ಜಯನಗರದಲ್ಲಿ ಆಭರಣ ಸಂಸ್ಥೆಯ 2ನೇ ಶೋರೂಂ ಆರಂಭ
ಹೊಸ ಶೋರೂಂ ಉದ್ಘಾಟನೆಯ ಅಂಗವಾಗಿ, ಈ ಆಭರಣ ಸಂಸ್ಥೆಯು ಸೀಮಿತ ಅವಧಿಯ ವಿಶೇಷ ಕೊಡುಗೆ ಘೋಷಿಸಿದೆ. ಇದರ ಅಡಿಯಲ್ಲಿ ಚಿನ್ನ, ಪ್ಲಾಟಿನಂ, ಬೆಳ್ಳಿ, ರತ್ನದ ಹರಳು, ವಜ್ರ ಮತ್ತು ಕಚ್ಚಾ (ಅನ್ಕಟ್) ವಜ್ರದ ಆಭರಣಗಳ ಮಜೂರಿಯ ಮೇಲೆ ಶೇ.50% ನೇರ ರಿಯಾಯಿತಿ ಲಭ್ಯವಿದೆ. ಈ ಕೊಡುಗೆಯು ನವೆಂಬರ್ 8ರ ವರೆಗೆ ಚಾಲ್ತಿಯಲ್ಲಿರುತ್ತದೆ.
-
ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿ ತನ್ನ ಎರಡನೇ ಶೋರೂಮ್ಅನ್ನು ಪ್ರಾರಂಭಿಸುವ ಮೂಲಕ ತನ್ನ ಅಸ್ತಿತ್ವವನ್ನು `ಆಭರಣ ಸಂಸ್ಥೆ' ವಿಸ್ತರಿಸುತ್ತಿದೆ. ಶೋರೂಮ್ ಅಕ್ಟೋಬರ್ 17ರಂದು ಕಾರ್ಯಾರಂಭ ಮಾಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ನಿರಂತರ ವಿಸ್ತರಣೆಯು, ಭಾರತದ ಅತ್ಯಂತ ಕ್ರಿಯಾಶೀಲ ಮತ್ತು ಗುಣಮಟ್ಟ ಬಯಸುವ ಆಭರಣ ಮಾರುಕಟ್ಟೆಗಳಲ್ಲಿ ಒಂದಾದ ಇಲ್ಲಿನ ಗ್ರಾಹಕರ ಕುರಿತು ಬ್ರ್ಯಾಂಡ್ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಆಭರಣಪ್ರಿಯರಿಗೆ ಭವ್ಯ ಸ್ವಾಗತ
ಹೊಸ ಶೋರೂಂ ಉದ್ಘಾಟನೆಯ ಅಂಗವಾಗಿ, ಈ ಆಭರಣ ಸಂಸ್ಥೆಯು ಸೀಮಿತ ಅವಧಿಯ ವಿಶೇಷ ಕೊಡುಗೆ ಘೋಷಿಸಿದೆ. ಇದರ ಅಡಿಯಲ್ಲಿ ಚಿನ್ನ, ಪ್ಲಾಟಿನಂ, ಬೆಳ್ಳಿ, ರತ್ನದ ಹರಳು, ವಜ್ರ ಮತ್ತು ಕಚ್ಚಾ (ಅನ್ಕಟ್) ವಜ್ರದ ಆಭರಣಗಳ ಮಜೂರಿಯ ಮೇಲೆ ಶೇ.50% ನೇರ ರಿಯಾಯಿತಿ ಲಭ್ಯವಿದೆ. ಈ ಕೊಡುಗೆಯು ನವೆಂಬರ್ 8ರ ವರೆಗೆ ಚಾಲ್ತಿಯಲ್ಲಿರುತ್ತದೆ. ಇದು ಜಯನಗರ ಮತ್ತು ದಕ್ಷಿಣ ಬೆಂಗಳೂರಿನ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯದೊಂದಿಗೆ ಹೊಸ ಆಭರಣ ಸಂಗ್ರಹಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಅತ್ಯುತ್ತಮ ಅವಕಾಶ ಕಲ್ಪಿಸುತ್ತದೆ.
