ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇಶದ ಒಳ ನುಸುಳಲು ಭಯೋತ್ಪಾದಕರ ಯತ್ನ; ನೌಶೇರಾದಲ್ಲಿ ಉಗ್ರ ಘಟಕ ಪತ್ತೆ

ದೇಶದ ಒಳನುಸುಳಲು ಭಯೋತ್ಪಾದಕರು ಸಂಚು ರೂಪಿಸಿದ್ದು, ಈ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಗುಪ್ತಚರ ಮಾಹಿತಿ ಆಧಾರದಲ್ಲಿ ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚಿದೆ. ಸುಂದರ್‌ಬನಿಯಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಯೋತ್ಪಾದಕರು ಒಳನುಸುಳಲು ಪ್ರಯತ್ನ ನಡೆಸಿರುವುದು ಕಂಡು ಬಂದಿದೆ.

ಒಳನುಸುಳಲು ಸಂಚು; ಭಯೋತ್ಪಾದಕರ ಪ್ರಯತ್ನ ವಿಫಲ

ಸಂಗ್ರಹ ಚಿತ್ರ -

ಕಾಶ್ಮೀರ: ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ (Line of Control) ಭಯೋತ್ಪಾದಕರು (Terrorists) ದೇಶದ ಒಳನುಸುಳಲು ಸಂಚು ರೂಪಿಸಿರುವ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ಸೇನೆಯು (Indian Army) ಸುಂದರ್‌ಬನಿಯಲ್ಲಿ (Sunderbani sector) ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಯೋತ್ಪಾದಕರು ಒಳನುಸುಳಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ವೈಟ್ ನೈಟ್ ಕಾರ್ಪ್ಸ್ ನಡೆಸಿದ ಪ್ರತ್ಯೇಕ ಜಂಟಿ ಕಾರ್ಯಾಚರಣೆಯಲ್ಲಿ ನೌಶೇರಾ ನಿವಾಸಿಯನ್ನು ಬಂಧಿಸಲಾಗಿದೆ. ಜೊತೆಗೆ ವಿದೇಶಿ ನಿರ್ಮಿತ ಪಿಸ್ತೂಲ್‌, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಸುಂದರ್‌ಬನಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಫೆಬ್ರವರಿ 19 ರ ಮುಂಜಾನೆ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಯಿತು. ಹತ್ತಿರದ ನೌಶೇರಾದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕ ಘಟಕವನ್ನು ಭೇದಿಸಿದೆ.

ಅಪ್ರಾಪ್ತ ಬಾಲಕಿಗೆ 'ಫ್ಲೈಯಿಂಗ್ ಕಿಸ್' ನೀಡಿದ್ದ ವ್ಯಕ್ತಿಗೆ 9 ವರ್ಷಗಳ ಬಳಿಕ ಜೈಲು ಶಿಕ್ಷೆ

ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ನೀಡಿರುವ ಮಾಹಿತಿ ಪ್ರಕಾರ, ಗುಪ್ತಚರ ಇಲಾಖೆ ಮಾಹಿತಿ ಆಧಾರದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸುಂದರ್‌ಬನಿಯ ನಾಥುವಾ ಟಿಬ್ಬಾ ಪ್ರದೇಶದಲ್ಲಿ ಭಯೋತ್ಪಾದಕರ ಅನುಮಾನಾಸ್ಪದ ಚಲನೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪಡೆಗಳು ತ್ವರಿತ ಕಾರ್ಯಾಚರಣೆ ನಡೆಸಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದವು ಎಂದು ತಿಳಿಸಿದೆ.



ಈ ಪ್ರದೇಶದಲ್ಲಿ ಭೂ ಮತ್ತು ವಾಯು ಕಣ್ಗಾವಲು ಇರಿಸಲಾಗಿದ್ದು, ಈ ರೀತಿಯ ಇನ್ಯಾವುದೇ ಪ್ರಯತ್ನವನ್ನು ತಡೆಗಟ್ಟಲು ವಲಯದಾದ್ಯಂತ ಉನ್ನತ ಮಟ್ಟದ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಸೇನೆಯು ತಿಳಿಸಿದೆ.

ವೈಟ್ ನೈಟ್ ಕಾರ್ಪ್ಸ್ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಐಎಫ್ ರೋಮಿಯೋ ನಡೆಸಿರುವ ಜಂಟಿ ಕಾರ್ಯಾಚರಣೆಯಲ್ಲಿ ನೌಶೇರಾದ ನಿವಾಸಿ ಸಚಿನ್ ಅಲಿಯಾಸ್ ಪಮ್ಮಾ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಭದ್ರತಾ ಪಡೆಗಳು ಟರ್ಕಿ ನಿರ್ಮಿತ ಟಿಐಎಸ್ಎಎಸ್ ಜಿಗಾನಾ 9 ಎಂಎಂ ಪಿಸ್ತೂಲ್, ಚೀನಾ ನಿರ್ಮಿತ ಟಿಟಿ -30 (ನೊರಿಂಕೊ) ಪಿಸ್ತೂಲ್, ಎರಡು ವಿಸ್ತೃತ 50-ಸುತ್ತಿನ ಜಿಗಾನಾ ಮ್ಯಾಗಜೀನ್‌ಗಳು, ಎರಡು ಸ್ಟ್ಯಾಂಡರ್ಡ್ ಪಿಸ್ತೂಲ್ ಮ್ಯಾಗಜೀನ್‌ಗಳು ಮತ್ತು 9 ಎಂಎಂ ಲೈವ್ ಮದ್ದುಗುಂಡುಗಳ 15 ಸುತ್ತುಗಳನ್ನು ವಶಪಡಿಸಿಕೊಂಡಿವೆ.

ಪತ್ರಿಕೆಯ ಪ್ರಧಾನ ಸಂಪಾದಕನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು! ಗಂಭೀರ ಗಾಯ ಆಸ್ಪತ್ರೆಗೆ ದಾಖಲು

ಸಚಿನ್ ಅಲಿಯಾಸ್ ಪಮ್ಮಾ ಪಾಕಿಸ್ತಾನ ಮೂಲದ ಭಯೋತ್ಪಾದಕರು ಮತ್ತು ಕಳ್ಳಸಾಗಣೆದಾರರೊಂದಿಗೆ ನೇರ ಸಂಪರ್ಕದಲ್ಲಿದ್ದನು. ಗಡಿಯಾಚೆಗಿನ, ಅಂತರ ರಾಜ್ಯ ಶಸ್ತ್ರಾಸ್ತ್ರಗಳ ಜಾಲವನ್ನು ನಿರ್ವಹಿಸುತ್ತಿದ್ದದ್ದನು ಎನ್ನಲಾಗಿದೆ.