ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

34 ಕೋಟಿ ಇಪಿಎಫ್ ಖಾತೆಗಳಿಗೆ ಬಡ್ಡಿ ಜಮೆ; ನಿಮ್ಮ ಅಕೌಂಟ್‌ಗೂ ಬಂತಾ? ಹೀಗೆ ಚೆಕ್‌ ಮಾಡಿ

Employees Provident Fund: ದೇಶಾದ್ಯಂತ ಇರುವ ಸುಮಾರು 34 ಕೋಟಿ ಜನರ ಭವಿಷ್ಯ ನಿಧಿ ಖಾತೆಗೆ ಬಡ್ಡಿ ಮೊತ್ತವನ್ನು ಜುಲೈ 15ರಂದು ಜಮೆ ಮಾಡಲಾಗಿದೆ. ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳು ಬಡ್ಡಿ ಮೊತ್ತ ತಮ್ಮ ಖಾತೆಗೆ ಜಮೆ ಆಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ಪರಿಶೀಲಿಸಬೇಕು ಎನ್ನುವ ವಿವರ ಇಲ್ಲಿದೆ.

ಇಪಿಎಫ್ ಖಾತೆಗೆ ಬಡ್ಡಿ ಜಮೆ; ಹೀಗೆ ಚೆಕ್‌ ಮಾಡಿ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jul 16, 2026 8:58 PM

ದೆಹಲಿ, ಜು. 16: ಉದ್ಯೋಗಿಗಳ ನಿವೃತ್ತಿ ಉಳಿತಾಯದ ಪ್ರಮುಖ ಯೋಜನೆ ಇಪಿಎಫ್ (Employees Provident Fund) ಖಾತೆಗಳಿಗೆ 2025-26 ಹಣಕಾಸು ವರ್ಷದ ಬಡ್ಡಿಯನ್ನು ಜಮೆ ಮಾಡಲಾಗಿದೆ (EPF Interest). ಈ ವರ್ಷವೂ ಶೇಕಡಾ 8.25 ಬಡ್ಡಿ ದರ ನಿಗದಿಪಡಿಸಲಾಗಿದ್ದು, ಸುಮಾರು 34 ಕೋಟಿ ಖಾತೆಗಳಿಗೆ ಬಡ್ಡಿ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಈ ಹಿಂದೆ ಘೋಷಿಸಿದಂತೆ ಜುಲೈ 15ರಂದು ಈ ಮೊತ್ತ ಇಪಿಎಫ್ ಖಾತೆಗಳಿಗೆ ಹಾಕಲಾಗಿದೆ.

"2026ನೇ ಹಣಕಾಸು ವರ್ಷದಲ್ಲಿ 34 ಕೋಟಿ ಸದಸ್ಯರ ಖಾತೆಗಳಿಗೆ ಶೇಕಡಾ 8.25ರ ದರದಲ್ಲಿ ವಾರ್ಷಿಕ ಬಡ್ಡಿಯನ್ನು ಜಮೆ ಮಾಡಲಾಗಿದೆ. ಇದರ ಒಟ್ಟು ಮೊತ್ತ 1.44 ಲಕ್ಷ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಇಪಿಎಫ್‌ ಸದಸ್ಯರು ತಮ್ಮ ಪಾಸ್‌ಬುಕ್‌ ಮೂಲಕ ಬಡ್ಡಿ ಕ್ರೆಡಿಟ್ ಪರಿಶೀಲಿಸಬಹುದು ಎಂದು" ಎಂದು ಮಾಂಡವಿಯಾ ಹೇಳಿದ್ದಾರೆ.

ಸತತ 3 ವರ್ಷಗಳಿಂದ ಶೇಕಡಾ 8.25 ಬಡ್ಡಿದರ ಕಾಯ್ದುಕೊಳ್ಳಲಾಗಿದೆ. 2022-23ರಲ್ಲಿ ಬಡ್ಡಿದರ ಶೇಕಡಾ 8.15ಕ್ಕೆ ಇಳಿಕೆಯಾಗಿದ್ದರೂ, ನಂತರ ಅದನ್ನು ಶೇಕಡಾ 8.25ಕ್ಕೆ ಏರಿಸಿ ಮುಂದುವರಿಸಲಾಗಿದೆ.

