ಕಚೇರಿಗೆ ಬಂದು ಕೆಲಸ ಮಾಡದೇ ಇದ್ದರೆ ಸಂಬಳ ಹೆಚ್ಚಿಸಲ್ಲ, ಬಡ್ತಿ ಸಿಗಲ್ಲ; ಟಿಸಿಎಸ್‌ನಿಂದ ಉದ್ಯೋಗಿಗಳಿಗೆ ಎಚ್ಚರಿಕೆ
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶಾದ್ಯಂತ ಐಟಿ ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಿತ್ತು. ಅನುಕೂಲತೆಗೆ ತಕ್ಕಂತೆ ಕೆಲವೊಂದು ಕಂಪೆನಿಗಳು ಇದನ್ನು ಸಾಂಕ್ರಾಮಿಕದ ಬಳಿಕವೂ ಮುಂದುವರಿಸಿದೆ. ಆದರೆ ಇದರ ಪರಿಣಾಮವಾಗಿ ಕೆಲವು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಕಂಪೆನಿಗಳಿಗೆ ಸವಾಲಾಗಿ ಪರಿಣಮಿಸಿದೆ. ಹೇಗಾದರೂ ಮಾಡಿ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಲು ಕೆಲವು ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ನೀಡುವ ಕೆಲವೊಂದು ಸವಲತ್ತುಗಳನ್ನು ಕಡಿತಗೊಳಿಸಲು ಯೋಜನೆ ಹಾಕಿಕೊಂಡಿದೆ. ಅವುಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕೂಡ ಒಂದು.
(ಸಂಗ್ರಹ ಚಿತ್ರ) -
ಬೆಂಗಳೂರು: ದೇಶದ ಪ್ರಮುಖ ಐಟಿ ಕಂಪೆನಿಗಳಲ್ಲಿ (IT company) ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services) ಇದೀಗ ಉದ್ಯೋಗಿಗಳು ಐದು ದಿನಗಳ ಕಾಲ ಕಚೇರಿಯಲ್ಲಿ ಕೆಲಸ (office work compulsory) ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದನ್ನು ಪಾಲಿಸದೇ ಇದ್ದರೆ ಉದ್ಯೋಗಿಗಳಿಗೆ ಕಂಪೆನಿಯಿಂದ ಯಾವುದೇ ವಿಶೇಷ ಸೌಲಭ್ಯ ದೊರೆಯುವುದಿಲ್ಲ. ಕಚೇರಿಗೆ (office work) ಬಂದು ಕೆಲಸ ಮಾಡದವರಿಗೆ ಸಂಬಳ ಹೆಚ್ಚಳ (salary increment) ಮಾಡೋದಿಲ್ಲ ಹಾಗೂ ಬಡ್ತಿ ( promotion) ಕೂಡ ಸಿಗುವುದಿಲ್ಲ ಎಂದು ಕಂಪೆನಿ ಹೇಳಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶಾದ್ಯಂತ ಹಲವಾರು ಐಟಿ ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಿತ್ತು. ಸಾಂಕ್ರಾಮಿಕದಿಂದ ಚೇತರಿಸಿಕೊಂಡ ಬಳಿಕ ಅನುಕೂಲತೆಗೆ ತಕ್ಕಂತೆ ಕೆಲವೊಂದು ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಅನ್ನು ಸಾಂಕ್ರಾಮಿಕದ ಬಳಿಕವೂ ಮುಂದುವರಿಸಿದೆ. ಆದರೆ ಇದರ ಪರಿಣಾಮವಾಗಿ ಕೆಲವು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಕಂಪೆನಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಹವಾಮಾನ ವೈಪರೀತ್ಯ: ಇಂಗ್ಲೆಂಡ್‌ನಲ್ಲಿ ಎರಡು ಏರ್ ಇಂಡಿಯಾ ವಿಮಾನಗಳಿಗೆ ಪರ್ಯಾಯ ವ್ಯವಸ್ಥೆ
ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನೇ ಬಯಸುವ ಉದ್ಯೋಗಿಗಳನ್ನು ಹೇಗಾದರೂ ಮಾಡಿ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಲು ಕೆಲವು ಕಂಪೆನಿಗಳು ಉದ್ಯೋಗಿಗಳಿಗೆ ನೀಡುವ ಕೆಲವೊಂದು ಸವಲತ್ತುಗಳನ್ನು ಕಡಿತಗೊಳಿಸಲು ಯೋಜನೆ ಹಾಕಿಕೊಂಡಿದೆ. ಅವುಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಈ ನಿಟ್ಟಿನಲ್ಲಿ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡದೇ ಇದ್ದರೆ ಅವರಿಗೆ ಸಂಬಳ ಹೆಚ್ಚಳ ಮಾಡೋದಿಲ್ಲ ಹಾಗೂ ಬಡ್ತಿ ಕೂಡ ಸಿಗೋದಿಲ್ಲ ಎಂದು ಕಂಪೆನಿಯು ತಿಳಿಸಿದೆ. ಇದು ಔದ್ಯೋಗಿಕ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.
ಭಾರತದಲ್ಲಿ ಬದಲಾಗುತ್ತಿರುವ ವ್ಯಾಪಾರಿ ವಂಚನೆಯ ಸ್ವರೂಪ: ವ್ಯವಹಾರಗಳು ತಿಳಿದುಕೊಳ್ಳಬೇಕಾದ ಸಂಗತಿಗಳು
ಕಂಪೆನಿಯ ನೆಟ್ವರ್ಕ್ ಸಮಸ್ಯೆಗಳ ಸಂದರ್ಭದಲ್ಲಿ ಹೆಚ್ಚಿನ ಆಧಾರವನ್ನು ಪರಿಶೀಲಿಸುತ್ತಿರುವ ಕಂಪೆನಿಯು ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಐದು ದಿನ ಕಚೇರಿಗೆ ಆಗಮಿಸಲೇಬೇಕು ಎನ್ನುವ ಒತ್ತಡ ಹೇರುತ್ತಿದೆ. ಇದು ಈಗ ಕಚೇರಿ ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸಿದೆ.