ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಿಶ್ತ್ವಾರ್‌ನ ಭಯೋತ್ಪಾದಕರ ಅಡಗುತಾಣದಲ್ಲಿ ಪತ್ತೆಯಾಯಿತು ಭಾರಿ ಪ್ರಮಾಣದ ದಿನಸಿ

ಚಳಿಗಾಲಕ್ಕೆ ಬೇಕಾದ ಭಾರಿ ಪ್ರಮಾಣ ದಿನಸಿ ಕಿಶ್ತ್ವಾರ್‌ನ ಭಯೋತ್ಪಾದಕರ ಅಡಗುತಾಣದಲ್ಲಿ ಪತ್ತೆಯಾಗಿದೆ. ಇಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರು ಉಳಿದುಕೊಂಡಿದ್ದರು. ಇಲ್ಲಿ ಮ್ಯಾಗಿ ಪ್ಯಾಕೆಟ್‌ಗಳು, ಟೊಮೆಟೊ ಮತ್ತು ಆಲೂಗಡ್ಡೆಯಂತಹ ತಾಜಾ ತರಕಾರಿಗಳನ್ನು ಸೋಮವಾರ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ. ಈ ಅಡಗುತಾಣದಲ್ಲಿ ಪಾಕಿಸ್ತಾನಿ ಮೂಲದ ಜೈಶ್ ಕಮಾಂಡರ್ ಸೈಫುಲ್ಲಾ ಮತ್ತು ಉಪನಾಯಕ ಆದಿಲ್ ಉಳಿದುಕೊಂಡಿದ್ದರು ಎನ್ನಲಾಗಿದೆ.

ಕಿಶ್ತ್ವಾರ್‌ನಲ್ಲಿ ಭಯೋತ್ಪಾದಕರ ಅಡಗುತಾಣದಲ್ಲಿ ದಿನಸಿ ಪತ್ತೆ

ಸಂಗ್ರಹ ಚಿತ್ರ -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪರ್ವತಗಳಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (Jaish-e-Mohammad) ನ ಭಯೋತ್ಪಾದಕರಿಗೆ (terrorists) ಸೇರಿದ 12,000 ಅಡಿ ಎತ್ತರದ ಕಾರ್ಗಿಲ್ ಶೈಲಿಯ ಕೋಟೆಯ ಬಂಕರ್‌ನಲ್ಲಿ (Kargil-style fortified bunker) ಭಾರಿ ಪ್ರಮಾಣದಲ್ಲಿ ದಿನಸಿ ಸಾಮಗ್ರಿಗಳು ಪತ್ತೆಯಾಗಿದೆ. ಇವುಗಳಲ್ಲಿ 50 ಮ್ಯಾಗಿ ಪ್ಯಾಕೆಟ್‌ಗಳು, ಟೊಮೆಟೊ, ಆಲೂಗಡ್ಡೆ ಸೇರಿದಂತೆ ತಾಜಾ ತರಕಾರಿಗಳು, ವಿವಿಧ ಬಗೆಯ ಮಸಾಲೆಗಳು, 20 ಕೆ.ಜಿ. ಉತ್ತಮ ಗುಣಮಟ್ಟದ ಬಾಸುಮತಿ ಅಕ್ಕಿ, ಧಾನ್ಯಗಳು, ಅಡುಗೆ ಅನಿಲ, ಒಣ ಮರಗಳು ಸೇರಿವೆ.

ತಿಂಗಳುಗಳ ಕಾಲ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಅಡಗು ತಾಣದಲ್ಲಿ ಬಚ್ಚಿಟ್ಟಿದ್ದರು. ಇದು ಚಳಿಗಾಲದಲ್ಲಿ ಉಳಿದುಕೊಳ್ಳಲು ಭಯೋತ್ಪಾದಕರು ಮಾಡಿದ್ದ ಯೋಜನೆಯಾಗಿತ್ತು. ಆದರೆ ಇದೀಗ ಇವುಗಳನ್ನು ಸೋಮವಾರ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.