ಇನ್ಮುಂದೆ ಈ ಕಾರಣಕ್ಕೆ ಪಿಎಫ್‌ ಕ್ಲೈಂ ರಿಜೆಕ್ಟ್‌ ಮಾಡುವಂತಿಲ್ಲ

ಇಪಿಎಫ್‌ ಬ್ಯಾಲನ್ಸ್ ಪರಿಶೀಲಿಸೋದು ಹೇಗೆ?

ಬಡ್ಡಿ ಜಮೆಯೊಂದಿಗೆ ನಿಮ್ಮ ಖಾತೆಯಲ್ಲಿ ಎಷ್ಟು ಮೊತ್ತ ಇದೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿಧಾನ ಬಳಸಬಹುದು.

ಇ-ಸೇವಾ ಪೋರ್ಟಲ್‌ ಮೂಲಕ:

  • EPFO ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
    (https://passbook.epfindia.gov.in/MemberPassBook/login)
  • ನಿಮ್ಮ 12 ಅಂಕೆಗಳ UAN ನಂಬರ್‌ ನಮೂದಿಸಿ.
  • ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
  • ನಿಮ್ಮ ಆಧಾರ್‌ ನಂಬರ್‌ಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ಗೆ ಬಂದಿರಿರುವ ಒಟಿಪಿ ನಮೂದಿಸಿ.
  • Member Passbook ಆಯ್ಕೆ ಮಾಡಿ.
  • ‘Interest Updated Up To 15/07/2026 ಆಯ್ಕೆ ಕ್ಲಿಕ್‌ ಮಾಡಿದರೆ ನಿಮ್ಮ ಖಾತೆಯ ವಿವರ ಹಾಗೂ ಬಡ್ಡಿ ಮೊತ್ತ ಕಾಣಸಿಗುತ್ತದೆ.

ಎಸ್‌ಎಂಎಸ್‌ ಮೂಲಕ:

  • ನಿಮ್ಮ UAN ರಿಜಿಸ್ಟರ್ ಆಗಿರುವ ಮೊಬೈಲ್‌ನಿಂದ 7738299899 ಸಂಖ್ಯೆಗೆ SMS ಕಳುಹಿಸಿ. ವಿಧಾನ: EPFOHO UAN ENG.

ಮಿಸ್ಡ್ ಕಾಲ್ ಮೂಲಕ:

  • ನಿಮ್ಮ ನೋಂದಾಯಿತ ಮೊಬೈಲ್‌ನಿಂದ 9966044425 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ.
  • ಕೆಲವೇ ಕ್ಷಣಗಳಲ್ಲಿ ಎಸ್‌ಎಂಎಸ್‌ ಮೂಲಕ ನಿಮ್ಮ ಬ್ಯಾಲನ್ಸ್ ಮಾಹಿತಿ ಬರುತ್ತದೆ.

ಉಮಂಗ್‌ ಆ್ಯಪ್ ಮೂಲಕ:

  • UMANG ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.
  • ಆ್ಯಪ್ ತೆರೆದು ಇಪಿಎಫ್‌ಒ ಆಯ್ಕೆ ಮಾಡಿ.
  • View Passbook ಆಯ್ಕೆ ಸೆಲೆಕ್ಟ್‌ ಮಾಡಿ.
  • ಯುಎಎನ್‌ ನಂಬರ್‌ ನಮೂದಿಸಿ Get OTP ಆಯ್ಕೆ ಕ್ಲಿಕ್‌ ಮಾಡಿ.
  • ಒಟಿಪಿ ನಮೂದಿಸಿ ಬ್ಯಾಲನ್ಸ್‌ ಚೆಕ್‌ ಮಾಡಬಹುದು.

ಇಪಿಎಫ್‌ಒ ಕ್ಷಮಾದಾನ ಯೋಜನೆ: ಉದ್ಯೋಗದಾತ ಸಂಸ್ಥೆಗಳಿಗೆ ದಂಡ ಪಾವತಿ ಇಲ್ಲದೆ ಬಾಕಿ ಮೊತ್ತ ಪಾವತಿಸಲು ಅವಕಾಶ

ಗಮನಿಸಿ

ಒಂದು ವೇಳೆ ನಿಮ್ಮ ಖಾತೆಗೆ ತಾಂತ್ರಿಕ ಕಾರಣಗಳಿಂದ ಬಡ್ಡಿ ಹಣ ತಡವಾಗಿ ಕ್ರೆಡಿಟ್ ಆದರೂ ಯಾವುದೇ ನಷ್ಟವಾಗುವುದಿಲ್ಲ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.