ಪಾಕ್ ಸೇನೆ ಜೊತೆ ಭಯೋತ್ಪಾದಕರಿಗೆ ಲಿಂಕ್! ಬಹಿರಂಗವಾಗಿ ಸತ್ಯ ಒಪ್ಪಿಕೊಂಡ ಉಗ್ರ , ವಿಡಿಯೋ ನೋಡಿ
Lashkar-e-Taiba: ಪಾಕಿಸ್ತಾನದ ಶಾಲೆಯೊಂದರಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡಿದ ಲಷ್ಕರ್-ಎ-ತೈಬಾದ ಭಯೋತ್ಪಾದಕ ಸಂಘಟನೆಯ ಹಿರಿಯ ನಾಯಕ, ಪಾಕಿಸ್ತಾನ ಸೇನೆಯೊಂದಿಗೆ ಸಂಘಟನೆಯ ನೇರ ನಂಟು ಇರುವುದನ್ನು ಸ್ವತಃ ಒಪ್ಪಿಕೊಂಡಿದ್ದಾನೆ. ಈ ಮಾತು ಭಾರತಕ್ಕೆ ಹೊಸದೇನಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಪಾಕಿಸ್ತಾನದ ಈ ವಿಚಾರವನ್ನು ಹೇಳಿಕೊಂಡೇ ಬಂದಿತ್ತು.
ಪಾಕ್ ಶಾಲೆಯಲ್ಲಿ ಭಾಷಣ ಮಾಡಿದ ಉಗ್ರ -
ಇಸ್ಲಾಮಾಬಾದ್: ಪಾಕಿಸ್ತಾನಿ ಸೇನೆಯೊಂದಿಗೆ (Pakistan Military) ಭಯೋತ್ಪಾದಕಾ ಸಂಘಟನೆ ಹೊಂದಿರುವ ನಂಟನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ಲಷ್ಕರ್-ಎ-ತೈಬಾದ (Lashkar-e-Taiba) ಎರಡನೇ ಪ್ರಮುಖ ನಾಯಕ ಸೈಫುಲ್ಲಾ ಕಸೂರಿ ಒಪ್ಪಿಕೊಂಡಿದ್ದಾನೆ.
ಪಾಕಿಸ್ತಾನದ ಒಂದು ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಕಸೂರಿ ಈ ವಿಚಾರವನ್ನು ದೃಢಪಡಿಸಿದ್ದಾನೆ. ಅವನು ಯಾವಾಗ ಭಾಷಣ ಮಾಡಿರುವುದು ಎಂಬುದು ತಿಳಿದುಬಂದಿಲ್ಲ. ಆದರೆ ಆ ವಿಡಿಯೊ ನಿಜವಾದದ್ದು ಎಂಬುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ. ಈ ಕಾರ್ಯಕ್ರಮವು ಪಾಕಿಸ್ತಾನದಲ್ಲಿ ನಡೆದಿತ್ತು.
ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಉಗ್ರರ ಕರಿನೆರಳು; ಕಡಿಮೆ ಬೆಲೆಯ ಸ್ಫೋಟಕ, ಡ್ರೋನ್ ತಯಾರಿಸಿದ ಭಯೋತ್ಪಾದಕರು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕ ಗುಂಪಿನ ಉಪ ಮುಖ್ಯಸ್ಥನು ವಿಡಿಯೊದಲ್ಲಿ, ಕೆಂಪು ಬಲೂನ್‌ಗಳಿಂದ ಅಲಂಕರಿಸಲ್ಪಟ್ಟ ಎತ್ತರದ ವೇದಿಕೆಯ ಮೇಲೆ ನಿಂತಿರುವುದು ಕಂಡುಬಂದಿದೆ. ಚೌಕಟ್ಟಿನಲ್ಲಿ ಶಾಲೆಯ ಲೋಗೋದ ಅರ್ಧದಷ್ಟು ಭಾಗ ತೋರಿಸಲಾಗಿದೆ. ಪಾಕಿಸ್ತಾನದ ಸೇನೆಯು ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಮುನ್ನಡೆಸಲು ನನ್ನನ್ನು ಆಹ್ವಾನಿಸುತ್ತದೆ. ನಿಮಗೆ ಗೊತ್ತೇ? ಭಾರತ ಕೂಡ ನನ್ನನ್ನು ನೋಡಿ ಹೆದರುತ್ತದೆ ಎಂದು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಹೇಳಿದ್ದಾನೆ.
ವಿಡಿಯೊ ವೀಕ್ಷಿಸಿ:
🚨🇵🇰👹 Osint Alert:
— OsintTV 📺 (@OsintTV) January 10, 2026
Straight from the horse’s mouth.