ʼʼನಿನ್ನಂತಹ ಫಿಗರ್‌ ಯಾರಿಲ್ಲʼʼ; ರ‍್ಯಾಪಿಡೊ ಚಾಲಕನಿಂದ ಮಹಿಳೆಗೆ ಅಶ್ಲೀಲ ಸಂದೇಶ

ಕಿಶ್ತ್ವಾರ್‌ನಲ್ಲಿ ಪತ್ತೆಯಾದ ಕಾರ್ಗಿಲ್ ಶೈಲಿಯ ಬಂಕರ್ ಅನ್ನು ಪಾಕಿಸ್ತಾನಿ ಮೂಲದ ಜೈಶ್ ಕಮಾಂಡರ್ ಸೈಫುಲ್ಲಾ ಮತ್ತು ಅವರ ಉಪನಾಯಕ ಆದಿಲ್ ಬಳಸುತ್ತಿದ್ದಾರೆ ಎನ್ನಲಾಗಿದೆ. ಈ ಬಂಕರ್ ಕಲ್ಲುಗಳಿಂದ ಕೂಡಿದ ಗೋಡೆಗಳನ್ನು ಹೊಂದಿದ್ದು, ಕೋಟೆಯ ರೂಪದಲ್ಲಿತ್ತು. ಯಾವುದೇ ರೀತಿಯ ಗುಂಡಿನ ದಾಳಿಯನ್ನು ತಡೆಯುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು.

ಭದ್ರತಾ ಪಡೆಗಳು ಭಾನುವಾರ ದಾಳಿ ನಡೆಸಿದಾಗ ಜೈಶ್ ಭಯೋತ್ಪಾದಕರು ಎಸೆದ ಗ್ರೆನೇಡ್‌ಗಳಿಂದ ಏಳು ಸೈನಿಕರು ಗಾಯಗೊಂಡಿದ್ದು, ಇವರಲ್ಲಿ ಒಬ್ಬರಾದ ಹವಾಲ್ದಾರ್ ಗಜೇಂದ್ರ ಸಿಂಗ್ ಎಂಬವರು ಸಾವನ್ನಪ್ಪಿದ್ದಾರೆ.

ಭಯೋತ್ಪಾದಕರ ಅಡಗುತಾಣ ಪತ್ತೆಯಾದ ಬಳಿಕ ಸ್ಥಳೀಯರು ಅವರಿಗೆ ಬೆಂಬಲ ನೀಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಸ್ಥಳೀಯರ ಬೆಂಬಲವಿಲ್ಲದೆ ಇಂತಹ ಭದ್ರವಾದ ಬಂಕರ್ ಅನ್ನು ನಿರ್ಮಿಸುವುದು ಮತ್ತು ಚಳಿಗಾಲಕ್ಕೆ ಬೇಕಾದ ಭಾರಿ ಪ್ರಮಾಣ ಪಡಿತರ ಸಂಗ್ರಹ ಅಸಾಧ್ಯ. ಈ ಕುರಿತು ವಿಚಾರಣೆಗಾಗಿ ಸ್ಥಳೀಯ ನಾಲ್ವರನ್ನು ಬಂಧಿಸಲಾಗಿದೆ.

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಚಾಲಕ; 10 ಕೋಟಿ ರೂ. ಬಂಪರ್ ಲಾಟರಿಯಿಂದ ಬದುಕೇ ಚೇಂಜ್‌

ದೇಶಾದ್ಯಂತ ಶಾಂತಿಯುತ ಗಣರಾಜ್ಯೋತ್ಸವ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಕಿಶ್ತ್ವಾರ್‌ನಲ್ಲಿ ಭಯೋತ್ಪಾದಕರ ಹುಡುಕಾಟಕ್ಕೆ ಭದ್ರತಾ ಪಡೆಗಳು 'ಆಪರೇಷನ್ ಟ್ರಾಶಿ-I' ಅನ್ನು ಭಾನುವಾರ ಪ್ರಾರಂಭಿಸಿದ್ದು, ಇದು ಮಂಗಳವಾರ ಮೂರನೇ ದಿನಕ್ಕೆ ಪ್ರವೇಶಿಸಿದೆ. ಪಾಕಿಸ್ತಾನದಿಂದ ಹೆಚ್ಚಿನ ಭಯೋತ್ಪಾದಕರನ್ನು ಇಲ್ಲಿಗೆ ಕಳುಹಿಸುವ ಯೋಚನೆ ಮಾಡಲಾಗಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ.