Father's Day 2025: ಫಾದರ್ಸ್ ಡೇಗೆ ಫ್ಯಾಮಿಲಿಯ ಕ್ಯೂಟ್ ವಿಡಿಯೋ ಹಂಚಿಕೊಂಡ ರಾಕಿಂಗ್ ಸ್ಟಾರ್; ಬೆಸ್ಟ್ ಫಾದರ್ ಎಂದ ರಾಧಿಕಾ ಪಂಡಿತ್
ನಟ ಯಶ್ ಅವರು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಪತ್ನಿ ಹಾಗೂ ಮಕ್ಕಳ ಜೊತೆಗಿನ ಫೋಟೊಗಳನ್ನು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಅಂತೆಯೇ ಇವರ ಪತ್ನಿ ರಾಧಿಕಾ ಪಂಡಿತ್ ಕೂಡ ಸೋಶಿಯಲ್ ಮಿಡಿ ಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು ಮಕ್ಕಳ ಆರೈಕೆ, ಫನ್ನಿ ಕ್ಷಣಗಳ ಫೋಟೊ, ವಿಡಿಯೋ ಸಹ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ರಾಧಿಕಾ ಅವರು ತಮ್ಮ ಪತಿ ಮತ್ತು ಮಕ್ಕಳ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ

Radhika Pandit and Yash

ನವದೆಹಲಿ: ರಾಕಿಂಗ್ ಸ್ಟಾರ್, ಕೆಜಿಎಫ್ ಸ್ಟಾರ್ ಯಶ್ (Yash) ಅವರು ಸಿನಿಮಾ ಹೊರತಾಗಿ ವೈಯಕ್ತಿಕ ವಿಚಾರದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ನಟ ರಾಕಿಂಗ್ ಸ್ಟಾರ್ ಯಶ್ ಅವರು ಸ್ಯಾಂಡಲ್‌ವುಡ್ ಬ್ಯೂಟಿ ಕ್ವೀನ್ ರಾಧಿಕಾ ಪಂಡಿತ್ ಅವರನ್ನು ವಿವಾಹವಾಗಿದ್ದು ಇಬ್ಬರು ಮುದ್ದಿನ ಮಕ್ಕಳ ಆರೈಕೆಯಲ್ಲಿ ಕೂಡ ಫುಲ್ ಬ್ಯುಸಿಯಾಗಿದ್ದಾರೆ. ನಟ ಯಶ್ ಅವರು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಪತ್ನಿ ಹಾಗೂ ಮಕ್ಕಳ ಜೊತೆಗಿನ ಫೋಟೊಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಅಂತೆಯೇ ಇವರ ಪತ್ನಿ ರಾಧಿಕಾ ಪಂಡಿತ್ (Radhika Pandit) ಕೂಡ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು ಮಕ್ಕಳ ಆರೈಕೆ, ಫನ್ನಿ ಕ್ಷಣಗಳ ಫೋಟೊ, ವಿಡಿಯೋ ಸಹ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ರಾಧಿಕಾ ಅವರು ತಮ್ಮ ಪತಿ ಮತ್ತು ಮಕ್ಕಳ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಬಿಡುವಿನ ಸಮಯವನ್ನು ಹೆಚ್ಚಾಗಿ ತಮ್ಮ ಫ್ಯಾಮಿಲಿ ಜೊತೆಗೆ ಕಳೆಯಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರು ಇದೀಗ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತಂದೆ-ಮಕ್ಕಳು ಆಟವಾಡುತ್ತಾ ಖುಷಿಯ ಕ್ಷಣ ಕಳೆದಿದ್ದಾರೆ. ನಟಿ ರಾಧಿಕಾ ಪಂಡಿತ್ ಈ ವಿಡಿಯೋವನ್ನು ವಿಶೇಷ ಕ್ಯಾಪ್ಶನ್ ಮೂಲಕ ಹಂಚಿಕೊಂಡಿದ್ದಾರೆ. ಮಕ್ಕಳಿಗಾಗಿ ಸರ್ವ ತ್ಯಾಗ ಮಾಡುವ ವಿಶ್ವದ ಅತ್ಯುತ್ತಮ ತಂದೆಗೆ ಫಾದರ್ಸ್ ಡೇಯ ಶುಭಾಶಯಗಳು ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಕ್ಕಳ ಜೊತೆಗೆ ಮಕ್ಕಳಾಗುವ ರಾಕಿ ಭಾಯ್ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ವೈರಲ್ ಆದ ವಿಡಿಯೋ ಕಂಡು ನೆಟ್ಟಿಗರು ನಾನಾ ಬಗೆಯಲ್ಲಿ ಕಮೆಂಟ್ ಹಾಕಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜಗತ್ತು ಕಂಡ ಶ್ರೇಷ್ಠ ನಟ ಮಾತ್ರ ಅಲ್ಲ ಓರ್ವ ಬೆಸ್ಟ್ ತಂದೆ ಕೂಡ ಹೌದು ಎನ್ನಲು ಈ ವಿಡಿಯೋ ಉತ್ತಮ ಉದಾಹರಣೆ ಎಂದು ಬಳಕೆ ದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಅದೆಷ್ಟೇ ದೊಡ್ಡ ಸ್ಟಾರ್ ಸೆಲೆಬ್ರಿಟಿಯಾದರೂ ಮಕ್ಕಳ ಪಾಲಿಗೆ ಮುದ್ದಿನ ತಂದೆಯಾಗಿ ಯಶ್ ಸರಳತೆ ಮೆರೆದಿದ್ದಾರೆ ಎಂಬ ಮೆಚ್ಚುಗೆಯ ಕಮೆಂಟ್ ಬಂದಿದೆ.
ಇದನ್ನು ಓದಿ: 45 Movie: ‘45’ ಚಿತ್ರದ ಪ್ರಮೋಷನ್ ಹಾಡಿಗೆ ನೃತ್ಯಕ್ಕಾಗಿ ಉಗಾಂಡದಿಂದ ಆಗಮಿಸಿದ ನೃತ್ಯಗಾರರು!
ಯಶ್ ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅವರು ಆದಿಲಕ್ಷ್ಮೀ ಪುರಾಣ ಸಿನಿಮಾದಲ್ಲಿ ಕೊನೆದಾಗಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿ ದಿದ್ದಾರೆ. ಯಶ್ ಮತ್ತು ರಾಧಿಕಾ ಅವರು ಜಾಹೀರಾತಿನಲ್ಲಿ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದು ಶೀಘ್ರವೇ ಅವರು ತೆರೆಗೆ ವಾಪಾಸ್ ಆಗಬೇಕು ಎಂಬುದು ಅಭಿಮಾನಿಗಳ ಮನದಾಸೆಯಾಗಿದೆ.