ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajith Kumar: ಸಿನಿ ಜರ್ನಿಗೆ 33 ವರ್ಷ-ತಮಿಳು ನಟ ಅಜಿತ್ ಕುಮಾರ್ ಸ್ಪೆಶಲ್‌ ಪೋಸ್ಟ್‌

ನಟ ಅಜಿತ್ ಕುಮಾರ್ ಅವರು ಚಿತ್ರರಂಗಕ್ಕೆ ಬಂದು ಬರೋಬ್ಬರಿ 33 ವರ್ಷ ಕಳೆದಿದ್ದು, ಈ ಸಂಭ್ರಮಾಚರಣೆಗೆ ಅವರ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ. ಇದರ ಬೆನ್ನಲ್ಲೆ ನಟ ಅಜಿತ್ ಅವರು ತಮ್ಮ ಈ ಸುಧೀರ್ಘ ಜರ್ನಿಗೆ ಪತ್ನಿ ಶಾಲಿನಿ ಅವರ ಸಪೋರ್ಟ್ ಕಾರಣ ಎಂಬರ್ಥದಲ್ಲಿ ವಿಶೇಷ ಪೋಸ್ಟ್ ಹಂಚಿ ಕೊಂಡಿದ್ದಾರೆ. ಅವರ 33 ವರ್ಷಗಳ ಸಿನಿಮಾ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ ಅದರ ಜೊತೆಗೆ ತಮ್ಮ ವೃತ್ತಿಜೀವನದಲ್ಲಿ ಎಲ್ಲ ಏಳು ಬೀಳು ದಾಟಲು ತಮ್ಮ ಪತ್ನಿ ಶಾಲಿನಿ ಸಾಥ್ ನೀಡಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಜಿತ್ ಕುಮಾರ್ 33 ವರ್ಷದ ಸಿನಿಮಾ ಜರ್ನಿ ಬಗ್ಗೆ ಭಾವನಾತ್ಮಕ ಪೋಸ್ಟ್!

Profile Pushpa Kumari Aug 5, 2025 4:57 PM

ನವದೆಹಲಿ: 'ಬಿಲ್ಲ', 'ವೇದಾಲಂ', 'ವಿಶ್ವಾಸಂ', 'ಆರಂಭಂ', 'ವೀರಂ', 'ಸಿಟಿಜನ್' ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ತಮಿಳು ನಟ ಅಜಿತ್ ಕುಮಾರ್ (Ajith Kumar) ಅವರು ತಮ್ಮ ಅದ್ಭುತ ಅಭಿನಯದಿಂದಲೇ ಅಪಾರ ಅಭಿಮಾನಿಗಳ ಮನಗೆದ್ದ ಸೂಪರ್ ಸ್ಟಾರ್ ನಟರಾಗಿದ್ದಾರೆ. ನಟ ಅಜಿತ್ ಕುಮಾರ್ ಅವರು ಚಿತ್ರರಂಗಕ್ಕೆ ಬಂದು ಬರೋಬ್ಬರಿ 33 ವರ್ಷ ಕಳೆದಿದ್ದು ಈ ಸಂಭ್ರಮಾಚರಣೆಗೆ ಅವರ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ. ಇದರ ಬೆನ್ನಲ್ಲೆ ನಟ ಅಜಿತ್ ಅವರು ತಮ್ಮ ಈ ಸುಧೀರ್ಘ ಜರ್ನಿಗೆ ಪತ್ನಿ ಶಾಲಿನಿ ಅವರ ಸಪೋರ್ಟ್ ಕಾರಣ ಎಂಬರ್ಥದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ 33 ವರ್ಷಗಳ ಸಿನಿಮಾ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ ಅದರ ಜೊತೆಗೆ ತಮ್ಮ ವೃತ್ತಿಜೀವನದಲ್ಲಿ ಎಲ್ಲ ಏಳು ಬೀಳು ದಾಟಲು ತಮ್ಮ ಪತ್ನಿ ಶಾಲಿನಿ ಸಾಥ್ ನೀಡಿದ್ದಾರೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ನಟ ಅಜಿತ್ ಕುಮಾರ್ ಅವರ ವಿಶೇಷ ಅಭಿನಯಕ್ಕೆ ಈ ವರ್ಷ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಲಭಿಸಿದ್ದು, ಸಿನಿಮಾ ಹಾಗೂ ವೈಯಕ್ತಿಕ ಬದುಕಿಗೆ ಅವರ ಪತ್ನಿ ಶಾಲಿನಿಯ ಸಹಕಾರವೇ ಮೈಲಿಗಲ್ಲು ಎಂಬುದನ್ನು ಇತ್ತೀಚೆಗೆ ಪೋಸ್ಟ್ ನಲ್ಲಿ ಅವರು ತಿಳಿಸಿದ್ದಾರೆ. ಈ ಮೂಲಕ ಅವರ ಪೋಸ್ಟ್ ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಅಜಿತ್ ಕುಮಾರ್ ತಮ್ಮ ಸಿನಿಮಾ ಜರ್ನಿ ಕುರಿತಾದ ಪೋಸ್ಟ್ ನಲ್ಲಿ ಸಿನಿಮಾ ಎಂಬ ಈ ಅಸಾಧಾರಣ ಪ್ರಯಾಣದಲ್ಲಿ ನಾನು 33 ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ ಎಂಬುದು ನನಗೂ ಆಶ್ಚರ್ಯ. ಆದರೆ ಇದನ್ನು ಆಚರಿಸಲು ನಾನು ಇಷ್ಟಪಡಲಾರೆ. ಹಾದುಹೋಗುವ ಪ್ರತೀ ವರ್ಷವೂ ಒಂದು ಹೆಗ್ಗುರುತು ವರ್ಷ ಎಂದು ನಾನು ಭಾವಿಸುವೆನು. ನಿಮ್ಮೆಲ್ಲರಿಗೂ ವಿಶೇಷ ಧನ್ಯವಾದ ಹೇಳುತ್ತೇನೆ. ಈ ಪ್ರಯಾಣ ಎಂದಿಗೂ ಸುಲಭವಾಗಿರಲಿಲ್ಲ. ಈ ಸಿನಿಮಾ ಜೀವನದಲ್ಲಿ ಹಿನ್ನಡೆಗಳು, ವೈಫಲ್ಯಗಳು ಅನೇಕ ಸಲ ನೋಡಿದ್ದೇನೆ.ಆದರೆ ನಾನು ಈ ಬಗ್ಗೆ ಹೆಚ್ಚು ಧೃತಿಗೆಡಲಿಲ್ಲ. ನಟನಾ ಪ್ರಯಾಣದಲ್ಲಿ ತಾವು ಕೆಲಸ ಮಾಡಿದ ನಿರ್ದೇಶಕರು, ನಿರ್ಮಾಪಕರು, ಬರಹಗಾರರು ಮತ್ತು ತಮ್ಮ ಪತ್ಮಿ ಶಾಲಿನಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವೆನು. ಶಾಲಿನಿ ಅವರ ಸಹಕಾರವೇ ಸಾಧನೆಗೆ ಸ್ಫೂರ್ತಿಯಾಯಿತು ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:Kingdom Movie: ʼಕಿಂಗ್‌ಡಮ್ʼ ನಟ ವಿಜಯ್ ದೇವರಕೊಂಡ ಸಿನಿಮಾ ಕೆರಿಯರ್‌ಗೆ ಬಿಗ್ ಸಕ್ಸಸ್ ನೀಡುತ್ತಾ? ಫ್ಯಾನ್ಸ್‌ ಏನಂದ್ರು?

