ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಳೆಗಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆಯೇ? ಈ ಆಹಾರಗಳಿಗೆ ಆದ್ಯತೆ ನೀಡಿ!

Health Tips: ಮಾನ್ಸೂನ್ ಋತುವಿನಲ್ಲಿ ತಂಪಾದ ವಾತಾವರಣ ಇದ್ದರೂ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸವಾಲಿನದ್ದಾಗಿರಬಹುದು. ಕಲುಷಿತ ನೀರು, ಅಸ್ವಚ್ಛ ಆಹಾರದಿಂದ ಅತಿಸಾರ, ಭೇದಿ, ಗ್ಯಾಸ್ಟ್ರಿಕ್‌ ನಂತ ಸಮಸ್ಯೆ ಕಾಣಿಸಿಕೊಂಡು ಜೀರ್ಣಕ್ರಿಯೆಗೆ ಪ್ರಬಲ ಪೆಟ್ಟು ಬೀಳಲಿದೆ. ಹಾಗಾಗಿ ತಾಜಾ, ಸರಳ ಮತ್ತು ಪೌಷ್ಟಿಕ ಆಹಾರಗಳನ್ನು ಆರಿಸಿಕೊಳ್ಳುವುದು ಮಳೆಗಾಲದಲ್ಲಿ ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಕರುಳಿನ ಆರೋಗ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಆಹಾರಗಳು

ಸಂಗ್ರಹ ಚಿತ್ರ -

Profile
Pushpa Kumari Jul 31, 2026 7:00 AM

ನವದೆಹಲಿ,ಜು.30: ಮಾನ್ಸೂನ್ ಋತುವಿನಲ್ಲಿ ತಂಪಾದ ವಾತಾವರಣ ಇದ್ದರೂ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸವಾಲಿನದ್ದಾಗಿರಬಹುದು. ಕಲುಷಿತ ನೀರು, ಅಸ್ವಚ್ಛ ಆಹಾರದಿಂದ ಅತಿಸಾರ, ಭೇದಿ, ಗ್ಯಾಸ್ಟ್ರಿಕ್‌ ನಂತ ಸಮಸ್ಯೆ ಕಾಣಿಸಿಕೊಂಡು ಜೀರ್ಣಕ್ರಿಯೆಗೆ ಪ್ರಬಲ ಪೆಟ್ಟು ಬೀಳಲಿದೆ. ಹಾಗಾಗಿ ತಾಜಾ, ಸರಳ ಮತ್ತು ಪೌಷ್ಟಿಕ ಆಹಾರಗಳನ್ನು ಆರಿಸಿಕೊಳ್ಳುವುದು ಮಳೆಗಾಲದಲ್ಲಿ ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ತಯಾರಿಸಿದ ಮೊಸರು, ಹೆಸರುಬೇಳೆ ಕಿಚಡಿ ಮತ್ತು ಹುದುಗಿಸಿದ ಆಹಾರಗಳವರೆಗೆ, ಕೆಲವು ದೈನಂದಿನ ಆಹಾರಗಳು ಆರೋಗ್ಯಕರ ಕರುಳಿನ (Gut Health) ವಾತಾವರಣವನ್ನು ಬೆಂಬಲಿಸುತ್ತವೆ.

ಮನೆಯಲ್ಲೇ ತಯಾರು ಮಾಡಿದ ಮೊಸರು:

ಮನೆಯಲ್ಲಿಯೇ ತಯಾರಿಸಿದ ಮೊಸರು ಕರುಳಿನ ಸೂಕ್ಷ್ಮಜೀವಿಯನ್ನು ಬೆಂಬಲಿಸುವ ಮೂಲಕ ಪ್ರೋಬಯಾಟಿಕ್‌ಗಳನ್ನು ಉತ್ತೀಜಿಸಿತ್ತದೆ. ಇದು ಜೀರ್ಣಕ್ರಿಯೆಯನ್ನು ಬೆಂಬಲಿಸಲು ಮತ್ತು ಕರುಳಿನ ಬ್ಯಾಕ್ಟೀರಿಯಾದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹುದುಗಿಸಿದ ಆಹಾರಗಳು:

ಸರಿಯಾಗಿ ಹುದುಗಿಸಿದ ಹಿಟ್ಟಿನಿಂದ ಮಾಡಿದ ಆಹಾರಗಳಾದ ಇಡ್ಲಿ ಮತ್ತು ದೋಸೆಗಳು ದೇಹದ ಸೂಕ್ಷ್ಮಜೀವಿಗಳನ್ನು ಬೆಂಬಲಿಸಲು ಸಹಾಯ ಮಾಡುತ್ತವೆ. ಬೆಳಗ್ಗಿನ ತಿಂಡಿಗೆ ಎಣ್ಣೆಯಲ್ಲಿ ಕರಿದ ಆಹಾರಕ್ಕಿಂತ ಇಡ್ನಿ, ದೋಸೆಯಂತಹ ತಿಂಡಿಗಳು ಒಳ್ಳೆಯದು. ಜೀರ್ಣಕಾರಿ ಪ್ರಯೋಜನಗಳನ್ನು ಕೂಡ ಇವು ನೀಡುತ್ತವೆ.

