ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Health: ಸಾಧಕರಾಗಲು ಯಾವ ಸೂಪರ್ ಡ್ರಿಂಕ್ಸ್ ಕುಡಿಯಬೇಕು ಗೊತ್ತೆ?

ಬದುಕಿನಲ್ಲಿ ಸಾಧನೆ ಮಾಡುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಈ ಹಾದಿಯಲ್ಲಿ ನಡೆಯುವುದು ಕೆಲವರಿಗೆ ತುಂಬಾ ಕಷ್ಟವಾಗಿ ಬಿಡುತ್ತದೆ. ಹೀಗಾಗಿಯೇ ಹೆಚ್ಚಿನವರು ಜೀವನದಲ್ಲಿ ಸೋಲುತ್ತಾರೆ. ಸಾಧಕರಾಗಲು ಕಾಫಿ, ಟೀ ಅಲ್ಲ. ಈ ಒಂದು ಸೂಪರ್ ಡ್ರಿಂಕ್ಸ್ ಕುಡಿಯಬೇಕು ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ. ಆ ಡ್ರಿಂಕ್ಸ್ ಯಾವುದು, ಅದರ ವಿಶೇಷತೆ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾಫಿ, ಟೀ ಕುಡಿದರೆ ಬುದ್ದಿ ಚುರುಕಾಗುವುದೇ? ತಜ್ಞರು ಹೇಳೋದೇನು?

ಡಾ. ಸುತ್ತೂರು ಮಾಲಿನಿ -

ಬೆಂಗಳೂರು: ಜೀವನದಲ್ಲಿ ಸಾಧನೆ ಮಾಡಬೇಕು ಎಂದಾದರೆ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ನರಕೋಶಗಳಲ್ಲಿರುವ ವಿಷವನ್ನು ತೆಗೆದು ಹಾಕುವ ಕಷಾಯವನ್ನು ಕುಡಿಯಬೇಕು. ಇದು ಅಂತಿಂಥ ಕಷಾಯವಲ್ಲ. ಒಂದು ಸೂಪರ್ ಡ್ರಿಂಕ್ಸ್ ಎನ್ನಬಹುದು. ಇದರಿಂದ ಮೆದುಳು ಅತ್ಯಂತ ಚುರುಕಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ (Dr. Suttur Malini). 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ಸಾಧನೆ ಮಾಡಿರುವ ಮತ್ತು ಮಾಡದೇ ಇರುವ ವ್ಯಕ್ತಿಗಳ ನಡುವೆ ಇರುವ ಒಂದೇ ಒಂದು ವ್ಯತ್ಯಾಸ ಎಂದರೆ ಆಹಾರ ಮತ್ತು ದಿನಚರಿ ಕ್ರಮವಾಗಿದೆ. ಇದರಲ್ಲಿ ಶಿಸ್ತು ಬದ್ಧತೆ ಇದ್ದರೆ ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು ಎಂದು ಅವರು ಹೇಳಿದರು.

ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:



ಬದುಕಿನಲ್ಲಿ ಸಾಧನೆ ಮಾಡಲು ಏನು ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂಬುದು ಮುಖ್ಯ. ಎಷ್ಟೇ ಕಷ್ಟಪಟ್ಟರೂ ಕೆಲವರಿಗೆ ಮಾತ್ರ ಯಶಸ್ಸು ಸಿಗುತ್ತದೆ. ಇನ್ನು ಹೆಚ್ಚಿನವರಿಗೆ ಸಿಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ. ನಾವು ನಮ್ಮ ಮೆದುಳನ್ನು ಸರಿಯಾಗಿ ಆಕ್ಟಿವೇಟ್ ಮಾಡಬೇಕು ಎಂದಾದರೆ ಇದಕ್ಕೆ ಪೂರಕವಾದ ಆಹಾರ ತೆಗೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ ಮೌನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ನಮ್ಮ ಹಿರಿಯರ ಆಚಾರ ವಿಚಾರದಲ್ಲೇ ವಿಜ್ಞಾನವಿತ್ತು. ಅವರು ಮಾಡುತ್ತಿದ್ದ ಬಗೆ ಬಗೆಯ ಕಷಾಯಗಳು ದೇಹಾರೋಗ್ಯಕ್ಕೆ ಸೂಪರ್ ಡ್ರಿಂಕ್ಸ್ ಆಗಿದ್ದವು. ಮೆದುಳು ಆರೋಗ್ಯವಾಗಿ ಕಾರ್ಯ ನಿರ್ವಹಿಸಬೇಕಾದರೆ ಅದರಲ್ಲಿ ಯಾವುದೇ ರೀತಿಯ ವಿಷಗಳು ಇರಬಾರದು. ವಿಷಕಾರಿ ಅಂಶವನ್ನು ತೆಗೆದು ಹಾಕಲು ಹಾಲು, ಅರಶಿನ, ಕರಿಮೆಣಸು, ಶುಂಠಿ, ಲವಂಗ, ಏಲಕ್ಕಿ, ಒಂದೆಲಗ, ಕೇಸರಿ, ಅಶ್ವಗಂಧ ಸೇರಿಸಿ ಮಾಡಿರುವ ಕಷಾಯ ಅತ್ಯುತ್ತಮ ಡ್ರಿಂಕ್ಸ್ ಎನ್ನಬಹುದು ಎಂದು ಅವರು ಹೇಳಿದರು.

