ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೇಬು ಅಥವಾ ಬಾಳೆಹಣ್ಣು: ದಿನನಿತ್ಯದ ಆಹಾರದಲ್ಲಿ ಯಾವುದರ ಸೇವನೆ ಬೆಸ್ಟ್?

Health Tips: ಆರೋಗ್ಯಪೂರ್ಣ ಹಣ್ಣು ಅಂತ ಬಂದಾಗ ಹೆಚ್ಚಿನ ಜನರ ಆಯ್ಕೆ ಸೇಬು ಮತ್ತು ಬಾಳೆಹಣ್ಣು ಆಗಿರುತ್ತದೆ. ಇದು ನೈಸರ್ಗಿಕವಾಗಿ ಸಿಹಿ ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಸೇಬಿನಲ್ಲಿ ವಿಟಮಿನ್ ಮತ್ತು ನಾರಿನಾಂಶ ಹೆಚ್ಚಾಗಿದ್ದರೆ, ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಮ್ ಪ್ರಮಾಣ ಅಧಿಕವಾಗಿರುತ್ತದೆ. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯ ಎಂಬ ಗೊಂದಲ ಹೆಚ್ಚಿನ ಜನರಲ್ಲಿದೆ.

ಸೇಬು ಅಥವಾ ಬಾಳೆಹಣ್ಣು: ಆರೋಗ್ಯಕ್ಕೆ ಯಾವುದು ಉತ್ತಮ?

ಸಾಂದರ್ಭಿಕ ಚಿತ್ರ -

Profile
Pushpa Kumari Aug 12, 2026 7:00 AM

ಬೆಂಗಳೂರು: ದಿನನಿತ್ಯದ ಆಹಾರದಲ್ಲಿ ಹಣ್ಣುಗಳ (Fruits for Health) ಸೇವನೆ ಪ್ರತಿಯೊಬ್ಬರಿಗೂ ಅಗತ್ಯ. ಅದರಲ್ಲೂ ಆರೋಗ್ಯಪೂರ್ಣ ಹಣ್ಣು ಅಂತ ಬಂದಾಗ ಹೆಚ್ಚಿನ ಜನರ ಆಯ್ಕೆ ಸೇಬು ಮತ್ತು ಬಾಳೆಹಣ್ಣು ಆಗಿರುತ್ತದೆ. ಇದು ನೈಸರ್ಗಿಕವಾಗಿ ಸಿಹಿ ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ. ಸೇಬಿನಲ್ಲಿ ವಿಟಮಿನ್ ಮತ್ತು ನಾರಿನಾಂಶ ಹೆಚ್ಚಾಗಿದ್ದರೆ ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಮ್ ಪ್ರಮಾಣ ಅಧಿಕವಾಗಿರುತ್ತದೆ. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಪೂರ್ಣ ಎಂಬ ಗೊಂದಲ ಹೆಚ್ಚಿನ ಜನರಲ್ಲಿದೆ.

ಎರಡೂ ಹಣ್ಣುಗಳು ಕಾರ್ಬೋಹೈಡ್ರೇಟ್‌ಗಳು, ಫೈಬರ್, ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಆದಾಗ್ಯೂ ಪೌಷ್ಟಿಕಾಂಶದ ವಿಚಾರದಲ್ಲಿ ಸ್ವಲ್ಪ ಭಿನ್ನವಾಗಿವೆ. ಸೇಬು ಸರಿಸುಮಾರು 95 ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಸುಮಾರು 4 ಗ್ರಾಂ ಫೈಬರ್ ಅನ್ನು ಒದಗಿಸುತ್ತದೆ. ಇದು ವಿಶೇಷವಾಗಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಕ್ಕೆ ಪರಿಣಾಮಕಾರಿಯಾಗಿದೆ. ಬಾಳೆಹಣ್ಣು ಸುಮಾರು 105 ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಸುಮಾರು 3 ಗ್ರಾಂ ಫೈಬರ್ ಒದಗಿಸುತ್ತದೆ. ಬಾಳೆಹಣ್ಣುಗಳು ವಿಶೇಷವಾಗಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ಅಧಿಕವಾಗಿದೆ.

ಸೇಬು ಹಣ್ಣಿನ ಆರೋಗ್ಯ ಪ್ರಯೋಜನಗಳೇನು?

ಸೇಬುಗಳು ನಾರಿನ ಉತ್ತಮ ಮೂಲ. ವಿಶೇಷವಾಗಿ ಜೀರ್ಣಕ್ರಿಯೆಯನ್ನು ಬೆಂಬಲಿಸಲಿದ್ದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತವೆ. ಅಧಿಕದೊತ್ತಡ ಇದ್ದವರು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಸೇಬು ಹಣ್ಣಿನ ಸೇವನೆ ಉತ್ತಮ.

ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಒಳಿತೇ? ತಜ್ಞರು ಹೇಳೋದೇನು?

ಬಾಳೆ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?

ಬಾಳೆಹಣ್ಣು ಸ್ನಾಯುಗಳ ಕಾರ್ಯ, ನರಗಳ ಒತ್ತಡ ಮತ್ತು ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಇದು ಅತ್ಯಗತ್ಯ. ಖನಿಜವಾದ ಪೊಟ್ಯಾಸಿಯಮ್‌ಗೆ ಜನಪ್ರಿಯ.

ತೂಕ ಇಳಿಕೆಗೆ ಯಾವುದು ಉತ್ತಮ?

ತೂಕ ಇಳಿಸಲು ಬಯಸುವವರಿಗೆ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಂಶವಿರುವ ಸೇಬು ಸೂಕ್ತ ಆಯ್ಕೆ. ಇದು ಹೊಟ್ಟೆ ತುಂಬಿದ ಅನುಭವ ನೀಡಿ ಹಸಿವನ್ನು ನಿವಾರಿಸುತ್ತದೆ.

​ವ್ಯಾಯಾಮ ಮಾಡುವ ಮೊದಲು ಯಾವ ಹಣ್ಣು ಉತ್ತಮ?

ಬಾಳೆಹಣ್ಣುಗಳು ದೈಹಿಕ ಚಟುವಟಿಕೆಯ ಮೊದಲು ಉಪಯೋಗಕಾರಿ. ಏಕೆಂದರೆ ಅವು ಪೊಟ್ಯಾಸಿಯಮ್ ಜತೆಗೆ ಸುಲಭವಾಗಿ ಲಭ್ಯವಿರುವ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತವೆ. ಹಾಗಾಗಿ ಪೋಷಕಾಂಶಗಳ ಅಗತ್ಯಕ್ಕೆ ಇವು ಎರಡು ಹಣ್ಣುಗಳು ಪರಿಣಾಮಕಾರಿ. ಹೀಗಾಗಿ ಕೇವಲ ಸೇಬು ಅಥವಾ ಬಾಳೆಹಣ್ಣು ಆರಿಸಿಕೊಳ್ಳುವ ಬದಲು, ದಿನನಿತ್ಯದ ಆಹಾರದಲ್ಲಿ ಎರಡೂ ಹಣ್ಣುಗಳಿಗೂ ಆದ್ಯತೆ ನೀಡಿ.