IPL 2026: ʻಆರ್‌ಸಿಬಿ ನನಗೆ ತವರು ತಂಡದ ರೀತಿ ಭಾಸವಾಗುತ್ತಿದೆʼ-ಭಾವುಕರಾದ ವೆಂಕಟೇಶ್ ಅಯ್ಯರ್!
ಪಂಜಾಬ್ ಕಿಂಗ್ಸ್ ಎದುರು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿಯಲ್ಲಿ ನನಗೆ ತವರು ತಂಡದ ಜೊತೆ ಇರುವ ರೀತಿ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಅವರು ಅಜೇಯ 73 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು.
ಆರ್‌ಸಿಬಿ ತಂಡದಲ್ಲಿನ ಅನುಭವ ಹಂಚಿಕೊಂಡ ವೆಂಕಟೇಶ್ ಅಯ್ಯರ್. -
ಧರ್ಮಶಾಲಾ: ಪಂಜಾಬ್ ಕಿಂಗ್ಸ್ ಎದುರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಸಂತಸ ವ್ಯಕ್ತಪಡಿಸಿದರು. ಆರ್‌ಸಿಬಿ ಪರ ಆಡುವಾಗ ತವರು ತಂಡದಲ್ಲಿದ್ದೇನೆಂಬ ಭಾವನೆ ನನಗೆ ಉಂಟಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ವಿಶೇಷ ಅನುಭವವನ್ನು ಕೂಡ ಅಯ್ಯರ್ ರಿವೀಲ್ ಮಾಡಿದ್ದಾರೆ. ಅಂದ ಹಾಗೆ ಪಂಜಾಬ್ ಎದುರು 23 ರನ್‌ಗಳ ಗೆಲುವು ಪಡೆದ ಬಳಿಕ ಆರ್‌ಸಿಬಿ ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಿತು.
ಮೇ 17 ರಂದು ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಆರ್‌ಸಿಬಿ ಪರ ನಾಲ್ಕನೇ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್, 40 ಎಸೆತಗಳಲ್ಲಿ 182.50ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 73 ರನ್‌ಗಳನ್ನು ಸಿಡಿಸಿದ್ದರು ಹಾಗೂ ಆರ್‌ಸಿಬಿ ಪರ ಮೊದಲ ಅರ್ಧಶತಕವನ್ನು ಬಾರಿಸಿದ್ದರು. ಇವರ ಬ್ಯಾಟಿಂಗ್ ಬಲದಿಂದ ಆರ್‌ಸಿಬಿ ತನ್ನ ಪಾಲಿನ 20ಓವರ್‌ಗಳಿಗೆ 222 ರನ್‌ಗಳನ್ನು ಕಲೆ ಹಾಕಿತ್ತು.
ಬಳಿಕ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 199 ರನ್‌ಗಳಿಗೆ ಸೀಮಿತವಾಯಿತು. ಆದರೆ, ಪಂದ್ಯವನ್ನು ಗೆದ್ದು ಅಗ್ರ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಜೊತೆಗೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ದೀರ್ಘಾವದಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಈ ಸೀಸನ್‌ನಲ್ಲಿ ಆರ್‌ಸಿಬಿಗೆ ಬಂದಿದ್ದಾರೆ ಹಾಗೂ ಇಲ್ಲಿನ ಅನುಭವವನ್ನು ಮೊದಲ ಬಾರಿ ಹಂಚಿಕೊಂಡಿದ್ದಾರೆ.
RCB vs PBKS: ಪಂಜಾಬ್ ಕಿಂಗ್ಸ್ ಸೋಲುಣಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
“ಅವರು ನನ್ನನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇಲ್ಲಿ ಎಲ್ಲವೂ ಬಹಳ ವೃತ್ತಿಪರ ರೀತಿಯಲ್ಲಿ ನಡೆಯುತ್ತಿದೆ. ವಿಶೇಷವಾಗಿ ಕ್ರಿಕೆಟ್ ನಿರ್ವಹಣೆ ಮತ್ತು ಮ್ಯಾನೇಜ್‌ಮೆಂಟ್ ವ್ಯವಸ್ಥೆ ಅಚ್ಚರಿ ಮೂಡಿಸುವಂತಿದೆ. ಮೊ ಬೊಬಟ್ ಮತ್ತು ದಿನೇಶ್ ಕಾರ್ತಿಕ್ ಅವರಿಗೆ ಸಂಪೂರ್ಣ ಶ್ರೇಯ ಸಲ್ಲಬೇಕು. ಅವರು ಆಟಗಾರರನ್ನು ನೋಡಿಕೊಳ್ಳುತ್ತಿರುವ ರೀತಿ ನಿಜಕ್ಕೂ ಅದ್ಭುತವಾಗಿದೆ,” ಎಂದು ವೆಂಕಟೇಶ್ ಅಯ್ಯರ್ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ತಿಳಿಸಿದ್ದಾರೆ.
