ಡಿಸೆಂಬರ್ 31 ಆಧಾರ್-ಪಾನ್ ಕಾರ್ಡ್ ಲಿಂಕ್‌ಗೆ ಕೊನೆಯ ಅವಕಾಶ; ಲಿಂಕ್ ಮಾಡುವ ವಿಧಾನ ಇಲ್ಲಿದೆ
ಪ್ರತಿಯೊಂದು ವ್ಯವಹಾರದಲ್ಲೂ ಬಳಕೆಯಾಗುವ ಆಧಾರ್ ಕಾರ್ಡ್ ಜೊತೆಗೆ ಆರ್ಥಿಕ ವಹಿವಾಟುಗಳಿಗೆ ಅಗತ್ಯವಾಗಿ ಬೇಕಾಗಿರುವ ಶಾಶ್ವತ ಖಾತೆ ಸಂಖ್ಯೆಯಾದ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡದೇ ಇದ್ದರೆ ಹೊಸ ವರ್ಷದ ಆರಂಭದ ದಿನವೇ ಬಿಗ್ ಶಾಕ್ ಸಿಗಬಹುದು. ಆದ್ದರಿಂದ ಈ ಎರಡು ಕಾರ್ಡ್ ಗಳ ಲಿಂಕ್ ಗೆ ಇರುವ ಕೊನೆಯವ ಅವಕಾಶವನ್ನು ತಪ್ಪಿಸಿಕೊಳ್ಳದಿರಿ.
(ಸಂಗ್ರಹ ಚಿತ್ರ) -
ನವದೆಹಲಿ: ಆಧಾರ್ ಕಾರ್ಡ್ (Aadhaar card) ಮತ್ತು ಪಾನ್ ಕಾರ್ಡ್ (Pan card) ಲಿಂಕ್ ಗೆ (PAN-Aadhaar link dead line) ಈಗಾಗಲೇ ಸಾಕಷ್ಟು ಬಾರಿ ಅವಕಾಶ ನೀಡಲಾಗಿದೆ. ಆದರೆ ಇನ್ನೂ ಲಿಂಕ್ ಮಾಡಿಲ್ಲದಿದ್ದರೆ ಡಿಸೆಂಬರ್ 31ರೊಳಗೆ ಮಾಡಿಸಿ. ಇಲ್ಲವಾದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು. ಪ್ರತಿಯೊಂದು ವ್ಯವಹಾರದಲ್ಲೂ ಬಳಕೆಯಾಗುವ ಆಧಾರ್ ಕಾರ್ಡ್ ಜೊತೆಗೆ ಆರ್ಥಿಕ ವಹಿವಾಟುಗಳಿಗೆ ಅಗತ್ಯವಾಗಿ ಬೇಕಾಗಿರುವ ಶಾಶ್ವತ ಖಾತೆ ಸಂಖ್ಯೆಯಾದ (Permanent account number) ಪಾನ್ ಕಾರ್ಡ್ ಅನ್ನು ಲಿಂಕ್ ಮಾಡದೇ ಇದ್ದರೆ ಹೊಸ ವರ್ಷದ ಆರಂಭದ ದಿನವೇ ಬಿಗ್ ಶಾಕ್ ಸಿಗಬಹುದು. ಆದ್ದರಿಂದ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಗೆ ಇರುವ ಕೊನೆಯ ಅವಕಾಶ ಕಳೆದುಕೊಳ್ಳದಿರಿ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (CBDT) ತಿಳಿಸಿದೆ.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಇನ್ನು ಕೇವಲ ಎರಡು ದಿನ ಬಾಕಿ ಉಳಿದಿದೆ. ಈ ದಿನಗಳೊಳಗೆ ಲಿಂಕ್ ಮಾಡದೇ ಇದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ಎನ್ನುವ ಕುರಿತು ಹಂತಹಂತದ ಮಾಹಿತಿ ಇಲ್ಲಿದೆ.
