ಬ್ಯಾಂಕ್ ಆಫ್ ಇಂಡಿಯಾ: FY26 ರ ನಿವ್ವಳ ಲಾಭ ₹10,527 ಕೋಟಿ, ಲಾಭಾಂಶ 14.19% ನಷ್ಟು ಏರಿಕೆ
ಬ್ಯಾಂಕಿನ ಗ್ಲೋಬಲ್ ಬಿಸಿನೆಸ್ ಮಿಕ್ಸ್ ವರ್ಷದಿಂದ ವರ್ಷಕ್ಕೆ 14.57% ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ₹16.98 ಲಕ್ಷ ಕೋಟಿಯನ್ನು ದಾಟಿದೆ. ಜಾಗತಿಕ ಮಟ್ಟದಲ್ಲಿ ಠೇವಣಿಗಳು ವರ್ಷದಿಂದ ವರ್ಷಕ್ಕೆ 13.56% ಹೆಚ್ಚಳವಾಗಿದೆ ಮತ್ತು ₹ 9.27 ಲಕ್ಷ ಕೋಟಿಯನ್ನು ದಾಟಿದೆ. ಗ್ಲೋಬಲ್ ಅಡ್ವಾನ್ಸ್‌ಗಳು 15.82% ವರ್ಷದಿಂದ ವರ್ಷಕ್ಕೆ ಬೆಳೆದು ₹ 7.71 ಲಕ್ಷ ಕೋಟಿಯನ್ನು ದಾಟಿದೆ.
-
ಬ್ಯಾಂಕ್ ಆಫ್ ಇಂಡಿಯಾವು ವರ್ಷ 26 ರ ತನ್ನ ಫಲಿತಾಂಶಗಳನ್ನು ಪ್ರಕಟಿಸಿದೆ. ವರ್ಷ 26 ರಲ್ಲಿ ನಿವ್ವಳ ಲಾಭವು ₹ 10,527 ಕೋಟಿಗೆ ಏರಿಕೆ ಆಗಿದ್ದು, ಲಾಭಾಂಶದಲ್ಲಿ 14.19% ವರ್ಷದಿಂದ ವರ್ಷಕ್ಕೆ ಬೆಳವಣಿಗೆಗೆ ಸಾಕ್ಷಿಯಾಗಿದೆ. ವರ್ಷ 26ರ 4 ನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ₹ 3,016 ಕೋಟಿ ಆಗಿದ್ದು ಲಾಭಾಂಶದಲ್ಲಿ 14.85% ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದೆ. ವರ್ಷ 26ರ 4 ನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ROA ಮತ್ತು ROE ಅನುಕ್ರಮವಾಗಿ 1.01% ಮತ್ತು 16.36% ಏರಿಕೆಯನ್ನು ಕಂಡಿದೆ.
ವರ್ಷ 26 ಕ್ಕೆ ಬ್ಯಾಂಕ್‌ನ ಕಾರ್ಯಾಚರಣಾ ಲಾಭವು ₹ 17,049 ಕೋಟಿಗಳಿಗೆ ಏರಿಕೆಯಾಗಿದೆ ಮತ್ತು ವರ್ಷ 26ರ 4 ನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಲಾಭವು ₹ 5,026 ಕೋಟಿ ಗಳಷ್ಟು ಸುಧಾರಣೆ ಸಾಧಿಸಿದೆ.
ಬ್ಯಾಂಕಿನ ಗ್ಲೋಬಲ್ ಬಿಸಿನೆಸ್ ಮಿಕ್ಸ್ ವರ್ಷದಿಂದ ವರ್ಷಕ್ಕೆ 14.57% ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ₹16.98 ಲಕ್ಷ ಕೋಟಿಯನ್ನು ದಾಟಿದೆ. ಜಾಗತಿಕ ಮಟ್ಟದಲ್ಲಿ ಠೇವಣಿ ಗಳು ವರ್ಷದಿಂದ ವರ್ಷಕ್ಕೆ 13.56% ಹೆಚ್ಚಳವಾಗಿದೆ ಮತ್ತು ₹ 9.27 ಲಕ್ಷ ಕೋಟಿಯನ್ನು ದಾಟಿದೆ. ಗ್ಲೋಬಲ್ ಅಡ್ವಾನ್ಸ್‌ಗಳು 15.82% ವರ್ಷದಿಂದ ವರ್ಷಕ್ಕೆ ಬೆಳೆದು ₹ 7.71 ಲಕ್ಷ ಕೋಟಿಯನ್ನು ದಾಟಿದೆ. ಸಾಗರೋತ್ತರ ಮುಂಗಡಗಳು 14.25% ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ₹1.17 ಲಕ್ಷ ಕೋಟಿಗಳನ್ನು ಮುಟ್ಟಿದೆ.
