ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hung government in Israel?: ಇಸ್ರೇಲ್‌ನಲ್ಲಿ ಮತ್ತೆ ಅತಂತ್ರ ಸರಕಾರ?

ಇಸ್ರೇಲ್‌ನಲ್ಲಿ ಸರಕಾರ ರಚಿಸಲು 61 ಸ್ಥಾನಗಳು ಬೇಕಿವೆ. ಈ ನಡುವೆ ಅರಬ್ ಪಕ್ಷಗಳು 19 ಸ್ಥಾನಗಳನ್ನು ಗೆದ್ದುಕೊಂಡು ಯಾರೇ ಅಧಿಕಾರಕ್ಕೆ ಬರಬೇಕಿದ್ದರೂ ತಮ್ಮ ಬೆಂಬಲ ಬೇಕೇಬೇಕು ಎಂದು ಲೆಕ್ಕಾಚಾರ ದಲ್ಲಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅರಬ್ ಪಕ್ಷಗಳ ಬೆಂಬಲವನ್ನು ನಿರಾಕರಿಸಿದ್ದಾರೆ.

ಇಸ್ರೇಲ್‌ನಲ್ಲಿ ಮತ್ತೆ ಅತಂತ್ರ ಸರಕಾರ?

-

Profile
Ashok Nayak Oct 29, 2026 9:46 AM

ನೆತನ್ಯಾಹುಗೆ 53, ಐಸೆನ್‌ಕೋಟ್‌ಗೆ 48 ಸ್ಥಾನ 120 ಸಂಸತ್ ಕ್ಷೇತ್ರ, 61 ಸರಳ ಬಹುಮತ 19 ಸ್ಥಾನ ಗೆದ ‘ಅರಬ್’ ಬೆಂಬಲಕ್ಕೆ ತಿರಸ್ಕಾರ

ಟೆಲ್‌ಅವಿವ್: ಮಂಗಳವಾರ ಮುಕ್ತಾಯವಾಗಿರುವ ಇಸ್ರೇಲ್ ಸಂಸತ್ (ನೆಸೆಟ್) ಚುನಾವಣೆ ಯಲ್ಲಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ತುಸು ಮುನ್ನಡೆ ಸಾಧಿಸಿದೆ. ಒಟ್ಟು 120 ಸದಸ್ಯಬಲದ ನೆಸೆಟ್‌ನಲ್ಲಿ ಸದ್ಯದ ಮಟ್ಟಿಗೆ ಲಿಕುಡ್ 53 ಸ್ಥಾನಗಳಲ್ಲಿ ಗೆದ್ದಿದೆ, ವಿರೋಧಪಕ್ಷಗಳ ಗುಂಪನ್ನು ಮುನ್ನಡೆಸುತ್ತಿರುವ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ಬಣಕ್ಕೆ 48 ಸ್ಥಾನ ಸಿಕ್ಕಿದೆ ಎಂದು ವರದಿಗಳು ಹೇಳಿವೆ.

ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಶೇ.85 ಮತ ಎಣಿಕೆ ಮುಗಿದಿದೆ. ಇಸ್ರೇಲ್‌ನಲ್ಲಿ ಸರಕಾರ ರಚಿಸಲು 61 ಸ್ಥಾನಗಳು ಬೇಕಿವೆ. ಈ ನಡುವೆ ಅರಬ್ ಪಕ್ಷಗಳು 19 ಸ್ಥಾನಗಳನ್ನು ಗೆದ್ದುಕೊಂಡು ಯಾರೇ ಅಧಿಕಾರಕ್ಕೆ ಬರಬೇಕಿದ್ದರೂ ತಮ್ಮ ಬೆಂಬಲ ಬೇಕೇಬೇಕು ಎಂದು ಲೆಕ್ಕಾಚಾರದಲ್ಲಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅರಬ್ ಪಕ್ಷಗಳ ಬೆಂಬಲವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: Isreal Hamas War: ಗಾಜಾ ಮೇಲೆ ಮತ್ತೆ ಇಸ್ರೇಲ್‌ ದಾಳಿ; 50 ಕ್ಕೂ ಅಧಿಕ ಮಂದಿ ಸಾವು

ಪಕ್ಕಾ ಬಲಪಂಥೀಯ ಬಣಕ್ಕೆ ಸೇರಿರುವ ನೆತನ್ಯಾಹು, ಯಹೂದಿಗಳ ನೆಲದ ವಿರೋಧಿಗಳೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲವೆಂದಿದ್ದಾರೆ. ಒಂದು ವೇಳೆ ಗಾಡಿ ಐಸೆನ್‌ಕೋಟ್ ಅರಬ್ಬರೊಂದಿಗೆ ಸೇರಿಕೊಂಡರೆ ಅವರಿಗೆ ಅಧಿಕಾರ ಸಿಗಬಹುದು. ಹೀಗಾದರೆ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಐಸೆನ್‌ಕೋಟ್‌ಗೆ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು ಎಂಬ ಮಾತಿದೆ. ಒಂದು ವೇಳೆ ಅತಂತ್ರ ಪರಿಸ್ಥಿತಿ ನಿರ್ಮಾ ಣವಾದರೆ, ಇನ್ನೊಂದು ಚುನಾವಣೆ ಎದುರಾಗ ಬಹುದು. ಇದು ಅಲ್ಲಿ ಯಾರಿಗೂ ಇಷ್ಟವಿಲ್ಲ.

ಮೈತ್ರಿಯಲ್ಲಿ ಯಾರ್ಯಾರಿದ್ದಾರೆ?: ಸತತ 7ನೇ ಬಾರಿ ಪ್ರಧಾನಿ ಪಟ್ಟಕ್ಕೇರುವ ಲೆಕ್ಕಾಚಾರ ದಲ್ಲಿರುವ ನೆತನ್ಯಾಹು ಲಿಕುಡ್ ಪಕ್ಷದ ನೇತಾರ. ಲಿಕುಡ್‌ಗೆ ಶಾಸ್, ಯುನೈಟೆಡ್ ಟೋರಾ ಜುದಾ ಯಿಸಮ್, ರಿಲಿಜಿಯಸ್ ಝಿಯೋನಿಸ್ಟ್, ಆಟ್‌ಜ್ಮಾ ಯೆಹೂದಿಟ್ ಮಿತ್ರಪಕ್ಷಗಳು. ಸದ್ಯ ಇವೆಲ್ಲ ಸೇರಿ 54 ಸ್ಥಾನಗಳನ್ನು ಗೆದ್ದಿರುವುದು. ಇವೆಲ್ಲ ಕಟ್ಟರ್ ಬಲಪಂಥೀಯ ಪಕ್ಷಗಳಾಗಿರುವುದರಿಂದ ಅರಬ್ ಪಕ್ಷಗಳ ಮೈತ್ರಿಯನ್ನು ಒಪ್ಪುವುದೇ ಇಲ್ಲ. ಐಸೆನ್‌ಕೋಟ್ ಅವರ ಯಶರ್ ಪಕ್ಷದೊಂದಿಗೆ ಟುಗೆದರ್, ಯಿಸ್ರೇಲ್ ಬೆಯ್ಟೆನು, ದ ಡೆಮೋ ಕ್ರಾಟ್ಸ್, ಬೆಯಹದ್ ಪಕ್ಷಗಳಿವೆ.

image

ಯಾವುದೇ ಕಾರಣಕ್ಕೂ ಇಸ್ರೇಲ್ ಅರಬ್ಬರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವು ದಿಲ್ಲ. ಸದ್ಯದ ಫಲಿತಾಂಶ ಬೆಂಜ ಮಿನ್ ನೆತನ್ಯಾಹು ಅವರ ಬಗ್ಗೆ ಇಸ್ರೇಲ್ ಜನ ತೆಯ ನಂಬಿಕೆಯ ಕೊರತೆಯನ್ನು ತೋರಿಸುತ್ತಿವೆ. ನಾವು ಹೊಸ ಸರ್ಕಾರವನ್ನು ರಚಿಸಲಿದ್ದೇವೆ.

-ಗಾಡಿ ಐಸೆನ್‌ಕೋಟ್, ಯಶರ್ ಪಕ್ಷದ ನಾಯಕ
image

ಇಸ್ರೇಲಿನಲ್ಲಿರುವ ಅರಬ್ಬರ ಬೆಂಬಲದೊಂದಿಗೆ ಯಾವ ನಾಯಕನೂ ಆಡಳಿತ ನಡೆಸಬಾರದು. ನಾವು ಬಲಪಂಥೀಯ ಸಿದ್ಧಾಂತದ ಬಲವಾದ ಸರ್ಕಾರವನ್ನು ರಚಿಸಬೇಕು. ಯಹೂದಿ ಮತ್ತು ಝಿಯೋನಿಸ್ಟ್ ಬಹುಸಂಖ್ಯಾತರು ಒಂದಾಗಬೇಕು.

-ಬೆಂಜಮಿನ್ ನೆತನ್ಯಾಹು, ಲಿಕುಡ್ ಪಕ್ಷದ ನಾಯಕ