ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಡುಗೆ ಎಣ್ಣೆಯನ್ನು ಪದೇ ಪದೆ ಬಳಕೆ ಮಾಡುವ ಅಭ್ಯಾಸ ಇದೆಯೆ? ಹಾಗಾದರೆ ನೀವು ಡೇಂಜರ್‌ ಝೋನ್‌ನಲ್ಲಿದ್ದೀರಿ ಎಂದೇ ಅರ್ಥ!

Health Tips: ಅಡುಗೆಗೆ ಎಣ್ಣೆ ಹಾಕದೇ ಆಹಾರದ ರುಚಿಯೇ ಇಲ್ಲ ಅನ್ನುವ ಮಟ್ಟಿಗೆ ಅಭ್ಯಾಸ ಮಾಡಿಕೊಂಡಿದ್ದೇವೆ. ಅದರೆ ನಾವು ಬಳಸುವ ಎಣ್ಣೆಯೂ ಕೂಡ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಕೆಲವರು ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಪುನಃ ಬಳಕೆ ಮಾಡುತ್ತಾರೆ. ಇದನ್ನು ನಾವು ಸರಿಯೆಂದು ಭಾವಿಸಿದ್ದೇವೆ. ಆದರೆ ಈ ಅಭ್ಯಾಸದ ಕುರಿತು ತಜ್ಞರು ಪ್ರಮುಖ ಎಚ್ಚರಿಕೆಯನ್ನು ನೀಡಿದ್ದಾರೆ.

ಅಡುಗೆ ಎಣ್ಣೆ ಮರುಬಳಕೆ: ತಜ್ಞರು ಹೇಳೋದೇನು?

ಸಾಂದರ್ಭಿಕ ಚಿತ್ರ -

Profile
Pushpa Kumari Sep 3, 2026 7:03 AM

ಬೆಂಗಳೂರು: ಅಡುಗೆಗೆ ಎಣ್ಣೆ ಹಾಕದೆ ಆಹಾರದ ರುಚಿಯೇ ಇಲ್ಲ ಅನ್ನುವ ಮಟ್ಟಿಗೆ ಅಭ್ಯಾಸ ಮಾಡಿಕೊಂಡಿದ್ದೇವೆ. ಅದರೆ ನಾವು ಬಳಸುವ ಎಣ್ಣೆಯೂ ಕೂಡ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಕೆಲವರು ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು (Cooking Oil) ಪುನಃ ಬಳಕೆ ಮಾಡುತ್ತಾರೆ. ಇದನ್ನು ನಾವು ಸರಿಯೆಂದು ಭಾವಿಸಿದ್ದೇವೆ, ಆದರೆ ಈ ಅಭ್ಯಾಸದ ಕುರಿತು ತಜ್ಞರು ಪ್ರಮುಖ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಅಡುಗೆಗೆ ಬಳಸುವ ಎಣ್ಣೆಯನ್ನು ಮರುಪರಿಶೀಲಿಸುವಂತೆ ಸಲಹೆಯನ್ನು ನೀಡಿದ್ದಾರೆ.

ತಾಜಾ ಎಣ್ಣೆ ಬಳಸಿ

ನೀವು ಎಣ್ಣೆ ಅಗತ್ಯ ಇರುವ ಅಡುಗೆ ಮಾಡುತ್ತಿದ್ದರೆ, ಹಳೆಯ ಬಳಸಿದ ಎಣ್ಣೆ ಮರುಬಳಕೆ ಮಾಡುವ ಬದಲು ತಾಜಾ ಎಣ್ಣೆಯನ್ನು ಬಳಸಿ. ಎಣ್ಣೆಯನ್ನು ಪದೇ ಪದೆ ಬಿಸಿ ಮಾಡಿದಾಗ ಅದರ ರಾಸಾಯನಿಕ ಸಂಯೋಜನೆ ಬದಲಾಗಿ ಎಣ್ಣೆಯ ಗುಣಮಟ್ಟ ಕೆಡಲು ಕಾರಣವಾಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಉಳಿದ ಎಣ್ಣೆ ಬಳಸುವುದು ಬೇಡ