Pahalgam mastermind and Lashkar-e-Taiba Deputy Chief Saifullah Kasuri openly claims that the Pakistan Army invites him to lead funeral prayers of its own soldiers. He boasts that India is rattled and fearful of his presence.… https://t.co/4CDcKPXY8i pic.twitter.com/PQtieLZ5Il
ಯಾವುದೇ ನಾಗರಿಕ ಸಮಾಜದಲ್ಲಿ ಮಕ್ಕಳ ಶಾಲೆಯಲ್ಲಿ ಭಯೋತ್ಪಾದಕ ಸಂಘಟನೆಯ ನಾಯಕನೊಬ್ಬ ಭಾಷಣ ಮಾಡುವುದು ಕಲ್ಪನೆಗೂ ಬಾರದ ಸಂಗತಿ. ಆದರೆ, ಪಾಕಿಸ್ತಾನದಲ್ಲಿ, ಎಲ್‌ಇಟಿಯ ಭಯೋತ್ಪಾದಕನಿಗೆ ಯುವ ಮನಸ್ಸುಗಳನ್ನು ಉದ್ದೇಶಿಸಿ ಮಾತನಾಡಲು ಮತ್ತು ಅವರ ಆಲೋಚನೆಗಳನ್ನು ರೂಪಿಸಲು ಒಂದು ವೇದಿಕೆ ಸಿಕ್ಕಿರುವುದು ನಿಜಕ್ಕೂ ದುರದೃಷ್ಟಕರ.
ಎಲ್‌ಇಟಿ ನಾಯಕನ ಈ ಹೇಳಿಕೆ ಭಾರತಕ್ಕೆ ಅಚ್ಚರಿಯೇನಲ್ಲ. ಏಕೆಂದರೆ ಭಾರತ ಹಲವು ವರ್ಷಗಳಿಂದ ಪಾಕಿಸ್ತಾನದ ಪ್ರಾಯೋಜಿತ ಭಯೋತ್ಪಾದನೆಯ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತುತ್ತಲೇ ಬಂದಿದೆ. ಉದಾಹರಣೆಗೆ, 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೇನೆಯೊಂದಿಗೆ ಭಯೋತ್ಪಾದಕರು ಕೂಡ ಕೈ ಜೋಡಿಸಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪ್ರಾರಂಭಿಸಿದ ನಿಖರವಾದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಚಟುವಟಿಕೆಯಲ್ಲಿ ಆತಂಕಕಾರಿ ಮಟ್ಟದಲ್ಲಿ ಹೆಚ್ಚಳವಾಗಿದೆ ಎಂದು ಗುಪ್ತಚರ ಮಾಹಿತಿ ಬಹಿರಂಗಪಡಿಸಿತ್ತು.
ಎಲ್‌ಇಟಿ ಮತ್ತು ಪಾಕಿಸ್ತಾನ ಬೆಂಬಲಿತ ಮತ್ತೊಂದು ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತೊಂದು ಸಂಘಟಿತ ದಾಳಿಗೆ ಸಜ್ಜುಗೊಳ್ಳುತ್ತಿವೆ ಎಂದು ವರದಿ ಸೂಚಿಸಿತ್ತು.
ಮನೆಗೆ ಬಂದು ಆಹಾರ ಕೇಳಿದ ಭಯೋತ್ಪಾದಕರು: ಬಕರಾಲ್ ಕುಟುಂಬದಿಂದ ಸ್ಪೋಟಕ ಮಾಹಿತಿ, ಭದ್ರತಾ ಪಡೆಗಳಿಂದ ತೀವ್ರ ಶೋಧ
ಈ ಗುಪ್ತಚರ ಮಾಹಿತಿಯನ್ನು ಗಂಭೀರ ಎಚ್ಚರಿಕೆಯಾಗಿ ಅಧಿಕಾರಿಗಳು ಪರಿಗಣಿಸಿದ್ದಾರೆ. ಹೀಗಾಗಿ ಭಾರತೀಯ ಸೇನೆ ಮತ್ತು ಗುಪ್ತಚರ ಜಾಲವು ಉತ್ತರ ಕಮಾಂಡ್ ವಲಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪಾಕಿಸ್ತಾನದ ಭಯೋತ್ಪಾದನೆಯ ರಫ್ತು ನಿರಂತರವಾಗಿ ಮುಂದುವರಿದರೆ ಆಪರೇಷನ್ ಸಿಂಧೂರ್ ಹೊಸ ಹಂತವನ್ನು ಪ್ರವೇಶಿಸುತ್ತದೆ ಎಂದು ಭಾರತ ಹೇಳಿದೆ.
ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಅವರು ಉತ್ತರ ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭದ್ರತಾ ಕ್ರಮಗಳು ಮತ್ತು ಒಳನುಸುಳುವಿಕೆ ನಿಗ್ರಹ ಗ್ರಿಡ್ ಅನ್ನು ಪರಿಶೀಲಿಸಿದರು. ಕಾರ್ಯಾಚರಣೆಯ ಜಾಗವನ್ನು ಪ್ರಾಬಲ್ಯಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳು ಅವರಿಗೆ ವಿವರಿಸಿದರು ಎಂದು ಉತ್ತರ ಕಮಾಂಡ್ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದೆ.