ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹತ್ತಿರದಿಂದ ಶೂಟ್, ಮುರಿದ ಪಕ್ಕೆಲುಬು...ಹನೂರು ಶೂಟೌಟ್‌ ವೇಳೆ ಹತರಾದ ತಮಿಳುನಾಡು ಬೇಟೆಗಾರರ ಮರಣೋತ್ತರ ಪರಿಕ್ಷೆಯ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

hanuru shootout: ಚಾಮರಾಜನಗರ ಜಿಲ್ಲೆಯಲ್ಲಿ ಆಗಸ್ಟ್ 15ರಂದು ನಡೆದಿರುವ ತಮಿಳುನಾಡಿನ ಬೇಟೆಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಶವ ಪರೀಕ್ಷೆ ವರದಿ ಬಹಿರಂಗವಾಗಿದೆ. ಇದರಲ್ಲಿ ಹತ್ತಿರದಿಂದ ಶೂಟ್ ಮಾಡಿದ್ದು, ಪಕ್ಕೆಲುಬು ಮುರಿದಿರುವುದು ದೃಢಪಟ್ಟಿದೆ. ಈ ಕುರಿತು ರಾಜ್ಯ ಸರ್ಕಾರವು ವಿಷಯಗಳನ್ನು ಮುಚ್ಚಿಟ್ಟಿದೆ ಎಂಬುದಾಗಿ ಬಿಜೆಪಿ ಆರೋಪಿಸಿದೆ.

ಬೇಟೆಗಾರರ ಹತ್ಯೆ ಪ್ರಕರಣ: ಶವಪರೀಕ್ಷೆ ವರದಿ ಹೇಳುವುದೇನು?

ಸಂಗ್ರಹ ಚಿತ್ರ -

ಬೆಂಗಳೂರು: ತಮಿಳುನಾಡಿನ ಬೇಟೆಗಾರರ (Tamil Nadu hunters) ಹತ್ಯೆಗೆ (hanuru shootout) ಸಂಬಂಧಿಸಿ ಶವ ಪರೀಕ್ಷಾ ವರದಿ ಬಹಿರಂಗವಾಗಿದೆ. ಇದರಲ್ಲಿ ಹತ್ತಿರದಿಂದ ಶೂಟ್ ಮಾಡಿರುವುದು, ಪಕ್ಕೆಲುಬು ಮುರಿದಿರುವುದಾಗಿ ತಿಳಿಸಲಾಗಿದೆ. ಈ ಘಟನೆ ಆಗಸ್ಟ್ 15ರಂದು ಚಾಮರಾಜನಗರ (chamrajnagar) ಜಿಲ್ಲೆಯಲ್ಲಿ ನಡೆದಿದ್ದು, ಗುಂಡಿನ ಚಕಮಕಿಯ ಬಗ್ಗೆ ರಾಜ್ಯ ಸರ್ಕಾರವು ಸತ್ಯ ಸಂಗತಿಗಳನ್ನು ಮುಚ್ಚಿಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ (BJP), ಚಾಮರಾಜನಗರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾದ ಮೂವರು ಶಂಕಿತ ಬೇಟೆಗಾರರಲ್ಲಿ ಇಬ್ಬರ ಮೇಲೆ ತುಂಬಾ ಹತ್ತಿರದಿಂದ ಶೂಟ್ ಮಾಡಲಾಗಿದೆ. ಮೃತರ ಎದೆ, ಹೊಟ್ಟೆ ಮತ್ತು ತೊಡೆಯ ಮೇಲೆ ಅನೇಕ ಗಾಯದ ಗುರುತುಗಳಿರುವುದಾಗಿ ಶವ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ ಎಂದು ತಿಳಿಸಿದೆ.

ತಮಿಳುನಾಡಿನ ಸೆಬಾಸ್ಟಿಯನ್ ಡೇವಿಡ್ ಕುಮಾರ್, ಆಂಥೋನಿ ಸ್ವಾಮಿ ಮತ್ತು ಜಾನ್ ರೋಸ್ ಪೀಟರ್ ಅವರನ್ನು ಕರ್ನಾಟಕ-ತಮಿಳುನಾಡು ಗಡಿಯ ಬಳಿ ಆಗಸ್ಟ್ 15ರಂದು ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಶಂಕಿತ ಬೇಟೆಗಾರರಾಗಿರುವ ಇವರು ಬೇಟೆ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಸಿಬ್ಬಂದಿ ಮೇಲೆ ದಾಳಿ ನಡೆಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದರು. ಆದರೆ ಇದು ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿತ್ತು.

23 ಕಾಶ್ಮೀರಿ ಪಂಡಿತರ ಹತ್ಯಾಕಾಂಡ: 28 ವರ್ಷಗಳ ಬಳಿಕ ಕೇಸ್‌ ರೀ ಓಪನ್‌, ಮರು ತನಿಖೆಗೆ ಆದೇಶ

ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ?

