ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಸಿಗೆಯಲ್ಲಿ ದೇಹವನ್ನು ನೈಸರ್ಗಿಕವಾಗಿ ತಣಿಸಲು ಅಡುಗೆ ಕೋಣೆಯಲ್ಲೇ ಇದೆ ಔಷಧ

Beat The Intense Summer Heat Naturally: ಕೇವಲ ದೇಹಕ್ಕೆ ನೀರಿನ ಅಂಶ ಸಿಕ್ಕರೆ ಸಾಲದು. ಅಗತ್ಯವಾದ ಜೀವಸತ್ವಗಳು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಪಡೆಯುವುದು ಕೂಡ ಅಗತ್ಯ. ಅದರಲ್ಲೂ ಈ ಸೆಕೆಯನ್ನು ತಡೆದುಕೊಳ್ಳಲು ಹೆಚ್ಚಿನವರು ಐಸ್‌ಕ್ರೀಂ, ಕೋಲ್ಡ್ ಡ್ರಿಂಕ್ಸ್‌ನಂತಹ ತಂಪು ಪಾನೀಯದ ಮೊರೆ ಹೋಗುತ್ತಾರೆ‌. ಅದರ ಬದಲು ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ನೈಸರ್ಗಿಕವಾಗಿ ಅಡುಗೆಮನೆಯಲ್ಲೇ ಸಿಗುವ ಈ ಆಹಾರ ಪದಾರ್ಥಗಳನ್ನು ಬಳಸಲು ತಜ್ಞರು ಸಲಹೆ ನೀಡಿದ್ದಾರೆ.

ಬೇಸಿಗೆಯ ತೀವ್ರ ಶಾಖವನ್ನು ನೈಸರ್ಗಿಕವಾಗಿ ನಿವಾರಿಸಲು ಇಲ್ಲಿದೆ ಟಿಪ್ಸ್

ಸಂಗ್ರಹ ಚಿತ್ರ -

Profile
Pushpa Kumari May 18, 2026 7:19 AM

ನವದೆಹಲಿ, ಮೇ 18: ಭಾರತದಾದ್ಯಂತ ಬಿಸಿಲಿನ ಶಾಖ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಕೇವಲ ದೇಹಕ್ಕೆ ನೀರಿನ ಅಂಶ ಸಿಕ್ಕರೆ ಸಾಲದು. ಅಗತ್ಯವಾದ ಜೀವಸತ್ವಗಳು (Health Tips) ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಪಡೆಯುವುದು ಕೂಡ ಅಗತ್ಯ. ಅದರಲ್ಲೂ ಈ ಸೆಕೆಯನ್ನು ತಡೆದುಕೊಳ್ಳಲು ಹೆಚ್ಚಿನವರು ಐಸ್‌ಕ್ರೀಂ, ಕೋಲ್ಡ್ ಡ್ರಿಂಕ್ಸ್‌ನಂತಹ ಮೊರೆ ಹೋಗುತ್ತಾರೆ‌. ಅದಕ್ಕಿಂತ ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ನೈಸರ್ಗಿಕವಾಗಿ ಅಡುಗೆಮನೆಯಲ್ಲೇ ಸಿಗುವ ಈ ಆಹಾರ ಪದಾರ್ಥಗಳನ್ನು ಬಳಸಬೇಕು ತಜ್ಞರು ಸಲಹೆ ನೀಡಿದ್ದಾರೆ.

ಸೌತೆ ಕಾಯಿ

ಇದು ದೇಹಕ್ಕೆ ಉಲ್ಲಾಸ ನೀಡುತ್ತದೆ. ಇದು ಶೇಕಡ 95ರಷ್ಟು ನೀರಿನ ಅಂಶದಿಂದ ಕೂಡಿದೆ. ಇದು ಬೇಸಗೆಯ ದಿನಗಳಲ್ಲಿ ದೇಹವನ್ನು ಹೈಡ್ರೇಟ್‌ ಆಗಿರಲು ಸಹಾಯ ಮಾಡುತ್ತದೆ. ಅದೇ ರೀತಿ ಆಯಾಸವನ್ನು ದೂರ ಮಾಡುತ್ತದೆ.

ತೆಂಗಿನ ನೀರು

ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಅದರ ಜತೆ ದೇಹವನ್ನು ಕೂಡ ಉಲ್ಲಾಸವಾಗಿಡುತ್ತದೆ.

ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಕಲ್ಲಂಗಡಿ

ಸುಮಾರು ಶೇಕಡ 90ರಷ್ಟು ನೀರಿನಿಂದ ತುಂಬಿರುವ ಕಲ್ಲಂಗಡಿ ದೇಹವನ್ನು ಹೈಡ್ರೇಟ್‌, ತಂಪಾಗಿಡಲು ಸಹಾಯ ಮಾಡುತ್ತದೆ. ಹಾಗೆಯೇ ಹೊಳಪಿನ ಚರ್ಮ ಹೊಂದಲು ಕಾರಣವಾಗುತ್ತದೆ.

ಮೊಸರು

ಭಾರತೀಯ ಮನೆಗಳಲ್ಲಿ ಕಾಣ ಸಿಗುವ ಮೊಸರು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಪ್ರೋಬಯಾಟಿಕ್‌ಗಳಲ್ಲಿ ಕೂಡ ಇದು ಸಮೃದ್ಧವಾಗಿದೆ.

ಪುದೀನಾ

ಪುದೀನಾವು ಶಾಖ-ಸಂಬಂಧಿತ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಮತ್ತು ಜೀರ್ಣ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೇಸಗೆಯಲ್ಲಿ ತಜ್ಞರು ಮಣ್ಣಿನ ಪಾತ್ರೆ ಅಥವಾ ಮಟ್ಕಾದಲ್ಲಿ ನೀರನ್ನು ಸಂಗ್ರಹಿಸಲು ಸೂಚಿಸುತ್ತಾರೆ. ಏಕೆಂದರೆ ಇದು ನೈಸರ್ಗಿಕವಾಗಿ ನೀರನ್ನು ತಂಪಾಗಿಸುತ್ತದೆ. ನೀರಿಗೆ ಪುದೀನಾ ಹಾಕಿಡಿ.