ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ದನಗಳಿಗೆ ಚಿಕಿತ್ಸೆ ಮಾಡೋ ಪಶುವೈದ್ಯ- ದನವಂತ್ರಿ

ಅಂದ ಹಾಗೆ ಇವತ್ತು ಪ್ರಿಂಟ್ ಮತ್ತು ಟಿವಿ ಮಾಧ್ಯಮಗಳಿಗಿಂತ ಹೆಚ್ಚು ಪ್ರಚಾರವನ್ನು ಕಡಿಮೆ ಖರ್ಚಿನಲ್ಲಿ ಮಾಡಿ ಕೊಡ್ತಾ ಇರೋದು ಸೋಷಿಯಲ್ ಮೀಡಿಯಾಗಳೇ ಬಿಡಿ. ಕೆಲವು ಪತ್ರಿಕೆಗಳಲ್ಲಿ ಯಾವತ್ತೋ ಒಂದು ದಿನ ಒಂದು ಸಣ್ಣ ಬಾಕ್ಸ್ ಐಟಂ ಸುದ್ದಿ ಬರುತ್ತೆ. ಟಿವಿಯಲ್ಲಿ ನಾಲ್ಕು ಸಾಲಿನ ಸುದ್ದಿ ಪ್ರಸಾರ ಆಗುತ್ತೆ. ಅದೂ ಅವರಿಗೆ ಜಾಹೀರಾತು ಕೊಟ್ಟರೆ ಮಾತ್ರ. ಇಲ್ಲದಿದ್ದರೆ.

Hari Paraak Column: ದನಗಳಿಗೆ ಚಿಕಿತ್ಸೆ ಮಾಡೋ ಪಶುವೈದ್ಯ- ದನವಂತ್ರಿ

-

ಹರಿ ಪರಾಕ್‌
ಹರಿ ಪರಾಕ್‌ Oct 18, 2026 2:22 PM

ತುಂಟರಗಾಳಿ

ಸಿನಿಗನ್ನಡ

ಮೊನ್ನೆ ರಾಮರಸ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಕಮ್ ನಿರ್ಮಾಪಕ ಗುರುದೇಶಪಾಂಡೆ ಮಾಧ್ಯಮಗಳ ಮೇಲೆ ಗರಂ ಆಗಿ, ನನಗೆ ಯೂಟ್ಯೂಬರ್ ಗಳು ಮತ್ತು ಫ್ರೀಲ್ಯಾನ್ಸರ್‌ಗಳೇ ಸಾಕು, ಟಿವಿ, ಪತ್ರಿಕೆ ಬೇಕಿಲ್ಲ ಎಂದು ನೇರವಾಗಿ ಗುಡುಗಿದ್ದಾರೆ. ನಂತರ ಎಂದಿನಂತೆ ವಿರೋಧ ವ್ಯಕ್ತವಾದಾಗ ಇವರ ಸಹವಾಸ ಯಾಕೆ ಅಂತ ಸಾರಿ ಹೇಳಿ ತಿಪ್ಪೆ ಸಾರಿಸಿದ್ದಾರೆ. ಆದರೆ ಅವರು ಏನೇ ಸಾರಿ ಹೇಳಿದರೂ ಮಾಧ್ಯಮಗಳನ್ನು ಅವರು ಪಕ್ಕಕ್ಕೆ ಸರಿಸಿದ್ದಾರೆ ಅನ್ನೋದು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.

ಅದೊಂಥರಾ ಸರಿನೇ ಬಿಡಿ. ಈಗಿನ ಕಾಲದ ಮಾಧ್ಯಮದವರಲ್ಲಿ ಕೆಲವೇ ಕೆಲವರು ಅಧಿಕಾರ ವಹಿಸಿಕೊಂಡವರಂತೆ ಕೆಳಗೆ ಕೂತು ಸಿನಿಮಾದವರನ್ನು ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಎಲ್ಲರಿಗೂ ಮೈ ಉರಿಯೋದು ಸಹಜ. ಅವತ್ತೂ ಅದೇ ಆಗಿದ್ದು. ಸಿನಿಮಾ ವಿಷಯ ಬಿಟ್ಟು ‘ಅವ್ರ್ ಯಾಕ್ ಬಂದಿಲ್ಲ, ಇವ್ರ್ ಯಾಕೆ ಬಂದಿಲ್ಲ’ ಅಂತ ರಾಗ ತೆಗೆದ ಪತ್ರಕರ್ತರೊಬ್ಬರ ಮೇಲೆ ಗುರು ಗರಂ ಆಗಿದ್ದರು. ಗುರು ಅವರು ‘ಏನ್ ಸಮಸ್ಯೆ ಇಲ್ಲ ಮುಂದಿನ ದಿನಗಳಲ್ಲಿ ಅವರು ಬರ್ತಾರೆ’ ಅಂತ ಹೇಳಿದ ಮೇಲೂ ಮುಂದೆ ಹೋಗದೆ ಅದೇ ಪ್ರಶ್ನೆಯನ್ನು ಜಗ್ಗಾಡಿದ್ದರಿಂದ ಗುರು ಅವರು ಇದ್ದ ವಿಷಯವನ್ನು ಹೇಳಿಕೊಂಡು ನನಗೆ ಸೋಷಿಯಲ್ ಮೀಡಿಯಾಗಳೇ ಸಾಕು ಎಂದಿದ್ದಾರೆ.

ಇದನ್ನೂ ಓದಿ: Hari Paraak Column: ಎಲ್ಲದಕ್ಕೂ ಡೆಮೋ ತೋರಿಸಿ ಅಂತ ಕೇಳೋದು- ʼಡೆಮೋʼ ಕ್ರಸಿ

ಅಂದ ಹಾಗೆ ಇವತ್ತು ಪ್ರಿಂಟ್ ಮತ್ತು ಟಿವಿ ಮಾಧ್ಯಮಗಳಿಗಿಂತ ಹೆಚ್ಚು ಪ್ರಚಾರವನ್ನು ಕಡಿಮೆ ಖರ್ಚಿನಲ್ಲಿ ಮಾಡಿ ಕೊಡ್ತಾ ಇರೋದು ಸೋಷಿಯಲ್ ಮೀಡಿಯಾಗಳೇ ಬಿಡಿ. ಕೆಲವು ಪತ್ರಿಕೆಗಳಲ್ಲಿ ಯಾವತ್ತೋ ಒಂದು ದಿನ ಒಂದು ಸಣ್ಣ ಬಾಕ್ಸ್ ಐಟಂ ಸುದ್ದಿ ಬರುತ್ತೆ. ಟಿವಿಯಲ್ಲಿ ನಾಲ್ಕು ಸಾಲಿನ ಸುದ್ದಿ ಪ್ರಸಾರ ಆಗುತ್ತೆ. ಅದೂ ಅವರಿಗೆ ಜಾಹೀರಾತು ಕೊಟ್ಟರೆ ಮಾತ್ರ. ಇಲ್ಲದಿದ್ದರೆ, ನೆಗೆಟಿವ್ ಸುದ್ದಿ ಗ್ಯಾರಂಟಿ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ 24 ಗಂಟೆ ಸಿನಿಮಾದ್ದೇ ಸಂಬಂಧಿತ ಸುದ್ದಿಗಳು, ರೀಲ್‌ಗಳು, ಪ್ರಮೋಷನಲ್ ವಿಡಿಯೋಗಳು ನಿರಂತರವಾಗಿ ಬರ್ತಾನೇ ಇರ್ತವೆ. ಮತ್ತು ಅವು ಹೆಚ್ಚು ಜನರನ್ನು ತಲುಪುತ್ತವೆ. ಅದರಿಂದಲೇ ‘ಪ್ರೇಮದ ಊರಲಿ’ ಅನ್ನೋ ಹೊಸಬರ ಸಿನಿಮಾ ಇಷ್ಟು ದೊಡ್ಡ ಮಟ್ಟಿಗೆ ಸಕ್ಸಸ್ ಆಗಿರೋದು ಅನ್ನೋದು ಸಂಪೂರ್ಣ ಸುಳ್ಳಲ್ಲ. ಹಾಗಾಗಿ ಬಾಯಿತಪ್ಪಿ ಸತ್ಯ ಹೇಳಿರುವ ಗುರು ದೇಶಪಾಂಡೆ ಅವರನ್ನು ಮುಖ್ಯ ವಾಹಿನಿಯ ಮಾಧ್ಯಮ ಮಿತ್ರರು ದೊಡ್ಡ ಮನಸ್ಸು ಮಾಡಿ ಕ್ಷಮಿಸಬೇಕಾಗಿದೆ ಅಂದ್ರೆ ತಪ್ಪೇನಿಲ್ಲ ಬಿಡಿ.

