Muddu Sose: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮುದ್ದು ಸೊಸೆ’ ಧಾರಾವಾಹಿಯ ಕ್ವಾಟ್ಲೆ ನಿಶಿತ್ ರಾಜ್ ಶೆಟ್ಟಿ
nishith Raj Shetty: 'ಮುದ್ದು ಸೊಸೆ' ಧಾರಾವಾಹಿಯಲ್ಲಿ ಕ್ವಾಟ್ಲೆ ಎಂಬ ಪಾತ್ರ ಮಾಡುತ್ತಿರುವ ನಟ ನಿಶಿತ್ ರಾಜ್ ಶೆಟ್ಟಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತ್ರಿವಿಕ್ರಮ್ ಈ ಧಾರಾವಾಹಿಯ ನಾಯಕ. ನಾಯಕಿ ಪಾತ್ರದಲ್ಲಿ ಪ್ರತಿಮಾ ಠಾಕೂರ್ ನಟಿಸುತ್ತಿದ್ದಾರೆ. ಇವರಿಬ್ಬರಿಗೂ ಆತ್ಮೀಯವಾದ ಪಾತ್ರ ‘ಕ್ವಾಟ್ಲೆ’ ಈ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ನಿಶಿತ್ ರಾಜ್ ಶೆಟ್ಟಿ . ಧಾರಾವಾಹಿಯಲ್ಲಿ ಭದ್ರೇ ಗೌಡ್ರ ಸ್ನೇಹಿತ ಕ್ವಾಟ್ಲೆ ಪಾತ್ರದಲ್ಲಿ ನಟಿಸುತ್ತಿರುವ ನಿಶಿತ್ ರಾಜ್ ಶೆಟ್ಟಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುದ್ದು ಸೊಸೆ ಧಾರಾವಾಹಿ ನಟ -
'ಮುದ್ದು ಸೊಸೆ' (Muddu Sose Serial) ಧಾರಾವಾಹಿಯಲ್ಲಿ ಕ್ವಾಟ್ಲೆ (Kwatle) ಎಂಬ ಪಾತ್ರ ಮಾಡುತ್ತಿರುವ ನಟ ನಿಶಿತ್ ರಾಜ್ ಶೆಟ್ಟಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತ್ರಿವಿಕ್ರಮ್ (Trivikram) ಈ ಧಾರಾವಾಹಿಯ ನಾಯಕ. ನಾಯಕಿ ಪಾತ್ರದಲ್ಲಿ ಪ್ರತಿಮಾ ಠಾಕೂರ್ ನಟಿಸುತ್ತಿದ್ದಾರೆ. ಇವರಿಬ್ಬರಿಗೂ ಆತ್ಮೀಯವಾದ ಪಾತ್ರ ‘ಕ್ವಾಟ್ಲೆ’ ಈ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ನಿಶಿತ್ ರಾಜ್ ಶೆಟ್ಟಿ (nishith Raj Shetty) . ಧಾರಾವಾಹಿಯಲ್ಲಿ ಭದ್ರೇ ಗೌಡ್ರ ಸ್ನೇಹಿತ ಕ್ವಾಟ್ಲೆ ಪಾತ್ರದಲ್ಲಿ ನಟಿಸುತ್ತಿರುವ ನಿಶಿತ್ ರಾಜ್ ಶೆಟ್ಟಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ.
ಹುಡುಗಿ ಯಾರು?
ನಿಶಿತ್ ರಾಜ್ ಫೆಬ್ರುವರಿ 10ರಂದು ಅಭಿತಾ ತನು ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದು. ಒಂದಿಷ್ಟು ಸುಂದರ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮದುವೆಯಾಗಿರುವುದಾಗಿ ನಟ ತಿಳಿಸಿದ್ದಾರೆ.
ಇದನ್ನೂ ಓದಿ: Amruthadhaare Serial : ಭೂಮಿ ಕೈಗೆ ಸಿಕ್ಕಿಬೀಳ್ತಾರಾ ಮಲ್ಲಿ-ಸುನಿ?
ನಿಶಿತ್ ಇನ್‌ಸ್ಟಾದಲ್ಲಿ ನಮ್ಮ ಮನೆಯ ಮೆಟ್ಟಿಲುಗಳ ಬಳಿ ನಡೆದ ಮೊದಲ ಮಾತುಕತೆಯಿಂದಲೇ ನಮ್ಮ ಹೃದಯಕ್ಕೆ ತಿಳಿದಿತ್ತು. ಇಂದಿನಿಂದ ಮುಂದೆ, ನಾವಿಬ್ಬರು ಒಂದಾಗುತ್ತೇವೆ ಎಂದು..So blessed to be Mr. And Mrs ಎಂದು ಬರೆದುಕೊಂಡಿದ್ದಾರೆ.
ನಿಶಿತ್ ರಾಜ್ ಶೆಟ್ಟಿ ಮತ್ತು ಅಭಿತಾ ಶೆಟ್ಟಿ ಪ್ರೀತಿ ಹಲವು ವರ್ಷಗಳದ್ದು. ರಂಗಭೂಮಿ ಹಿನ್ನಲೆ ಹೊಂದಿರುವ ನಿಶಿತ್, ಮೈಸೂರಿನ ರಂಗಾಯಣದಲ್ಲಿ ತರಬೇತಿ ಪಡೆದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಶ್ರೀಗೌರಿ' ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶ ಪಡೆದರು. ನಟ ತ್ರಿವಿಕ್ರಮ್, ನಟಿ ಆರೋಹಿ ನೈನಾ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: Vijay Devarakonda: ಮಾಜಿ ಗೆಳತಿ ಜೊತೆಗಿನ ವಿಜಯ್ ದೇವರಕೊಂಡ ಫೋಟೋ ವೈರಲ್!
ಪರಸ್ಪರ ಅಣ್ತಮ್ಮಾ ಎಂದು ಪ್ರೀತಿಯಿಂದ ಕರೆದುಕೊಳ್ತಾರೆ ತ್ರಿವಿಕ್ರಮ್-ನಿಶಿತ್. ಮದುವೆ ಫೋಟೋ ಜೊತೆಗೆ ತಾವೇ ತಮ್ಮ ಕೈಯಾರೆ ಬರೆದ ಪತ್ರವನ್ನೂ ಪೋಸ್ಟ್ ಮಾಡಿದ್ದರು. ಅಂದ್ಹಾಗೆ, ‘ಮುದ್ದು ಸೊಸೆ’ ಸೀರಿಯಲ್‌ನಲ್ಲಿ ತ್ರಿವಿಕ್ರಮ್, ಪ್ರತಿಮಾ ಠಾಕೂರ್, ಮುನಿ ಮುಂತಾದವರು ಅಭಿನಯಿಸುತ್ತಿದ್ದಾರೆ.