ಇದು ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಫಂಗಲ್ ಗುಣವನ್ನು ಹೊಂದಿದೆ. ಅರಶಿನ ಮತ್ತು ಕರಿಮೆಣಸನ್ನು ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಇದರಲ್ಲಿರುವ ಅಂಶವನ್ನು ನಮ್ಮ ದೇಹ ಸುಲಭವಾಗಿ ಹೀರಿಕೊಳ್ಳುತ್ತದೆ. ಇದಕ್ಕೆ ಶುಂಠಿ ಬೆರಸುವುದು ನರಗಳಲ್ಲಿ ಇರುವ ಅಡ್ಡಿಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಇದು ಕೆಲವೊಂದು ಕಿಣ್ವಗಳು ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.

ಹಾಲು, ಅರಶಿನ, ಕರಿಮೆಣಸು, ಶುಂಠಿ, ಲವಂಗ, ಏಲಕ್ಕಿ, ಒಂದೆಲಗ, ಕೇಸರಿ, ಅಶ್ವಗಂಧ ಸೇರಿಸಿ ಮಾಡಿರುವ ಕಷಾಯದ ಪ್ರತಿ ನಿತ್ಯ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿರುತ್ತವೆ. ಇದರಿಂದ ಮೆದುಳಿನಲ್ಲಿ ಪ್ರೋನಿಂಗ್ ನಡೆಯುತ್ತದೆ. ಇದು ಒಂದು ರೀತಿ ಅನಗತ್ಯವಾದ ನರಗಳನ್ನು ಕತ್ತರಿಸುತ್ತದೆ. ಹೀಗಾಗಿ ಮೆದುಳಿನ ಬೆಳವಣಿಗೆ ಚೆನ್ನಾಗಿ ನಡೆಯುತ್ತದೆ. ಬೇಡವಾದ ವಿಷಯುಕ್ತ ಪದಾರ್ಥಗಳು ಹೊರ ಹಾಕುತ್ತದೆ. ಫೈಟೋ ಕೆಮಿಕಲ್ಸ್ ಹೊಂದಿರುವ ಈ ಡ್ರಿಂಕ್ಸ್ ದೇಹಕ್ಕೆ ಸಿಕ್ಕರೆ ಇದು ಮೆದುಳಿಗೆ ಸೂಪರ್ ಫುಡ್ ದೊರಕಿದಂತಾಗುತ್ತದೆ. ಇದನ್ನು ಪ್ರತಿ ನಿತ್ಯ ನಾವು ಸೇವಿಸಿತ್ತಾ ಹೋದರೆ ಸುಮಾರು ಮೂರು ತಿಂಗಳಲ್ಲಿ ಇದರ ಫಲಿತಾಂಶ ತಿಳಿಯುತ್ತದೆ ಎಂದು ಅವರು ಹೇಳಿದರು.

ಮಳೆಗಾಲದಲ್ಲಿ ಕಾಡುವ ಕೀಲು ನೋವಿಗೆ ಅರಿಶಿನ ಚಹಾವು ಹೇಗೆ ಸಹಕಾರಿ?

ಈ ಹಾಲನ್ನು ಬೆಳಗ್ಗೆ ಅಥವಾ ರಾತ್ರಿ ಕುಡಿಯಬಹುದು. ಆದರೆ ಇದರ ಪ್ರಯೋಜನ ಮಾತ್ರ ಬೇರೆ ಬೇರೆಯಾಗಿರುತ್ತದೆ. ಕಾಲ ಮತ್ತು ಆಹಾರಕ್ಕೆ ನೇರವಾದ ಸಂಬಂಧವಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ಡಾ. ಮಾಲಿನಿ.