ಇದನ್ನೂ ಓದಿ: Jewel Fashion 2026: ಜೆನ್ ಜಿ ದೇಸಿ ಲುಕ್ಗೆ ಎಂಟ್ರಿ ಕೊಟ್ಟ ಪ್ರೆಸ್ ಆನ್ ಮೂಗುತಿಗಳು
ಗ್ರಾಹಕರ ಅನುಕೂಲಕ್ಕೆ ಆದ್ಯತೆ ನೀಡುವ ವಿನ್ಯಾಸದ ಶೋರೂಂ
ಕಾಲಾತೀತ ಸಾಂಪ್ರದಾಯಿಕ ವಿನ್ಯಾಸ ಮತ್ತು ಭವ್ಯವಾದ ವೈವಾಹಿಕ ಆಭರಣ ಸಂಗ್ರಹಗಳಿಂದ ಹಿಡಿದು, ಜಾಗತಿಕ ಶೈಲಿಗಳಿಂದ ಪ್ರೇರಿತವಾದ ಅತ್ಯಾಧುನಿಕ ವಿನ್ಯಾಸದ ಆಭರಣಗಳೂ ಸೇರಿವೆ. ವಿಶಾಲ ಒಳಾಂಗಣ ಮತ್ತು ಸುಂದರವಾದ ಅಲಂಕಾರವು ಗ್ರಾಹಕರಿಗೆ ಆರಾಮದಾಯಕ ಅನುಭವ ನೀಡುತ್ತದೆ. ಈ ಸಂಸ್ಥೆಯ ಪ್ರತಿಯೊಂದು ಶೋರೂಮ್ನಂತೆಯೇ, ಇಲ್ಲೂ ಕೂಡ ತರಬೇತಿ ಪಡೆದ ವೃತ್ತಿಪರರ ತಂಡವು ಗ್ರಾಹಕರಿಗೆ ವೈಯಕ್ತಿಕ ಮಾರ್ಗದರ್ಶನ ನೀಡಲು ಸಿದ್ಧವಿರುತ್ತದೆ; ಅದು ವೈವಾಹಿಕ ಶಾಪಿಂಗ್ ಆಗಿರಲಿ, ವಿಶೇಷ ಸಂದರ್ಭದ ಆಚರಣೆಯಾಗಿರಲಿ ಅಥವಾ ವೈಯಕ್ತಿಕ ಸಂಗ್ರಹಕ್ಕೆ ಆಭರಣಗಳ ಖರೀದಿಯೇ ಆಗಿರಲಿ, ಎಲ್ಲದಕ್ಕೂ ಸೂಕ್ತ ಸಲಹೆ ಸಿಗುತ್ತದೆ.
ಈ ಸಂಸ್ಥೆಯನ್ನು ಏಳು ದಶಕಗಳಿಂದಲೂ ಗುರುತಿಸುವ ಪ್ರಮುಖ ಮೌಲ್ಯಗಳ ಬೆಂಬಲವನ್ನು ಪ್ರತಿಯೊಂದು ಖರೀದಿಯೂ ಹೊಂದಿದೆ. ಪ್ರಮಾಣೀಕೃತ ಶುದ್ಧತೆ, ಪಾರದರ್ಶಕ ಬೆಲೆ ನಿಗದಿ ಮತ್ತು ಗ್ರಾಹಕರಿಗೆ ಆದ್ಯತೆ ನೀಡುವ ಸೇವೆ ಇಲ್ಲಿ ದೊರಕಲಿದೆ.