“ಅದರ ಜೊತೆಗೆ, ಆರ್‌ಸಿಬಿ ಆಡುತ್ತಿರುವ ಕ್ರಿಕೆಟ್ ಶೈಲಿ ನನಗೆ ತುಂಬಾ ಉತ್ಸಾಹ ನೀಡುತ್ತದೆ. ನಾನು ಬಹಳ ಸಮಯವನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದೊಂದಿಗೆ ಕಳೆದಿದ್ದೇನೆ. ಆದ್ದರಿಂದ ಅಲ್ಲಿ ಭಾವನಾತ್ಮಕ ನಂಟು ಇದ್ದೇ ಇರುತ್ತದೆ. ಆದರೆ ಇಲ್ಲಿ ನಾನು ನಿಜವಾಗಿಯೂ ತವರಿನಲ್ಲಿರುವ ಅನುಭವವನ್ನು ಪಡೆದಿದ್ದೇನೆ,” ಎಂದು ಅವರು ಹೇಳಿದ್ದಾರೆ.
Big game. Big stage.
— Royal Challengers Bengaluru (@RCBTweets) May 17, 2026
ಬೆಂಕಿ Iyer delivered. 😮💨🔥
A knock filled with composure, intent and pure class! Played, Venkatesh. 🫡🌟 pic.twitter.com/rcAa6vjhH7
ಅವಕಾಶವಿಲ್ಲದೆ ಬೇಸರವಾಗಿದ್ದು ನಿಜ: ಅಯ್ಯರ್
“ನಾನು ನಿರಾಶೆಯಾಗಿರಲಿಲ್ಲ ಅಥವಾ ಆಡಲು ಬಯಸಲಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ನಾನು ಮೈದಾನಕ್ಕಿಳಿದು ಆಡಲು ತುಂಬಾ ಆಸೆಪಟ್ಟಿದ್ದೆ. ನಮ್ಮಂತಹ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶವೇ ದೊಡ್ಡ ವಿಷಯ. ನಾವು ಆಡಲು ಬಯಸುತ್ತೇವೆ, ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ,” ಎಂದು ವೆಂಕಟೇಶ್ ಅಯ್ಯರ್ ಹೇಳಿದ್ದಾರೆ.
“ಆದರೆ ಇದು ಚಾಂಪಿಯನ್ ತಂಡ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ತಂಡದ ಸಂಯೋಜನೆಯಲ್ಲಿ ನಿರಂತರ ಬದಲಾವಣೆ ಮಾಡುವುದು ಯಾವಾಗಲೂ ಸರಿಯಲ್ಲ ಎಂಬುದನ್ನೂ ತಿಳಿದಿದ್ದೇನೆ. ಆದರೂ ನಾನು ಆಡಲು ಅವಕಾಶ ಸಿಗಬೇಕು ಮತ್ತು ನಾನು ಅದನ್ನು ಸಾಬೀತುಪಡಿಸುತ್ತೇನೆ ಎಂಬ ನಂಬಿಕೆಯನ್ನು ಕೋಚಿಂಗ್ ಸಿಬ್ಬಂದಿಗೆ ತೋರಿಸಲು ಸದಾ ಪ್ರಯತ್ನಿಸಿದ್ದೆ. ಈಗ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ,” ಎಂದು ಅವರು ತಿಳಿಸಿದರು.
RCB vs PBKS: 500 ರನ್ ಪೂರ್ಣಗೊಳಿಸಿ ಐಪಿಎಲ್ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್ ಕೊಹ್ಲಿ!
“ಆರಂಭದಲ್ಲಿ ನನ್ನ ಆಟ ಸ್ವಲ್ಪ ಅಸಹಜವಾಗಿತ್ತು. ಆದರೆ ನನ್ನ ಜೊತೆಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸುತ್ತಿದ್ದದ್ದು ನನಗೆ ಅದೃಷ್ಟವಾಯಿತು. ಅವರು ನಿಮ್ಮೊಂದಿಗೆ ಹಂಚಿಕೊಳ್ಳುವ ಮನೋಭಾವ ಮತ್ತು ಆತ್ಮವಿಶ್ವಾಸವೇ ದೊಡ್ಡ ವ್ಯತ್ಯಾಸ ತರುತ್ತದೆ. ಕ್ರಿಕೆಟ್‌ನ ಎಲ್ಲಾ ದಿಗ್ಗಜರಲ್ಲಿ ವಿಶೇಷವಾಗಿ ಕಾಣಿಸುವ ಗುಣವೆಂದರೆ ಸಂವಹನ ಕೌಶಲ. ನೀವು ನಿಮ್ಮ ಜೊತೆಯ ಆಟಗಾರರೊಂದಿಗೆ ಉತ್ತಮವಾಗಿ ಸಂವಹನ ನಡೆಸಿದರೆ, ಅದು ತಂಡದ ಪರವಾಗಿ ರನ್ ಗಳಿಸಲು ನೆರವಾಗುತ್ತದೆ,” ಎಂದು ಅವರು ಸೇರಿಸಿದರು.