಾಲೂಕಿನಲ್ಲಿ ತಾಲೂಕು ಕೇಂದ್ರ ಹಾಗೂ ಬೆಟ್ಟದಪುರದಲ್ಲಿ ತಲಾ 1 ಸಂಚಾರಿ ಪಶುಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿದೆ. ಸರಗೂರು ಘಟಕ ಹೊರತುಪಡಿಸಿ ಉಳಿದ ಎಲ್ಲ ಘಟಕದಲ್ಲೂ ಪಶುವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

1962 ಸಂಖ್ಯೆಗೆ ಕರೆ ಮಾಡಿ: ಜಾನುವಾರುಗಳು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಪಶು ವೈದ್ಯರು ಅಥವಾ ಸಿಬ್ಬಂದಿ ಸಂಪರ್ಕ ಸಾಧಿಸುವುದು ಗ್ರಾಮೀಣ ಭಾಗದಲ್ಲಿ ಸವಾಲಾಗಿದೆ. ಇಂತಹ ಸಮಸ್ಯೆ ತಪ್ಪಿಸುವ ಸಲುವಾಗಿಯೇವ ಸಂಚಾರಿ ಪಶುಚಿಕಿತ್ಸಾ ಘಟಕದ ಸೇವೆಯನ್ನು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಪಡೆಯಬಹುದಾಗಿದೆ. ಅದಕ್ಕಾಗಿ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಸ್ಥಾಪಿಸಲಾಗಿದ್ದು, 1962 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ಸೇವೆ ಪಡೆಯಬಹುದು. ಪ್ರತಿ ತಾಲೂಕಿನ ಸಂಚಾರಿ ಒಬ್ಬ ಪಶುವೈದ್ಯರು, ಒಬ್ಬ ಅರೆ ತಾಂತ್ರಿಕ ಸಿಬ್ಬಂದಿ, ಒಬ್ಬ ಚಾಲಕ ಕಂ ಅಟೆಂಡರ್ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಲಿನ ಪ್ರಮಾಣದಲ್ಲಿ ಏರಿಕೆ: ಸಕಾಲಕ್ಕೆ ಸರಿಯಾಗಿ ಜಾನುವಾರುಗಳಿಗೆ ಲಸಿಕೆ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸೂಕ್ತ ಜಿಲ್ಲೆಯಲ್ಲಿ ಚಿಕಿತ್ಸೆ ಹಾಲು ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023-24ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 6.90 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗಿತ್ತು. 2025-26ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 9.27 ಲಕ್ಷ ಲೀಟರ್ ದಾಖಲೆಯ ಪ್ರಮಾಣದ ಹಾಲು ಉತ್ಪಾದನೆಯಾಗಿದೆ. ಹಿಂದಿನ ಸಾಲಿಗೆ ಹೋಲಿಕೆ ಮಾಡಿದರೆ 2.37 ಲಕ್ಷ ಲೀಟರ್‌ನಷ್ಟು ಹೆಚ್ಚುವರಿ ಹಾಲು ಉತ್ಪಾದನೆಯಾಗಿದೆ.

image

ಜಾನುವಾರುಗಳನ್ನು ಪಶುವೈದ್ಯ ಆಸ್ಪತ್ರೆಗೆ ಕರೆ ತರುವುದು ಕಷ್ಟದ ಕೆಲಸ. ಹೀಗಾಗಿ ಜಾನುವಾರು ಗಳು ಇರುವಲ್ಲಿಯೇ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿರುವ ಸಂಚಾರಿ ಪಶುಚಿಕಿತ್ಸಾ ಘಟಕಕ್ಕೆ ನಮ್ಮ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು.

- ಡಾ.ನಾಗರಾಜ್, ಉಪ ನಿರ್ದೇಶಕ, ಪಶುಪಾಲನಾ ಸೇವಾ ಇಲಾಖೆ, ಮೈಸೂರು