ಈ ಸಂಸ್ಥೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಂಗಳೂರು ಒಂದಾಗಿ ಹೊರಹೊಮ್ಮಿದೆ. ಜಯನಗರ ದಲ್ಲಿ ಎರಡನೇ ಶೋರೂಮ್ನ ಉದ್ಘಾಟನೆಯು, ಕೇವಲ ನಗರದ ಕೇಂದ್ರ ಭಾಗದಲ್ಲಿ ಮಾತ್ರವಲ್ಲದೆ ಗ್ರಾಹಕರು ವಾಸಿಸುವ ಸ್ಥಳೀಯ ಪ್ರದೇಶಗಳಲ್ಲೂ ಆಭರಣ ಖರೀದಿಯನ್ನು ಹೆಚ್ಚು ಅನುಕೂಲ ಕರವಾಗಿಸುವ ಬ್ರ್ಯಾಂಡ್ನ ಬದ್ಧತೆ ಮತ್ತು ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ಬಲವಾದ ಸಾಂಸ್ಕೃತಿಕ ಬೇರುಗಳು ಮತ್ತು ಚೈತನ್ಯಶೀಲ ಸಮುದಾಯವನ್ನು ಹೊಂದಿರುವ ಬಡಾವಣೆ ಜಯನಗರ, ಇಲ್ಲಿ ಮತ್ತೊಂದು ಮಳಿಗೆಯನ್ನು ತೆರೆಯಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.
ಈ ನೂತನ ಮಳಿಗೆಯ ಉದ್ಘಾಟನೆಯನ್ನು ಘೋಷಿಸುತ್ತಾ, ಸಂಸ್ಥೆಯ ಸಿಎಂಡಿ ಡಾ. ಜಾಯ್ ಆಲುಕ್ಕಾಸ್ ಅವರು ಮಾತನಾಡಿ "ಬೆಂಗಳೂರು ನಿರಂತರವಾಗಿ ವಿಕಸನಗೊಳ್ಳುತ್ತಿರುವ ನಗರ. ಇಲ್ಲಿನ ಆ ಚೈತನ್ಯವನ್ನು ನಾವು ನಿಜವಾಗಿಯೂ ಮೆಚ್ಚುತ್ತೇವೆ. ಜಯನಗರದಲ್ಲಿ ನಮ್ಮ ಎರಡನೇ ಶೋರೂಮ್ಅನ್ನು ತೆರೆಯುವುದು ಕೇವಲ ಹೊಸ ವಿಳಾಸವನ್ನು ಸೇರಿಸುವುದಷ್ಟೇ ಅಲ್ಲ, ಬದಲಾಗಿ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿರುವ ಈ ಪ್ರದೇಶದ ಭಾಗವಾಗುವುದೂ ಸಹ ಆಗಿದೆ. ಪ್ರತಿಯೊಂದು ಹೊಸ ಶೋರೂಮ್ ಕೂಡ ನಮ್ಮ ಗ್ರಾಹಕರಿಗೆ ಹೆಚ್ಚಿನ ಆಯ್ಕೆ, ಹೆಚ್ಚಿನ ವಿಶ್ವಾಸ ಮತ್ತು ಸಂಭ್ರಮಿಸಲು ಹೆಚ್ಚಿನ ಕಾರಣಗಳನ್ನು ಒದಗಿಸುವ ಅವಕಾಶವಾಗಿದೆ. ಜಯನಗರ ಮತ್ತು ಬೆಂಗಳೂರಿನಾದ್ಯಂತ ಇರುವ ಪ್ರತಿಯೊಬ್ಬರಿಗೂ ನಮ್ಮ ಮಳಿಗೆಗೆ ಭೇಟಿ ನೀಡಲು, ನಮ್ಮ ಆಭರಣ ಸಂಗ್ರಹಗಳನ್ನು ವೀಕ್ಷಿಸಲು ಮತ್ತು ಈ ವಿಶೇಷ ಸಂದರ್ಭದ ಭಾಗವಾಗಲು ನಾವು ಆತ್ಮೀಯವಾಗಿ ಆಹ್ವಾನಿಸುತ್ತೇವೆ" ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಭರಣಗಳ ಮಜೂರಿಯ ಮೇಲೆ ಶೇ.೫೦% ನೇರ ರಿಯಾಯಿತಿಯ ವಿಶೇಷ ಕೊಡುಗೆ ಪಡೆಯಿರಿ. ಈ ಕೊಡುಗೆಯು ನವೆಂಬರ್ ೮, ೨೦೨೬ ರವರೆಗೆ ಚಾಲ್ತಿಯಲ್ಲಿರುತ್ತದೆ.