ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣಿ ಉದ್ಯಮಿಯ ತಲೆಗೆ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಗಣಿ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಸೋನಭದ್ರದಲ್ಲಿ ನಡೆದಿದೆ. 76 ವರ್ಷದ ಗಣಿ ಉದ್ಯಮಿಯ ತಲೆಗೆ ಗುಂಡಿಕ್ಕಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಕಳ್ಳತನದ ಉದ್ದೇಶದಿಂದ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ವಿಷ್ಣು ಹರಿ ಉಪಾಧ್ಯಾಯ ಎಂದು ಗುರುತಿಸಲಾಗಿದೆ.

ಸೋನಭದ್ರದಲ್ಲಿ ಉದ್ಯಮಿಯ ಹತ್ಯೆ

ಸಂಗ್ರಹ ಚಿತ್ರ -

ಉತ್ತರಪ್ರದೇಶ: ಗಣಿ ಉದ್ಯಮಿಯೊಬ್ಬರ (mining businessman) ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಸೋನಭದ್ರ (Sonbhadra) ಜಿಲ್ಲೆಯ 76 ವರ್ಷದ ಗಣಿ ಉದ್ಯಮಿ ವಿಷ್ಣು ಹರಿ ಉಪಾಧ್ಯಾಯ ಎಂಬವರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಳ್ಳತನದ ಉದ್ದೇಶದಿಂದ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸೋನಭದ್ರ ಜಿಲ್ಲೆಯ ಬಾಗ್ಮಾನಾ ಗಣಿ ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಭದೋಹಿ ಜಿಲ್ಲೆಯ ಗಣಿ ಉದ್ಯಮಿ ಮಾಧವ ಹರಿ ಉಪಾಧ್ಯಾಯ ಅವರ ಸಹೋದರನಾಗಿರುವ ವಿಷ್ಣು ಹರಿ ಉಪಾಧ್ಯಾಯ ಅವರು ಬಾಗ್ಮಾನಾದಲ್ಲಿರುವ ಕಾರ್ಖಾನೆಯ ಬಳಿಯ ಕಚೇರಿಯಲ್ಲಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ವಿಷ್ಣು ಅವರು ಓಬ್ರಾದಲ್ಲಿ ವ್ಯವಹಾರದ ಕಾರಣ ಬಾಬಾ ಧೂಲೈ ಶಿವನಗರ ಕಾಲೋನಿಯಲ್ಲಿ ವಾಸವಾಗಿದ್ದರು.

ಮೂರು ವರ್ಷದ ಪ್ರೀತಿಗೆ ಬಲಿಯಾಯಿತು ಬಾಡಿಬಿಲ್ಡರ್ ಜೀವ

ಕೊಲೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ವೇಳೆ ಆರೋಪಿಗಳು ಕಚೇರಿಯಲ್ಲಿನ ಸಿಸಿಟಿವಿ ಕೆಮರಗಳನ್ನು ನಾಶಗೊಳಿಸಿದ್ದಾರೆ. ಕಳ್ಳತನದ ಸಾಧ್ಯತೆಯಿಂದ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರಜ್‌ಕುಂಡ್ ಜಾತ್ರೆಯಲ್ಲಿ ತುಂಡಾಗಿ ಬಿದ್ದ ಉಯ್ಯಾಲೆ; ಎದೆ ಝಲ್ ಎನಿಸುವ ವಿಡಿಯೋ ವೈರಲ್‌

ಮೃತರ ತಲೆಯ ಮೇಲೆ ಗಂಭೀರ ಗಾಯಗಳಾಗಿದ್ದು, ಹಲ್ಲೆಕೋರರು ದಾಳಿಗೆ ಕಲ್ಲುಗಳನ್ನು ಕೂಡ ಬಳಸಿದ್ದಾರೆ ಎಂದು ಶಂಕಿಸಲಾಗಿದೆ. ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಿರುಕುಳದಿಂದ ಬೇಸೆತ್ತು ಮಹಿಳೆ ಆತ್ಮಹತ್ಯೆ

ಗಂಡನ ಮನೆಯವರ ಕಿರುಕುಳದಿಂದ ಬೇಸೆತ್ತು ಬಾಣಂತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ. ಇದರಿಂದ 10 ತಿಂಗಳ ಮಗು ತಬ್ಬಲಿಯಾಗಿದೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ 22 ವರ್ಷದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಅಂಜನಾಬಾಯಿ ಶೇಖರ್ ಪಾಟೀಲ್ ಎಂದು ಗುರುತಿಸಲಾಗಿದೆ.

3 ವರ್ಷಗಳ ಹಿಂದೆ ಬಸವಕಲ್ಯಾಣದ ಶೇಖರ್ ಪಾಟೀಲ್‌ನನ್ನು ಮದುವೆಯಾಗಿದ್ದ ಅಂಜನಾಬಾಯಿ ಗಂಡನ ಮನೆಯವರು ಕಿರುಕುಳದಿಂದ ಬೇಸೆತ್ತುನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿ.ಜೆ. ರಾಯ್‌ ಬೆನ್ನಲ್ಲೇ ಕರ್ನಾಟಕದ ಮತ್ತೊಬ್ಬ ಉದ್ಯಮಿ ಕೇರಳದಲ್ಲಿ ಆತ್ಮಹತ್ಯೆ; ಸಾಲ ಕೊಟ್ಟಿದ್ದೇ ಮುಳುವಾಯ್ತು

ಅಂಜನಾ ಅವರ ಪತಿ ಶೇಖರ್ ಪಾಟೀಲ್‌ ಶೇಖರ್​​ ಪಾನಿಪುರಿ ವ್ಯಾಪಾರಿಯಾಗಿದ್ದು, ಅವರು ವ್ಯಾಪಾರ ಮುಗಿಸಿ ಬರುವಾಗ ನಿತ್ಯವೂ ರಾತ್ರಿ 11-12 ಗಂಟೆ ಆಗುತ್ತಿತ್ತು. ಈ ಬಗ್ಗೆ ತಕರಾರು ಎತ್ತಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದರು. ಇದೇ ವಿಚಾರವಾಗಿ ಅತ್ತೆ ಮಾವ ಮತ್ತು ಅಂಜನಾ ನಡುವೆ ಜಗಳವಾಗಿತ್ತು ಎನ್ನಲಾಗಿದೆ.