ಪ್ರವಾಸಿಗರಿಗೆ ಗುಡ್‌ನ್ಯೂಸ್; ಭಾರತದ ಯುಪಿಐ ಸೇವೆ ಶೀಘ್ರದಲ್ಲೇ ಮಲೇಷ್ಯಾದಲ್ಲೂ ಲಭ್ಯ
ಭಾರತದ ಡಿಜಿಟಲ್ ಪಾವತಿ ವೇದಿಕೆಯಾದ ಯುಪಿಐ ಶೀಘ್ರದಲ್ಲೇ ಮಲೇಷ್ಯಾದಲ್ಲೂ ಪರಿಚಯಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕೌಲಾಲಂಪುರದಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ವಲಸಿಗರಿಗೆ ಈ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಕೂಡ ಇದ್ದರು.
ಸಂಗ್ರಹ ಚಿತ್ರ -
ನವದೆಹಲಿ: ಮಲೇಷ್ಯಾದಲ್ಲಿ (malaysia) ಶೀಘ್ರದಲ್ಲೇ ಭಾರತದ ಡಿಜಿಟಲ್ ಪಾವತಿ ವೇದಿಕೆಯಾದ (digital payments platform) ಯುಪಿಐ (UPI) ಅನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಪ್ರಧಾನಿ ಮೋದಿ (PM Narendra Modi) ಶನಿವಾರ ತಿಳಿಸಿದ್ದಾರೆ. ಕೌಲಾಲಂಪುರದಲ್ಲಿ (Kuala Lumpur ) ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ವಲಸಿಗರಿಗೆ ಈ ಮಾಹಿತಿ ನೀಡಿದರು. ಎರಡು ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಅವರು ಮಲೇಷ್ಯಾದೊಂದಿಗೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಭಾರತ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಮಲೇಷ್ಯಾ ಮತ್ತು ಭಾರತದ ನಡುವಿನ ಆರ್ಥಿಕ, ರಕ್ಷಣೆ ಮತ್ತು ಜನರ ಸಂಬಂಧಗಳನ್ನು ಗಾಢವಾಗಿಸುವ ಸಲುವಾಗಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಕೌಲಾಲಂಪುರದಲ್ಲಿ ಭಾರತೀಯ ವಲಸಿಗರೊಂದಿಗೆ ಮಾತನಾಡಿದರು. 2024ರ ಆಗಸ್ಟ್ ನಲ್ಲಿ ಎರಡೂ ರಾಷ್ಟ್ರಗಳು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಸಂಬಂಧಗಳನ್ನು ಹೆಚ್ಚಿಸಲು ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಉದ್ದೇಶ ಹೊಂದಿರುವುದರಿಂದ ಪ್ರಧಾನಿ ಮೋದಿ ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ.
ಅಶ್ಲೀಲ ವಿಡಿಯೊ ನೋಡುವಾಗ ತನ್ನದೇ ಖಾಸಗಿ ವಿಡಿಯೊ ಕಂಡು ಬೆಚ್ಚಿಬಿದ್ದ ಯುವಕ
ಮಲೇಷ್ಯಾದಲ್ಲಿ ಭಾರತೀಯ ಮೂಲದ ಸಮುದಾಯದೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಹಲವಾರು ಯೋಜನೆಗಳನ್ನು ಈ ಸಂದರ್ಭದಲ್ಲಿ ಘೋಷಿಸಿದ ಅವರು, ಭಾರತವು ನಿಮ್ಮನ್ನು ಯಾವಾಗಲೂ ಮುಕ್ತ ತೋಳುಗಳಿಂದ ಅಪ್ಪಿಕೊಳ್ಳುತ್ತದೆ. ಅದಕ್ಕಾಗಿಯೇ ನಾವು ಕೆಲವೇ ತಿಂಗಳುಗಳ ಹಿಂದೆ ಒಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ಆರನೇ ತಲೆಮಾರಿನವರೆಗೆ ಭಾರತೀಯ ಮೂಲದ ಮಲೇಷ್ಯಾದ ನಾಗರಿಕರಿಗೆ ಒಸಿಐ ಕಾರ್ಡ್ ಅರ್ಹತೆಯನ್ನು ವಿಸ್ತರಿಸಿದ್ದೇವೆ. ನಾವು ಭಾರತೀಯ ವಿದ್ಯಾರ್ಥಿ ವೇತನ ಟ್ರಸ್ಟ್ ನಿಧಿಯನ್ನು ಬೆಂಬಲಿಸುತ್ತಿದ್ದೇವೆ. ಭಾರತದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನಾವು ತಿರುವಳ್ಳುವರ್ ವಿದ್ಯಾರ್ಥಿ ವೇತನವನ್ನು ಸಹ ನೀಡುತ್ತೇವೆ. 'ಭಾರತವನ್ನು ತಿಳಿದುಕೊಳ್ಳಿ' ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.
PM Modi Announces: India’s UPI to Launch in Malaysia Soon pic.twitter.com/ZubPE8fvu6
— The News Bite (@SharmaGouravs34) February 7, 2026
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ತಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದು ಮಾತ್ರವಲ್ಲದೆ, ಅವರು ಭಾರತ ಮತ್ತು ನಿಮ್ಮೆಲ್ಲರ ಮೇಲಿನ ಪ್ರೀತಿ ಮತ್ತು ಗೌರವದ ಪ್ರತಿಬಿಂಬ ಎಂದು ಹೇಳಿದ ಅವರು, ಕಳೆದ ವರ್ಷ ಆಸಿಯಾನ್ ಶೃಂಗಸಭೆಗೆ ಬಂದಾಗ ಮಲೇಷ್ಯಾಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಬರುತ್ತೇನೆ ಎಂದು ಕೊಟ್ಟ ಮಾತನ್ನು ಈಗ ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ವಲಸಿಗರು ಪ್ರದರ್ಶಿಸಿದ ದೊಡ್ಡ ಸಾಂಸ್ಕೃತಿಕ ಪ್ರದರ್ಶನವನ್ನು ಅವರು ಶ್ಲಾಘಿಸಿದರು.
ಬರಾಕ್ ಒಬಾಮಾ ದಂಪತಿಯನ್ನು ಕೋತಿಗೆ ಹೋಲಿಸಿದ ಟ್ರಂಪ್; ವಿರೋಧ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್ ಡಿಲೀಟ್
ಈ ಸಂದರ್ಭದಲ್ಲಿ ಪ್ರಧಾನಿ ಇಬ್ರಾಹಿಂ ಅವರು ಸಾರ್ವಜನಿಕವಾಗಿ ಮೋದಿಯನ್ನು ಹೊಗಳಿದರು. ಪ್ರಧಾನ ಮಂತ್ರಿ ಮೋದಿ ಅವರ ಸ್ನೇಹಿತನಾಗಲು ನಾನು ಅದೃಷ್ಟಶಾಲಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಲೇಷ್ಯಾ ಭೇಟಿಯ ಈ ಸಂದರ್ಭದಲ್ಲಿ ನವದೆಹಲಿಯು ಕೌಲಾಲಂಪುರವನ್ನು ವಿವಾದಾತ್ಮಕ ಇಸ್ಲಾಮಿಕ್ ಧರ್ಮೋಪದೇಶಕ ಝಾಕಿರ್ ನಾಯಕ್ ಅವರ ಗಡೀಪಾರು ಕುರಿತು ಒತ್ತಾಯಿಸಲು ಸಜ್ಜಾಗಿದೆ ಎನ್ನಲಾಗಿದೆ.