ಲೂಸ್‌ ಟಾಕ್-‌ ಲಾಲೂ ಪ್ರಸಾದ್‌ ಯಾದವ್

ನವೆಂಬರ್ ಕನ್ನಡಿಗ ನಮಸ್ಕಾರ, ಸ್ವಾಭಿಮಾನಿ ಕನ್ನಡಿಗರಿಗೆ, 10 ಗಂಟೆ ಆದ್ರೂ ಇನ್ನೂ ಮಲಗೇ ಇದ್ದೀರಲ್ಲ, ಏಳಿ ಸ್ವಾಮಿ ಎದ್ದೇಳಿ, ರಾಜ್ಯೋತ್ಸವ ಬರ್ತಾ ಇದೆ. ‌

- ಹಲೋ, ಬಾಸ್, ಇದಿನ್ನೂ ಅಕ್ಟೋಬರ್. ರಾಜ್ಯೋತ್ಸವ ಬರೋಕೆ ಇನ್ನೂ ಟೈಮಿದೆ.

ಹೋ, ಅಂದ್ರೆ ನೀವು ನವೆಂಬರ್ 1ಕ್ಕೆ ಮಾತ್ರ ಕನ್ನಡಿಗರಾ? ಸರಿ, ಬೆಂಗಳೂರಲ್ಲಿ ಕನ್ನಡ ಮಾತಾಡದೇ ಇದ್ರೆ, ಕನ್ನಡ ಹಾಡು ಹಾಕದಿದ್ರೆ, ಕನ್ನಡದಲ್ಲಿ ಬೋರ್ಡ್ ಹಾಕದಿದ್ರೆ ನಮ್ಮವರು ಹೊರಗಿನವರ ಮೇಲೆ ಕೈ ಮಾಡ್ತಾರಲ್ಲ ಇದು ಸರೀನಾ?

- ಮತ್ತೆ, ಬೋರ್ಡಿಗಿಲ್ಲದವರೆ ಇಲ್ಲಿಗೆ ಬಂದು, ಕನ್ನಡ ಬೋರ್ಡ್ ಹಾಕಲ್ಲ ಅಂದ್ರೆ, ಸುಮ್ನೆ ಇರ್ಬೇಕಾ. ಕುವೆಂಪು ಅವರೇ ಹೇಳಿದ್ದಾರಲ್ಲ, ಕನ್ನಡಕ್ಕಾಗಿ ಕೈ ಎತ್ತು ಅಂತ. ಇಲ್ಲಾ ಅಂದ್ರೆ ನಾವ್ ತಲೆ ಎತ್ಕೊಂಡ್ ಓಡಾಡೋಕಾಗುತ್ತಾ.

ಸಾರ್, ಕುವೆಂಪು ಅವರು ಹೇಳಿದ್ದು ಬೇರೆ ಅರ್ಥದಲ್ಲಿ ಹೋಗ್ಲಿ ಬಿಡಿ, ನೀವು ಕನ್ನಡ ರಕ್ಷಕರು ಅಲ್ವಾ? ಹಾಗಿದ್ರೆ ಒಂದಿಬ್ಬರು ಕನ್ನಡಕ್ಕಾಗಿ ಹೋರಾಡಿದ ಒಂದಿಬ್ಬರು ಮಹನೀಯರ ಹೆಸರು ಹೇಳಿ ನೋಡೋಣ?

- ನಾರಾಯಣಗೌಡ್ರು, ರೂಪೇಶ್ ರಾಜಣ್ಣ, ಕಿರಿಕ್ ಕೀರ್ತಿ, ಮತ್ತೆ... ಇನ್ನೊಂದಿಬ್ರು ಇದ್ದಾರೆ, ಇರಿ ಹೇಳ್ತೀನಿ

ಅಯ್ಯೋ, ಸಾಕು ಬಿಡಿ, ಓವರ್ ಡೋಸ್ ಆಗೋಯ್ತು. ಸರಿ, ಸಾಫ್ಟ್‌ʼವೇರ್ ಕಂಪನಿಗಳಲ್ಲಿ ಕನ್ನಡವನ್ನ, ಕನ್ನಡಿಗರನ್ನ ನಿರ್ಲಕ್ಷ್ಯ ಮಾಡ್ತಿದಾರೆ. ನೀವು ಅಲ್ಲಿ ಕೆಲಸ ಮಾಡ್ತಾ ಇದ್ರೆ ಏನ್ ಮಾಡ್ತಿದ್ರಿ?

- ನಾನು ಅಂಥವರ ಕೈ ಕೆಳಗೆ ಕೆಲಸ ಮಾಡೋದೇ ಇಲ್ಲ. ಬೇಕಿದ್ರೆ ಸರ್ಕಾರಿ ಕೆಲಸ ಸೇರಿ, ಟೇಬಲ್ ಕೆಳಗೆ ಕೈ ಇಟ್ಕೊಂಡ್ ಜೀವನ ಮಾಡ್ತೀನಿ.

ಓಹೋ, ಟೇಬಲ್ ಮ್ಯಾನರ್ಸ್ ಬಗ್ಗೆ ಮಾತಾಡ್ತಾ ಇದ್ದೀರಿ. ಆದ್ರೆ ಈ ಟೈಮ್ ಟೇಬಲ್ ಹಾಕ್ಕೊಂಡು, ನವೆಂಬರ್ ಟೈಮ್ ಬಂದಾಗ ಮಾತ್ರ ಕನ್ನಡ, ಕನ್ನಡ ಅನ್ನೋರಿಗೆ ನಿಮ್ಮ ಕಿವಿ ಮಾತು ?