ಇದನ್ನೂ ಓದಿ: ಡಿಜಿಟಲ್ ಪಾವತಿಯಲ್ಲಿ ಹೊಸ ಹಂತ: Flipkart ಮತ್ತು Axis Bankರಿಂದ ಬಯೋಮೆಟ್ರಿಕ್ ದೃಢೀಕರಣ
ಚಿಲ್ಲರೆ ಮುಂಗಡಗಳು 21.19% ವರ್ಷದಿಂದ ವರ್ಷಕ್ಕೆ ಹೆಚ್ಚಳವನ್ನು ಕಂಡಿದೆ, MSME ಮುಂಗಡಗಳು 17.68% ವರ್ಷದಿಂದ ವರ್ಷಕ್ಕೆ ಸುಧಾರಿಸಿದೆ ಹಾಗೂ ಮುಂದುವರೆದು ಕೃಷಿ ಮುಂಗಡಗಳು 17.60% ವರ್ಷದಿಂದ ವರ್ಷಕ್ಕೆ ಮತ್ತು ಕಾರ್ಪೊರೇಟ್ ಮುಂಗಡಗಳು 12.08% ವರ್ಷದಿಂದ ವರ್ಷಕ್ಕೆ, RAM ಮುಂಗಡಗಳ ಪಾಲು 58.74% ಕ್ಕೆ ಹೆಚ್ಚಳ ಕಂಡಿದೆ. ಬ್ಯಾಂಕಿನ CASA ಠೇವಣಿಗಳು ವರ್ಷದಿಂದ ವರ್ಷಕ್ಕೆ 7.30% ಹೆಚ್ಚಾಗಿದ್ದು CASA ಅನುಪಾ ತವು 31 ಮಾರ್ಚ್ 2026 ಕ್ಕೆ 37.64% ರಷ್ಟಿದೆ.
ಒಟ್ಟು NPA ಅನುಪಾತವು 1.98% ಇದ್ದು 129 bps ವರ್ಷದಿಂದ ವರ್ಷಕ್ಕೆ ಹೆಚ್ಚಳವನ್ನು ಕಂಡಿದೆ. ನಿವ್ವಳ NPA ಅನುಪಾತವು 0.56% ರಷ್ಟಿದ್ದು 26 bps ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ವರ್ಷ 26 ರಲ್ಲಿ ಕ್ರೆಡಿಟ್ ವೆಚ್ಚವು 28 bps ಇದ್ದು ವರ್ಷದಿಂದ ವರ್ಷಕ್ಕೆ 0.48% ರಷ್ಟು ಬೆಳೆದಿದೆ.
31.03.2026 ರಂತೆ ಬಂಡವಾಳದ ಸಮರ್ಪಕತೆ ಅನುಪಾತ (CRAR) 18.01% ರಷ್ಟಿದೆ.
ಡಿಜಿಟಲ್ ಮತ್ತು ಪರ್ಯಾಯ ಚಾನೆಲ್‌ಗಳನ್ನು ಪರಿಗಣಿಸಿದಲ್ಲಿ, ವರ್ಷ 26 ರ ಅವಧಿ ಯಲ್ಲಿ 51 ಲಕ್ಷ+ ಗ್ರಾಹಕರು ಸೇರ್ಪಡೆಗೊಂಡರು, ಇದರಿಂದಾಗಿ ಒಟ್ಟು UPI ಗ್ರಾಹಕರು 271 ಲಕ್ಷ+ ಆಗಿದೆ. ಪರ್ಯಾಯ ವಿತರಣಾ ಚಾನೆಲ್‌ಗಳ ಮೂಲಕ ನಡೆಸಿರುವ ವಹಿವಾಟುಗಳ ಸಂಖ್ಯೆಯು 7.6 ಶತಕೋಟಿಗೆ ಏರಿಕೆಯಾಗಿದೆ, ಇದು 22% ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಯನ್ನು ಸೂಚಿಸುತ್ತದೆ