Pravasi Prapancha: ಪೇಡಾ ನಗರಿಯ ಐಷಾರಾಮಿ ರೆಸಾರ್ಟ್ ರೈಸಿಂಗ್ ಬ್ಲಿಸ್ ರಿಟ್ರೀಟ್
ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಬಳಕೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಈ ಹಂತಗಳನ್ನು ಅನುಸರಿಸಬೇಕಾಗುತ್ತದೆ.
ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ ಅಲ್ಲಿ ಲಾಗಿನ್ ಮಾಡಿ. ಬಳಿಕ ಪ್ರೊಫೈಲ್ ವಿಭಾಗದಲ್ಲಿರುವ ‘ಲಿಂಕ್ ಆಧಾರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅನಂತರ ಬಳಕೆದಾರರು ತಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ವಿವರಗಳನ್ನು ನಮೂದಿಸಿ. ಇ-ಪೇ ತೆರಿಗೆ ಮೂಲಕ ಪಾವತಿಸುವುದನ್ನು ಮುಂದುವರಿಸಿ ಎನ್ನುವುದನ್ನು ಕ್ಲಿಕ್ ಮಾಡಿ.
ಬಳಿಕ ಪಾನ್ ಸಂಖ್ಯೆ ನಮೂದಿಸಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ಹಾಕಿ ಪರಿಶೀಲಿಸಿ. ಇದು ಯಶಸ್ವಿಯಾದ ಮೇಲೆ ಇ- ಪೇ ತೆರಿಗೆ ಪುಟ ತೆರೆದುಕೊಳ್ಳುತ್ತದೆ. ಅನಂತರ ಇಲ್ಲಿ ‘ಮುಂದುವರಿಯಿರಿ’ ಎನ್ನುವ ಬಟನ್ ಕ್ಲಿಕ್ ಮಾಡಿ. ಅನಂತರ ರಶೀದಿ ಆಯ್ಕೆಯಲ್ಲಿ ‘ಮೌಲ್ಯಮಾಪನ ವರ್ಷ’ ಮತ್ತು ‘ಪಾವತಿಯ ಪ್ರಕಾರ’ವನ್ನು ಆಯ್ಕೆ ಮಾಡಿ. ಇಲ್ಲಿ ಸೂಕ್ತ ಮೊತ್ತ ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುತ್ತದೆ. ಅನಂತರ ‘ಮುಂದುವರಿಸಿ’ ಎಂಬುದನ್ನು ಕ್ಲಿಕ್ ಮಾಡಿ. ಬಳಿಕ ಚಲನ್ ದೊರೆಯುತ್ತದೆ. ಇಲ್ಲಿ ಪಾವತಿ ಮಾಡಿದರೆ ಆಧಾರ್ ಮತ್ತು ಪಾನ್ ಲಿಂಕ್ ಆಗಿರುವ ಸಂದೇಶ ದೊರೆಯುತ್ತದೆ.
ಇದನ್ನು ಪರಿಶೀಲಿಸಲು ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ‘ಲಿಂಕ್ ಆಧಾರ್ ಟು ಪ್ಯಾನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆಯನ್ನು ನಮೂದಿಸಿ್ದರೆ ಆಧಾರ್ ಮತ್ತು ಪಾನ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಬಹುದು.
ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ INR 530 ಕೋಟಿಗೆ 376,000 ಚದರ ಅಡಿಗಳ ಸ್ವಾಧೀನ
ಒಂದು ವೇಳೆ ನಿಮ್ಮ ಪಾನ್ ಅನ್ನು ಈಗಾಗಲೇ ಬೇರೆ ಯಾವುದಾದರೂ ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ ಇದಕ್ಕಾಗಿ ತಮ್ಮ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಯನ್ನು ಸಂಪರ್ಕಿಸಿ ಡಿಲಿಂಕ್ ಮಾಡಬೇಕಾಗುತ್ತದೆ.
ಡಿಸೆಂಬರ್ 31ರ ಮೇಲೂ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ಪಾನ್ ನಿಷ್ಕ್ರಿಯಗೊಳ್ಳುತ್ತದೆ. ಇದನ್ನು ಮತ್ತೆ ಸಕ್ರಿಯಗೊಳಿಸಲು 1,000 ರೂ. ವಿಳಂಬ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.