ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಮಾಜ ತಿದ್ದಬೇಕಾದ ಶಿಕ್ಷಕರಿಂದಲೇ ನೀಚ ಕೃತ್ಯ; 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

Odisha News: ಒಡಿಶಾದಲ್ಲಿ 12 ವರ್ಷದ ಬಾಲಕಿಯ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಲವರ್‌ನಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳಾ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.

12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕರು

ಸಾಂದರ್ಭಿಕ ಚಿತ್ರ. -

Profile
Pushpa Kumari Feb 22, 2026 9:21 PM

ಭುವನೇಶ್ವರ, ಫೆ. 22: ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಒಡಿಶಾದಲ್ಲಿ (Odisha) 12 ವರ್ಷದ ಬಾಲಕಿಯ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಲವರ್‌ನಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳಾ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟು ಹಾಕಿದೆ. ಪೊಲೀಸರ ಪ್ರಕಾರ, ಇಂಗ್ಲಿಷ್ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಾಲ್ವರು ಶಿಕ್ಷಕರು ಮತ್ತು ಒಬ್ಬ ಪಿಯೂನ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಆರೋಪಿಗಳು ತನ್ನ ಮಗುವಿನ ಮೇಲೆ ದೀರ್ಘ ಕಾಲದವರೆಗೆ ಬಲವಂತ, ಬೆದರಿಕೆ ಮತ್ತು ಆಮಿಷಗಳ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಜನವರಿ 14ರಂದು ಬಾಲಕಿ ಮನೆಯಲ್ಲಿ ಅಳುತ್ತಿರುವುದನ್ನು ನೋಡಿ ವಿಚಾರಿಸಿದಾಗ ಈ ಅತ್ಯಾಚಾರವನ್ನು ಬಹಿರಂಗಪಡಿಸಿದ್ದು ಒಂದು ತಿಂಗಳ ನಂತರ ದೂರು ದಾಖಲಾಗಿದೆ.

ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಬಾಲಕಿಗೆ ಬೆದರಿಕೆ ಹಾಕಿ ಹಾಗೂ ಆಮಿಷಗಳನ್ನು ಒಡ್ಡಿ ಈ ಕೃತ್ಯ ಎಸಗಲಾಗುತ್ತಿತ್ತು. ದೂರು ಸ್ವೀಕರಿಸಿದ ತಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದು ಠಾಣಾಧಿಕಾರಿ ಸಂಜಯ್ ಮಲ್ಲಿಕ್ ನೇತೃತ್ವದ ತಂಡವು ಶಾಲೆಯ ಮೇಲೆ ದಾಳಿ ನಡೆಸಿ, ಐವರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಚಂದನ್ ಕುಮಾರ್ ಪೃಸ್ಟಿ (37), ಬಿಸ್ವ ರಂಜನ್ ಸಾಹೂ (31), ರಶ್ಮಿಕಾಂತ ಬಿಸ್ವಾಲ್ (47), ಮಿನತಿ ಬಾಯಿ (34), ರಶ್ಮಿ ರಂಜನ್ ರಾಣಾ (32) ಬಂಧಿತ ಆರೋಪಿಗಳು. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್)ನ ಹಲವು ವಿಭಾಗಗಳ ಜತೆಗೆ, ಲೈಂಗಿಕ ಅಪರಾಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ

ಸದ್ಯ ಬಾಲಕಿಯ ಹೇಳಿಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಬಾಲಕಿಗೆ ಧೈರ್ಯ ತುಂಬಲು ಆಪ್ತ ಸಮಾಲೋಚನೆ ವ್ಯವಸ್ಥೆ ನಡೆಸಲಾಗಿದೆ.