ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೈಪೋಥೈರಾಯ್ಡಿಸಮ್: ಹೋಮಿಯೋಪಥಿಯಲ್ಲಿದೆ ಚಿಕಿತ್ಸಾ ಪರಿಹಾರ

ಹೈಪೋಥೈರಾಯ್ಡಿಸಮ್ ಎಂಬುದು ಎಲ್ಲಾ ಥೈರಾಯ್ಡ್ ರೋಗಗಳಲ್ಲಿ ಅತ್ಯಂತ ಸಾಮಾನ್ಯ ವಾದುದು. ದಣಿವು, ಒಣಗಿದ ಚರ್ಮ, ತೂಕ ಹೆಚ್ಚಳ, ಕರ್ಕಶ ಧ್ವನಿ, ಸ್ನಾಯು ದುರ್ಬಲತೆ, ಸ್ನಾಯು ನೋವು, ಕೂದಲು ಉದುರುವುದು, ಸ್ಮರಣಶಕ್ತಿ ಕುಗ್ಗುವುದು, ಹೃದಯಬಡಿತ ನಿಧಾನಗೊಳ್ಳುವುದು, ಮಲಬದ್ಧತೆ ಮತ್ತು ಚಳಿಗೆ ಹೆಚ್ಚು ಸಂವೇದನಾ ಶೀಲತೆ ಇತ್ಯಾದಿ ಲಕ್ಷಣಗಳನ್ನು ಹೊಂದಿದೆ.

ಹೈಪೋಥೈರಾಯ್ಡಿಸಮ್: ಹೋಮಿಯೋಪಥಿಯಲ್ಲಿದೆ ಚಿಕಿತ್ಸಾ ಪರಿಹಾರ

-

Ashok Nayak
Ashok Nayak Feb 15, 2026 4:33 PM

ವಿಶ್ವದಾದ್ಯಂತ ಸುಮಾರು 200 ಮಿಲಿಯನ್ ಜನರು ಥೈರಾಯ್ಡ್ ಸಮಸ್ಯೆಗಳಿಂದ ಬಳಲು ತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಥೈರಾಯ್ಡ್ ಸಮಸ್ಯೆಯು ಅಭಿವೃದ್ಧಿ ಶೀಲ ದೇಶಗಳಿಗಿಂತ ಹೆಚ್ಚು ಎಂದು ತಿಳಿದುಬಂದಿದೆ. ಭಾರತದಲ್ಲಿ ಇದರ ಪ್ರಮಾಣ ಸುಮಾರು ಶೇ.11 ರಷ್ಟು ಇದೆ ಎಂದು ಅಂದಾಜಿಸಲಾಗಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಇದರ ಪ್ರಮಾಣ ಶೇ. 5 ರಷ್ಟು ಮಾತ್ರವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಅಂದರೆ ವಿಶೇಷವಾಗಿ ಭಾರತದಲ್ಲಿ ಮಹತ್ತರವಾದ ಆರೋಗ್ಯಭಾರ ಎಂದು ಪರಿಗಣಿಸಬಹುದಾಗಿದೆ.

ಮುಖ್ಯವಾಗಿ ಪರೀಕ್ಷಾ ಕೇಂದ್ರಗಳ ಲಭ್ಯತೆ ಮೂಲಕ ಹೈಪೋಥೈರಾಯ್ಡಿಸಮ್ ಪತ್ತೆ ಮಾಡುವ ಸೌಲಭ್ಯಕಲ್ಪಿಸಬೇಕಿದೆ. ಪರೀಕ್ಷಾ ಕೇಂದ್ರಗಳ ಲಭ್ಯತೆಯಲ್ಲಿ ಮಹತ್ತರ ವ್ಯತ್ಯಾಸ ವಿದೆ. ನಗರ ಪ್ರದೇಶಗಳಲ್ಲಿ ಪರೀಕ್ಷಾ ಸೌಲಭ್ಯಗಳು ಹೆಚ್ಚು ಲಭ್ಯವಿದ್ದರೂ ದೇಶದ ಅನೇಕ ಗ್ರಾಮೀಣ ಭಾಗಗಳಲ್ಲಿ ಈ ಸೌಲಭ್ಯಗಳು ಕಡಿಮೆ ಇದೆ. ಪ್ರಸ್ತುತ ಅಂದಾಜುಗಳ ರೋಗಿಗಳ ಸಂಖ್ಯೆಯನ್ನು ನಿಖರವಾಗಿ ತಿಳಿಯದಿರುವುದು. ವಾಸ್ತವಿಕ ನೋಡುವುದಾದರೆ ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ತಿಳಿಯಬಹುದಾಗಿದೆ.

ಹೈಪೋಥೈರಾಯ್ಡಿಸಮ್ ಎಂಬುದು ಎಲ್ಲಾ ಥೈರಾಯ್ಡ್ ರೋಗಗಳಲ್ಲಿ ಅತ್ಯಂತ ಸಾಮಾನ್ಯವಾದುದು. ದಣಿವು, ಒಣಗಿದ ಚರ್ಮ, ತೂಕ ಹೆಚ್ಚಳ, ಕರ್ಕಶ ಧ್ವನಿ, ಸ್ನಾಯು ದುರ್ಬಲತೆ, ಸ್ನಾಯು ನೋವು, ಕೂದಲು ಉದುರುವುದು, ಸ್ಮರಣಶಕ್ತಿ ಕುಗ್ಗುವುದು, ಹೃದಯಬಡಿತ ನಿಧಾನಗೊಳ್ಳುವುದು, ಮಲಬದ್ಧತೆ ಮತ್ತು ಚಳಿಗೆ ಹೆಚ್ಚು ಸಂವೇದನಾ ಶೀಲತೆ ಇತ್ಯಾದಿ ಲಕ್ಷಣಗಳನ್ನು ಹೊಂದಿದೆ. ಅನೇಕ ಸಂದರ್ಭಗಳಲ್ಲಿ ಲಕ್ಷಣಗಳು ಸ್ಪಷ್ಟ ವಾಗಿ ಕಾಣಿಸದಿರಬಹುದು., ಥೈರಾಯ್ಡ್ ಪರೀಕ್ಷೆಯ ಆಧಾರದ ಮೇಲೆ ರೋಗ ನಿರ್ಣಯ ಮಾಡಲಾಗುತ್ತದೆ.

ಇದನ್ನೂ ಓದಿ: Keshav Prasad Column: ಸಂಯೋಜಿತ ಚಿಕಿತ್ಸೆಯ ಹರಿಕಾರ

ಕೆಲವೊಮ್ಮೆ ತಾತ್ಕಾಲಿಕವಾಗಿ ಥೈರಾಯ್ಡ್ ಮಟ್ಟದಲ್ಲಿ ಉಂಟಾಗುವ ಏರುಪೇರುಗಳನ್ನು ಹೈಪೋಥೈರಾಯ್ಡಿಸಮ್ ಎಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ಇದರಿಂದ ಕೆಲವು ರೋಗಿಗಳು ಅನಾವಶ್ಯಕವಾಗಿ ಹಾರ್ಮೋನ್ ಬದಲಾವಣೆ ಚಿಕಿತ್ಸೆಗೆ ಒಳಗಾಗಬಹುದು. ಆದ್ದರಿಂದ, ಒಂದು ಮಾತ್ರ ಸ್ವಲ್ಪ ಹೆಚ್ಚಾದ ಟಿಎಸ್ಎಚ್ ಎಂಬ ವೈದ್ಯಕೀಯ ವಿಧಾನ ದಿಂದ ಈ ಸಮಸ್ಯೆಯನ್ನು ಪತ್ತೆ ಹಚ್ಚಬಹುದಾಗಿದೆ. ಸಮಗ್ರ ವೈದ್ಯಕೀಯ ಮೌಲ್ಯ ಮಾಪನದ ಮೂಲಕ ಸರಿಯಾದ ರೋಗನಿರ್ಣಯ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

ನಮ್ಮ ಚಿಕಿತ್ಸಾ ಕೇಂದ್ರದಲ್ಲಿ ಹೈಪೋಥೈರಾಯ್ಡಿಸಮ್ ಸೇರಿದಂತೆ ವಿವಿಧ ಥೈರಾಯ್ಡ್ ಸಂಬಂಧಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.. ಚಿಕಿತ್ಸೆಯಿಂದ ಗೆದ್ದ ರೋಗಿಗಳ ಶಿಫಾರಸ್ಸುಗಳ ಮೂಲಕವೇ ಬಹುತೇಕ ರೋಗಿಗಳು ನಮ್ಮ ಬಳಿ ಬರುತ್ತಾರೆ.