- ಏನಿಲ್ಲ ಬಿಡ್ರೀ, ಅದರಲ್ಲಿ ತಪ್ಪೇನಿದೆ. ಅವರಿಗೆ ಒಳ್ಳೆ ಟೈಮ್ ಸೆನ್ಸ್ ಇದೆ ಅಂತ ಅಪ್ರಿಶಿಯೇಟ್ ಮಾಡ್ಬೇಕು.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಅವತ್ತು ಮರಿಖೇಮು ಟೀಚರ್ದು ಬರ್ತ್ ಡೇ ಇತ್ತು. ಸೋ, ಸ್ಕೂಲಿನ ಎಲ್ಲಾ ಮಕ್ಕಳು ಟೀಚರ್‌ಗೆ ಅಂತ ವೆರೈಟಿ, ವೆರೈಟಿ ಗಿಫ್ಟ್‌ʼಗಳನ್ನ ತಂದಿದ್ರು. ಮರಿಖೇಮು ಕೂಡ ಗಿಫ್ಟ್ ತಗೊಂಡ್ ಹೋದ. ಸರಿ ಶಾಲೆಯಲ್ಲಿ ಪಾಠ ಮಾಡಿದ ನಂತರ ಟೀಚರ್ ಹುಟ್ಟುಹಬ್ಬದ ಸೆಲೆಬ್ರೇಷನ್ ಶುರು ಆಯ್ತು. ಮೊದಲು ಟೀಚರ್ ಎಲ್ಲಾ ಮಕ್ಳಿಗೂ ಸ್ವೀಟ್ ಕೊಟ್ರು, ಎಲ್ಲ ಮಕ್ಕಳೂ ಖುಷಿಯಾದ್ರು. ನಂತರ ಒಂದಷ್ಟು ಹೊತ್ತು ಎಂಟರ್‌ಟೈನ್‌ಮೆಂಟ್ ಪ್ರೋಗ್ರಾಮ್ ನಡೀತು. ಕೊನೆಯಲ್ಲಿ ಎಲ್ಲ ಮಕ್ಕಳು ಟೀಚರ್‌ಗೆ ಗಿಫ್ಟ್ ಕೊಡೋ ಸಮಯ. ಸರಿ ಮಕ್ಕಳೆ ಒಬ್ಬೊಬ್ಬರಾಗಿ ಸಾಲಿನಲ್ಲಿ ನಿಂತಿದ್ದರು. ಎಲ್ಲರ ಕೈಯಲ್ಲೂ ದೊಡ್ಡ ದೊಡ್ಡ ಪ್ಯಾಕೆಟ್‌ಗಳು, ಟೇಚರ್ ಫುಲ್ ಖುಷ್ ಆಗಿದ್ರು, ಸರಿ ಮೊದಲ ಮಗು ಬಂತು. ಅದು ಸೂಪರ್ ಮಾರ್ಕೆಟ್ ಓನರ್ ಮಗಳು, ಬಾಕ್ಸ್‌ನಲ್ಲಿ ಡ್ರೈ ಫ್ರೂಟ್ಸ್ ಇರಬಹುದು ಅಂತ ಟೀಚರ್ ಗೆಸ್ ಮಾಡಿದ್ರು. ನಂತ್ರ ಅದರ ಕೈಯಿಂದ ಗಿಫ್ಟ್ ತೆಗೆದುಕೊಂಡ ಟೀಚರ್ ತೆಗೆದು ನೋಡಿದರು. ಬಾಕ್ಸ್ ತುಂಬಾ ಡ್ರೈ ಫ್ರೂಟ್ಸ್ ಇತ್ತು.

ಟೀಚರ್ ಖುಷ್. ಮುಂದಿನ ಮಗು ಬಂತು. ಅದು ಚಾಕ್ಲೇಟ್ ಅಂಗಡಿ ಓನರ್ ಮಗ, ಬಾಕ್ಸ್‌ನಲ್ಲಿ ಚಾಕ್ಲೇಟ್ ಇರಬಹುದು ಅಂದ್ಕೊಂಡ್ರು ಟೀಚರ್. ಅದರ ಕೈಯಿಂದ ಟೀಚರ್ ಗಿಫ್ಟ್ ಇಸ್ಕೊಂಡ್ರು. ತೆಗೆದು ನೋಡಿದರೆ ಬಾಕ್ಸ್ ತುಂಬಾ ಚಾಕ್ಲೇಟ್ ಗಳು. ಟೀಚರ್ ಫುಲ್ ಖುಷ್. ನಂತರ ಇನ್ನೊಂದು ಮಗು ಬಂತು. ಅದು -ವರಿಸ್ಟ್ ಮಗಳು, ಬಾಕ್ಸ್‌ನಲ್ಲಿ ಮೋಸ್ಟ್‌ಲೀ ಹೂವುಗಳಿರಬಹುದು ಅಂದ್ಕೊಂಡ್ರು ಟೀಚರ್. ತೆಗೆದು ನೋಡಿದರೆ ಸಕತ್ ಬ್ಯೂಟಿಫುಲ್ ಫ್ರೆಷ್ ಹೂವುಗಳು, ಟೀಚರ್ ಫುಲ್ ಖುಷ್. ಕೊನೆಗೆ ಮರಿಖೇಮು ಬಂದ. ಅವನು ವೈನ್ ಸ್ಟೋರ್ ಓನರ್ ಮಗ ಅಂತ ಟೀಚರ್‌ಗೆ ಗೊತ್ತಿತ್ತು. ಮೋಸ್ಟ್‌ಲೀ ವೈನ್ ತಂದಿರಬೇಕು ಅಂಡ್ಕೊಂಡು ಬಾಕ್ಸ್ ಇಸ್ಕೊಂಡ್ರು. ಇಸ್ಕೊಳ್ಳುವಾಗ ಕೈ ಸ್ವಲ್ಪ ಒದ್ದೆಯಾಯ್ತು. ಬೆರಳನ್ನ ನೆಕ್ಕಿ ನೋಡಿದರು. ಒಂಥರಾ ಉಪ್ಪುಪ್ಪು ಟೇಸ್ಟ್ ಇತ್ತು. ‘ಯಾವ ವೈನ್ ಇದು? ಉಪ್ಪುಪ್ಪಾಗಿದೆ’ ಅಂತ ಮರಿಖೇಮುನಾ ಕೇಳಿದ್ರು. ಅದಕ್ಕೆ ಮರಿಖೇಮು ಹೇಳಿದ ‘ನಾನು ತಂದಿರೋದು ವೈನ್ ಅಲ್ಲ, ಬೆಕ್ಕಿನ ಮರಿ’.

