ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗ್ರಾಹಕರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಎಚ್ಡಿಎಫ್ಸಿ ಲೈಫ್ ಮತ್ತು ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಸಹಯೋಗ

ಮುತ್ತೂಟ್ ಫಿನ್ಕಾರ್ಪ್ ನ ಹಾಲಿ ಮತ್ತು ಹೊಸ ಗ್ರಾಹಕರಿಗೆ ಅವರ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಕಾರಿಯಾಗುವ ಪರಿಣಾಮಕಾರಿ ಜೀವ ವಿಮಾ ಪರಿಹಾರಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಅಲ್ಲದೆ, ನಮ್ಮ ಸುಲಭ ಪ್ರಕ್ರಿಯೆಗಳು ಮುತ್ತೂಟ್ ಫಿನ್ ಕಾರ್ಪ್ ನ ತಂಡಗಳಿಗೆ ಡಿಜಿಟಲ್ ಶಕ್ತಿಯನ್ನು ನೀಡಲಿದ್ದು, ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲಿವೆ.

ಎಚ್ಡಿಎಫ್ಸಿ ಲೈಫ್ ಮತ್ತು ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಸಹಯೋಗ

-

Ashok Nayak
Ashok Nayak Feb 12, 2026 10:09 AM

ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ ಒಂದಾದ ಎಚ್ಡಿಎಫ್ಸಿ ಲೈಫ್ ಸಂಸ್ಥೆಯು ಕೇರಳದ ತಿರುವನಂತಪುರಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮುತ್ತೂಟ್ ಪಾಪಚ್ಚನ್ ಗ್ರೂಪ್ ನ (ಮುತ್ತೂಟ್ ಬ್ಲೂ) ಪ್ರಮುಖ ಸಂಸ್ಥೆಯಾದ ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಜೊತೆ ಸಹಭಾಗಿತ್ವ ಮಾಡಿಕೊಂಡಿರುವುದಾಗಿ ಘೋಷಿಸಿದೆ.

ಈ ಪಾಲುದಾರಿಕೆಯು ಮುತ್ತೂಟ್ ಫಿನ್ಕಾರ್ಪ್ ಲಿಮಿಟೆಡ್ ನ ಗ್ರಾಹಕರಿಗೆ ಎಚ್ಡಿಎಫ್ಸಿ ಲೈಫ್ ನ ಸಮಗ್ರ ಶ್ರೇಣಿಯ ಗುಂಪು ವಿಮೆ ಮತ್ತು ವೈಯಕ್ತಿಕ ಜೀವ ವಿಮಾ ಪರಿಹಾರಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಗ್ರಾಹಕರ ದೀರ್ಘಕಾಲದ ಆರ್ಥಿಕ ಗುರಿಗಳನ್ನು ತಲುಪಲು ಪೂರಕವಾದ ರಕ್ಷಣೆ ಮತ್ತು ದೀರ್ಘಕಾಲದ ಉಳಿತಾಯ ಉತ್ಪನ್ನಗಳು ಸೇರಿವೆ. ಮುತ್ತೂಟ್ ಫಿನ್ಕಾರ್ಪ್ ನ ಭಾರತದಾದ್ಯಂತ ಇರುವ 3,750ಕ್ಕೂ ಹೆಚ್ಚು ಶಾಖೆಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಈ ಸೇವೆಗಳು ಲಭ್ಯವಿರಲಿವೆ.

ಇದನ್ನೂ ಓದಿ: HDFC Life: ಎಚ್.ಡಿ.ಎಫ್.ಸಿ.ಲೈಫ್: ಪಾಲಿಸಿದಾರರಿಗೆ ರೂ. 4102 ಕೋಟಿ ಬೋನಸ್ ಘೋಷಣೆ

ಈ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಎಚ್ಡಿಎಫ್ಸಿ ಲೈಫ್ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಓ ವಿಭಾ ಪಡಾಲ್ಕರ್, “ಮುತ್ತೂಟ್ ಫಿನ್ಕಾರ್ಪ್ ಲಿಮಿಟೆಡ್ ಜೊತೆಗಿನ ನಮ್ಮ ಪಾಲುದಾರಿಕೆ ಯು ವಿಮಾ ಕ್ಷೇತ್ರದ '2047ರ ವೇಳೆಗೆ ಎಲ್ಲರಿಗೂ ವಿಮೆ' ಎಂಬ ಗುರಿಯನ್ನು ಸಾಧಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

ಮುತ್ತೂಟ್ ಫಿನ್ಕಾರ್ಪ್ ನ ಹಾಲಿ ಮತ್ತು ಹೊಸ ಗ್ರಾಹಕರಿಗೆ ಅವರ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಕಾರಿಯಾಗುವ ಪರಿಣಾಮಕಾರಿ ಜೀವ ವಿಮಾ ಪರಿಹಾರಗಳನ್ನು ನೀಡಲು ನಾವು ಬದ್ಧರಾಗಿ ದ್ದೇವೆ. ಅಲ್ಲದೆ, ನಮ್ಮ ಸುಲಭ ಪ್ರಕ್ರಿಯೆಗಳು ಮುತ್ತೂಟ್ ಫಿನ್ ಕಾರ್ಪ್ ನ ತಂಡಗಳಿಗೆ ಡಿಜಿಟಲ್ ಶಕ್ತಿಯನ್ನು ನೀಡಲಿದ್ದು, ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲಿವೆ. ಈ ಮೂಲಕ ದೇಶ ದಲ್ಲಿ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿ ಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.

ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ನ ಸಿಇಒ ಶ್ರೀ ಶಾಜಿ ವರ್ಗೀಸ್ ಮಾತನಾಡಿ, “ಎಚ್ಡಿಎಫ್ಸಿ ಲೈಫ್ ಜೊತೆ ಕೈಜೋಡಿಸಲು ನಮಗೆ ಸಂತೋಷವಾಗಿದೆ. ಮುತ್ತೂಟ್ ಫಿನ್ ಕಾರ್ಪ್ ಮತ್ತು ಎಚ್ಡಿಎಫ್ಸಿ ಲೈಫ್ ಎರಡೂ ಗ್ರಾಹಕರ ನಂಬಿಕೆಯ ಮೇಲೆ ನಿರ್ಮಾಣವಾಗಿವೆ. ನಮ್ಮ 3,750ಕ್ಕೂ ಹೆಚ್ಚು ಶಾಖೆ ಗಳ ವ್ಯಾಪ್ತಿ, ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ಮತ್ತು ಲಕ್ಷಾಂತರ ಗ್ರಾಹಕರೊಂದಿಗಿನ ನಮ್ಮ ಸಂಬಂಧವನ್ನು ಎಚ್ಡಿಎಫ್ಸಿ ಲೈಫ್ ನ ಉತ್ಪನ್ನ ಮತ್ತು ಅಪಾಯ ನಿರ್ವಹಣೆಯ ಪರಿಣತಿ ಯೊಂದಿಗೆ ಸಂಯೋಜಿಸಿ, ಭಾರತೀಯ ಕುಟುಂಬಗಳಿಗೆ ಅರ್ಥಪೂರ್ಣ ಆರ್ಥಿಕ ರಕ್ಷಣೆ ನೀಡುವುದು ಈ ಪಾಲುದಾರಿಕೆಯ ಉದ್ದೇಶವಾಗಿದೆ" ಎಂದು ತಿಳಿಸಿದರು.