ಹೈಪೋಥೈರಾಯ್ಡಿಸಮ್ನ ವೈದ್ಯಕೀಯ ನಿರ್ಧಾರಗಳಲ್ಲಿ ಸಾಮಾನ್ಯವಾಗಿ ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಟಿಎಸ್‌ಎಚ್) ಮಟ್ಟ ಪ್ರಮುಖ ಸೂಚಕವಾಗಿದೆ. ಹೊಸದಾಗಿ ಹೈಪೋಥೈರಾಯ್ಡಿಸಮ್ ರೋಗನಿರ್ಣಯಗೊಂಡ ಎಲ್ಲಾ ರೋಗಿಗಳ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುತ್ತದೆ. ಮೊದಲ ಭೇಟಿಯ ಸಮಯದಲ್ಲಿ ಅವರ ಟಿಎಸ್‌ಎಚ್ ಮಟ್ಟಗಳನ್ನು ದಾಖಲಿಸಿ, ಹೋಮಿಯೋಪಥಿ ಚಿಕಿತ್ಸೆ ನೀಡಲಾಗುತ್ತದೆ.

docs1

ಒಂದು ವರ್ಷದ ಅವಧಿಯಲ್ಲಿ ಸುಮಾರು 2,100 ರೋಗಿಗಳು ಹೋಮಿಯೊಪಥಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇವರಲ್ಲಿ ಸುಮಾರು ಅರ್ಧ ಸಂಖ್ಯೆಯವರು ಮೊದಲ ಫಾಲೋ-ಅಪ್ನಲ್ಲಿ ಟಿಎಸ್‌ಎಚ್ ಮಟ್ಟದಲ್ಲಿ ಇಳಿಕೆಯನ್ನು ಒಳಗೊಂಡಿದೆ. ಈ ಗುಂಪಿನಲ್ಲಿ ಹೊಸದಾಗಿ ರೋಗನಿರ್ಣಯಗೊಂಡವರು, ದಶಕಗಳಿಂದ ರೋಗದಿಂದ ಬಳಲುತ್ತಿರುವವರು, ಹಾರ್ಮೋನ್ ಬದಲಾವಣೆ ಚಿಕಿತ್ಸೆ ಪಡೆಯದವರು ಹಾಗೂ ಹಲವು ವರ್ಷಗಳಿಂದ ಆ ಚಿಕಿತ್ಸೆ ಪಡೆಯುತ್ತಿರುವವರೂ ಸೇರಿದ್ದಾರೆ. ಈ ಎಲ್ಲಾ ವರ್ಗಗಳಲ್ಲಿಯೂ ಟಿಎಸ್‌ಎಚ್ ಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ, ಮತ್ತು ಹಾರ್ಮೋನ್ ಚಿಕಿತ್ಸೆ ಮುಂದುವರಿಸು ತ್ತಿದ್ದವರಲ್ಲಿಯೂ ಹೋಮಿಯೋಪಥಿ ಸೇರಿಸಿದ ನಂತರ ಸುಧಾರಣೆ ವರದಿಯಾಗಿದೆ.

ಈ ರೋಗಿಗಳಲ್ಲಿ ಹೆಚ್ಚಾಗಿ ಬಳಸಲಾದ ಹೋಮಿಯೋಪಥಿ ಔಷಧಿಗಳು ಇಗ್ನಾಟಿಯಾ ಅಮರ ಮತ್ತು ಕೋನಿಯಮ್‌ ಮಕುಲ್ಟಮ್ ಆಗಿವೆ. ಭಾರತ ಸೇರಿದಂತೆ ವಿಶ್ವದ ಅನೇಕ ಸ್ಥಳಗಳಲ್ಲಿ ಹಲವಾರು ಚಿಕಿತ್ಸಾ ಕೇಂದ್ರಗಳು ಹೈಪೋಥೈರಾಯ್ಡಿಸಮ್ ಅನ್ನು ಹೋಮಿ ಯೋಪಥಿ ಮೂಲಕ ನಿರ್ವಹಿಸುತ್ತಿವೆ. ಈ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ, ನಿಯಂತ್ರಿತ ಮತ್ತು ವೈಜ್ಞಾನಿಕ ಅಧ್ಯಯನಗಳು ನಡೆಯುವ ಅಗತ್ಯವಿದೆ.

ಡಾ. ಕುಶಾಲ್ ಬ್ಯಾನರ್ಜಿ, ಡಾ. ಕಲ್ಯಾಣ್ ಬ್ಯಾನರ್ಜಿ ಅವರ ಕ್ಲಿನಿಕ್ನ ಹಿರಿಯ ಸಲಹೆಗಾರ

(ನವ ದೆಹಲಿ -ಬೆಂಗಳೂರು)