ಅವರ ಪತ್ನಿ ನಟಿ ಶಾಲಿನಿ ಅವರು ಕೂಡ ಅಜಿತ್ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. 33 ವರ್ಷಗಳ ಸಿನಿಮಾ ಜರ್ನಿಗೆ ಶುಭಾಶಯಗಳು. ನೀವು ಕೇವಲ ವೃತ್ತಿಜೀವನವನ್ನು ನಿರ್ಮಿ ಸಿಲ್ಲ ನೀವು ಜನರ ಪ್ರೀತಿ ಹೊಂದಿದ್ದೀರಿ, ಅವರ ಜೀವನವನ್ನು ಬದಲಾಯಿಸಿದ್ದೀರಿ. ಒಳ್ಳೆ ಉದ್ದೇಶದಿಂದ ಅನೇಕ ಜನಪರ ಕಾರ್ಯ ಮಾಡಿದ್ದೀರಿ. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ಎಂದು ಬರೆದು ಕೊಂಡಿದ್ದ ಪೋಸ್ಟ್ ಹಂಚಿಕೊಂಡಿದ್ದಾರೆ.

1990 ರ 'ಎನ್ ವೀಡು ಎನ್ ಕನವರ್' ಎಂಬ ತಮಿಳು ಚಿತ್ರದಲ್ಲಿ ನಟ ಅಜಿತ್ ಅವರು ಸಣ್ಣ ಪಾತ್ರವನ್ನು ನಿರ್ವಹಿಸಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ 1993 ರ ಅಮರಾವತಿ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿ ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಅಜಿತ್ ಕುಮಾರ್ ಮತ್ತು ಶಾಲಿನಿ 1999 ರಲ್ಲಿ ಸರನ್ ಅವರ 'ಅಮರ್ಕಳಂ' ಚಿತ್ರದ ಸೆಟ್‌ನಲ್ಲಿ ಭೇಟಿಯಾಗಿದ್ದರು. ಮೊದಲು ಸ್ನೇಹವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. 2000ರಲ್ಲಿ ಅವರು ವಿವಾಹವಾಗಿದ್ದಾರೆ. ಈ ದಂಪತಿಗೆ ಅನುಷ್ಕಾ ಮತ್ತು ಆದ್ವಿಕ್ ಹೆಸರಿನ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈ ವರ್ಷ ಅವರು ತಮ್ಮ 25ನೇ ಮದುವೆ ವಾರ್ಷಿಕೋತ್ಸವವನ್ನು ಕೂಡ ಆಚರಿಸಿಕೊಂಡಿದ್ದರು.