IND vs NZ: ವಿರಾಟ್ ಕೊಹ್ಲಿ ಅರ್ಧಶತಕ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಜಯ!
India vs New Zealand 1st ODI: ವಿರಾಟ್ ಕೊಹ್ಲಿಯ ಅರ್ಧಶತಕದ ಬಲದಿಂದ ಭಾರತ ತಂಡ, ಮೊದಲನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆಯನ್ನು ಪಡೆದಿದೆ.
ಮೊದಲನೇ ಒಡಿಐನಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು. -
ನವದೆಹಲಿ: ವಿರಾಟ್ ಕೊಹ್ಲಿಯ (Virat kohli) ನಿರ್ಣಾಯಕ ಅರ್ಧಶತಕದ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ (IND vs NZ) ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆಯನ್ನು ಪಡೆದಿದೆ. ಕೈಲ್ ಜೇಮಿಸನ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕಿವೀಸ್ (New Zealand) ತಂಡ ಕೊನೆಯವರೆಗೂ ಹೋರಾಟವನ್ನು ನೀಡಿತ್ತಾದರೂ ಅಂತಿಮವಾಗಿ ಸೋಲು ಒಪ್ಪಿಕೊಂಡಿತು.
ಭಾನುವಾರ ವಡೋದರದ ಬಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಯ ಅರ್ಧಶತಕಗಳ ಬಲದಿಂದ 49 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 306 ರನ್‌ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು. ಚೇಸಿಂಗ್‌ನಲ್ಲಿ ಭಾರತದ ಪರ ಅದ್ಭುತವಾಗಿ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ, 91 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 93 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IND vs NZ: ವಿರಾಟ್ ಕೊಹ್ಲಿಯ ಏಕದಿನ ವಿಶ್ವಕಪ್ ಭವಿಷ್ಯ ನುಡಿದ ಅಲಾನ್ ಡೊನಾಲ್ಡ್!
ಕೊಹ್ಲಿ-ಗಿಲ್ ಜುಗಲ್‌ಬಂದಿ
ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ 26 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು, ಆದರೆ, ಕೈಲ್ ಜೇಮಿಸನ್ ಎಸೆತದಲ್ಲಿ ಔಟ್ ಆದರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಈ ಜೋಡಿ ಕಿವೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿರು ಹಾಗೂ 118 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು 150ರ ಗಡಿಯನ್ನು ದಾಟಿಸಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಗಿಲ್, 71 ಎಸೆತಗಳಲ್ಲಿ 56 ರನ್‌ಗಳನ್ನು ಕಲೆ ಹಾಕಿದರು.
Acing yet another chase! 🫡
— BCCI (@BCCI) January 11, 2026
Virat Kohli is adjudged the Player of the Match for his highly impressive 9⃣3⃣(91) in the run chase 🙌
Scorecard ▶️ https://t.co/OcIPHEpvjr#TeamIndia | #INDvNZ | @imVkohli | @IDFCFIRSTBank pic.twitter.com/iGYCxZPGkq
ಬಳಿಕ ಗಾಯದಿಂದ ಗುಣಮುಖರಾಗಿ ಭಾರತ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್ ಕೂಡ ನಿರಾಶೆ ಮೂಡಿಸಲಿಲ್ಲ. ಅವರು ಆಡಿದ 47 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 49 ರನ್ ಗಳಿಸಿದರು. ಆದರೆ, ಅರ್ಧಶತಕದಂಚಿನಲ್ಲಿ ಅವರು, ಕೈಲ್ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕೆಎಲ್ ರಾಹುಲ್ ಹಾಗೂ ಹರ್ಷಿತ್ ರಾಣಾ ತಲಾ 29 ರನ್‌ಗಳನ್ನು ಗಳಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.
ಬಾಂಗ್ಲಾದೇಶ ತಂಡಕ್ಕೆ ಟಿ20 ವಿಶ್ವಕಪ್ ಪಂದ್ಯಕ್ಕೆ ಆತಿಥ್ಯ ವಹಿಸಲು ಪಾಕಿಸ್ತಾನ ಸಿದ್ಧ! ವರದಿ
300 ರನ್ ಕಲೆ ಹಾಕಿದ್ದ ಕಿವೀಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ನ್ಯೂಜಿಲೆಂಡ್ ತಂಡದ ಪರ ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕವನ್ನು ಬಾರಿಸಿದ್ದರು. ಡೆವೋನ್ ಕಾನ್ವೆ, ಹೆನ್ರಿ ನಿಕೋಲ್ಸ್ ಹಾಗೂ ಡ್ಯಾರಿಲ್ ಮಿಚೆಲ್ ನಿರ್ಣಾಯಕ ಅರ್ಧಶತಕಗಳ ಬಲದಿಂದ ನ್ಯೂಜಿಲೆಂಡ್ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 300 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತಕ್ಕೆ 301 ರನ್‌ಗಳ ಗುರಿಯನ್ನು ನೀಡಿತ್ತು.
ಕಾನ್ವೆ-ನಿಕೋಲ್ಸ್ ಶತಕದ ಜೊತೆಯಾಟ
ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಆರಂಭಿಕರಾದ ಡೆವೋನ್ ಕಾನ್ವೆ ಹಾಗೂ ಹೆನ್ರಿ ನಿಕೋಲ್ಸ್ ಮೊದಲನೇ ವಿಕೆಟ್‌ಗೆ 117 ರನ್‌ಗಳನ್ನು ಕಲೆ ಹಾಕಿದ್ದರು. ಕಾನ್ವೆ 67 ಎಸೆತಗಳಲ್ಲಿ 56 ರನ್‌ಗಳನ್ನು ಕಲೆ ಹಾಕಿದರೆ, ನಿಕೋಲ್ಸ್ 69 ಎಸೆತಗಳಲ್ಲಿ 62 ರನ್‌ಗಳನ್ನು ಸೇರಿಸಿದರು. ಆದರೆ, ಕೇವಲ 9 ರನ್ ಅಂತರದಲ್ಲಿ ಈ ಇಬ್ಬರೂ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು.
Prevailing in a thriller! 👏
— BCCI (@BCCI) January 11, 2026
A victory by 4⃣ wickets for #TeamIndia to take a 1⃣-0⃣ lead in the three-match series 🥳
Scorecard ▶️ https://t.co/OcIPHEpvjr#INDvNZ | @IDFCFIRSTBank pic.twitter.com/1pT7kPjsU3
ಡ್ಯಾರಿಲ್ ಮಿಚೆಲ್ ಅರ್ಧಶತಕ
ಇದಾದ ಬಳಿಕ ಕಿವೀಸ್ ತಂಡದ ಇತರೆ ಬ್ಯಾಟ್ಸ್‌ಮನ್‌ಗಳು ಒಬ್ಬರಾದ ನಂತರ ಮತ್ತೊಬ್ಬರು ಔಟ್ ಆಗುತ್ತಲೇ ಇದ್ದರು. ಆದರೆ, ಒಂದು ಕಡೆ ಗಟ್ಟಿಯಾಗಿ ನಿಂತು ಆಡಿದ ಡ್ಯಾರಿಲ್ ಮಿಚೆಲ್, 71 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 83 ರನ್‌ಗಳನ್ನು ಗಳಿಸಿದರು. ಇದರಿಂದ ಕಿವೀಸ್ 300 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಭಾರತದ ಪರ ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಹಾಗೂ ಪ್ರಸಿಧ್ ಕೃಷ್ಣ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು.