ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತಕ್ಕೆ ಅಗತ್ಯವಿರುವಷ್ಟು ತೈಲ ಪೂರೈಸಲು ನಾವು ಸಿದ್ದ; ಅಮೆರಿಕದ ಸುಂಕ ಬೆದರಿಕೆಗೆ ರಷ್ಯಾ ತಿರುಗೇಟು

ಅಮೆರಿಕದ ಬೆದರಿಕೆ, ಒತ್ತಡ ತಂತ್ರಕ್ಕೆ ಸವಾಲು ಹಾಕಿರುವ ರಷ್ಯಾ, ಭಾರತಕ್ಕೆ ಅಗತ್ಯವಿರುವಷ್ಟು ತೈಲವನ್ನು ಪೂರೈಕೆ ಮಾಡಲು ಮಾಸ್ಕೋ ಸಿದ್ಧವಾಗಿದೆ. ಆದರೆ ದುರದೃಷ್ಟವಶಾತ್ ನಿರ್ಬಂಧ ಮತ್ತು ಸುಂಕ ವಿಧಿಸುವವರು ಪ್ರಾಮಾಣಿಕ ಸಹಕಾರದ ಬದಲು ಒತ್ತಡ ತಂತ್ರಗಳ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ತಿಳಿಸಿದ್ದಾರೆ.

ಅಮೆರಿಕದ ಬೆದರಿಕೆ ತಂತ್ರಕ್ಕೆ ರಷ್ಯಾ ಖಂಡನೆ

ಸಂಗ್ರಹ ಚಿತ್ರ -

ಮಾಸ್ಕೋ: ಭಾರತಕ್ಕೆ ಅಗತ್ಯವಿರುವಷ್ಟು ತೈಲವನ್ನು (Russian crude sale) ಪೂರೈಕೆ ಮಾಡಲು ಮಾಸ್ಕೋ ಸಿದ್ಧವಿದೆ. ಆದರೆ ದುರದೃಷ್ಟವಶಾತ್ ಇದಕ್ಕೆ ಸುಂಕದ ಮೂಲಕ ಬೆದರಿಕೆ (US tariff threats) ಹಾಕಿ ನಿರ್ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಪ್ರಮಾಣಿಕ ಸಹಕಾರದ ಬದಲು ಒತ್ತಡ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ರಷ್ಯಾದ ರಾಯಭಾರಿ (Russian Ambassador) ಡೆನಿಸ್ ಅಲಿಪೋವ್ (Denis Alipov) ತಿಳಿಸಿದ್ದಾರೆ. ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಅವರು, ರಷ್ಯಾದಿಂದ ತೈಲ ಆಮದಿಗೆ ಭಾರತಕ್ಕೆ ಅಮೆರಿಕವು ಶೇಕಡಾ 100ರಷ್ಟು ಸುಂಕ ಬೆದರಿಕೆ ಹಾಕುವುದನ್ನು ಖಂಡಿಸಿದರು.

ನವದೆಹಲಿಯು ರಷ್ಯಾದ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಸುಂಕ ಬೆದರಿಕೆಗಳನ್ನು ಹಾಕುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಡೆನಿಸ್ ಅಲಿಪೋವ್, ಅಮೆರಿಕದ ಒತ್ತಡ ತಂತ್ರಗಳನ್ನು ಟೀಕಿಸಿ, ಭಾರತದೊಂದಿಗೆ ತೈಲ ವ್ಯಾಪಾರವನ್ನು ಮುಂದುವರಿಸಲು ಮಾಸ್ಕೋ ಸಿದ್ಧವಾಗಿದೆ. ಆದರೆ ಇದಕ್ಕೆ ವಿಧಿಸಲಾಗುವ ನಿರ್ಬಂಧಗಳು ಭಾರತಕ್ಕೆ ಉತ್ತಮ ಒಪ್ಪಂದವನ್ನು ನೀಡುವುದನ್ನು ತಡೆಯುತ್ತದೆ ಎಂದು ಹೇಳಿದರು.

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕ್ಯಾಂಟರ್ ಪಲ್ಟಿ: 12 ಮಂದಿ ಬಲಿ, 16ಕ್ಕೂ ಹೆಚ್ಚು ಮಂದಿಗೆ ಗಾಯ

ರಷ್ಯಾವು ಉಕ್ರೇನ್ ಜೊತೆ ಯುದ್ಧ ನಡೆಸುತ್ತಿರುವುದಕ್ಕೆ ರಷ್ಯಾದ ತೈಲ ಮಾರಾಟವನ್ನು ನಿಲ್ಲಿಸಲು ಅಮೆರಿಕ ಹಲವಾರು ಪ್ರಯತ್ನಗಳನ್ನು ಮಾಡಿದೆ. ಹೊರ್ಮುಜ್ ಜಲ ಮಾರ್ಗದಲ್ಲಿರುವ ದಿಗ್ಬಂಧನವನ್ನು ಗಮನದಲ್ಲಿಟ್ಟುಕೊಂಡು ರಷ್ಯಾದ ತೈಲವನ್ನು ಖರೀದಿಸಲು ಅಮೆರಿಕ ಹೊರಡಿಸಿದ ತಾತ್ಕಾಲಿಕ ತೈಲ ವಿನಾಯಿತಿಯ ಹೊರತಾಗಿಯೂ ರಷ್ಯಾದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಅಗ್ರ ಐದು ಖರೀದಿದಾರರ ಮೇಲೆ ಶೇ. 100 ರಷ್ಟು ಸುಂಕಗಳನ್ನು ವಿಧಿಸಲು ಅಮೆರಿಕ ಸೆನೆಟ್‌ನಲ್ಲಿ ಮಸೂದೆ ಮಂಡಿಸಲಾಯಿತು. ಇದು ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.

ರಾಜಕೀಯದಲ್ಲಿ ಶಿಷ್ಟಾಚಾರ ಅಗತ್ಯ, ಮಹಿಳೆಯರನ್ನು ಅವಹೇಳನ ಮಾಡುವುದು ಸರಿಯಲ್ಲ: ವಿಜಯ್

ರಷ್ಯಾದ ಕಚ್ಚಾ ತೈಲ ಮಾರಾಟ ನಿಂತರೆ ಜಗತ್ತು ಅದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಇಂಧನ ಮಾರುಕಟ್ಟೆ ತಲ್ಲಣವಾಗುವುದು. ನಾವು ಭಾರತಕ್ಕೆ ತೈಲವನ್ನು ಪೂರೈಸಲು ಸಿದ್ದರಿದ್ದೇವೆ. ಆದರೆ ಭಾರತ ಖರೀದಿಸಲು ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿದ ಅವರು ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಸ್ವತಂತ್ರವಾಗಿದೆ ಎಂದು ಹೇಳಿದರು.