ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾರ್ಮೊಜ್‌ ಬಿಕ್ಕಟ್ಟಿಗೆ ಯುಎಇ ಹೊಸ ಪ್ಲಾನ್‌! ಹೊಸ ತೈಲ ಪೈಪ್‌ಲೈನ್‌ ಯೋಜನೆಗೆ ಅಸ್ತು

ಇರಾನ್-ಯುಎಸ್-ಇಸ್ರೇಲ್ ಉದ್ವಿಗ್ನತೆಯ ನಡುವೆ ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯುಎಇ ತನ್ನ ಪ್ರಮುಖ ತೈಲ ಪೈಪ್‌ಲೈನ್ ಯೋಜನೆಯನ್ನು ವೇಗಗೊಳಿಸಲು ನಿರ್ಧರಿಸಿದೆ. ಫುಜೈರಾ ಬಂದರಿನ ಮೂಲಕ ಕಚ್ಚಾ ತೈಲ ರಫ್ತು ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಈ ಯೋಜನೆ 2027ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಹಾರ್ಮೊಜ್‌ ಬಿಕ್ಕಟ್ಟಿನ ನಡುವೆ ಯುಎಇ ಮಹತ್ವದ ಹೆಜ್ಜೆ!

ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿರುವ ಹಡಗು -

Profile
Sushmitha Jain May 15, 2026 6:00 PM

ಅಬುಧಾಬಿ: ಇರಾನ್ (Iran), ಯುಎಸ್ (US) ಮತ್ತು ಇಸ್ರೇಲ್ (Isreal) ದೇಶಗಳ ನಡುವಿನ ಭೀಕರ ಯುದ್ಧದ ಕಾರಣದಿಂದಾಗಿ ಪ್ರಾದೇಶಿಕ ಉದ್ವಿಗ್ನತೆಯು ತೀವ್ರವಾಗಿ ಹೆಚ್ಚುತ್ತಿದೆ. ಈ ಜಾಗತಿಕ ಪರಿಸ್ಥಿತಿಯ ಮಧ್ಯೆ, ಹಾರ್ಮುಜ್ ಜಲಸಂಧಿ (Strait Of Hormuz)ಯನ್ನು ಬೈಪಾಸ್ ಮಾಡುವ ತನ್ನ ಪ್ರಮುಖ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶವು ಶುಕ್ರವಾರ ಒಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಫುಜೈರಾ ಬಂದರಿನ ಮೂಲಕ ತನ್ನ ಕಚ್ಚಾ ತೈಲ ರಫ್ತು ಮಾಡುವ ಒಟ್ಟು ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿರುವ ಬೃಹತ್ ತೈಲ ಪೈಪ್‌ಲೈನ್ ಯೋಜನೆಯ ನಿರ್ಮಾಣ ಕಾರ್ಯವನ್ನು ಇನ್ನು ಮುಂದೆ ಅತ್ಯಂತ ವೇಗಗೊಳಿಸುವುದಾಗಿ ಯುಎಇ ಅಧಿಕೃತವಾಗಿ ತಿಳಿಸಿದೆ.

ಅಬುಧಾಬಿಯ ಕ್ರೌನ್ ಪ್ರಿನ್ಸ್ ಆದ ಖಾಲಿದ್ ಬಿನ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ ನಡೆದ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಶ್ಚಿಮ-ಪೂರ್ವ ಪೈಪ್‌ಲೈನ್ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಗೆ (ADNOC) ನೇರ ನಿರ್ದೇಶನ ನೀಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಹೊಸ ಪೈಪ್‌ಲೈನ್ ಮುಂದಿನ ೨૦2೭ ರ ವೇಳೆಗೆ ತನ್ನ ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ತೈಲ ಕಂಪನಿ ಸ್ಪಷ್ಟಪಡಿಸಿದೆ.

ವಿವಾದಿತ ಭೋಜಶಾಲಾ ಸಂಕೀರ್ಣ ಹಿಂದೂ ದೇಗುಲ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಯುಎಇ ಪ್ರಸ್ತುತ ಅಬುಧಾಬಿ ಕಚ್ಚಾ ತೈಲ ಪೈಪ್‌ಲೈನ್ ಅನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇದನ್ನು ಹಬ್ಶಾನ್-ಫುಜೈರಾ ಪೈಪ್‌ಲೈನ್ ಎಂದೂ ಕರೆಯಲಾಗುತ್ತಿದ್ದು, ಇದು ಹಾರ್ಮುಜ್ ಜಲಸಂಧಿಯನ್ನು ಬಳಸದೆಯೇ ಪ್ರತಿದಿನ ಬರೋಬ್ಬರಿ ೧.೮ ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ನೇರವಾಗಿ ಒಮಾನ್ ಕೊಲ್ಲಿಯ ಕರಾವಳಿ ಪ್ರದೇಶಕ್ಕೆ ಅತ್ಯಂತ ಸುರಕ್ಷಿತವಾಗಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೊಲ್ಲಿ ವಲಯದಲ್ಲಿ ಹಾರ್ಮುಜ್ ಜಲಸಂಧಿಯ ಹೊರಗಿನಿಂದ ಕಚ್ಚಾ ತೈಲವನ್ನು ರಫ್ತು ಮಾಡಲು ಪೈಪ್‌ಲೈನ್‌ ವ್ಯವಸ್ಥೆ ಹೊಂದಿರುವ ಏಕೈಕ ಉತ್ಪಾದಕ ದೇಶಗಳೆಂದರೆ ಯುಎಇ ಮತ್ತು ಸೌದಿ ಅರೇಬಿಯಾ ಮಾತ್ರ. ಒಮಾನ್ ದೇಶವು ಒಮಾನ್ ಕೊಲ್ಲಿಯಲ್ಲಿ ಸುದೀರ್ಘ ಕರಾವಳಿಯನ್ನು ಹೊಂದಿದೆ. ಆದರೆ ಕುವೈತ್, ಇರಾಕ್, ಕತಾರ್ ಮತ್ತು ಬಹ್ರೇನ್‌ನಂತಹ ಇತರ ದೇಶಗಳು ತಮ್ಮ ಇಂಧನ ಸಾಗಣೆಗಾಗಿ ಇಂದಿಗೂ ಸಂಪೂರ್ಣವಾಗಿ ಹಾರ್ಮುಜ್ ಜಲಸಂಧಿಯನ್ನೇ ತೀವ್ರವಾಗಿ ಅವಲಂಬಿಸಿವೆ.

ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾದ ಯುಎಸ್-ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗೆ ಇರಾನ್ ತಕ್ಕ ಪ್ರತಿಕ್ರಿಯೆ ನೀಡಿದ ನಂತರ, ಇರಾನ್ ಮತ್ತು ಒಮಾನ್ ನಡುವಿನ ನಿರ್ಣಾಯಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಸಾಮಾನ್ಯವಾಗಿ ಜಾಗತಿಕ ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗವು ಈ ಕಿರಿದಾದ ಜಲಮಾರ್ಗದ ಮೂಲಕವೇ ಹಾದುಹೋಗುತ್ತದೆ.