Kirk Murder case: ಚಾರ್ಲಿ ಕಿರ್ಕ್ ಹತ್ಯೆ: ಆರೋಪಿಯ ಚಿತ್ರ ರಿಲೀಸ್ ಮಾಡಿದ ಎಫ್‌ಬಿಐ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಚಾರ್ಲಿ ಕಿರ್ಕ್ ಅವರ ಹತ್ಯೆಯ ಆರೋಪಿಯ ಫೋಟೊವನ್ನು ಫೆಡರಲ್ ತನಿಖಾಧಿಕಾರಿ ಗುರುವಾರ ಬಿಡುಗಡೆ ಮಾಡಿದ್ದಾರೆ. ಸನ್ ಗ್ಲಾಸ್, ಕ್ಯಾಪ್ ಧರಿಸಿದ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ಪತ್ತೆಗೆ ಸಾರ್ವಜನಿಕರು ಸಹಾಯ ಮಾಡುವಂತೆ ಕೋರಿದ್ದಾರೆ.

-

ವಾಷಿಂಗ್ಟನ್: ಅಮೆರಿಕದ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ (Kirk Murder case) ಅವರ ಹತ್ಯೆಯ ಆರೋಪಿಯ ಫೋಟೊವನ್ನು ಫೆಡರಲ್ ತನಿಖಾಧಿಕಾರಿ (Federal Bureau of Investigation) ಗುರುವಾರ ಬಿಡುಗಡೆ ಮಾಡಿದ್ದಾರೆ. ಸನ್ ಗ್ಲಾಸ್, ಕ್ಯಾಪ್ ಧರಿಸಿದ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ಪತ್ತೆಗೆ ಸಹಾಯ ಮಾಡುವಂತೆ ಕೋರಿದ್ದಾರೆ. ಉತಾಹ್‌ನಲ್ಲಿ (Utah) ನಡೆದ ಕ್ಯಾಂಪಸ್ ಕಾರ್ಯಕ್ರಮವೊಂದರಲ್ಲಿ ಚಾರ್ಲಿ ಕಿರ್ಕ್ (conservative activist Charlie Kirk) ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಆತನನ್ನು ಕೊಲ್ಲಲು ಬಳಸಿದ ರೈಫಲ್ ಅನ್ನು ಫೆಡರಲ್ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದರೆ.
ಚಾರ್ಲಿ ಕಿರ್ಕ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಾಗಿ ಎರಡನೇ ದಿನವೂ ತನಿಖೆ ಮುಂದುವರಿದಿದೆ. ಈ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯ ಫೋಟೊಗಳನ್ನು ಇದೀಗ ಫೆಡರಲ್ ತನಿಖಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
We are asking for the public's help identifying this person of interest in connection with the fatal shooting of Charlie Kirk at Utah Valley University.
— FBI Salt Lake City (@FBISaltLakeCity) September 11, 2025
1-800-CALL-FBI
Digital media tips: https://t.co/K7maX81TjJ pic.twitter.com/ALuVkTXuDc
ಆರೋಪಿಯ ಎರಡು ಚಿತ್ರಗಳನ್ನು ಬಿಡುಗಡೆ ಮಾಡಿರುವ ತನಿಖಾಧಿಕಾರಿಗಳು ಆ ವ್ಯಕ್ತಿಯನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೇಳಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಏಜೆನ್ಸಿಯ ಸಾಲ್ಟ್ ಲೇಕ್ ಸಿಟಿ ಫೀಲ್ಡ್ ಆಫೀಸ್, ಚಾರ್ಲಿ ಕಿರ್ಕ್ ಹತ್ಯೆಯ ಆರೋಪಿ ಪತ್ತೆಗೆ ಸಂಬಂಧಿಸಿ ಮಾಹಿತಿ ನೀಡುವವರಿಗೆ ಏಜೆನ್ಸಿ 1,00,000 ಡಾಲರ್ ಬಹುಮಾನವನ್ನು ಘೋಷಿಸಿದೆ.
ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಲ್ಟ್ ಲೇಕ್ ಸಿಟಿ ಕಚೇರಿಯ ಉಸ್ತುವಾರಿ ವಹಿಸಿರುವ ಎಫ್‌ಬಿಐಯ ವಿಶೇಷ ಏಜೆಂಟ್ ರಾಬರ್ಟ್ ಬೋಲ್ಸ್, ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಬಳಿಯ ಅರಣ್ಯ ಪ್ರದೇಶದಲ್ಲಿ ಹೈ-ಪವರ್ ಬೋಲ್ಟ್-ಆಕ್ಷನ್ ರೈಫಲ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಈ ದಾಳಿಯ ಅನಂತರ ಬಂದೂಕುಧಾರಿ ವ್ಯಕ್ತಿಯೊಬ್ಬನನ್ನು ಗುರುತಿಸಲಾಗದೆ. ಘಟನಾ ಸ್ಥಳದಲ್ಲಿ ಸಂಗ್ರಹಿಸಲಾದ ಪಾದರಕ್ಷೆಗಳ ಗುರುತುಗಳು ಮತ್ತು ಪಾಮ್ ಪ್ರಿಂಟ್‌ಗಳು ಸೇರಿದಂತೆ ಇತರ ಪುರಾವೆಗಳೊಂದಿಗೆ ಆಯುಧವನ್ನು ಬ್ಯೂರೋದ ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಗುಂಡು ಹಾರಿಸಿದ ವ್ಯಕ್ತಿ ಕಾಲೇಜು ಯುವಕನಂತೆ ಕಾಣುತ್ತಿದ್ದನು. ಅವನು ಮೆಟ್ಟಿಲುಗಳನ್ನು ಪ್ರವೇಶಿಸಿ, ಛಾವಣಿಯನ್ನು ದಾಟಿ ಅನಂತರ ಹತ್ತಿರದ ಕಟ್ಟಡದಿಂದ ಹಾರಿಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಕ್ಯಾಂಪಸ್ ಬಳಿಯ ಅರಣ್ಯ ಪ್ರದೇಶದಲ್ಲಿ ಟವಲ್‌ನಲ್ಲಿ ಸುತ್ತಿದ ಹಳೆಯ ಆಮದು ಮಾಡಿದ ಮೌಸರ್ ಬೋಲ್ಟ್-ಆಕ್ಷನ್ ರೈಫಲ್ ಅನ್ನು ತನಿಖಾಧಿಕಾರಿಗಳು ವಶಪಡಿಸಿಕೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಡಿಎನ್‌ಎ ಮತ್ತು ಫಿಂಗರ್‌ಪ್ರಿಂಟ್ ವಿಶ್ಲೇಷಣೆಗಾಗಿ ಬಂದೂಕನ್ನು ಎಫ್‌ಬಿಐಗೆ ಹಸ್ತಾಂತರಿಸಲಾಗಿದೆ. ಇಲ್ಲಿಯವರೆಗೆ 200ಕ್ಕೂ ಹೆಚ್ಚು ಸುಳಿವುಗಳನ್ನು ಸಲ್ಲಿಸಲಾಗಿದೆ. ಈ ಪ್ರಕರಣವನ್ನು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸಲಾಗಿದೆ ಎಂದು ಬೋಲ್ಸ್ ಹೇಳಿದರು.
ಇದನ್ನೂ ಓದಿ: ʼಸು ಫ್ರಮ್ ಸೋʼ ಹಾದಿಯಲ್ಲಿ ʼಕಾಂತಾರ: ಚಾಪ್ಟರ್ 1ʼ?; ರಿಲೀಸ್‌ಗೆ ದಿನಗಣನೆ ಆರಂಭವಾಗಿದ್ದರೂ ಪ್ರಚಾರಕ್ಕಿಳಿದಿಲ್ಲ ಚಿತ್ರತಂಡ
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪ್ರಶ್ನಿಸಲಾಗಿದೆ. ಅವರು ಇದರಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರನ್ನು ದೋಷಮುಕ್ತಗೊಳಿಸಲಾಗಿದೆ. ಕಿರ್ಕ್ ಅವರ ಮೃತ ದೇಹವನ್ನು ರಾಜ್ಯ ವೈದ್ಯಕೀಯ ಪರೀಕ್ಷಕರ ಕಚೇರಿಗೆ ವರ್ಗಾಯಿಸಿ ಬಳಿಕ ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಟ್ರಂಪ್ ಅವರ ಆಪ್ತ ಮಿತ್ರ ಕಿರ್ಕ್
ಅಮೆರಿಕ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರನಾಗಿರುವ 31 ವರ್ಷದ ಕಿರ್ಕ್ ಬುಧವಾರ ಮಧ್ಯಾಹ್ನ 12.20ರ ಸುಮಾರಿಗೆ ಹೊರಾಂಗಣ ವಿದ್ಯಾರ್ಥಿ ಕಾರ್ಯಕ್ರಮದಲ್ಲಿ 3,000ಕ್ಕೂ ಹೆಚ್ಚು ಜನರ ಮುಂದೆ ಮಾತನಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತು.