ಮಿಲಿಟರಿ ನಾಯಕತ್ವ ಕೊನೆಯಾದಾಗಲೇ ಇರಾನ್ ಯುದ್ಧ ನಿಲ್ಲಿಸುತ್ತೇವೆ: ಡೊನಾಲ್ಡ್ ಟ್ರಂಪ್
ಯುಎಸ್ ವಿರುದ್ಧ ತೀವ್ರ ಹೋರಾಟಕ್ಕೆ ಇಳಿದಿರುವ ಇರಾನ್ ಕುರಿತು ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ನ ಮಿಲಿಟರಿ ನಾಯಕತ್ವ ಕೊನೆಯಾದ ಬಳಿಕವೇ ಇರಾನ್ ಯುದ್ಧ ನಿಲ್ಲಿಸುವಂತೆ ಕಾಣುತ್ತಿದೆ ಎಂದು ಹೇಳಿದರು. ಇದು ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ಸಂಘರ್ಷವನ್ನು ನಿಲ್ಲಿಸಲು ವಾಷಿಂಗ್ಟನ್ ನ ಕಠಿಣ ನಿಲುವನ್ನು ಸೂಚಿಸಿದೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಮಿಲಿಟರಿ ನಾಯಕತ್ವ (Military leadership) ಕೊನೆಯಾದ ಬಳಿಕ ಇರಾನ್ ಯುದ್ಧವನ್ನು (Iran war) ನಿಲ್ಲಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ (Middle East) ತೀವ್ರಗೊಂಡ ಸಂಘರ್ಷದ ಕುರಿತು ಪ್ರತಿಕ್ರಿಯಿಸಿರುವ ಅವರು ಇರಾನ್ ಯುದ್ಧವು ತನ್ನ ಮಿಲಿಟರಿ ನಾಯಕತ್ವವನ್ನು ನಿರ್ಮೂಲನೆ ಮಾಡಿದ ಅನಂತರವೇ ಕೊನೆಗೊಳ್ಳಬಹುದು ಎಂದು ಹೇಳಿದರು. ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಇದನ್ನು ತಡೆಗಟ್ಟಲು ಈಗ ಇರುವುದು ಇದೊಂದೇ ಉಪಾಯ ಎಂಬುದನ್ನು ವಾಷಿಂಗ್ಟನ್ ಬಲವಾಗಿ ನಂಬಿರುವಂತಿದೆ ಎಂಬುದನ್ನು ಟ್ರಂಪ್ ಹೇಳಿಕೆಯು ದೃಢ ಪಡಿಸಿದೆ.
ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದ ಬಳಿಕ ಮೂರು ರಾಷ್ಟ್ರಗಳ ನಡುವಿನ ಸಂಘರ್ಷ ಮಧ್ಯಪ್ರಾಚ್ಯದಾದ್ಯಂತ ಹರಡಿದೆ. ಇರಾನ್ ಪ್ರತೀಕಾರ ದಾಳಿಯನ್ನು ನಿಲ್ಲಿಸದೇ ಇರುವುದರಿಂದ ಟೆಹರಾನ್ ನಿಂದ ಕಾರ್ಯನಿರ್ವಹಿಸುವ ಮಿಲಿಟರಿ ನಾಯಕತ್ವ ಉಳಿಯದೇ ಇದ್ದರೆ ಸಂಘರ್ಷ ಕೊನೆಯಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಟೆಹರಾನ್ ಜೊತೆ ಮಾತುಕತೆ ನಡೆಸಲು ಆಸಕ್ತಿ ಹೊಂದಿಲ್ಲ. ಇರಾನ್‌ನ ಮಿಲಿಟರಿ ಸಾಮರ್ಥ್ಯಗಳು ನಾಶವಾದರೆ ಮತ್ತು ಅದರ ನಾಯಕತ್ವ ನಿರ್ಮೂಲನೆಯಾದರೆ ಮಾತುಕತೆಗಳನ್ನು ಅಪ್ರಸ್ತುತಗೊಳ್ಳುತ್ತದೆ ಎಂದರು.
ನಾವು ಶರಣಾಗುತ್ತೇವೆ ಎಂದು ಹೇಳಲು ಅವರಲ್ಲಿ ಯಾರೂ ಉಳಿಯುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದ ಟ್ರಂಪ್, ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಸಂಘರ್ಷವು ಎರಡನೇ ವಾರಕ್ಕೆ ಪ್ರವೇಶಿಸುತ್ತಿದೆ ಎಂದರು.
ಅಮೆರಿಕ ಮತ್ತು ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಆರಂಭವಾದ ಮೇಲೆ ಟೆಹರಾನ್ ತನ್ನ ಕ್ರಮಗಳಿಗಾಗಿ ದೂರದರ್ಶನದಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಕ್ಷಮೆಯಾಚಿಸಿದ ಬಳಿಕ ಟ್ರಂಪ್, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಅಪಹಾಸ್ಯ ಮಾಡಿದರು.
ಭಾರತಕ್ಕೆ ಸಂಬಂಧಿಸಿದ ಇಸ್ರೇಲ್‌ನ ಹೈಫಾ ತೈಲ ಘಟಕದ ಮೇಲೆ ಇರಾನ್ ದಾಳಿ; ವಿಡಿಯೋ ವೈರಲ್
ಈ ಕುರಿತು ಟ್ರೂತ್ ಸೋಶಿಯಲ್‌ನಲ್ಲಿ ಬರೆದಿರುವ ಅವರು, ಇರಾನ್ ಕ್ಷಮೆಯಾಚಿಸಿದೆ ಮತ್ತು ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಯಾಕೆಂದರೆ ಪ್ರಾದೇಶಿಕ ಸಂಘರ್ಷದಲ್ಲಿ ಅವರು ಸೋತಿದ್ದಾರೆ ಎಂದು ಹೇಳಿದ್ದಾರೆ.