ಸೆಬಾಸ್ಟಿಯನ್ ಡೇವಿಡ್ ಕುಮಾರ್ ಅವರ ಎಡಭಾಗದ ಎದೆ ಮತ್ತು ಬಲ ಭಾಗದ ತೊಡೆಯ ಮೇಲೆ ಅನೇಕ ಶಾಟ್‌ಗನ್ ಗಾಯಗಳಿವೆ. ಹತ್ತಿರದಿಂದ ಗುಂಡು ಹಾರಿಸಲಾಗಿದೆ. ಆಂಥೋನಿ ಸ್ವಾಮಿ ಅವರ ಮೇಲೆ ಕೂಡ ಹತ್ತಿರದಿಂದ ಗುಂಡು ಹಾರಿಸಿದ್ದು ಅವರಿಗೆ ಎದೆ ಮತ್ತು ಹೊಟ್ಟೆಯ ಮೇಲೆ ಶಾಟ್‌ಗನ್ ಗಾಯವಿದೇ. ಪಕ್ಕೆಲುಬು ಮುರಿದಿದೆ ಎಂದು ವರದಿ ತಿಳಿಸಿದೆ. ಜಾನ್ ರೋಸ್ ಪೀಟರ್ ಅವರ ಪರೀಕ್ಷೆ ವರದಿ ಇನ್ನು ಬರಬೇಕಿದೆ.

ಇದಕ್ಕೆ ಸಂಬಂಧಿಸಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರವು ನಿರ್ಣಾಯಕ ಮಾಹಿತಿಯನ್ನು ಮುಚ್ಚಿಟ್ಟಿದೆ. ಹನೂರ್ ಕಾಡಿನಲ್ಲಿ ಏನಾಗಿತ್ತು ಎಂಬುದನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ ಎಂದು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿರುವ ಸಮಿತಿಗೆ ಹಲವಾರು ಗಂಭೀರ ಪ್ರಶ್ನೆಗಳು ಮತ್ತು ಅನುಮಾನಗಳು ಕಾಡಿವೆ. ಮರಣೋತ್ತರ ಪರೀಕ್ಷೆಯ ವರದಿಗಳನ್ನು ಏಕೆ ಬಹಿರಂಗಪಡಿಸಲಾಗಿಲ್ಲ ಎಂದು ಸರ್ಕಾರ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಮಿಳುನಾಡು ಹೇಳುವುದೇನು?

ತಮಿಳುನಾಡು ಮತ್ತು ಕರ್ನಾಟಕದ ನಡುವೆ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಿರುವ ಈ ಘಟನೆ ಬಗ್ಗೆ ತಮಿಳುನಾಡು ನಾಯಕರು ಕೂಡ ಕರ್ನಾಟಕ ಅರಣ್ಯ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇದನ್ನು ಖಂಡಿಸಿ, ಇದೊಂದು ಕ್ರೂರ ಹತ್ಯೆ. ಕರ್ನಾಟಕ ಅರಣ್ಯ ಇಲಾಖೆ ನೀಡಿದ ವಿವರಣೆ ಸ್ವೀಕಾರಾರ್ಹವಲ್ಲ. ಈ ಘಟನೆಯ ಕುರಿತು ಉನ್ನತ ಮಟ್ಟದ ಸಮಿತಿಯಿಂದ ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಹೊಣೆಗಾರರ ​​ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಅವರು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ನೀಡುವಂತೆ ಕರ್ನಾಟಕವನ್ನು ಒತ್ತಾಯಿಸಿದ್ದಾರೆ. ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಕೂಡ ಇದನ್ನು ಖಂಡಿಸಿದ್ದಾರೆ.

ನಾರಿಯರಲ್ಲಿ ಆಟೋಇಮ್ಯುನ್ ಕಾಯಿಲೆಗಳ ಹೆಚ್ಚಳ ಮತ್ತು ರೋಗ ನಿರೋಧಕತೆಯ ಸವಾಲು

ಕರ್ನಾಟಕದ ಸಮರ್ಥನೆ

ಅಗತ್ಯ ತನಿಖೆಗೆ ಆದೇಶಿಸಲಾಗಿದೆ. ಮತ್ತೊಂದು ರಾಜ್ಯದ ಆಡಳಿತ ವ್ಯವಹಾರಗಳಲ್ಲಿ ತಮಿಳುನಾಡು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿರುವ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಸರ್ಕಾರವು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸಿಬಿಐ ತನಿಖೆಗಾಗಿ ತಮಿಳುನಾಡು ರಾಜಕಾರಣಿಗಳ ಬೇಡಿಕೆಗಳನ್ನು ಅವರು ತಿರಸ್ಕರಿಸಿದರು.