ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On August 27th 2026: ರಾಖಿ ಹಬ್ಬದ ಮುನ್ನಾ ದಿನ ಆಭರಣ ಗ್ರಾಹಕರಿಗೆ ಸಿಕ್ತು ಸಿಹಿ ಸುದ್ದಿ; ಕುಸಿದ ಚಿನ್ನದ ದರ

Gold Rate Today: ಗುರುವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 70 ರುಪಾಯಿ ಅಗ್ಗವಾಗಿ 14,940 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 77 ರುಪಾಯಿ ಕಡಿಮೆಯಾಗಿ 16,298 ರುಪಾಯಿಗೆ ಬಂದಿದೆ.

ರಾಖಿ ಹಬ್ಬದ ಮುನ್ನಾ ದಿನ ಕುಸಿದ ಚಿನ್ನದ ದರ

ಮಮಿತಾ ಬೈಜು (ಇನ್‌ಸ್ಟಾಗ್ರಾಮ್‌ ಚಿತ್ರ) -

Ramesh Ballamoole
Ramesh Ballamoole Aug 27, 2026 1:44 PM

ಬೆಂಗಳೂರು, ಆ. 27: ದೇಶಾದ್ಯಂತ ರಾಖಿ ಹಬ್ಬದ ಸಿದ್ಧತೆ ಜೋರಾಗಿದೆ. ಈ ಮಧ್ಯೆ ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಮಂಗಳವಾರ ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಬುಧವಾರ ಯಥಾಸ್ಥಿತಿ ಕಂಡುಬಂದಿತ್ತು. ಗುರುವಾರ (ಆಗಸ್ಟ್‌ 27) ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ (Gold Price Today On August 27th 2026). ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 70 ರುಪಾಯಿ ಅಗ್ಗವಾಗಿ 14,940 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 77 ರುಪಾಯಿ ಕಡಿಮೆಯಾಗಿ 16,298 ರುಪಾಯಿಗೆ ಬಂದಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,19,520 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,49,400 ರುಪಾಯಿ ಹಾಗೂ 100 ಗ್ರಾಂಗೆ 14,94,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,30,384 ರುಪಾಯಿ, 10 ಗ್ರಾಂಗೆ 1,62,980 ರುಪಾಯಿ ಹಾಗೂ 100 ಗ್ರಾಂಗೆ 16,29,800 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ದರ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,940 ರುಪಾಯಿ 16,298 ರುಪಾಯಿ
ಮುಂಬೈ 14,940 ರುಪಾಯಿ 16,298 ರುಪಾಯಿ
ದೆಹಲಿ 14,955 ರುಪಾಯಿ 16,313 ರುಪಾಯಿ
ಕೋಲ್ಕತಾ 14,940 ರುಪಾಯಿ 16,298 ರುಪಾಯಿ
ಹೈದರಾಬಾದ್‌ 14,940 ರುಪಾಯಿ 16,298 ರುಪಾಯಿ

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,955 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,313 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ ಇದೆ.

ಭಾರತದ ಯುಪಿಐ ಕ್ರಾಂತಿಗೆ ಒಂದು ದಶಕ: ಡಿಜಿಟಲ್ ಅನುಭವ ಹಂಚಿಕೊಳ್ಳಲು ನಾಗರಿಕರಿಗೆ ಪ್ರಧಾನಿ ಮೋದಿ ಕರೆ

ಬೆಳ್ಳಿ ದರ

ಇತ್ತ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 260 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,600 ರುಪಾಯಿ ಹಾಗೂ 1 ಕೆಜಿಗೆ2,60,000 ರುಪಾಯಿ ಕಂಡು ಬಂದಿದೆ.