ಲೈನ್‌ ಮ್ಯಾನ್

ಒಂದೇ ಥರ ಸೌಂಡ್ ಬರೋ ಸ್ಟೀರಿಯೋ ಸಿಸ್ಟಮ್‌ಗಳನ್ನ ಏನಂತಾರೆ? ‌

- ಸ್ಟೀರಿಯೋಟೈಪ್ಡ್ ಆಲಿಯಾ ಭಟ್ ಪೆಟ್ ನೇಮ್ ಆಲೂ ಅಂತೆ.

- ಅವ್ರನ್ನ ಏನಂತ ಕರೆಯೋದು? ಆಲಿಯಾ ಆಲಿಯಾಸ್ ಆಲೂ

ಸೈಕಲ್‌ಗಳ ರಿಪೇರಿ ಬಗ್ಗೆ ತುಂಬಾ ತಿಳಿದುಕೊಂಡವ?

- ಸೈಕಲಾಜಿಸ್ಟ್

ಕಿಡ್ನಿ ಥರಾ ಹಾರ್ಟ್‌ನಲ್ಲೂ ಸ್ಟೋನ್ಸ್ ಆದ್ರೆ

- ಅದು ’ಕಲ್ಲು’ ಹೃದಯ

ದನಗಳಿಗೆ ಚಿಕಿತ್ಸೆ ಮಾಡುವ ಪಶುವೈದ್ಯ

- ದನವಂತ್ರಿ

ಚೀನಾದ ವಸ್ತುಗಳನ್ನು ಕೊಂಡುಕೊಳ್ಳೋದು ಕಡಿಮೆ ಮಾಡುವ ಪಾಲಿಸಿ

- ಚೀನೀ ಕಮ್

ಸರ್ದಾರ್ ಜೀ ಮಾಡುವ ಅಟ್ಯಾಕ್

- ಸರ್ ಜೀ‘ಕಲ್’ಸ್ಟ್ರೈಕ್

ನಾಗರ ಹಾವು ಕಪ್ಪಗಿದ್ರೆ ಅದು

- ನಾಗರ ಹಾವಲ್ಲ ನೀಗ್ರೋ ಹಾವು

ಆಗ ತಾನೆ ಕಟ್ಟಿದ ಮನೆ ಕುಸಿದು ಬಿದ್ರೆ, ಆ ಸುದ್ದಿಗೆ ತಲೆಬರಹ

- ನಯಾ ಘರ್ ಫಾಲ್ಸ್