Robin Kaye: ಅಮೆರಿಕನ್ ಐಡಲ್ ರಿಯಾಲಿಟ್ ಶೋ ಖ್ಯಾತಿಯ ರಾಬಿನ್ ಕೇಯ್ ದಂಪತಿ ನಿಗೂಢ ಸಾವು-ಕೊಲೆ ಶಂಕೆ!
ರಾಬಿನ್ ಕೇಯ್ ಮತ್ತು ಅವರ ಪತಿ ಥಾಮಸ್ ಡೆಲುಕಾ ಅವರು ಸೋಮವಾರದಂದು ಲಾಸ್ ಏಂಜಲೀಸ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಬಿನ್ ಕೇಯ್ ಮತ್ತು ಅವರ ಪತಿ ಥಾಮಸ್ ಡೆಲುಕಾ ಅವರನ್ನು ಯಾರೋ ಮನೆಯಲ್ಲಿ ಕೂಡಿ ಹಾಕಿ ಹಿಂಸಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ವಿಚಾರ ತಿಳಿದ ಅಧಿಕಾರಿಗಳು ತನಿಖೆ ನಡೆಸಲು ಪೊಲೀಸರಿಗೆ ಆದೇಶ ನೀಡಿದ್ದಾರೆ.


ವಾಷಿಂಗ್ಟನ್: ಅಮೆರಿಕನ್ ಐಡಲ್ ಎಂಬ ಸಿಂಗಿಂಗ್ ಸ್ಪರ್ಧೆಯಿಂದ ಜನಪ್ರಿಯವಾಗಿದ್ದ ಸಂಗೀತ ಮೇಲ್ವಿಚಾರಕಿ ರಾಬಿನ್ ಕೇಯ್ (Robin Kaye) ಮತ್ತು ಅವರ ಪತಿ ಥಾಮಸ್ ಡೆಲುಕಾ (Thomas Deluca) ಅವರು ಸೋಮವಾರದಂದು ಲಾಸ್ ಏಂಜಲೀಸ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಬಿನ್ ಕೇಯ್ ಮತ್ತು ಅವರ ಪತಿ ಥಾಮಸ್ ಡೆಲುಕಾ ಅವರನ್ನು ಯಾರೋ ಮನೆಯಲ್ಲಿ ಕೂಡಿ ಹಾಕಿ ಹಿಂಸಿಸುತ್ತಿದ್ದಾರೆ ಎಂಬ ಸುದ್ದಿ ಹರಿ ದಾಡಿತ್ತು. ಈ ವಿಚಾರ ತಿಳಿದ ಅಧಿಕಾರಿಗಳು ತನಿಖೆ ನಡೆಸಲು ಪೊಲೀಸರಿಗೆ ಆದೇಶ ನೀಡಿದ್ದಾರೆ. ಅಮೇರಿ ಕನ್ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಂತೆ ದಂಪತಿಗಳು ಶವವಾಗಿ ಪತ್ತೆಯಾಗಿದ್ದು ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಶಂಕೆ ವ್ಯಕ್ತವಾಗಿದೆ.
70ರ ವಯೋವೃದ್ಧ ದಂಪತಿಗಳಾದ ರಾಬಿನ್ ಕೇಯ್ ಮತ್ತು ಅವರ ಪತಿ ಥಾಮಸ್ ಡೆಲುಕಾ ಅವರು ಸ್ಯಾನ್ ಫೆರ್ನಾಂಡೊ ದಲ್ಲಿ ವಾಸವಿದ್ದರು. ಕಳೆದ ನಾಲ್ಕು ದಿನಗಳಿಂದಲೂ ಎನ್ಸಿನೊದ ನಿವಾಸ ದಲ್ಲಿ ಅವರು ಗೃಹ ಬಂಧನದಲ್ಲಿದ್ದಾರೆ. ಯಾರೋ ಅಪರಿಚಿತರು ಅವರಿಗೆ ತೊಂದರೆ ನೀಡಿದ್ದಾರೆ ಎಂದು ವರದಿ ಯಾಗಿತ್ತು. ಇದರ ಬೆನ್ನಲ್ಲೆ ಅಮೇರಿಕನ್ ವೆಲ್ ಫೇರ್ ನ ಅಧಿಕಾರಿಗಳು ಪರಿಶೀಲನೆ ನಡೆಸಲು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಈ ನಡುವೆ ಇಬ್ಬರಿಗೂ ತಲೆಗೂ ಗುಂಡೇಟು ತಗುಲಿದ್ದು ಮೃತಪಟ್ಟಿರುವುದಾಗಿ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ದೃಢ ಪಡಿಸಿದೆ. ದಂಪತಿಗಳ ಸಾವಿಗೆ ಸಂಬಂಧಿಸಿದಂತೆ 22 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೊಲೆಗೆ ಕಾರಣವನ್ನು ತಿಳಿಯಲು ಪೊಲೀಸರು ಅವರ ನಿವಾಸದ ಸಿಸಿಟಿವಿ ವಿಡಿಯೋವನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಎರಡು ದಿನಗಳ ಹಿಂದೆ ಆ ಸ್ಥಳಕ್ಕೆ ಅಪರಿಚಿತ ವ್ಯಕ್ತಿಯೊಬ್ಬನು ಬಂದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳದಲ್ಲಿನ ಇತರ ಕೆಲವು ವಿಧಿ ವಿಜ್ಞಾನ ಸಾಕ್ಷ್ಯಗಳನ್ನು ಬಳಸಿಕೊಂಡು ಆತನನ್ನು ಗುರುತಿಸ ಲಾಗಿದ್ದು ಎನ್ಸಿನೊ ನಿವಾಸಿ 22 ವರ್ಷದ ರೇಮಂಡ್ ಬೂಡೇರಿಯನ್ ಅವರನ್ನು ಆರೋಪಿ ಎಂದು ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನು ಓದಿ:Crime: 'ದೃಶ್ಯಂ' ಕಥೆಯಿಂದ ಸ್ಫೂರ್ತಿ; ಇನ್ಶೂರೆನ್ಸ್ ಹಣಕ್ಕಾಗಿ ಅತ್ತೆಯನ್ನೇ ಕೊಂದ ಅಳಿಯ!
ಆಗಿದ್ದೇನು?
ರಾಬಿನ್ ಕೇಯ್ ಅವರ ಮನೆಗೆ ಕಳ್ಳತನ ಮಾಡಲು ರೇಮಂಡ್ ಬೂಡೇರಿಯನ್ ಬಂದಿದ್ದು ಅದೇ ವೇಳೆ ದಂಪತಿಗಳು ಮನೆಗೆ ಬಂದಿದ್ದರು. ಈ ಸಂದರ್ಭ ಆತ ದಂಪತಿಗಳನ್ನು ಥಳಿಸಿ ಶೂಟ್ ಮಾಡಿ ದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಬೂಡೇರಿಯನ್ ಗೂ ಹಾಗೂ ದಂಪತಿಗಳಿಗೂ ಯಾವುದಾದರೂ ಸಂಬಂಧವಿದೆಯಾ ಎಂದು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ರಾಬಿನ್ ಕೇಯ್ ಒಬ್ಬರು ಅನುಭವಿ ಸಂಗೀತ ಮೇಲ್ವಿಚಾರಕಿಯಾಗಿದ್ದು ಅಮೇರಿಕಾದಲ್ಲಿ ಬಹಳ ಫೇಮಸ್ ವ್ಯಕ್ತಿ. ಐಡೆಲ್ ಎಂಬ ಸಿಂಗಿಂಗ್ ಶೋವನ್ನು 15 ಸೀಸನ್‌ಗಳ ಕಾಲ ಸಂಗೀತ ಮೇಲ್ವಿ ಚಾರಕಿಯಾಗಿ ಮುನ್ನೆಡೆಸಿದ್ದಾರೆ. ಬಫಿ ದಿ ವ್ಯಾಂಪೈರ್ ಸ್ಲೇಯರ್, ನ್ಯಾಶ್ವಿಲ್ಲೆ ಸ್ಟಾರ್, ದಿ ಸಿಂಗಿಂಗ್ ಬೀ, ಹಾಲಿವುಡ್ ಗೇಮ್ ನೈಟ್ ಸೇರಿದಂತೆ ಇತರ ಕಾರ್ಯಕ್ರಮ ಗಳಲ್ಲಿಯೂ ಮೇಲ್ವಿಚಾರಕಿಯಾಗಿ ಪ್ರಖ್ಯಾತಿ ಪಡೆದಿದ್ದಾರೆ. ಇದೀಗ ಅವರ ಅನುಮಾನಾಸ್ಪದ ಸಾವು ಎಲ್ಲರಿಗೂ ದೊಡ್ಡ ಆಘಾತ ನೀಡಿದಂತಾಗಿದೆ.