ಬಾಳೆಹಣ್ಣುಗಳು:

ಬಾಳೆಹಣ್ಣುಗಳು ಜೀರ್ಣಿಸಿಕೊಳ್ಳಲು ಸುಲಭವಾದ ಹಣ್ಣಾಗಿದ್ದು, ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇವು ಪ್ರಿಬಯಾಟಿಕ್ ಫೈಬರ್ ಹೊಂದಿದ್ದು ಇದರ ಪೆಕ್ಟಿನ್ ಅಂಶವು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.ನೀವು ಹೊಟ್ಟೆಯ ಕಿರಿಕಿರಿ ಹೊಂದಿದ್ದರೆ ಬಾಳೆಹಣ್ಣುಗಳು ವಿಶೇಷವಾಗಿ ಸಹಾಯಕವಾಗಿವೆ.

ಶುಂಠಿ:

ಶುಂಠಿಯನ್ನು ಹೆಚ್ಚಾಗಿ ಜೀರ್ಣಕ್ರಿಯೆಗೆ ಬೆಂಬಲಿಸಲು ಬಳಸಲಾಗುತ್ತದೆ. ವಾಕರಿಕೆ, ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣ ದಂತಹ ರೋಗಲಕ್ಷಣಗಳಿಗೆ ಸಹಾಯ ಮಾಡಬಹುದು. ನೀವು ಊಟಕ್ಕೆ ತಾಜಾ ಶುಂಠಿಯನ್ನು ಸೇರಿಸಬಹುದು ಅಥವಾ ಚಹಾ, ಕಷಾಯ ಮಾಡಿ ಕುಡಿಯಬಹುದು.

Health Tips: 40 ವರ್ಷ ದಾಟಿದ ನಂತರವೂ ಫಿಟ್ ಆಗಿರಲು ಈ ಆಹಾರ ಸೇವಿಸಿ

ಹೆಸರುಬೇಳೆ ಕಿಚಡಿ:

ನಿಮ್ಮ ಹೊಟ್ಟೆಯು ಭಾರವಾಗಿರುವ ಅನುಭವ ಹೊಂದಿದ್ದರೆ ಎಣ್ಣೆಯುಕ್ತ ಊಟಕ್ಕಿಂತ ಸರಳವಾದ ಹೆಸರು ಬೇಳೆ ಕಿಚಡಿಯನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಫೈಬರ್‌ನ ಸಂಯೋಜನೆಯನ್ನು ಒದಗಿಸುತ್ತದೆ.

ಸರಿಯಾಗಿ ಬೆಂದ ತರಕಾರಿಗಳು:

ಮಳೆಗಾಲದಲ್ಲಿ ಸೋರೆಕಾಯಿ, ಕುಂಬಳಕಾಯಿ ಮತ್ತು ಕ್ಯಾರೆಟ್‌ಗಳಂತಹ ತರಕಾರಿಯನ್ನು ಬೇಯಿಸಿ ಸೇವಿಸಬೇಕು. ಮಸಾಲೆ ಪದಾರ್ಥಗಳನ್ನು ಸೇವಿಸಿದ್ದರೆ ಜೀರ್ಣಿಸಿಕೊಳ್ಳಲು ಕಷ್ಟಪಡುವವರಿಗೆ ಚೆನ್ನಾಗಿ ಬೆಂದ ತರಕಾರಿಗಳು ಅತ್ಯಂತ ಉಪಯೋಗಕಾರಿ.

ಓಟ್ಸ್ ಸೇವನೆ:

ಓಟ್ಸ್ ನಲ್ಲಿಯೂ ಯಥೇಚ್ಛವಾಗಿ ನಾರಿನಂಶ ಪ್ರಮಾಣ ಇರುತ್ತದೆ. ಇದು ಸರಿಯಾದ ಮಲವಿಸರ್ಜನೆಗೆ ನೆರವಾಗುವುದಲ್ಲದೆ, ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಸಕ್ಕರೆ, ಬೆಣ್ಣೆ ಅಥವಾ ಅತಿಯಾದ ಉಪ್ಪಿನಿಂದ ಸವಿಯುವ ಬದಲು ತರಕಾರಿಗಳು ಅಥವಾ ಇತರ ಪೌಷ್ಟಿಕ ಪದಾರ್ಥಗಳೊಂದಿಗೆ ಅವುಗಳನ್ನು ಸರಳವಾಗಿ ತಯಾರಿಸಬಹುದು.