ತಿಂಡಿ ಕರಿದ ನಂತರ ಉಳಿಯುವ ಎಣ್ಣೆ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ದಿನಗಟ್ಟಲೆ ತೆಗೆದಿಟ್ಟು ಮತ್ತೆ ಮತ್ತೆ ಬಿಸಿ ಮಾಡುವುದು ಅತ್ಯಂತ ಅಪಾಯಕಾರಿ. ಪದೇ ಪದೆ ಬಿಸಿ ಮಾಡುವುದರಿಂದ ಅದರಲ್ಲಿನ ರಾಸಾಯನಿಕ ಪ್ರಕ್ರಿಯೆ ವೇಗಗೊಳಿಸಬಹುದು.

ಉಳಿದ ಎಣ್ಣೆಯನ್ನು ಸಿಂಕ್‌ಗೆ ಸುರಿಯಬೇಡಿ

ಬಳಸಿದ ಎಣ್ಣೆಯನ್ ಸಿಂಕ್‌ಗೆ ಸುರಿಯುವುದು ಹೆಚ್ಚಿನ ಜನರಿಗೆ ಅಭ್ಯಾಸ ಇದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಮನೆಯ ಪೈಪ್‌ಲೈನ್ ಹಾಗೂ ಪರಿಸರಕ್ಕೂ ಹಾನಿಕರ. ಎಣ್ಣೆಯು ಪೈಪ್‌ಗಳಲ್ಲಿ ಹೆಪ್ಪುಗಟ್ಟಿ ಬ್ಲಾಕ್ ಆಗಬಹುದು.

ಚುರುಕಾದ ಮೆದುಳು ಬೇಕೇ? ಈ ಆಹಾರಗಳ ಸೇವನೆ ಮಾಡಿ

ವಾಸನೆ ಪರಿಶೀಲನೆ

ಎಣ್ಣೆಯ ಬಣ್ಣ ಬದಲಾದರೆ ಅಥವಾ ನೊರೆ ಬಂದಿದ್ದರೆ ಅದನ್ನು ಸಂಪೂರ್ಣವಾಗಿ ಬದಲಾಯಿಸಿ.

ಸಮಸ್ಯೆಯೇನು?

ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ: ಎಣ್ಣೆಯನ್ನು ಮರುಬಳಕೆ ಮಾಡಿದರೆ ಟ್ರಾನ್ಸ್ ಕೊಬ್ಬಿನಾಮ್ಲಗಳ ಅಂಶ ಹೆಚ್ಚಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ಮರುಬಳಕೆ ಮಾಡಿದ ಸಂದರ್ಭದಲ್ಲಿ ಅದರಲ್ಲಿನ ಟ್ರಾನ್ಸ್ ಫ್ಯಾಟ್ ಹೆಚ್ಚಾಗುತ್ತದೆ. ಇದರಿಂದ ಬಿಪಿ, ಶುಗರ್‌ನಂತಹ ಸಮಸ್ಯೆ ಹೆಚ್ಚಾಗಬಹುದು.

ಮೆದುಳು-ಯಕೃತ್ ನ ಸಮಸ್ಯೆ: ಮರುಬಳಕೆ ಮಾಡಿದ ಎಣ್ಣೆಯಿಂದ ಹೊಟ್ಟೆ-ಮೆದುಳು-ಯಕೃತ್ ಸಮತೋಲನಕ್ಕೆ ತೊಂದರೆ ಉಂಟು ಮಾಡುವುದು.

ಕ್ಯಾನ್ಸರ್ ಹಾಗೂ ಹೃದಯದ ಕಾಯಿಲೆ: ​ವಿಷಕಾರಿ ಅಂಶಗಳು ಕೆಟ್ಟು ಕೊಬ್ಬು ಉತ್ಪತ್ತಿಯಾಗಿ ಕ್ಯಾನ್ಸರ್ ಹಾಗೂ ಹೃದಯದ ಕಾಯಿಲೆಗಳಿಗೂ ಕಾರಣವಾಗಬಹುದು. ಹಾಗಾಗಿ ಕರಿದ ಎಣ್ಣೆಯನ್ನು ಮರುಬಳಕೆ ಮಾಡುವ ಮುನ್ನ ಪರಿಶೀಲಿಸಿ.