ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

30 ವರ್ಷಗಳ ಕಾರ್ಯಾಚರಣೆ ಪೂರೈಸಿದ ಸಂಭ್ರಮದಲ್ಲಿ ಡಿ.ಇ.ಶಾ ಇಂಡಿಯಾ ಸಂಸ್ಥೆ: ಹೈದರಾಬಾದ್‌ನಲ್ಲಿ ಹೊಸ ಕಚೇರಿ ತೆರೆಯುವುದಾಗಿ ಘೋಷಣೆ

ಡಿ.ಇ. ಶಾ ಇಂಡಿಯಾ ಸಂಸ್ಥೆಯು ತನ್ನ ಮೊದಲ ಕಚೇರಿಯನ್ನು 1996 ರಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭಿಸಿತು ಮತ್ತು 2023 ರಲ್ಲಿ ಬೆಂಗಳೂರು ಮತ್ತು ಗುರುಗ್ರಾಮಗಳಲ್ಲಿಯೂ ಕಚೇರಿಗಳನ್ನು ತೆರೆಯಿತು. ಇಂದು, ಈ ಮೂರೂ ಸ್ಥಳಗಳಲ್ಲಿರುವ ತಂಡಗಳು ಡಿ. ಇ. ಶಾ ಗ್ರೂಪ್‌ಗಾಗಿ ತಂತ್ರಜ್ಞಾನ ವನ್ನು ಅಭಿವೃದ್ಧಿಪಡಿಸಲು ಮತ್ತು ಸಂಶೋಧನೆ ಹಾಗೂ ಕಾರ್ಯಾಚರಣೆಯ ಸೇವೆಗಳನ್ನು ಒದಗಿಸಲು ಪ್ರಪಂಚದಾದ್ಯಂತ ಇರುವ ತಮ್ಮ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುತ್ತಿವೆ.

30 ವರ್ಷಗಳ ಪೂರೈಸಿದ ಸಂಭ್ರಮದಲ್ಲಿ ಡಿ.ಇ.ಶಾ ಇಂಡಿಯಾ ಸಂಸ್ಥೆ

-

Profile
Ashok Nayak Oct 10, 2026 6:09 PM

ಡಿ.ಇ.ಶಾ ಗ್ರೂಪ್‌ನ ಭಾಗವಾಗಿರುವ ಡಿ. ಇ. ಶಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು, ಭಾರತದಲ್ಲಿ ತನ್ನ 30 ವರ್ಷಗಳ ಯಶಸ್ವಿ ಕಾರ್ಯಾಚರಣೆ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಹೈದರಾಬಾದ್‌ನ ನಿಯೋ ಪೊಲಿಸ್‌ನಲ್ಲಿರುವ ಗ್ರಾವಾ ಬಿಸಿನೆಸ್‌ ಪಾರ್ಕ್‌ನಲ್ಲಿ ತನ್ನ ಹೊಸ ಕಚೇರಿ ಪ್ರಾರಂಭಿಸುವುದಾಗಿ ಘೋಷಿಸಿದೆ.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತೆಲಂಗಾಣ ಸರ್ಕಾರದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಮತ್ತು ಸಂವಹನ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾದ ಡಿ. ಶ್ರೀಧರ್‌ ಬಾಬು, ಇತರ ಸರ್ಕಾರಿ ಪ್ರತಿನಿಧಿಗಳು ಮತ್ತು ಡಿ. ಇ. ಶಾ ಗ್ರೂಪ್‌ನ ಪ್ರಮುಖ ನಾಯಕರು ಭಾಗವಹಿಸಿದ್ದರು.

ಡಿ.ಇ. ಶಾ ಇಂಡಿಯಾ ಸಂಸ್ಥೆಯು ತನ್ನ ಮೊದಲ ಕಚೇರಿಯನ್ನು 1996 ರಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭಿಸಿತು ಮತ್ತು 2023 ರಲ್ಲಿ ಬೆಂಗಳೂರು ಮತ್ತು ಗುರುಗ್ರಾಮಗಳಲ್ಲಿಯೂ ಕಚೇರಿಗಳನ್ನು ತೆರೆಯಿತು. ಇಂದು, ಈ ಮೂರೂ ಸ್ಥಳಗಳಲ್ಲಿರುವ ತಂಡಗಳು ಡಿ. ಇ. ಶಾ ಗ್ರೂಪ್‌ಗಾಗಿ ತಂತ್ರಜ್ಞಾನ ವನ್ನು ಅಭಿವೃದ್ಧಿಪಡಿಸಲು ಮತ್ತು ಸಂಶೋಧನೆ ಹಾಗೂ ಕಾರ್ಯಾಚರಣೆಯ ಸೇವೆಗಳನ್ನು ಒದಗಿಸಲು ಪ್ರಪಂಚದಾದ್ಯಂತ ಇರುವ ತಮ್ಮ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುತ್ತಿವೆ.

ಇದನ್ನೂ ಓದಿ: Gavisiddesh K Column: ಮಹಾಲಯದ ಮಹಾತ್ಮೆ: ಸ್ಮರಣೆಯಿಂದ ಸಂಸ್ಕಾರದವರೆಗೆ

“ಹೂಡಿಕೆ ಮತ್ತು ತಂತ್ರಜ್ಞಾನವು 30 ವರ್ಷಗಳಲ್ಲಿ ಗಣನೀಯವಾಗಿ ಬದಲಾಗಿವೆ ಮತ್ತು ನಮ್ಮ ಡಿ. ಇ. ಶಾ ಇಂಡಿಯಾದ ಸಹೋದ್ಯೋಗಿಗಳು ಸಂಸ್ಥೆಗೆ ಒದಗಿಸುವ ಕಠಿಣ ಪರಿಶ್ರಮ ಹಾಗೂ ಕೌಶಲ್ಯ ಗಳು, ನಾವು ಮುಂಚೂಣಿಯಲ್ಲಿ ಮುಂದುವರಿಯಲು ಸಹಾಯ ಮಾಡಿವೆ. ನಾವು ಅತ್ಯುನ್ನತ ಕಾರ್ಯಕ್ಷಮತೆಯ ಡೇಟಾ ಮತ್ತು ಕಂಪ್ಯೂಟ್‌ ಮೂಲಸೌಕರ್ಯ, ನವೀನ AI ಸಾಧನಗಳು ಹಾಗೂ ಇತರ ಅನೇಕ ವ್ಯವಸ್ಥೆಗಳನ್ನು ರೂಪಿಸಿದ್ದೇವೆ. ಇವು ನಮಗೆ ಹೊಸ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ಕಾರ್ಯನಿರ್ವಹಣಾ ವಿಧಾನವನ್ನು ನಿರಂತರವಾಗಿ ಸುಧಾ ರಿಸಲು ನಮಗೆ ಸಹಾಯ ಮಾಡುತ್ತವೆ” ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಡ್ಡಿ ಫಿಶ್‌ಮನ್‌ ಹೇಳಿದರು.

“ಹೈದರಾಬಾದ್‌ನಲ್ಲಿ ಮೂರು ದಶಕಗಳನ್ನು ಪೂರೈಸಿರುವ ಡಿ. ಇ. ಶಾ ಇಂಡಿಯಾ ಸಂಸ್ಥೆಗೆ ನನ್ನ ಅಭಿನಂದನೆಗಳು. ಈ ಸಂಸ್ಥೆಯು ಕಳೆದ ಮೂರು ದಶಕಗಳಿಂದ ನಗರದ ಅವಿಭಾಜ್ಯ ಅಂಗವಾಗಿದೆ. ಇದೀಗ ಇಲ್ಲಿ ಸ್ಥಾಪನೆಯಾಗುತ್ತಿರುವ ಇದರ ಹೊಸ ಕಚೇರಿಯು ಸಂಸ್ಥೆಯು ಹೈದರಾಬಾದ್‌ನ ಮೇಲೆ ಇಟ್ಟಿರುವ ನಿರಂತರ ವಿಶ್ವಾಸವನ್ನು ತೋರಿಸುತ್ತಿದ್ದು, ಇದು ಸ್ವಾಗತಾರ್ಹ ಬೆಳವಣಿಗೆ ಯಾಗಿದೆ,” ಎಂದು ತೆಲಂಗಾಣ ಸರ್ಕಾರದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಮತ್ತು ಸಂವಹನ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾದ ಡಿ. ಶ್ರೀಧರ್‌ ಬಾಬು ಅವರು ಹೇಳಿದರು.

2027ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿರುವ ಈ ಹೊಸ ಅತ್ಯಾಧುನಿಕ ಕಾರ್ಯಸ್ಥಳವು 6,00,000 ಚದರ ಅಡಿಗಿಂತಲೂ ಹೆಚ್ಚಿನ ಜಾಗವನ್ನು ಹೊಂದಿರಲಿದೆ. ಇದು ಡಿ. ಇ. ಶಾ ಇಂಡಿಯಾ ಸಂಸ್ಥೆಯ ಉತ್ಸವಭರಿತ ಸಂಸ್ಕೃತಿಯನ್ನು ಬೆಂಬಲಿಸುವುದರೊಂದಿಗೆ, ಸಹೋದ್ಯೋಗಿಗಳು ವಿವಿಧ ತಂಡ ಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿದೆ.

“ಹೈದರಾಬಾದ್‌ನಲ್ಲಿಯೇ ಡಿ. ಇ. ಶಾ ಇಂಡಿಯಾ ಸಂಸ್ಥೆಯು ತನ್ನ ಪ್ರಯಾಣ ಆರಂಭಿಸಿತು ಮತ್ತು 30 ವರ್ಷಗಳ ನಂತರವೂ ಈ ನಗರವು ಕಂಪನಿಯ ಕೇಂದ್ರಬಿಂದುವಾಗಿ ಉಳಿದಿದೆ,” ಎಂದು ಹೇಳಿದ ಡಿ. ಇ. ಶಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯಾಚರಣೆ ಸಮಿತಿಯ ಸದಸ್ಯ ರಾದ ಚೈತನ್ಯ ಗೊರೆಪಾಟಿ ಅವರು ಮುಂದುವರಿದು, “ಭಾರತದಲ್ಲಿ ನಮ್ಮ ಬೆಳವಣಿಗೆಯ ಮುಂದಿನ ಅಧ್ಯಾಯಕ್ಕೆ ಸಾಕ್ಷಿಯಾಗಲಿರುವ ʼಗ್ರಾವಾ ಬಿಸಿನೆಸ್‌ ಪಾರ್ಕ್‌ʼ ನಲ್ಲಿ ನಮ್ಮ ಹೊಸ ಕಚೇರಿ ಯನ್ನು ತೆರೆಯಲು ನಾವು ಉತ್ಸುಕರಾಗಿದ್ದೇವೆ,” ಎಂದು ಹೇಳಿದರು.