ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʼʼನಿನ್ನಂತಹ ಫಿಗರ್‌ ಯಾರಿಲ್ಲʼʼ; ರ‍್ಯಾಪಿಡೊ ಚಾಲಕನಿಂದ ಮಹಿಳೆಗೆ ಅಶ್ಲೀಲ ಸಂದೇಶ

ಮಹಿಳಾ ಪ್ರಯಾಣಿಕರೊಬ್ಬರಿಗೆ ರ‍್ಯಾಪಿಡೊ ಚಾಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ‌ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸದ್ಯ ಚಾಲಕನ ನಡೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಸಂತ್ರಸ್ತ ಯುವತಿಯ ಸ್ನೇಹಿತರೊಬ್ಬರು ಈ ಕರಾಳ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮಹಿಳೆಯರ ರಕ್ಷಣೆ, ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಮಹಿಳೆಗೆ ರ‍್ಯಾಪಿಡೊ ಚಾಲಕನಿಂದ ಅಶ್ಲೀಲ ಮೆಸೇಜ್

ಸಾಂದರ್ಭಿಕ ಚಿತ್ರ. -

Profile
Pushpa Kumari Jan 20, 2026 3:56 PM

ಮುಂಬೈ, ಜ. 20: ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡಿರುವ ಘಟನೆಯೊಂದು ಮಹಾರಾಷ್ಟ್ರದ ಮುಂಬೈಯಲ್ಲಿ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರಿಗೆ ರ‍್ಯಾಪಿಡೊ ಚಾಲಕ (Rapido Driver) ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ‌ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸದ್ಯ ಚಾಲಕನ ನಡೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಸಂತ್ರಸ್ತ ಯುವತಿಯ ಸ್ನೇಹಿತರೊಬ್ಬರು ಈ ಕರಾಳ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಸವಾರಿ ಮಾಡಿದ ನಂತರ ಮಹಿಳೆಗೆ ರ‍್ಯಾಪಿಡೊ ಚಾಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆಯ ಸ್ನೇಹಿತ ಮಾತನಾಡಿ, ರ‍್ಯಾಪಿಡೊ ಟ್ಯಾಕ್ಸಿ ಚಾಲಕ ಅಶ್ಲೀಲ ಮತ್ತು ಅನುಚಿತ ಸಂದೇಶಗಳ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಿಳೆ ಬೆಳಗಿನ ಜಾವ ರ‍್ಯಾಪಿಡೊ ಮೂಲಕ ಪ್ರಯಾಣ ಬೆಳೆಸಿದ್ದರು. ನಂತರ ಆಕೆಯ ಮೊಬೈಲ್‌ಗೆ ಚಾಲಕ ನಿನ್ನಂತ ಫಿಗರ್ ಬಾಡಿಯನ್ನು ಯಾವ ಹುಡುಗಿಯಲ್ಲೂ ನೋಡಿಲ್ಲ ಎಂದು ಅಸಭ್ಯ ಮೆಸೇಜ್ ಮಾಡಿದ್ದಾನೆ. ಮಹಿಳೆಗೆ ಕಳುಹಿಸಿದ ಈ ಲೈಂಗಿಕವಾಗಿ ಹಿಂಸಾತ್ಮಕ ಸಂದೇಶಗಳನ್ನು ಒಳಗೊಂಡ ಚಾಟ್‌ನ ಸ್ಕ್ರೀನ್‌ಶಾಟ್‌ ಶೇರ್ ಮಾಡಿದ್ದಾರೆ.

Rapido

ಚಾಲಕನ ಗುರುತಿನ ಪತ್ತೆ ಹಚ್ಚುವಲ್ಲಿ ದೊಡ್ಡ ಗೊಂದಲ ಉಂಟಾಗಿದೆ. ಚಾಲಕನ ವಿವರಗಳನ್ನು ಪರಿಶೀಲಿಸಿದಾಗ ರ‍್ಯಾಪಿಡೊ ಅಪ್ಲಿಕೇಶನ್‌ನಲ್ಲಿ ರವಿ ಸಿಂಗ್ ಎಂಬ ಹೆಸರು ಕಾಣಿಸಿಕೊಂಡಿದೆ. ಆದರೆ ನಂಬರ್‌ ಟ್ರೂ ಕಾಲರ್‌ನಲ್ಲಿ ಅಕ್ಬರ್ ಎಂಬ ಹೆಸರನ್ನು ಸೂಚಿಸಿದೆ. ಇದು ಚಾಲಕನ ಗುರುತಿನ ಹೊಂದಾಣಿಕೆಯ ಬಗ್ಗೆ ಗೊಂದಲ ಮೂಡಿಸಿದೆ ಎಂದು ಸಂತ್ರಸ್ತೆಯ ಸ್ನೇಹಿತ ತಿಳಿಸಿದ್ದಾರೆ.

ಭಾರತೀಯ ಮೊಮೊಸ್‌ ರುಚಿಗೆ ಅಮೆರಿಕದ ಯುವಕ ಫುಲ್‌ ಫಿದಾ

ಈ ಬಗ್ಗೆ ರ‍್ಯಾಪಿಡೊ ಕಂಪನಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೆ "ಈ ಮಾಹಿತಿ ಯನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು" ಎಂಬ ಸಾಮಾನ್ಯ ಸಂದೇಶದೊಂದಿಗೆ ಪ್ರತಿಕ್ರಿಯೆ ನೀಡಿದೆ. ಕಾನೂನು ಜಾರಿ ಸಂಸ್ಥೆಗಳಿಂದ ಸಹಾಯ ಪಡೆಯುವ ಪ್ರಯತ್ನಗಳು ಸಹ ವಿಫಲವಾಗಿವೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸ್ ತುರ್ತು ಸಂಖ್ಯೆ 100ಕ್ಕೆ ಡಯಲ್ ಮಾಡಿದಾಗ, ಸೈಬರ್ ಅಪರಾಧ ಇಲಾಖೆಯನ್ನು ಸಂಪರ್ಕಿಸಲು ಸೂಚಿಸಲಾಯಿತು. ಸೈಬರ್ ಅಪರಾಧ ಸಹಾಯವಾಣಿ ಮತ್ತು ಮಹಿಳಾ ಸಹಾಯವಾಣಿಗೆ ಮಾಡಿದ ಕರೆಗಳಿಗೆ ಉತ್ತರಿಸಿಲ್ಲ ಎಂದು ಆರೋಪಿಸಿದ್ದಾರೆ

ವಿಡಿಯೊದಲ್ಲಿ ಅವರು ಅಂತಿಮವಾಗಿ ಚಾಲಕನ ಫೋನ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಹಂಚಿಕೊಂಡು ಆತನನ್ನು ಗುರುತಿಸುವಂತೆ ಮನವಿ ಮಾಡಿದರು. ಸದ್ಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ಮುಂಬೈ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸುವುದಾಗಿ ತಿಳಿಸಿದ್ದಾರೆ.