ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವ ಧ್ಯಾನ ದಿನ: ಜಗತ್ತು ಕೊನೆಗೂ, ವಿಶೇಷವಾಗಿ ಈ ಪ್ರಕ್ಷುಬ್ಧ ಯುಗದಲ್ಲಿ, ವೈಜ್ಞಾನಿಕ ಧ್ಯಾನದ ಅತ್ಯಂತ ಮಹತ್ವವನ್ನು ಅರಿತುಕೊಳ್ಳುತ್ತಿದೆ!

ಧ್ಯಾನವನ್ನು ಭಗವಂತನ ಮೇಲಿನ ಏಕಾಗ್ರತೆ ಎಂದು ಸರಿಯಾಗಿ ವ್ಯಾಖ್ಯಾನಿಸಲಾಗಿದೆ. ಪ್ರತಿ ದಿನ ಕೇವಲ ಸ್ವಲ್ಪ ಸಮಯವನ್ನು ಧ್ಯಾನದಲ್ಲಿ ಕಳೆಯುವ ಸರಳ ಅಭ್ಯಾಸದಿಂದಲೇ, ಮಾನವರು ತಮ್ಮ ಮಾನಸಿಕ ಶಾಂತಿಯ ಮಟ್ಟವನ್ನು ಮತ್ತು ದೈಹಿಕ ಆರೋಗ್ಯವನ್ನು ಸಹ ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಬಹುದು.

ವಿಶ್ವ ಧ್ಯಾನ ದಿನ

-

Ashok Nayak
Ashok Nayak Dec 20, 2025 9:51 PM

ಡಿಸೆಂಬರ್ 21ರಂದು, ಪ್ರತಿ ವರ್ಷ ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸುವ ಮೂಲಕ, ವಿಶ್ವಸಂಸ್ಥೆಯು ವ್ಯಕ್ತಿಗಳನ್ನು ಹಾಗೂ ರಾಷ್ಟ್ರಗಳನ್ನು ಸಹ ಮಾನವ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದಾಗಿ ಧ್ಯಾನಕ್ಕೆ ಆದ್ಯತೆ ನೀಡಲು ಪ್ರೇರೇಪಿಸಿದೆ.

ಧ್ಯಾನವನ್ನು ಭಗವಂತನ ಮೇಲಿನ ಏಕಾಗ್ರತೆ ಎಂದು ಸರಿಯಾಗಿ ವ್ಯಾಖ್ಯಾನಿಸಲಾಗಿದೆ. ಪ್ರತಿ ದಿನ ಕೇವಲ ಸ್ವಲ್ಪ ಸಮಯವನ್ನು ಧ್ಯಾನದಲ್ಲಿ ಕಳೆಯುವ ಸರಳ ಅಭ್ಯಾಸದಿಂದಲೇ, ಮಾನವರು ತಮ್ಮ ಮಾನಸಿಕ ಶಾಂತಿಯ ಮಟ್ಟವನ್ನು ಮತ್ತು ದೈಹಿಕ ಆರೋಗ್ಯವನ್ನು ಸಹ ಗಮನಾರ್ಹವಾಗಿ ಹೆಚ್ಚಿಸಿ ಕೊಳ್ಳಬಹುದು.

ಪಶ್ಚಿಮದಲ್ಲಿ ಯೋಗದ ಪಿತಾಮಹರೆಂದು ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ, ಹಾಗೂ ವಿಶ್ವ ಮಾನ್ಯ 'ಯೋಗಿಯ ಆತ್ಮಕಥೆ' ಗ್ರಂಥದ ಲೇಖಕರಾದ ಪರಮಹಂಸ ಯೋಗಾನಂದರು, ಎಲ್ಲ ಮಾನವರಿಗೂ ಧ್ಯಾನದ ಪರಮ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ್ದಾರೆ.

ಉನ್ನತ ಆತ್ಮದೊಂದಿಗೆ ಸಂಪರ್ಕ ಸಾಧಿಸುವ ಒಂದು ಸಮಗ್ರ, ವೈಜ್ಞಾನಿಕ, ಸರ್ವವ್ಯಾಪಿ ವಿಧಾನ ವಾಗಿರುವ ಕ್ರಿಯಾ ಯೋಗದಂತಹ ಧ್ಯಾನದ ವೈಜ್ಞಾನಿಕ ಮಾರ್ಗವನ್ನು ಅನುಸರಿಸುವುದರ ಮೂಲಕ, ಪ್ರತಿಯೊಬ್ಬ ವ್ಯಕ್ತಿಯು ನಿಜವಾದ ಆಂತರಿಕ ಶಾಂತಿಯನ್ನು ಕಂಡುಕೊಳ್ಳುವಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಬಹುದು. ಅಷ್ಟೇ ಅಲ್ಲದೆ, ಕ್ರಿಯಾ ಯೋಗ ಧ್ಯಾನ ತಂತ್ರ ಮತ್ತು ಅದರ ಸಂಬಂಧಿತ ತಂತ್ರಗಳು ದೇಹ, ಮನಸ್ಸು ಮತ್ತು ಆತ್ಮಕ್ಕೆ ಅತ್ಯಗತ್ಯವಾದ ನವಚೈತನ್ಯವನ್ನು ಒದಗಿಸುತ್ತವೆ.

ಇದನ್ನೂ ಓದಿ: Janamejaya Umarji Column: ಯಾವುದಾಗಬೇಕು ನಮ್ಮಾಯ್ಕೆ: ಗಾಂಧೀಜಿಯ ಹೆಸರೋ, ಆಶಯವೋ ?

'ಯೋಗ' ಎಂಬ ಪದವು ನಿಜವಾಗಿ ಭಗವಂತನೊಂದಿಗೆ ಐಕ್ಯತೆಯನ್ನು ಸೂಚಿಸುತ್ತದೆ ಮತ್ತು ಧ್ಯಾನ ಕ್ರಿಯೆಯು ಯೋಗ ಮಾರ್ಗದ ಅವಿಭಾಜ್ಯ ಅಂಗವಾಗಿದೆ. 1917ರಲ್ಲಿ ಪರಮಹಂಸ ಯೋಗಾ ನಂದರು ಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್), ಮಹಾನ್ ಗುರುವಿನ ಕ್ರಿಯಾ ಯೋಗದ ಬೋಧನೆಗಳನ್ನು ಪ್ರಸಾರ ಮಾಡುತ್ತದೆ. ಈ ಬೋಧನೆಗಳು, ಉನ್ನತ ಗುರಿಯಾದ ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಲು, ನಿಯಮಿತವಾದ ಆಳವಾದ ಧ್ಯಾನವೇ ಪ್ರಾಥ ಮಿಕ ಮಾರ್ಗವೆಂದು ಅತ್ಯಂತ ಒತ್ತುಕೊಟ್ಟು ಹೇಳುತ್ತವೆ.

ಯೋಗಿಯ ಆತ್ಮಕಥೆಯಲ್ಲಿ, ಪರಮಹಂಸ ಯೋಗಾನಂದರು ತಿಳಿಸಿರುವುದೇನೆಂದರೆ, ಕ್ರಿಯಾ ಯೋಗ ಧ್ಯಾನದ ವಿಜ್ಞಾನವು ಇತರ ಎಲ್ಲ ಆಧ್ಯಾತ್ಮಿಕ ಅಭ್ಯಾಸಗಳಿಗಿಂತ ಶ್ರೇಷ್ಠವಾದುದು ಮತ್ತು ಅದನ್ನು ಭಕ್ತಿಯೊಂದಿಗೆ ಅಭ್ಯಾಸ ಮಾಡಿದಾಗ, ಅದು ಪರಮ ಗುರಿಯನ್ನು ಸಾಧಿಸುವಲ್ಲಿ ಎಂದೆಂ ದಿಗೂ ವಿಫಲವಾಗುವುದಿಲ್ಲ!

ಕಾರ್ಯನಿರತ ವೃತ್ತಿಪರರು ತಮ್ಮ ದೈನಂದಿನ ದಿನಚರಿಯಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳು ವುದನ್ನು ಮುಂದೂಡಬಹುದು ಎಂದು ಭಾವಿಸುವುದು ಘೋರವಾದ ತಪ್ಪು ತಿಳುವಳಿಕೆಯಾಗಿದೆ. ವ್ಯಸ್ತ ಜೀವನವು ತನ್ನೊಂದಿಗೆ ಅನಿವಾರ್ಯವಾಗಿ ತರುವ ಒತ್ತಡಗಳನ್ನು ಉತ್ತಮವಾಗಿ ನಿಭಾ ಯಿಸಲು, ಧ್ಯಾನದ ಅಭ್ಯಾಸವು ಇನ್ನೂ ಹೆಚ್ಚಾಗಿ ಅಗತ್ಯವಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಒಂದು ಅಧ್ಯಯನವು, ನಿಯಮಿತವಾಗಿ ಧ್ಯಾನ ಮಾಡುವ ಸಿಇಒಗಳು ತಮ್ಮ ವೃತ್ತಿಜೀವನದಲ್ಲಿಯೂ ಸಹ ಹೆಚ್ಚು ಸ್ಪಷ್ಟವಾಗಿ ಯಶಸ್ಸನ್ನು ಸಾಧಿಸುತ್ತಾರೆ ಎಂಬ ಸತ್ಯಾಂಶವನ್ನು ಸ್ಪಷ್ಟಪಡಿಸಿದೆ. ಆಧುನಿಕ ಕಾಲದ ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮದ ತಜ್ಞರೂ ಸಹ, ಆರೋಗ್ಯಕರ, ಸಂತೋಷಕರ ಮತ್ತು ಸಾರ್ಥಕ ಜೀವನವನ್ನು ನಡೆಸಲು ಧ್ಯಾನವು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಪ್ರತಿಪಾದಿಸುತ್ತಾರೆ.

ಈಗಾಗಲೇ ನಿಯಮಿತ ಆಧ್ಯಾತ್ಮಿಕ ಸಾಧನೆಯನ್ನು ತಮ್ಮ ಪರಮ ಆದ್ಯತೆಯನ್ನಾಗಿ ಆರಿಸಿಕೊಂಡಿ ರುವವರಿಗೆ, ಅವರು ಎಷ್ಟು ಹೆಚ್ಚು ಆಳವಾಗಿ ಧ್ಯಾನಿಸಲು ಸಮಯವನ್ನು ಕಂಡುಕೊಳ್ಳುತ್ತಾರೋ, ಅಷ್ಟೂ ಉತ್ತಮವಾದುದಾಗಿದೆ. ಅನೇಕ ವರ್ಷಗಳ ಧ್ಯಾನವು ಪ್ರತಿಯೊಬ್ಬ ಮನುಷ್ಯನನ್ನೂ ಖಂಡಿತವಾಗಿಯೂ ಹೆಚ್ಚು ಪ್ರಫುಲ್ಲನನ್ನಾಗಿಯೂ, ಸಮತೋಲಿತನನ್ನಾಗಿಯೂ, ದಕ್ಷನನ್ನಾಗಿಯೂ ಮತ್ತು ದೈಹಿಕವಾಗಿಯೂ ಆರೋಗ್ಯವಂತನನ್ನಾಗಿ ಮಾಡುತ್ತದೆ.

ಪರಮಹಂಸ ಯೋಗಾನಂದರು ಸ್ಮರಣೀಯವಾಗಿ ಹೇಳಿದಂತೆ, "ಇದು ಕಾಯಬಹುದು ಮತ್ತು ಅದು ಕಾಯಬಹುದು, ಆದರೆ ನಿಮ್ಮ ಭಗವಂತನ ಅನ್ವೇಷಣೆ ಕಾಯಲು ಸಾಧ್ಯವಿಲ್ಲ!" ಮತ್ತು ಆ ಅನ್ವೇ ಷಣೆಯನ್ನು ತ್ವರಿತಗೊಳಿಸುವ ಮಾರ್ಗವೆಂದರೆ ಧ್ಯಾನ ಮಾಡುವುದೇ ಆಗಿದೆ!

ಪರಮಹಂಸ ಯೋಗಾನಂದರ ಅಪ್ರತಿಮ ಗುರುಗಳು, ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ ಎಂದು ಸುಪರಿಚಿತರಾಗಿರುವವರು, ಅತ್ಯಂತ ಸ್ಫೂರ್ತಿದಾಯಕವಾಗಿ ಹೀಗೆ ನುಡಿದಾಗ, ಸರಿಯಾದ ಅಂಶ ವನ್ನು ಮತ್ತಷ್ಟು ಸ್ಪಷ್ಟಪಡಿಸಿದರು: "ನೀವು ಈಗ ಆಧ್ಯಾತ್ಮಿಕ ಪ್ರಯತ್ನ ಮಾಡುತ್ತಿದ್ದರೆ, ಭವಿಷ್ಯ ದಲ್ಲಿ ಎಲ್ಲವೂ ಉತ್ತಮಗೊಳ್ಳುತ್ತದೆ!"

ವಿಶ್ವ ಧ್ಯಾನ ದಿನದಂದು ನಾವು ನಮ್ಮ ಈ ಜೀವನದಲ್ಲಿ ಶಾಶ್ವತ ಶಾಂತಿ ಮತ್ತು ಆನಂದವನ್ನು ಕಂಡುಕೊಳ್ಳಬೇಕಾದರೆ ಧ್ಯಾನವು ಕೇವಲ ಒಂದು ಆಯ್ಕೆಯಲ್ಲ, ಅದು ಅನಿವಾರ್ಯವಾಗಿದೆ ಎಂಬುದನ್ನು ಎಲ್ಲರೂ ಅತ್ಯಗತ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವಾಗಿದೆ.