ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA SN Subbareddy: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

ಈ ಭಾಗ ಗಡಿಭಾಗವಾಗಿರುವ ಕಾರಣ ಇಲ್ಲಿನ ಜನರಿಗೆ ಆಸ್ಪತ್ರೆಯ ಅವಶ್ಯಕತೆಯಿತ್ತು. ಹಾಗಾಗಿ ಸರ್ಕಾರ ಇಲ್ಲಿಗೆ ನೂತನ ಕಟ್ಟಡಕ್ಕೆ ಮಂಜೂರಾತಿ ನೀಡಿದ ಕಾರಣ ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡವೊಂದು ನಿರ್ಮಾಣವಾದರೇ ಸಾಲದು ಇಲ್ಲಿ ಕೆಲಸ ಮಾಡುವಂತಹ ವೈದ್ಯರು, ನರ್ಸ್ ಹಾಗೂ ಎಲ್ಲ ಸಿಬ್ಬಂದಿಯಿದ್ದು ಈ ಭಾಗದ ಜನರಿಗೆ ಅನುಕೂಲವಾಗಬೇಕು

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು

-

Ashok Nayak
Ashok Nayak Feb 12, 2026 11:03 AM

ಬಾಗೇಪಲ್ಲಿ: ತಾಲ್ಲೂಕು ಜೂಲಪಾಳ್ಯ ಗ್ರಾಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಸುಧಾರಣಾ ಆಯೋಗ ಯೋಜನೆ ಯಡಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಜೂಲಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA SN Subbareddy) ಉದ್ಘಾಟಿಸಿದರು.

ತದನಂತರ ಮಾತನಾಡಿ, ಈ ಭಾಗ ಗಡಿಭಾಗವಾಗಿರುವ ಕಾರಣ ಇಲ್ಲಿನ ಜನರಿಗೆ ಆಸ್ಪತ್ರೆಯ ಅವಶ್ಯ ಕತೆಯಿತ್ತು. ಹಾಗಾಗಿ ಸರ್ಕಾರ ಇಲ್ಲಿಗೆ ನೂತನ ಕಟ್ಟಡಕ್ಕೆ ಮಂಜೂರಾತಿ ನೀಡಿದ ಕಾರಣ ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡವೊಂದು ನಿರ್ಮಾಣವಾದರೇ ಸಾಲದು ಇಲ್ಲಿ ಕೆಲಸ ಮಾಡುವಂತಹ ವೈದ್ಯರು, ನರ್ಸ್ ಹಾಗೂ ಎಲ್ಲ ಸಿಬ್ಬಂದಿಯಿದ್ದು ಈ ಭಾಗದ ಜನರಿಗೆ ಅನುಕೂಲ ವಾಗಬೇಕು ಎಂದರು.

ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ. ಈ ಕೇಂದ್ರಗಳು ಸ್ಥಳೀಯರಿಗೆ ಉಚಿತ ಮತ್ತು ತ್ವರಿತ ಆರೋಗ್ಯ ಸೇವೆ, ಹೆರಿಗೆ ಸೌಲಭ್ಯ, ಹಾಗೂ ತುರ್ತು ಚಿಕಿತ್ಸೆ ಒದಗಿಸುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: MLA SN Subbareddy: ಗಂಟ್ಲಮಲ್ಲಮ್ಮ ಕಣವೆಯಲ್ಲಿ ಡ್ಯಾಂ ನಿರ್ಮಾಣ ತಡೆಗೆ ಯಾರಿಂದಲೂ ಸಾಧ್ಯವಿಲ್ಲ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಈ ಸಂದರ್ಭದಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಆರೋಗ್ಯ ಸೇತು' ಸಂಚಾರಿ ಘಟಕ ಯೋಜನೆಗೆ ಚಾಲನೆ; ಮನೆಬಾಗಿಲಿಗೆ ಮಿನಿ ಆಸ್ಪತ್ರೆ: 'ಆರೋಗ್ಯ ಸೇತು' ಸಂಚಾರಿ ಘಟಕ ಯೋಜನೆಗೆ ಚಾಲನೆ; ರಾಜ್ಯದ ಮೂಲೆಮೂಲೆಗಳಿಗೂ ಆರೋಗ್ಯ ಭಾಗ್ಯ ತಲುಪಿಸಲು, ನಮ್ಮ ಸರ್ಕಾರ 'ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.

ಸುಸಜ್ಜಿತ ವಾಹನಗಳ ಮೂಲಕ, ದೂರದ ಹಳ್ಳಿಗಳಿಗೂ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ಪ್ರಾಥಮಿಕ ಆರೋಗ್ಯ ತಪಾಸಣೆ, ತಾಯಿ-ಮಗುವಿನ ಆರೈಕೆ, ಉಚಿತ ಔಷಧಿ ವಿತರಣೆ - ಎಲ್ಲವೂ ನಿಮ್ಮ ಮನೆ ಬಾಗಿಲಿಗೆ! ಇದರಿಂದ ನಿಮ್ಮ ಸಮಯ ಮತ್ತು ಹಣ ಉಳಿತಾಯವಾಗುವುದಲ್ಲದೆ, ಆರೋಗ್ಯ ಸುಧಾರಣೆಗೆ ಇದು ಒಂದು ದೊಡ್ಡ ಹೆಜ್ಜೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಧೀಕಾರಿ ಡಾ,ಸತ್ಯನಾರಾಯಣರೆಡ್ಡಿ, ಪಶುವೈದ್ಯಾಧಿಕಾರಿ ಕೃಷ್ಣಮೂರ್ತಿ, ಡಾ,ಸಾಯಿಪ್ರಕಾಶ್, ಎಂ. ಬಿ. ಕೆ. ಸುನಿಲಾ, ಮುಖಂಡರಾದ ಕೆ.ಡಿ.ಪಿ. ಸದಸ್ಯ ಪಿ.ಮಂಜುನಾಥರೆಡ್ಡಿ, ಜಿಲ್ಲಾ ಪಂಚಿಯ್ತಿ ಮಾಜಿ ಸದಸ್ಯ ನರಸಿಂಹಪ್ಪ, ತಾ, ಪಂ, ಮಾಜಿ ಸದಸ್ಯ ಮಂಜುನಾಥ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜೆ.ಆರ್.ಪ್ರಶಾಂತ್, ಕೃಷ್ಣಮೂರ್ತಿ, ಜೆ. ರವಿ, ಚಿಕ್ಕಬಯ್ಯಾರೆಡ್ಡಿ, ಶಿವಾರೆಡ್ಡಿ, ಬಾಬುರೆಡ್ಡಿ, ಸೇರಿದಂತೆ ಹಲವರು ಹಾಜರಿದ್ದರು.